Tag: ಬಿಬಿಎಂಪಿ

ಕೊರೋನಾ ಮೂರನೇ ಅಲೆ ತಗ್ಗಿದ ಹಿನ್ನೆಲೆ : ಖಾಸಾಗಿ ಆಸ್ಪತ್ರೆಯ ಹಾಸಿಗೆ ವಾಪಾಸ್ ನೀಡಲು ನಿರ್ಧರಿಸಿದ ಬಿಬಿಎಂಪಿ

ಕೊರೋನಾ ಮೂರನೇ ಅಲೆ ಬಹುತೇಕ ಮುಕ್ತಾಯ ಹಂತದಲ್ಲಿದೆ. ಹೀಗಾಗಿ ಇತ್ತೀಚೆಗೆ ಸರ್ಕಾರ ಎಲ್ಲಾ ಕ್ಷೇತ್ರಗಳಿಂದಲೂ ಕೊರೋನಾ ನಿರ್ಬಂಧ ತೆರವು ಮಾಡಿ ಮುಕ್ತ ಅವಕಾಶ ಕಲ್ಪಿಸಿತ್ತು. ಇದೀಗ ಸೋಂಕಿನ ...

Read more

ಬಿಬಿಎಂಪಿ ಕಾಂಪ್ಯಾಕ್ಟರ್ಸ್ ಮಿಸ್ಸಿಂಗ್ : ಕಸ ಸಾಗಿಸುವ ವಾಹನಗಳ ಲೆಕ್ಕವೇ ಸಿಗ್ತಿಲ್ಲ ಪಾಲಿಕೆಗೆ!

ಕೊರೋನಾ (Corona) ಹಾಗೂ ಬಿಬಿಎಂಪಿ (BBMP) ಬಜೆಟ್ ನಡುವೆ ಪಾಲಿಕೆಗೆ ಇದೀಗ ಮತ್ತೊಂದು ತಲೆನೋವು ಶುರುವಾಗಿದೆ. ಕಸ ಸಾಗಿಸೋ ಕಾಂಪ್ಯಾಕ್ಟ್ ವಾಹನಗಳ ಗಾರ್ಬೆಜ್ ಕಲೆಕ್ಟ್, ಲೋಕೇಶನ್ ಟ್ರೇಸ್ ...

Read more

ಬೆಂಗಳೂರು ಜನರ ಜೇಬಿಗೆ ಮತ್ತೊಮ್ಮೆ ಕತ್ತರಿ ಹಾಕಲಿರುವ BBMP : ಕರೆಂಟ್ ಬಿಲ್ ಜೊತೆಗೆ ಗಾರ್ಬೇಜ್ ಬಿಲ್ ಜಾರಿ!

ಕೊರೋನಾ ಹೊಡೆತಕ್ಕೆ ಬದುಕು ಭಾರವಾಗಿರುವ ಹೊತ್ತಲ್ಲಿ ಬಿಬಿಎಂಪಿ (BBMP) ಮತ್ತೊಂದು ಬರೆ ಎಳೆಯಲು ಹೊರಟಿದೆ. ಈಗಾಗಲೇ ಹಲವು ಬಗೆಯ ಬಿಲ್ ಕಟ್ಟುತ್ತಿರುವ ಬೆಂಗಳೂರು ಜನರ ಜೇಬಿಗೆ ಪಾಲಿಕೆ ...

Read more

ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆ : ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ

ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ಮೊಬೈಲ್ ಟೆಸ್ಟಿಂಗ್ ಹಾಗೂ ಮೊಬೈಲ್ ಟ್ರಾಯಜಿನ್ ಮಾಡುವ ವ್ಯವಸ್ಥೆಯನ್ನು ಬಿಬಿಎಂಪಿ ಚಾಲನೆಯಲ್ಲಿಡಲಿದೆ ಎಂದು ಬಿಬಿಎಂಪಿ ...

Read more

ಕರೋನಾ ಹೆಸರಲ್ಲಿ ಹೆಚ್ಚಿನ ಹಣ ವಸೂಲಿ ಮಾಡಿದರೆ ಹುಷಾರ್ : ಖಾಸಗಿ ಆಸ್ಪತ್ರೆಗಳಿಗೆ ಬಿಬಿಎಂಪಿ ತಾಕೀತು

ಕೊರೋನಾ ಮೊದಲನೇ ಹಾಗೂ ಎರಡನೇ ಅಲೆಯಲ್ಲಿ ಜನರ ಪರದಾಟ ಇನ್ನೂ ಕಣ್ಣಿಗೆ ಕಟ್ಟಿದಂತೆಯೇ ಇದೆ. ಈ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳು ಜನರಿಂದ ದುಬಾರಿ ದರ ಪಡೆದಿರುವುದು ಗೊತ್ತಿದೆ. ...

Read more

ಒಮಿಕ್ರಾನ್ ವೈರಸ್ ಭೀತಿ : ಮತ್ತೆ ಎರಡನೇ ಅಲೆ ಕರೋನಾ ನಿಯಮಜಾರಿ ಮಾಡಿದ ಬಿಬಿಎಂಪಿ!

ಕರೋನಾದ ಹೊಸ ತಳಿ ಇದೀಗ ಮತ್ತೆ ಬಲಾಢ್ಯ ರಾಷ್ಟಗಳನ್ನ ಗಢಗಢ ನಡಿಗುಸುವಂತೆ ಮಾಡಿದೆ. 14 ರಾಷ್ಟಗಳಿಗೆ ಒಮಿಕ್ರಾನ್ ವೈರಸ್ ವಕ್ಕರಿಸಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಒಂದು ...

Read more

ಬಸವನಗುಡಿ ಕಡಲೆಕಾಯಿ ಪರಿಷೆ : ಕಡಲೆಕಾಯಿ ಬೀಜ ಮುಜರಾಯಿ ಇಲಾಖೆಗೆ, ಸಿಪ್ಪೆ ಬಿಬಿಎಂಪಿಗೆ!

ಇಷ್ಟು ದಿನ ಬಿಬಿಎಂಪಿ ಅಧಿಕಾರಿಗಳು ಎಲ್ಲರಿಗೂ ಉಂಡೆ ನಾಮ ಹಾಕುತ್ತಿದ್ರು. ಆದರೀಗ  ಬಿಬಿಎಂಪಿಗೇ ಉಂಡೆನಾಮ  ಹಾಕಿ ಲಕ್ಷಗಟ್ಲೆ ಹಣ ಜೇಬಿಗೆ ಇಳಿಸುತ್ತಿದೆ ಮುಜರಾಯಿ ಇಲಾಖೆ. ಹೌದು, ಬಸವನಗುಡಿ ಕಡಲೆಕಾಯಿ ಪರಿಷೆ ಹೆಸರಲ್ಲಿಇದೀಗ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ. ಕಡಲೆಕಾಯಿ ಬೀಜ ಮುಜರಾಯಿ ಇಲಾಖೆಗೆ.. ಸಿಪ್ಪೆ ಬಿಬಿಎಂಪಿಗೆ .!! ಬೆಂಗಳೂರು ನಗರದ ಇತಿಹಾಸ ಪ್ರಸಿದ್ಧಿ ದೊಡ್ಡಗಣೇಶ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಡಲೆಕಾಯಿ ಪರಿಷೆ ಜಾತ್ರೆ ಮಾಹೋತ್ಸವ ಕಾರ್ತಿಕ ಮಾಸದ ಕೊನೆಯ ಸೋಮವಾರ ಜರುಗಲಿದೆ. ಈ ಪ್ರಸಿದ್ಧ ಪರಿಷೆಗೆ ರಾಜ್ಯದ ನಾನ ಭಾಗಗಳಿಂದ ಲಕ್ಷಂತರ ಭಕ್ತರು ಪರಿಷೆಯಲ್ಲಿ ಭಾಗಿಯಾಗಿ ದೊಡ್ಡ ಗಣಪನ ದರ್ಶನ ಪಡೆಯುತ್ತಾರೆ. ಆದರೆ, ವಿಷಯ ಇದಲ್ಲ, ಪರಿಷೆ ಹೆಸರಲ್ಲಿ ಈಗ ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆ ನಡುವೆ ಕಿತ್ತಾಟ ಶುರುವಾಗಿದೆ. ಹೌದು, ಇತಿಹಾಸ ಪ್ರಸಿದ್ಧ ನೂರಾರೂ ವರ್ಷಗಳ ಇತಿಹಾಸ ಇರುವ ನಾಡ ಪ್ರಭು ಕೆಂಪೇಗೌಡ ನಿರ್ಮಾಣದ ದೊಡ್ಡ ಗಣಪತಿ ದೇವಸ್ಥಾನ ತನ್ನದೆ ಅದ ವಿಶಿಷ್ಟತೆ ಹೊಂದಿದೆ. ಪ್ರತಿ ವರ್ಷದ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆ ನಡೆಯುತ್ತೆ. ಪರಿಷೆಯಲ್ಲಿ 5 ಸಾವಿರಕ್ಕೂ ಅಧಿಕ ತಾತ್ಕಲಿಕ ಅಂಗಡಿಗಳು ನಿರ್ಮಾಣ ಮಾಡಿ  ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತೆ. ಪಾಲಿಕೆ, ಜಾಗ ಸೇರಿದಂತೆ ರಸ್ತೆಗಳನ್ನೂ ಬಂದ್ ಮಾಡಿ, ದೇವಸ್ಥಾನದ ಸುತ್ತಮುತ್ತ ಸುಮಾರು 2 km ಮೀಟರ್ ರಸ್ತೆಯಲ್ಲಿ ಅಂಗಡಿ ನಿರ್ಮಿಸಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡುತ್ತೆ. ರಾಜ್ಯ ಸೇರಿದಂತೆ ತಮಿಳುನಾಡಿನಿಂದ ವ್ಯಾಪಾರಸ್ಥರು ಕಡೆಲೆಕಾಯಿ, ಕಡ್ಲೆಪುರಿ, ವಿವಿಧ ಬಗ್ಗೆಯ ಅಟೀಕೆ ವಸ್ತುಗಳನ್ನು ಇಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜಾತ್ರೆಯಲ್ಲಿ ರಾಜ್ಯದ ನಾನ ಭಾಗಗಳಿಂದ ಲಕ್ಷಕ್ಖು ಅಧಿಕ ಮಂದಿ ಭಕ್ತರು ಭಾಗವಹಿಸ್ತಾರೆ. ಮೂರು ದಿನಗಳ ಈ ಪರಿಷೆಯಾಲ್ಲಿ ಸುಮಾರು ಐದು ಕೋಟಿಗೂ ಅಧಿಕ ವ್ಯಾಪಾರ ವಹಿವಾಟು ಪ್ರತಿವರ್ಷ  ನಡೆಯುತ್ತೆ. ಆದರೆ ಈ ವ್ಯಾಪಾರಕ್ಕೆ ಅಂತ ನಿರ್ಮಾಸಿದ ತಾತ್ಕಲಿಕ ಅಂಗಡಿಗಳ ತೆರಿಗೆ ಮಾತ್ರ ಮುಜರಾಯಿ ಇಲಾಖೆ ವಸೂಲಿ ಮಾಡಿಕೊಂಡು ಬಿಬಿಎಂಪಿಗೆ ಪಾಂಗನಾಮ ಹಾಕುತ್ತಿದೆ. ಈ ಬಗ್ಗೆ ಶಾಸಕರನ್ನೂ ಕೇಳಿದರೆ, ಈ ಬಾರಿ ಅಧಿವೇಶನದಲ್ಲಿ ಸಿಎಂ ಗಮನಕ್ಕೆ ತರ್ತಿನಿ, ಮುಂದಿನ ವರ್ಷ ಈ ರೀತಿ ಅಗದಂತೆ ಕ್ರಮ ಕೈಗೋಳ್ತಿವಿ ಅಂತ ಹೇಳ್ತಿದ್ದಾರೆ. ಪಾಲಿಕೆ ಜಾಗದಲ್ಲಿ ಅಂಗಡಿ.. ಮುಜರಾಯಿ ಜೇಬಿಗೆ ಕಂದಾಯ.!! ಇನ್ನೂ ಜಾತ್ರ ಅಂದ್ರೆ  ರಾಜ್ಯದ ವಿವಿಧ ಭಾಗಗಳಿಂದ  ರೈತರು ಬೆಳೆದಿದ್ದ ವಿವಿಧ ಬಗ್ಗೆಯ ಕಡ್ಲೆಕಾಯಿ , ಹಾಗೂ ಕಡ್ಲೆಪುರಿ ಅಂಗಡಿಗಳು ಸೇರಿದಂತೆ ಇತರೆ ಮಕ್ಕಳ ಅಟೀಕೆ ಸಾಮನುಗಳು, ಮನೆಯ ವಸ್ತುಗಳು ವ್ಯಾಪಾರ ಮಾಡಲಾಗುತ್ತೆ. ಆದರೆ ಇಲ್ಲಿ ಕಡಲೆ ಬೀಜ ಮುಜರಾಯಿ ಇಲಾಖೆಗೆ ಹಾಗೂ ಅದರ ಸಿಪ್ಪೆ ಮಾತ್ರ ಬಿಬಿಎಂಪಿಗೆ ಎನ್ನುವಂತಾಗಿದೆ. ಇಡೀ ಪರಿಷೆಯ ಜವಾಬ್ದಾರಿ ಹಾಗೂ ನಿರ್ವಹಣೆ ಜವಾಬ್ದಾರಿ ಪಾಲಿಕೆ ನಿರ್ವಹಿಸಿಕೊಂಡು, ಇದರಿಂದ ಬರುವ ಹಣ ಮಾತ್ರ ರಾಜ್ಯ ಮುಜರಾಯಿ ಇಲಾಖೆ ಪಡೆಯುತ್ತಿದೆ. ಇದಿರಂದ ಕಳೆದ ಸುಮಾರು ವರ್ಷಗಳಿಂದ ಬಿಬಿಎಂಪಿಗೆ ಕಸಿವಿಸಿ ಉಂಟಾಗಿದೆ. ಕಾನೂನಿನ ಪ್ರಕಾರ ಬಿಬಿಎಂಪಿ ವ್ಯಾಪ್ತಿಯ ಜಾಗಕ್ಕೆ ಬಿಬಿಎಂಪಿಯೇ ತೆರಿಗೆ ವಸೂಲಿ ಮಾಡಬೇಕು. ಅದರೆ ಇಲ್ಲಿ ಮುಜರಾಯಿ ಇಲಾಖೆ ಪಾಲಿಕೆ ಜಾಗದ ತೆರಿಗೆ ವಸೂಲಿ ಮಾಡ್ತಿರೋದು ಕಾನೂನು ವಿರುದ್ಧ ಎನ್ನುವು ಗಮನಾರ್ಹ ವಿಚಾರ. ಒಟ್ನಲ್ಲಿ ತೆರಿಗೆಯನ್ನೇ ನಂಬಿಕೊಂಡು ಅಡಳಿತ ಮಾಡುತ್ತಿರುವ ಪಾಲಿಕೆಯ ತೆರಿಗೆ ಹಣವನ್ನೂ ಕಂಡೋರು ಪಡೆದ್ರೆ ಅಧಿಕಾರ ನಡೆಸಲು ಪಾಲಿಕೆ ಪರದಾಡುವಂತಾಗಬೇಕಷ್ಟೆ. ಆದರೆ ಪಾಲಿಕೆ ಅಧಿಕಾರಿಗಳು ಇದರ ಬಗ್ಗೆ ಸೊಲ್ಲೆತ್ತದೆ ಸುಮ್ಮನೆ ಇರುವುದು ವಿಪರ್ಯಾಸದ ಜೊತೆಗೆ ಹಲವು ಅನುಮಾನಗಳಿಗೆ ದಾರಿ ಮಾಡಿಕೊಡುತ್ತಿದೆ.

Read more

ಬಿಬಿಎಂಪಿ ಪರವಾಗಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಪ್ರಶಸ್ತಿ ಸ್ವೀಕಾರ !

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಇಂದು ಆಚರಿಸಿದ ಸ್ವಚ್ಛ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ‌ ಸ್ವಚ್ಛ ಭಾರತ್ ಮಿಷನ್(ನಗರ) ಅಡಿಯಲ್ಲಿ ನಡೆಸಲಾದ ಸ್ವಚ್ಛ ಸರ್ವೇಕ್ಷಣ್ 2021 ...

Read more

ಬೆಂಗಳೂರಿನಲ್ಲಿದೆ ಶೇ. 84 ರಷ್ಟು ಅನಧಿಕೃತ ಕಟ್ಟಡಗಳು : ಬಿಬಿಎಂಪಿ ಸರ್ವೆಯಲ್ಲಿ ಮಾಹಿತಿ ಬಯಲು!

ಕಳೆದೊಂದುವರೆ ತಿಂಗಳಿನಿಂದ ಬೆಂಗಳೂರಿನಲ್ಲಿ ಒಂದಲ್ಲಾ ಒಂದು ಕಟ್ಟಡಗಳು ಬೀಳುತ್ತಲೇ ಇದಾವೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡ ಒಂದ್ಕಡೆಯಾದ್ರೆ, ಬಿಬಿಎಂಪಿಯಿಂದ ಅನುಮತಿ ಪಡೆಯದೇ ನಿರ್ಮಿಸಿರುವ ಕಟ್ಟಡಗಳು ಮತ್ತೊಂದ್ಕಡೆ. ನಿರಂತರವಾಗಿ ಬಿಲ್ಡಿಂಗ್ಸ್ ಬೀಳ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದ ಕೋರ್ಟ್ ಬಿಬಿಎಂಪಿಗೆ ಛೀಮಾರಿ ಹಾಕಿತ್ತು. ಅಷ್ಟೇ ಅಲ್ದೇ ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡಗಳ ಸರ್ವೆ ನಡೆಸಿ ವರದಿ ನೀಡುವಂತೆಯೂ ಸೂಚನೆ ಕೊಟ್ಟಿತ್ತು. ಅದರಂತೆ ಸರ್ವೆ ನಡೆಸಿದ ಪಾಲಿಕೆಗೆ ಶಾಕ್ ಕಾದಿತ್ತು. ಯಾಕಂದ್ರೆ  ಕಳೆದೊಂದುವರೆ ವರ್ಷದಲ್ಲಿ ನಿರ್ಮಾಣವಾದ ಕಟ್ಟಡಗಳಲ್ಲಿ ಶೇಕಡಾ 84 ರಷ್ಟು ಕಟ್ಟಡಗಳು ಅಕ್ರಮ ಅನ್ನೋದು ಬೆಳಕಿಗೆ ಬಂದಿದೆ. ಈಗಾಗಲೇ ನಗರದಲ್ಲಿ ಹಲವು ಕಟ್ಟಡಗಳು ನೆಲಕ್ಕುರುಳಿವೆ. ಸಾವು ನೋವುಗಳಾಗಿವೆ. ಸಂಧಿಗುಂಧಿ ಗಳಲ್ಲಿ ಅವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿ ಬಾಡಿಗೆಗೆ ಹಾಗೂ ...

Read more

ಬೆಂಗಳೂರಿನಲ್ಲಿ ಕರೋನಾಗೆ ಬಲಿಯಾದವರೆಷ್ಟು? : ಬಿಬಿಎಂಪಿ ಡೆತ್‌ ಆಡಿಟ್ ವರದಿ ಸಿದ್ಧ!

ಜನರ ಜೀವ ಹಿಂಡಿ ಹಿಪ್ಪೆ ಮಾಡಿದ ಕೊರೋನಾಗೆ ಎಷ್ಟು ಮಂದಿ ಬಲಿಯಾಗಿದ್ದಾರೆ ಎಂಬ ಲೆಕ್ಕವನ್ನು ಬಿಬಿಎಂಪಿ ಸಿದ್ಧ ಮಾಡಿಕೊಂಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಈವರೆಗೆ ಸೇರಿದಂತೆ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎಂಬ ಕೊರೋನಾ ಡೆತ್ ಆಡಿಟ್ ವರದಿಯನ್ನು ಪಾಲಿಕೆ ತಯಾರಿಸಿದೆ. ಅಲ್ಲದೆ ಈ ಸಾವುಗಳಿಗೆಲ್ಲಾ ಏನು ಪ್ರಮುಖ ಕಾರಣ ಎಂಬ ಟಿಪ್ಪಣಿಯನ್ನೂ ಉಲ್ಲೇಖಿಸಿದೆ. ಬಿಬಿಎಂಪಿ ರೆಡಿ ಮಾಡಿದೆ ಕರೋನಾ ಡೆತ್ ಆಡಿಟ್ ವರದಿ.!! ಕೊರೋನಾ ಎರಡನೇ ಡೋಸ್ ಪಡೆಯಲು ಜನರಿಂದ ಹಿಂದೇಟು ಹಾಕುತ್ತಿದ್ದಾರೆ. ಇದರ ನಡುವೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಕೊರೋನಾ ಮೊದಲ ಮತ್ತು ಎರಡನೇ ಅಲೆಯಲ್ಲಿ ಸಾವನ್ನಪ್ಪಿದ್ದವರ ಲೆಕ್ಕವನ್ನು ಪಾಲಿಕೆ ಸಿದ್ಧ ಮಾಡಿಕೊಂಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೋನಾಗೆ ಬಲಿಯಾದವರ ಸಂಖ್ಯೆ ನಿಜಕ್ಕೂ ಹೌಹಾರಿಸುವಂತಿದೆ. ಮೊದಲ ಅಲೆಗಿಂತ ಎರಡನೇ ಅಲೆಯಲ್ಲಿ ಕೊರೋನಾ ಕಿತ್ತುಕೊಂಡಿದ್ದು 10 ಸಾವಿರಕ್ಕೂ ಅಧಿಕ ಜೀವಗಳನ್ನು ಎಂದರೆ ನಂಬಲೇ ಬೇಕು. ಅದರಲ್ಲೂ ಬೆಂಗಳೂರಿನಲ್ಲಿ 70 ವರ್ಷಕ್ಕಿಂತ ಮೇಲ್ಪಟ್ಟವರೇ ಹೆಚ್ಚಾಗಿ ಕೊರೋನಾಗೆ ಉಸಿರು ಚೆಲ್ಲಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ 16,307 ಮಂದಿಯನ್ನು ಬಲಿ ಪಡೆದ ಕೊರೋನಾ.!! ಬಿಬಿಎಂಪಿ ನಡೆಸಿರುವ ಕೊರೋನಾ ಡೆತ್ ಆಡಿಟ್ ನಲ್ಲಿ ಮೊದಲ ಮತ್ತು ಎರಡನೇ ಅಲೆಯಲ್ಲಿ ಕೊರೋನಾಗೆ 16,307 ಬಲಿಯಾಗಿದ್ದಾರೆ ಎಂದು ಗೊತ್ತಾಗಿದೆ. ಈ ಪೈಕಿ 4,480 ಮೊದಲ ಅಲೆಯಲ್ಲಿ ಹಾಗು 11,827 ಮಂದಿ ಎರಡನೇ ಅಲೆಯಲ್ಲಿ ಸಾವನ್ನಪ್ಪಿದ್ದಾರೆ. ಈ ಪೈಕಿ 70 ವರ್ಷ ಮೇಲ್ಪಟ್ಟವರೇ ಹೆಚ್ಚಾಗಿ ಕೋವಿಡ್ ಕಬಂಧಬಾಹುವಿಗೆ ಸಿಕ್ಕಿ ಉಸಿರು ಕಳೆದುಕೊಂಡಿದ್ದಾರೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಒಟ್ಟಾರೆ 5,453 ಮಂದಿ 70 ವರ್ಷ ಮೇಲ್ಪಟ್ಟವರು ಸಾವನ್ನಪ್ಪಿದ್ದಾರೆ. ಈ ಪೈಕಿ ಪರುಷರೇ ಹೆಚ್ಚು. ಜನರ ನಿರ್ಲಕ್ಷ್ಯ.. ತಡವಾಗಿ ಚಿಕಿತ್ಸೆ.. ಕೊರೋನಾ ಕೇಕೆ.!! ಇನ್ನು ಇಷ್ಟೊಂದು ಮಂದಿಯ ಕೊರೋನಾ ಸಾವಿಗೆ ಪ್ರಮುಖ ಕಾರಣವಾಗಿದ್ದು ಅವರ ನಿರ್ಲಕ್ಷ್ಯ ಮತ್ತು ಸೋಂಕಿನ ಗುಣ ಲಕ್ಷಣಗಳು ಕಾಣಿಸಿಕೊಂಡರೂ ಶೀಘ್ರವೇ ಆಸ್ಪತ್ರೆ ಸೇರಿ ಚಿಕಿತ್ಸೆ ಪಡೆಯದೇ ಇದ್ದಿದ್ದು ಎಂದು ಪಾಲಿಕೆ ಡೆತ್ ಆಡಿಟ್ ವರದಿಯಲ್ಲಿ ಉಲ್ಲೇಖಿಸಿದೆ. ಆದರೆ ವಾಸ್ತವದಲ್ಲಿ ಎರಡನೇ ಅಲೆಯ ಹೊತ್ತಿಗೆಲ್ಲಾ ಜನರು ಕೊರೋನಾವನ್ನು ಗಂಭೀರವಾಗಿ ತೆಗೆದುಕೊಂಡಿದ್ದರು. ಹೀಗಿದ್ರೂ ಸರ್ಕಾರಕ್ಕೆ ಹಾಗೂ ಬಿಬಿಎಂಪಿಗೆ ಸೂಕ್ತ ರೀತಿಯ ವ್ಯವಸ್ಥೆಯನ್ನು ಕಲ್ಪಿಸಿಕೊಡಲು ಸಾಧ್ಯವಾಗದೇ ಇದ್ದಿದ್ದೇ ಇಷ್ಟೊಂದು ಸಾವಿಗೆ ಕಾರಣ ಎನ್ನಬಹುದು. ಆಕ್ಸಿಜನ್, ಬೆಡ್ ಹಾಗೂ ರೆಮಿಡಿಸ್ವಿರ್ ಔಷಧಿ ಸೂಕ್ತ ಸಮಯಕ್ಕೆ ಸಿಗದೆ ಇದ್ದಿದ್ದೇ ಇದಕ್ಕೆ ಸೂಕ್ತ ಉದಾಹರಣೆ. ಜನರ ನಿರ್ಲಕ್ಷ್ಯದ ಜೊತೆಗೆ ಸರ್ಕಾರ ಹಾಗೂ ಪಾಲಿಕೆ ಅಸಮರ್ಥತೆ ಕೂಡ ಈ ಸಾವಿಗೆ ಹೊಣೆಯಾಗಿದೆ. ಒಟ್ಟಾರೆ ಕೊರೋನಾಗೆ ಈವರೆಗೆ 16,307 ಮಂದಿಗೆ ಬಲಿಯಾಗಿರುವುದಾಗಿ ಬಿಬಿಎಂಪಿ ವರದಿ ಸಿದ್ಧ ಮಾಡಿಕೊಂಡಿದೆ. ಅದರಲ್ಲೂ ಅದಕ್ಕೆ ಕೊಟ್ಟ ಕಾರಣದಲ್ಲಿ ಜನರೇ ಇದಕ್ಕೆ ಹೊಣೆ ಎಂದಿದೆ. ಆದರೆ ವಾಸ್ತವದಲ್ಲಿ ಜನರ ನಿರ್ಲಕ್ಷ್ಯದ ಜೊತೆಗೆ ಬಿಬಿಎಂಪಿಯ ಆಡಳಿತ ವೈಫಲ್ಯತೆಯೂ ಸಮನಾಗಿ ಕಾರಣವಾಗಿದೆ. ಸದ್ಯ ಸಾವಿನ ಪ್ರಮಾಣ ಕಡಿಮೆಯಾಗಿದೆ ನಿಜ. ಆದರೂ ಜನರ ನಿರ್ಲಕ್ಷ್ಯ ಮಾಡದೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆಯುವ ಅಗತ್ಯವಿದೆ. ಅಂದಹಾಗೆ, ಮೊದಲ ಮತ್ತು ಎರಡನೇ ಅಲೆಯ ಡೆತ್‌ ಆಡಿತ್ ವರದಿಯನ್ನು ಬಿಬಿಎಂಪಿ ಮುಂದಿನ ವಾರ ಬಿಡುಗಡೆ ...

Read more

ಬಿಬಿಎಂಪಿ ಕರೋನಾ ಡೆತ್ ಆಡಿಟ್ ವರದಿ ಸಿದ್ಧ : ಈವರೆಗೆ ಕರೋನಾಗೆ ಬಲಿಯಾದವರೆಷ್ಟು ಗೊತ್ತೇ?

ಜನರ ಜೀವ ಹಿಂಡಿ ಹಿಪ್ಪೆ ಮಾಡಿದ ಕೊರೋನಾಗೆ ಎಷ್ಟು ಮಂದಿ ಬಲಿಯಾಗಿದ್ದಾರೆ ಎಂಬ ಲೆಕ್ಕವನ್ನು ಬಿಬಿಎಂಪಿ ಸಿದ್ಧ ಮಾಡಿಕೊಂಡಿದೆ. ಮೊದಲ ಮತ್ತು ಎರಡನೇ ಅಲೆಯಲ್ಲಿ ಈವರೆಗೆ ಸೇರಿದಂತೆ ...

Read more

ಸಿಲಿಕಾನ್ ಸಿಟಿ ಕಡಲೆಕಾಯಿ ಪರಿಷೆಗೆ ಬಿಬಿಎಂಪಿಯಿಂದ ಅನುಮತಿ : ನವೆಂಬರ್ 29ರಿಂದ ಮೂರು ದಿನಗಳ ಕಾಲ ಕಡಲೆಕಾಯಿ ಪರಿಷೆ!

ಸಿಲಿಕಾನ್ ಸಿಟಿಯ ಬಸವನಗುಡಿಯಲ್ಲಿ ಪ್ರತಿ ವರ್ಷ ನಡೆಯುವ ಕಡಲೆಕಾಯಿ ಪರಿಷೆಯು ಇತಿಹಾಸ ಪ್ರಸಿದ್ಧ. ಆದರೆ ಕೊರೊನಾದಿಂದ ಎರಡು ವರ್ಷ ಜಾತ್ರೆಗೆ ನಿರ್ಬಂಧ ಹೇರಲಾಗಿತ್ತು. ಆದರೀಗ ಸಿಟಿಯಲ್ಲಿ ಕೊರೋನಾ ...

Read more

ಬೆಂಗಳೂರಲ್ಲಿ ಮನೆಯಲ್ಲಿ ನಾಯಿ ಸಾಕಬೇಕೆಂದರೆ ಪರವಾನಿಗೆ ಕಡ್ಡಾಯ: ಬಿಬಿಎಂಪಿ

ಗಾರ್ಡನ್ ಸಿಟಿ ಬೆಂಗಳೂರಲ್ಲಿ ಶ್ವಾನ ಪ್ರೀಯರಿಗೇನು ಕಮ್ಮಿ ಇಲ್ಲ. ಮನೆಗೊಂದು ಶ್ವಾನ ಇದ್ದರೇನೆ ಬದುಕು ಅರ್ಥಪೂರ್ಣ ಎನ್ನುವವರಿದ್ದಾರೆ. ಅಂಥವರಿಗೆ ಬಿಬಿಎಂಪಿ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಮನೆಯಲ್ಲಿ ...

Read more

ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆಯ ಎಚ್ಚರಿಕೆ ನೀಡಿದ ಭಾರತೀಯ ಹವಾಮಾನ ಇಲಾಖೆ.!!

ಮಳೆರಾಯ ಇಡೀ ಬೆಂಗಳೂರನ್ನೆ ತಲ್ಲಣಗೊಳಿಸಿದ್ದಾನೆ. ವರುಣನ ಅಬ್ಬರ ನಗರದ ಮಂದಿಯ ನಿತ್ಯಜೀವನದ ವೇಗವನ್ನೆ ಕುಂಠಿತಗೊಳಿಸಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ, ಕಾರಿನಲ್ಲಿ ಒಡಾಡುವರಿಂದ ಹಿಡಿದು ಕಾಲಿನಲ್ಲಿ ...

Read more

ಎರಡು ಡೋಸ್ ಲಸಿಕೆ ಪಡೆದವರಿಗೆ ಗುಡ್ ನ್ಯೂಸ್; ಬಿಬಿಎಂಪಿ ಅಂಕಿಅಂಶಗಳು ಹೇಳುತ್ತಿರೋದೇನು?

ಮಾರಕ ಕರೋನಾ ವಿರುದ್ಧ ಹೋರಾಡಲು ದೇಶಾದ್ಯಂತ ಬೃಹತ್ ಲಸಿಕಾ ಅಭಿಯಾನ ಕೈಗೊಳ್ಳಲಾಗಿದೆ. ದಾಖಲೆ ಪ್ರಮಾಣದಲ್ಲಿ ಜನರಿಗೆ ಲಸಿಕೆ ನೀಡುತ್ತಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳುತ್ತಿದೆ. ...

Read more

ಬೆಂದಕಾಳೂರಿನಿಂದ ʼಸಿಲಿಕಾನ್ ವ್ಯಾಲಿʼವರೆಗೆ: ಬೆಂಗಳೂರೆಂಬ ಮಹಾ ಅಜ್ಜಿ..!

ಯಾವುದೇ ಹಳ್ಳಿಯಿಂದ, ಪಟ್ಟಣದಿಂದ ಬದುಕನ್ನು ಅರಸುತ್ತಾ ಬಂದವರಿಗೆ ಬೆಂಗಳೂರು ಮೋಸ ಮಾಡಿಲ್ಲ ಎಂಬೊಂದು ಮಾತಿದೆ. ವೃತ್ತಿಯೋ, ದುಡ್ಡೋ ಅಥವಾ ಬದುಕಿನ ಪಾಠವೋ ಬೆಂಗಳೂರು ಏನಾದರೊಂದನ್ನು ಕೊಟ್ಟೇ ಕೊಡುತ್ತದೆ.

Read more

ಜನಾಗ್ರಹ ಮತ್ತು ಬಿಬಿಎಂಪಿ ವತಿಯಿಂದ “ನನ್ನ ನಗರ ನನ್ನ ಬಜೆಟ್ʼʼ ಅಭಿಯಾನ

ಸ್ವಚ್ಚತೆಗೆ ಸಂಬಂಧಿಸಿದಂತೆ ಮತ್ತು ನಗರಕ್ಕೆ ಯಾವ ಸೌಲಭ್ಯ ಬೇಕು-ಬೇಡಾ ಎಂಬುವುದರ ಕುರಿತು ಸಾರ್ವಜನಿಕರ ಅಭಿಪ್ರಾಯ ಸಂಗ್ರಹಿಸಲು ಸಾರ್ವಜನಿಕರ ಪಾಲ್ಗೊಳ್ಳುವಿಕೆ ಅಭಿಯಾನ #ಮೈ ಸಿಟಿ ಮೈ ಬಜೆಟ್ ಎಂಬ ...

Read more

ಬಿಬಿಎಂಪಿ ಪಾಲಿಕೆ ಚುನಾವಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

ಬಿಬಿಎಂಪಿ ಪಾಲಿಕೆ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತಡೆಹಿಡಿದಿದೆ.

Read more

ಸ್ವಚ್ಚತೆಯ ಕುರಿತು ನಾಗರಿಕರಲ್ಲಿ ಅರಿವು ಮೂಡಿಸಿದ ಬಿಬಿಎಂಪಿ ಸಿಬ್ಬಂದಿ

ಹೊಸಕೆರೆ ಹಳ್ಳಿ ಮಾತ್ರವಲ್ಲದೆ ಹೇರೋಹಳ್ಳಿ, ಪಟ್ಟಾಭಿರಾಮ ನಗರ, ಮಹಾಲಕ್ಷ್ಮಿ ಪುರಂ ಸೇರಿದಂತೆ ಹಲವಾರು ವಾರ್ಡುಗಳಲ್ಲಿ ಪೌರ ಕಾರ್ಮಿಕರು

Read more

ವಾಹನದಲ್ಲಿ ಒಬ್ಬರೇ ಹೋಗುತ್ತಿದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ – ಬಿಬಿಎಂಪಿ

ಒಬ್ಬರೇ ಇರುವಾಗ ಮಾಸ್ಕ್‌ ಧರಿಸಬೇಕೆ ಬೇಡವೇ, ಧರಿಸದಿದ್ದರೆ ದಂಡ ಕಟ್ಟಬೇಕೆ ಮೊದಲಾದ ಗೊಂದಲಗಳಿಗೆ ಆ ಮೂಲಕ ಬಿಬಿಎಂಪಿ ತೆರೆ ಹಾಕಿದೆ.

Read more
Page 2 of 3 1 2 3

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!