• Home
  • About Us
  • ಕರ್ನಾಟಕ
Sunday, November 16, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರು | ರಸ್ತೆ ಗುಂಡಿಗೆ ಮತ್ತೊಂದು ಬಲಿ, ಹೈಕೋರ್ಟ್ ಸೂಚನೆಯ ನಂತರವೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!

Any Mind by Any Mind
March 15, 2022
in ಕರ್ನಾಟಕ
0
ಬೆಂಗಳೂರು | ರಸ್ತೆ ಗುಂಡಿಗೆ ಮತ್ತೊಂದು ಬಲಿ, ಹೈಕೋರ್ಟ್ ಸೂಚನೆಯ ನಂತರವೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!
Share on WhatsAppShare on FacebookShare on Telegram

ಜಲಮಂಡಳಿ ಅಗೆದ ಗುಂಡಿಗೆ  ಬಿದ್ದು ಬೈಕ್ ಸವಾರ ಮೃತಪಟ್ಟಿರುವ ಘಟನೆ ಬೆಂಗಳೂರಿನ ಎಂಎಸ್ ಪಾಳ್ಯದ  ಮುನೇಶ್ವರ ಲೇಔಟ್ ರಸ್ತೆ ಬಳಿ ನಡೆದಿದೆ. 27 ವರ್ಷದ ಮೃತ ಅಶ್ವಿನ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಹಾವೇರಿ ಮೂಲದವರು ಎಂದು ತಿಳಿದು ಬಂದಿದೆ. ಪೋಷಕರಿಗೆ ಅಶ್ವಿನ್ ಒಬ್ಬನೇ ಮಗನಾಗಿದ್ದರು.

ADVERTISEMENT

ಭಾನುವಾರ ರಾತ್ರಿ 9.20ರ ಸುಮಾರಿಗೆ ಅಶ್ವಿನ್ ತಮ್ಮ ತಾಯಿಗೆ ಆಹಾರ ಖರೀದಿಸಲು ಹೋಗಿದರು. ರೆಸ್ಟೊರೆಂಟ್‌ನಿಂದ ಮನೆಗೆ ವಾಪಸಾಗುತ್ತಿದ್ದಾಗ ರಸ್ತೆ ಗುಂಡಿಯನ್ನು ಗಮನಿಸಿದ ದ್ವಿಚಕ್ರ ವಾಹನ ನಿಯಂತ್ರಣ ತಪ್ಪಿ ಅಪಘಾತವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ರಸ್ತೆಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನ್‌ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಶ್ವಿನ್ ಅವರ ದೇಹವನ್ನು ಆಸ್ಪತ್ರೆಗೆ ಸ್ಥಳಾಂತರಿಸಲು 20-25 ನಿಮಿಷಗಳ ಕಾಲ ವಿಳಂಬವಾಯಿತು ಮತ್ತು ಆಸ್ಪತ್ರೆಗೆ ತಲುಪುವ ವೇಳೆಗೆ ಸಾಕಷ್ಟು ರಕ್ತ ಹೋಗಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಎರಡು ದಿನಗಳ ಹಿಂದೆ ನಾನು ಅವನಿಗೆ ಎಚ್ಚರಿಕೆಯಿಂದ ಸವಾರಿ ಮಾಡಲು ಹೇಳಿದ್ದೆ ಮತ್ತು ಅಪಾಯವನ್ನುಂಟುಮಾಡುವ ಗುಂಡಿಗಳ ಬಗ್ಗೆ ಕೂಡ ಹೇಳಿದ್ದೆ. ಅವನಿಂದಾಗಿ ನಾನು ಬದುಕಿದ್ದೇನೆ ಮತ್ತು ಅವನನ್ನು ಬೆಳೆಸಲು ಸಾಕಷ್ಟು ಕಷ್ಟಪಟ್ಟಿದ್ದೇನೆ. ಆದರೆ ಈಗ ನನಗೆ ಬದುಕುವ ಉದ್ದೇಶವಿಲ್ಲ. ಯಾವ ತಾಯಿಯೂ ಈ ನೋವು ಅನುಭವಿಸಬಾರದು’ ಎಂದು ಅಶ್ವಿನ್‌ ತಾಯಿ ವಸುಧಾ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಪೋಷಕರಿಗೆ ಅಶ್ವಿನ್ ಒಬ್ಬನೇ ಮಗನಾಗಿದ್ದರು.

ಯಲಹಂಕ ಸಂಚಾರ ಪೊಲೀಸರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (ಬಿಡಬ್ಲ್ಯೂಎಸ್‌ಎಸ್‌ಬಿ) ಅಧಿಕಾರಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 (ಎ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮತ್ತು ಸ್ಥಳೀಯರು ರಸ್ತೆ ಗುಂಡಿಗಳನ್ನು ಮುಚ್ಚವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸಿದ ಪೌರ ಸಂಸ್ಥೆ ಮತ್ತು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಘಟನೆ ನಡೆದ ಕೂಡಲೇ ಪಾಲಿಕೆ ಅಧಿಕಾರಿಗಳು ರಸ್ತೆ ಡಾಂಬರೀಕರಣಕ್ಕೆ ಧಾವಿಸಿದರು.

ಈ ಅಹಿತಕರ ಘಟನೆಯ ಬಗ್ಗೆ ವರದಿ ಕೇಳಿರುವುದಾಗಿ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಮ್ಯಾನ್‌ಹೋಲ್‌ ಬಳಿ ಪೈಪ್‌ಲೈನ್‌ ದುರಸ್ತಿಗಾಗಿ ರಸ್ತೆಯನ್ನು ಅಗೆದ ನಂತರ ಗುಂಡಿಯನ್ನು ಮುಚ್ಚಲು ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಇನ್ನೊಬ್ಬ ನಿಗಮದ ಅಧಿಕಾರಿ ಒಳಚರಂಡಿ ಮಂಡಳಿಯನ್ನು ದೂರಿದರು.

ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ, ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಗುಂಡಿಗಳನ್ನು ಮುಚ್ಚಲು ವಿಫಲವಾದ ಬಗ್ಗೆ ನಿಗಮದ ಇಂಜಿನಿಯರ್-ಇನ್-ಚೀಫ್ ತರಾಟೆಗೆ ತೆಗೆದುಕೊಂಡು ಬಂಧಿಸುವುದಾಗಿ ಹೇಳಿತ್ತು.

ಈ ಹಿಂದಿನ ಘಟನೆಗಳು

ಸೆಪ್ಟೆಂಬರ್ 17, 2021

ಟಿ ದಾಸರಹಳ್ಳಿಯ ಮಲ್ಲಸಂದ್ರದ ನಿವಾಸಿ ಎಸ್.ಆನಂದಪ್ಪ (47) ಎಂಬುವರು ಹೆಸರಘಟ್ಟ ಮುಖ್ಯರಸ್ತೆ ಬಳಿ ಒಳಚರಂಡಿ ಮಂಡಳಿ ಅಗೆದಿದ್ದ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು.

ಸೆಪ್ಟೆಂಬರ್ 6, 2021

ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದ ಮೈಕೋ ಲೇಔಟ್ ನಿವಾಸಿ ಕುರ್ಷಿದ್ ಅಹ್ಮದ್ (75) ಎಂಬುವರು ನೀರು ತುಂಬಿದ ಗುಂಡಿಗೆ ಮೊಬಿಲಿಟಿ ಸ್ಕೂಟರ್ ಬಿದ್ದು ಸಾವನ್ನಪ್ಪಿದ್ದಾರೆ. ಸ್ಯಾನಿಟರಿ ಪೈಪ್‌ಲೈನ್‌ ಅಳವಡಿಸಲು ಒಂದು ವರ್ಷದ ಹಿಂದೆಯೇ ರಸ್ತೆಯನ್ನು ಅಗೆಯಲಾಗಿದ್ದು, ಅದನ್ನು ಗಮನಿಸದೆ ಹಾಗೆಯೇ ಬಿಡಲಾಗಿದೆ. ಘಟನೆಯ ಬಳಿಕ ಗುಂಡಿ ಮುಚ್ಚಲಾಯ್ತು.

ಜನವರಿ 30, 2022

ಮಾಗಡಿ ಮುಖ್ಯರಸ್ತೆಯಲ್ಲಿ ಟ್ರಕ್ ಹರಿದು ಪಿಲಿಯನ್ ರೈಡರ್ ಶರ್ಮಿಳಾ ಪ್ರಕಾಶ್ (40) ಮೃತಪಟ್ಟಿದ್ದರು. ಹದಗೆಟ್ಟ ರಸ್ತೆಯ ಹಾಗೂ ಹಳ್ಳಕೊಳ್ಳಗಳೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

Tags: BJPCongress PartyCovid 19ಕರ್ನಾಟಕ ಹೈಕೋರ್ಟ್ನರೇಂದ್ರ ಮೋದಿಬಿಜೆಪಿಬಿಬಿಎಂಪಿಬಿಬಿಎಂಪಿ ಅಧಿಕಾರಿಗಳುಬಿಬಿಎಂಪಿ ಆಯುಕ್ತಬಿಬಿಎಂಪಿ ಚುನಾವಣೆಬಿಬಿಎಂಪಿ ವ್ಯಾಪ್ತಿಯ ಕೆರೆಬೆಂಗಳೂರುರಸ್ತೆ ಗುಂಡಿಹೈಕೋರ್ಟ್ಹೈಕೋರ್ಟ್ ಆದೇಶ
Previous Post

Hijab row | ಹೆಣ್ಮಕ್ಕಳ ಶಿಕ್ಷಣ ಪಡೆಯುವ ಹಕ್ಕನ್ನು ಕೋರ್ಟ್ ಎತ್ತಿ ಹಿಡಿದಿದೆ : ಗೃಹ ಸಚಿವ ಆರಗ ಜ್ಞಾನೇಂದ್ರ

Next Post

Hijab row | ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಿ : ಸಿಎಂ ಬೊಮ್ಮಾಯಿ

Related Posts

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ
Top Story

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

by ಪ್ರತಿಧ್ವನಿ
November 15, 2025
0

  https://youtu.be/Y21a0uwLDB8 ದೆಹಲಿ, ಅ.15: "ನನಗೆ ಏನೂ ತಿಳಿದಿಲ್ಲ. ಏನಾದರೂ ಮಾಹಿತಿ ಬೇಕೆಂದರೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ದೆಹಲಿಯಲ್ಲಿ...

Read moreDetails
ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು

ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು

November 15, 2025
‘ನಂದಿನಿ’ ಹೆಸರಲ್ಲಿ ಕಲಬೆರೆಕೆ ತುಪ್ಪ- ಬೃಹತ್ ಜಾಲ ಬಯಲು

‘ನಂದಿನಿ’ ಹೆಸರಲ್ಲಿ ಕಲಬೆರೆಕೆ ತುಪ್ಪ- ಬೃಹತ್ ಜಾಲ ಬಯಲು

November 15, 2025
ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ

ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ

November 15, 2025
ಕನ್ನಡ ಚಿತ್ರರಂಗದ ನಟಿಗೆ ಕಿರುಕುಳ: ನಿರ್ಮಾಪಕ ಅರವಿಂದ್ ವೆಂಕಟೇಶ  ರೆಡ್ಡಿ ಅರೆಸ್ಟ್‌

ನಟಿಗೆ ಕಿರುಕುಳ ಆರೋಪ: ವಿಚಾರಣೆ ವೇಳೆ ಅರವಿಂದ್ ರೆಡ್ಡಿ ಹೇಳಿದ್ದೇನು..?

November 15, 2025
Next Post
ಫೆಬ್ರವರಿ 14 ರಿಂದ ರಾಜ್ಯ ವಿಧಾನಮಂಡಲ ಜಂಟಿ ಅಧಿವೇಶನ, ಮಾರ್ಚ್ನಲ್ಲಿ ಬಜೆಟ್ : ಸಿಎಂ ಬೊಮ್ಮಾಯಿ

Hijab row | ಮಕ್ಕಳ ಹಿತದೃಷ್ಟಿಯಿಂದ ಎಲ್ಲರೂ ನ್ಯಾಯಾಲಯದ ಆದೇಶ ಪಾಲಿಸಿ : ಸಿಎಂ ಬೊಮ್ಮಾಯಿ

Please login to join discussion

Recent News

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ
Top Story

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

by ಪ್ರತಿಧ್ವನಿ
November 15, 2025
ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು
Top Story

ಬಿಜೆಪಿಯಿಂದ ಮಾಜಿ ಕೇಂದ್ರ ಸಚಿವ ಆರ್.ಕೆ ಸಿಂಗ್ ಅಮಾನತು

by ಪ್ರತಿಧ್ವನಿ
November 15, 2025
ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು
Top Story

ಬಿಹಾರ ಸೋಲಿನ ಬೆನ್ನಲ್ಲೇ ಖರ್ಗೆ-ರಾಹುಲ್‌ ಗಾಂಧಿ ಭೇಟಿ: ದೆಹಲಿಯಲ್ಲಿ ರಾಜ್ಯ ನಾಯಕರು

by ಪ್ರತಿಧ್ವನಿ
November 15, 2025
ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ
Top Story

ಬಿಹಾರ ಚುನಾವಣೆ ಫಲಿತಾಂಶ: ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಭದ್ರ

by ಪ್ರತಿಧ್ವನಿ
November 15, 2025
ಕನ್ನಡ ಚಿತ್ರರಂಗದ ನಟಿಗೆ ಕಿರುಕುಳ: ನಿರ್ಮಾಪಕ ಅರವಿಂದ್ ವೆಂಕಟೇಶ  ರೆಡ್ಡಿ ಅರೆಸ್ಟ್‌
Top Story

ನಟಿಗೆ ಕಿರುಕುಳ ಆರೋಪ: ವಿಚಾರಣೆ ವೇಳೆ ಅರವಿಂದ್ ರೆಡ್ಡಿ ಹೇಳಿದ್ದೇನು..?

by ಪ್ರತಿಧ್ವನಿ
November 15, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

ಹೈಕಮಾಂಡ್ ನನ್ನನ್ನು ಏನಾದರೂ ಕೇಳಿದರೆ ನನಗೇನೂ ಬೇಕೋ ಅದನ್ನು ಹೇಳುತ್ತೇನೆ

November 15, 2025

ಜಪಾನಿನ ನೈಡೆಕ್ ಕಂಪನಿಯ ಆರ್ಚರ್ಡ್ ಹಬ್ ಗೆ ಚಾಲನೆ ನೀಡಿದ ಸಚಿವ ಎಂ ಬಿ ಪಾಟೀಲ್..

November 15, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!