Tag: ತಾಲಿಬಾನ್

‘ಆಪರೇಷನ್ ಗಂಗಾ’ಕ್ಕಿಂತ ಮುನ್ನ ಭಾರತ ನಡೆಸಿದ ರಕ್ಷಣಾ ಕಾರ್ಯಾಚರಣೆಗಳು ಯಾವುವು ಗೊತ್ತೇ?

ಯುದ್ಧಗ್ರಸ್ಥ ಉಕ್ರೇನಿನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕಾಗಿದೆ. ರಷ್ಯಾ ದಾಳಿಗೆ ಈಡಾಗಿರುವ ಉಕ್ರೇನಿನ ಕೀವ್ ಮತ್ತು ಕಾರ್ಕೀವ್ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ...

Read moreDetails

ತಾಲಿಬಾನ್ ಭಾರತದತ್ತ ಬಂದರೆ ನಾವು ವೈಮಾನಿಕ ದಾಳಿ ನಡೆಸಲು ಸಿದ್ದ: ಯೋಗಿ ಆದಿತ್ಯನಾಥ

ತಾಲಿಬಾನ್ ಉಗ್ರ ಸಂಘಟನೆಯಿಂದ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಎರಡು ದೇಶಗಳು ವಿಚಲಿತವಾದಂತೆ ಕಾಣುತ್ತಿವೆ. ತಾಲಿಬಾನ್ ಏನಾದರು ಭಾರತದತ್ತ ಸಾಗಿದರೆ ನಾವು ವೈಮಾನಿಕ ದಾಳಿ ನಡೆಸಲು ಸಿದ್ದವಾಗಿದ್ದೇವೆ ಎಂದು ...

Read moreDetails

ಕರ್ಮಠ ಮತಾಂಧತೆಯೂ, ತಾಲಿಬಾನ್ ಸಂಸ್ಕೃತಿಯೂ

ಮತಧಾರ್ಮಿಕ ಮೂಲಭೂತವಾದ ಮತ್ತು ಮತಾಂಧತೆ ದೇಶ ಭಾಷೆಗಳ ಗಡಿಯನ್ನು ಮೀರಿ ಬೆಳೆದಿರುವ ಒಂದು ಜಾಗತಿಕ ಸಮಸ್ಯೆ. ಕಳೆದ ಐದಾರು ದಶಕಗಳಲ್ಲಿ ಜಾಗತಿಕ ಬಂಡವಾಳಶಾಹಿಯು ತನ್ನ ಮಾರುಕಟ್ಟೆ ವಿಸ್ತರಣೆಗಾಗಿ ...

Read moreDetails

ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್; ಇರಾನ್ ಮಾದರಿ ಅಧ್ಯಕ್ಷೀಯ ಆಡಳಿತ ಜಾರಿಗೆ ಚಿಂತನೆ

ಅಮೇರಿಕ ಸೇನೆ ಸಂಪೂರ್ಣವಾಗಿ ಅಫ್ಘಾನಿಸ್ತಾನವನ್ನು ತೊರೆದಿದೆ. ಈ ಬೆನ್ನಲ್ಲೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚನೆಗೆ ಮುಂದಾದ ತಾಲಿಬಾನ್ ಹಿರಿಯ ನಾಯಕರು ಹಲವಾರು ರೂಪುರೇಷೆಗಳನ್ನು ಸಿದ್ದಪಡಿಸಿಕೊಂಡಿದ್ದಾರೆ. ಅಫ್ಘಾನ್‍ನಲ್ಲಿ ಇರಾನ್ ಮಾದರಿ ...

Read moreDetails

ಟೆರರ್ ಗ್ರೂಪ್ ಹಣೆಪಟ್ಟಿ ಕಳಚುತ್ತಲೇ ಭಾರತದ ವಿರುದ್ಧ ಯೂ ಟರ್ನ್ ಹೊಡೆದ ತಾಲಿಬಾನ್ !

ಅತ್ತ ವಿಶ್ವಸಂಸ್ಥೆಯ ಅಧಿಕೃತ ಭಯೋತ್ಪಾದಕ ಸಂಘಟನೆ ಎಂಬ ಹಣೆಪಟ್ಟಿ ಕಳಚಿದ ಮೂರೇ ದಿನದಲ್ಲಿ ತಾಲಿಬಾನ್ ರಾಗ ಬದಲಾಗಿದೆ. ಕಾಶ್ಮೀರ ವಿಷಯ ಭಾರತದ ಆಂತರಿಕ ವಿಷಯ ಎಂದಿದ್ದ ತಾಲಿಬಾನ್, ...

Read moreDetails

‘ಸಂಪೂರ್ಣ ಸ್ವಾತಂತ್ರ್ಯ’ ಘೋಷಿಸಿಕೊಂಡ ತಾಲಿಬಾನ್

ಕಳೆದ ಎರಡು ದಶಕಗಳಿಂದ ಅಫ್ಘಾನಿಸ್ತಾನದಲ್ಲಿ ಬೀಡು ಬಿಟ್ಟಿದ್ದ ಅಮೇರಿಕಾ ಸೇನಾಪಡೆಯು ಸಂಪೂರ್ಣವಾಗಿ ವಾಪಾಸಾಗಿದೆ. ಈ ಬಾರಿ ತಾಲಿಬಾನ್ ಉಗ್ರರು ಮತ್ತಷ್ಟು ಬಲಿಷ್ಟವಾಗಿ ಹೊರಹೊಮ್ಮಿದ್ದಾರೆ. ಅಮೇರಿಕಾ ಪಡೆಗಳು ದೇಶವನ್ನು ಬಿಡುವ ಮುನ್ನವೇ, ರಾಜಧಾನಿ ಕಾಬೂಲನ್ನು ವಶಪಡಿಸಿಕೊಂಡಿದ್ದಾರೆ.  ಮಂಗಳವಾರ ಮುಂಜಾನೆ ಕಾಬೂಲ್ ಏರ್ಪೋರ್ಟ್ ಅನ್ನು ವಶಪಡಿಸಿಕೊಂಡ ತಾಲಿಬಾನಿಗಳು ‘ಸಂಪೂರ್ಣ ಸ್ವಾತಂತ್ರ್ಯ’ವನ್ನು ಘೋಷಿಸಿದ್ದಾರೆ. ಮಧ್ಯರಾತ್ರಿ ಹನ್ನೆರಡು ಗಂಟೆಗೆ ಕೆಲವೇ ನಿಮಿಷಗಳ ಮೊದಲು ಅಮೇರಿಕಾದ ಕೊನೆಯ ಸ್ಥಳಾಂತರ ಕಾರ್ಯಾಚರಣೆಯ ವಿಮಾನ ಟೇಕ್ ಆಫ್ ಆಗಿತ್ತು. ಇದಾದ ಕೆಲವೇ ನಿಮಿಷಗಳ ಬಳಿಕ ತಾಲಿಬಾನ್ ಉಗ್ರರು ಏರ್ಪೋರ್ಟ್ ಅನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.  “ಅಮೇರಿಕಾದ ಕಟ್ಟ ಕಡೇಯ ಸೈನಿಕ ಕುಡಾ ಕಾಬೂಲ್ ಏರ್ಪೋರ್ಟ್ ಬಿಟ್ಟು ಹೋಗಿದ್ದಾರೆ. ಇದು ನಮ್ಮ ದೇಶಕ್ಕೆ ಲಭಿಸಿರುವ ಸಂಪೂರ್ಣ ಸ್ವಾತಂತ್ರ್ಯ,” ಎಂದು ತಾಲಿಬಾನ್ ವಕ್ತಾರ ಕಾರಿ ಯೂಸುಫ್ ಅವರು ಅಲ್-ಜಝೀರಾ ಟಿವಿಗೆ ನೀಡಿರುವ ಸಂದರ್ಶನದಲ್ಲಿ  ಹೇಳಿದ್ದಾರೆ.  ಅಮೇರಿಕಾ ಇತಿಹಾಸದಲ್ಲಿಯೇ ಅತ್ಯಂತ ದಿರ್ಘ ಕಾಲದ ಯುದ್ದ ಇದಾಗಿತ್ತು. ಇದರಲ್ಲಿ ಸುಮಾರು 2,500 ಅಮೇರಿಕಾ ಸೈನಿಕರು ಸಾವನ್ನಪ್ಪಿದ್ದರೆ, 2,40,000 ಅಫ್ಘಾನಿಗಳು ಸಾವನ್ನಪ್ಪಿದ್ದರು.  ಈ ಯುದ್ದದಿಂದಾಗಿ ಅಮೇರಿಕಾದ ಮೇಲೆ ಎರಡು ಟ್ರಿಲಿಯನ್  ಡಾಲರ್ ಹೆಚ್ಚುವರಿ ಹೊರೆ ಬೀಳುತ್ತಿತ್ತು.  ಅಫ್ಘಾನಿಸ್ತಾನದಲ್ಲಿ ಅಲ್-ಖೈದಾ ತನ್ನ ನೆಲೆ ವಿಸ್ತರಿಸಿಕೊಳ್ಳುವುದನ್ನು ಯಶಸ್ವಿಯಾಗಿ ಅಮೇರಿಕಾ ತಡೆದಿತ್ತು. ಮಾತ್ರವಲ್ಲದೇ, ಅಲ್-ಖೈದಾ ಮುಖ್ಯಸ್ಥ ಬಿನ್ ಲಾಡೆನ್  ಹತ್ಯೆಗೈಯುವಲ್ಲಿಯೂ ಸಫಲವಾಗಿತ್ತು.  ತಾಲಿಬಾನ್ ಆಡಳಿತದಿಂದ ಹೆದರಿ ಲಕ್ಷಾಂತಹ ಅಫ್ಘಾನಿಗಳು ಈಗಾಗಲೇ ದೇಶವನ್ನು ತೊರೆದಿದ್ದಾರೆ. ಕಾಬೂಲ್’ನಿಂದ ಲಕ್ಷಕ್ಕು ಹೆಚ್ಚು ಜನರನ್ನು ಏರ್ ಲಿಫ್ಟ್ ಮಾಡಲಾಗಿದೆ. ಆದರೆ, ಕಳೆದ ಇಪ್ಪತ್ತು ವರ್ಷಗಳ ಯುದ್ದದ ಸಂದರ್ಭದಲ್ಲಿ ಅಮೇರಿಕಾ ಸೇನೆಗೆ ನೆರವಾಗಿದ್ದ ಸಾವಿರಾರು ಜನರು ಇನ್ನೂ ಅಫ್ಘಾನಿಸ್ತಾನದಲ್ಲಿ ಬಾಕಿಯಾಗಿದ್ದಾರೆ. “ಯಾರನ್ನೆಲ್ಲಾ ಅಫ್ಘಾನಿಸ್ತಾನದಿಂದ ಹೊರತೆಬೇಕು ಎಂದು ಆಶಿಸಿದ್ದೇವೋ, ಅವರೆಲ್ಲರನ್ನೂ ಕರೆತರಲು ಸಾಧ್ಯವಾಗಿಲ್ಲ. ಅಲ್ಲಿನ ಇನ್ನೂ ಹತ್ತು ದಿನ ಉಳಿದಿದ್ದರೂ ಅದು ಸಾಧ್ಯವಾಗುತ್ತಿರಲಿಲ್ಲ,” ಎಂದು ಅಮೇರಿಕಾದ ಸೆಂಟ್ರಲ್ ಕಮಾಂಡ್ ಜನರಲ್ ಫ್ರ್ಯಾಂಕ್ ಮೆಕೆಂಜಿ ಹೇಳಿದ್ದಾರೆ. 

Read moreDetails

ದೀರ್ಘ ಇತಿಹಾಸ ಇರುವ ಅಫ್ಘಾನಿನ ಸಿಖ್ಖರ ವರ್ತಮಾನ ಮತ್ತು ಭವಿಷ್ಯ ಡೋಲಾಯಮಾನವಾಗಿದೆಯೇ?

ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಫ್ಘಾನಿಸ್ತಾನ ಸೋವಿಯತ್ ಕಾಲದಿಂದಲೂ ಭಾರತದ ಹಿತೈಷಿ.  ಬುಡಕಟ್ಟು ಜನಾಂಗಗಳೇ ಅಧಿಕ ಪ್ರಮಾಣದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ಅಸಹನೆ ಪ್ರಕಟವಾದದ್ದು ತಾಲಿಬಾನ್ ಕಾಲದಲ್ಲಿ ಮಾತ್ರ. ...

Read moreDetails

ತಾಲಿಬಾನ್ ನೀಡಿದ ಗಡುವು ಅಂತ್ಯವಾಗುವ ವೇಳೆ ಚುರುಕು ಪಡೆದ ಸ್ಥಳಾಂತರ ಕಾರ್ಯಾಚರಣೆ

ಅಫ್ಘಾನಿಸ್ತಾನದಿಂದ ವಿದೇಶಿಯರನ್ನು ಹಾಗೂ ಕಳೆದ ಎರಡು ದಶಕಗಳಿಂದ ಅಲ್ಲಿ ಬೀಡುಬಿಟ್ಟಿದ್ದ ಅಮೇರಿಕಾದ ಸೇನಾಪಡೆಗಳನ್ನು ವಾಪಾಸ್ ಕರೆಸಿಕೊಳ್ಳಲು ತಾಲಿಬಾನ್ ನೀಡಿರುವ ಗಡುವು ಮುಗಿಯುತ್ತಾ ಬಂದಿದೆ. ಭಾನುವಾರದಂದು ಅಮೇರಿಕಾವು 1,200 ...

Read moreDetails

ತಾಲಿಬಾನ್ ಕ್ರೌರ್ಯವನ್ನು ಬಿಂಬಿಸೋ ಶಮ್ಸಿಯಾ ಹಸ್ಸಾನಿ ಅವರ ಭಿತ್ತಿಚಿತ್ರಗಳು

ಶಮ್ಸಿಯಾ ಹಸ್ಸಾನಿ ಅಫ್ಘಾನಿನ ಪ್ರಸಿದ್ಧ ಭಿತ್ತಿಚಿತ್ರ ಕಲಾವಿದೆ.  ಅಫ್ಘಾನಿಸ್ತಾನದ ಮೊದಲ ಮಹಿಳಾ ಗೀಚುಬರಹ ಮತ್ತು ಬೀದಿ ಕಲಾವಿದೆಯಾಗಿ ಮಹಿಳಾ ಧ್ವನಿಗಳ ದಿಟ್ಟ ಪ್ರಚಾರಕ್ಕೆ ಹೆಸರುವಾಸಿಯಾದ ಅವರು ಆನ್-ಸೈಟ್ ...

Read moreDetails

RSS ಕೂಡಾ ತಾಲಿಬಾನ್ ಮಾದರಿಯ ಆಡಳಿತವನ್ನು ಬಯಸುತ್ತಿದೆ – ಚೇತನ್

ಅಧಿಕಾರರೂಢ ಬಿಜೆಪಿಯ ಮಾತ್ರ ಸಂಘಟನೆ ಆರ್‌ಎಸ್‌ಎಸ್‌ ಕೂಡಾ ಭಾರತದಲ್ಲಿ ತಾಲಿಬಾನ್‌ ಮಾದರಿಯ ಸರ್ಕಾರಕ್ಕೆ ಹವಣಿಸುತ್ತಿದೆ, ಆದರೆ ಅಂತಹ ಸರ್ಕಾರವನ್ನು ಸಂಪೂರ್ಣವಾಗಿ ಜಾರಿಗೆ ತರಲು ದು ವಿಫಲವಾಗಿದೆ ಎಂದು ...

Read moreDetails

ತಾಲಿಬಾನ್ ಬದಲಾಗಿದೆ ಎಂಬ ಮಾತು ಎಷ್ಟು ನಿಜ, ಎಷ್ಟು ಪೊಳ್ಳು?

ತಾಲಿಬಾನ್ ಉಗ್ರಗಾಮಿ ಸಂಘಟನೆ ಅಧಿಕಾರ ಹಿಡಿದ ಬಳಿಕ ಆಫ್ಘಾನಿಸ್ತಾನದಲ್ಲಿ ದಿನದಿಂದ ದಿನಕ್ಕೆ, ತಾಲಿಬಾನ್ ಆಡಳಿತಕ್ಕೆ ನಾಗರಿಕ ಪ್ರತಿರೋಧ ಭುಗಿಲೇಳತೊಡಗಿದೆ. ಬುಧವಾರ, ಗುರುವಾರ ತಮ್ಮ ದೇಶದ ರಾಷ್ಟ್ರಧ್ವಜ ಹಿಡಿದು ...

Read moreDetails

ಅಫ್ಘಾನಿಸ್ತಾನದ ರೂಪುಗೊಳ್ಳುತ್ತಿದೆಯೇ ತಾಲಿಬಾನ್ ವಿರೋಧಿ ಒಕ್ಕೂಟ?

ಆಗಸ್ಟ್‌ ಹದಿನೈದರಂದು ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮಾಡುವುದರೊಂದಿಗೆ ತಾಲಿಬಾನ್ ಕಾಬೂಲನ್ನು ವಶಪಡಿಸಿಕೊಂಡು ಅಧಿಕೃತವಾಗಿ ಅಫ್ಘಾನ್ ಆಡಳಿತವನ್ನು ಕೈಗೆ ತೆಗೆದುಕೊಂಡಿತು. ಆದರೆ  ತಾಲಿಬಾನ್ ಕಾಬೂಲ್ ಪ್ರವೇಶಿಸುತ್ತಿದ್ದಂತೆ ...

Read moreDetails

ಆಫ್ಘಾನಿಸ್ತಾನದ ವಿಷಯದಲ್ಲಿ ಭಾರತ ಮೌನಕ್ಕೆ ಕಾರಣವೇನು?

ತಾಲಿಬಾನಿಗಳ ವಿಷಯದಲ್ಲಿ ಏನನ್ನೂ ದಿಢೀರನೇ ನಿರ್ಧರಿಸುವ, ತತಕ್ಷಣದ ನಿಲುವಿಗೆ ಬರುವ ಸ್ಥಿತಿಯಲ್ಲಿ ಕೂಡ ಭಾರತ ಇಲ್ಲ. ನಿಜಕ್ಕೂ ಇದು ನುಂಗಲೂ ಆಗದ, ಉಗಿಯಲೂ ಆಗದ ಬಿಸಿ ತುಪ್ಪವನ್ನು ...

Read moreDetails

ಯುದ್ಧಗ್ರಸ್ತ ಅಫ್ಘಾನಿಸ್ತಾನದ ಭೀಕರತೆಯನ್ನು ಸಾರುವ ಚಿತ್ರಗಳಿವು…!

ಎರಡು ದಶಕಗಳ ಬಳಿಕ ಅಫ್ಘನಿನಲ್ಲಿ ತಾಲಿಬಾನ್ ಮತ್ತೆ ಮೇಲುಗೈ ಸಾಧಿಸಿಕೊಂಡಿದೆ. ಅಮೆರಿಕಾ ತನ್ನ ಸೇನೆಯನ್ನು ಹಿಂಪಡೆಯುತ್ತಿದ್ದಂತೆಯೇ ಅಂತರ್ಯುದ್ಧದಲ್ಲಿ ತೊಡಗಿದ ತಾಲಿಬಾನ್‌, ಅಮೆರಿಕಾದ ಸೇನೆ ಸಂಪೂರ್ಣವಾಗಿ ಅಫ್ಘನ್‌ನನ್ನು ತೊರೆಯುವ ...

Read moreDetails

‘ಹೆರಾತ್‌ನ ಸಿಂಹ’ ಇಸ್ಮಾಯಿಲ್ ಖಾನ್‌ರನ್ನು ವಶಕ್ಕೆ ಪಡೆದ ತಾಲಿಬಾನ್

'ಹೆರಾತ್‌ನ ಸಿಂಹ' ಇಸ್ಮಾಯಿಲ್ ಖಾನ್‌ರನ್ನು ವಶಕ್ಕೆ ಪಡೆದ ತಾಲಿಬಾನ್ತಾಲಿಬಾನ್ ದಂಗೆಕೋರರು ಅಫ್ಘಾನಿಸ್ತಾನದ ಮೂರನೇ ಅತಿದೊಡ್ಡ ನಗರವಾದ ಹೆರಾತ್‌ನ ಹೆಚ್ಚಿನ ಭಾಗವನ್ನು ವಶಪಡಿಸಿಕೊಂಡಿದ್ದಾರೆ ಮತ್ತು ಅಲ್ಲಿನ ಮಿಲಿಟರಿ ಪ್ರತಿರೋಧವನ್ನು ...

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!