• Home
  • About Us
  • ಕರ್ನಾಟಕ
Wednesday, July 2, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ದೀರ್ಘ ಇತಿಹಾಸ ಇರುವ ಅಫ್ಘಾನಿನ ಸಿಖ್ಖರ ವರ್ತಮಾನ ಮತ್ತು ಭವಿಷ್ಯ ಡೋಲಾಯಮಾನವಾಗಿದೆಯೇ?

ಪ್ರತಿಧ್ವನಿ by ಪ್ರತಿಧ್ವನಿ
August 31, 2021
in ದೇಶ
0
ದೀರ್ಘ ಇತಿಹಾಸ ಇರುವ ಅಫ್ಘಾನಿನ ಸಿಖ್ಖರ ವರ್ತಮಾನ ಮತ್ತು ಭವಿಷ್ಯ ಡೋಲಾಯಮಾನವಾಗಿದೆಯೇ?
Share on WhatsAppShare on FacebookShare on Telegram

ಭಾರತದೊಂದಿಗೆ ಗಡಿಯನ್ನು ಹಂಚಿಕೊಂಡಿರುವ ಅಫ್ಘಾನಿಸ್ತಾನ ಸೋವಿಯತ್ ಕಾಲದಿಂದಲೂ ಭಾರತದ ಹಿತೈಷಿ.  ಬುಡಕಟ್ಟು ಜನಾಂಗಗಳೇ ಅಧಿಕ ಪ್ರಮಾಣದಲ್ಲಿರುವ ಅಫ್ಘಾನಿಸ್ತಾನದಲ್ಲಿ ಭಾರತದ ಬಗ್ಗೆ ಅಸಹನೆ ಪ್ರಕಟವಾದದ್ದು ತಾಲಿಬಾನ್ ಕಾಲದಲ್ಲಿ ಮಾತ್ರ. ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ರೀತಿಯ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅದು ಮೊದಲಿನಂತೆ ಭಾರತ ಸ್ನೇಹಿಯಾಗಿಯೇ ಇತ್ತು. ಇದೇ ಕಾರಣಕ್ಕೆ ಅಫ್ಘಾನಿಸ್ತಾನದ ಹಲವು ಅಭಿವೃದ್ಧಿ ಕಾರ್ಯಕ್ರಮದಲ್ಲಿ ಭಾರತ ಸಹಕಾರ ನೀಡಿದ್ದು. ಒಂದು ಕಾಲದಲ್ಲಿ ಭಾರತದ ಮಿತ್ರ ರಾಷ್ಟ್ರವಾಗಿದ್ದ, ಇನ್ನೊಮ್ಮೆ ಭಾರತದ ಬಗ್ಗೆ ಅಸಹನೆ ಬೆಳೆಸಿಕೊಂಡ ಮತ್ತು ಸದ್ಯಕ್ಕೆ ಭಾರತದ ಬಗ್ಗೆ ಯಾವ ಗಟ್ಟಿ‌ನಿಲುವನ್ನೂ ತೆಗೆದುಕೊಳ್ಳದ ಅಫ್ಘಾನಿಸ್ತಾನದ ಸಾಂಸ್ಕೃತಿಕ ಚಹರೆ ಭಾರತದ ಪಾಲಿಗೆ ಅಷ್ಟೇನೂ‌ ಪರಿಚಿತವಲ್ಲ. ಈ ಕಾರಣಕ್ಕೇ ಅಲ್ಲಿನ ಅಲ್ಪಸಂಖ್ಯಾತ ಸಿಖ್ಖರ, ಹಿಂದುಗಳ, ಬೌದ್ಧರ ಬಗ್ಗೆ ಮಾತನಾಡುವಾಗ ಭಾರತದ ಹೊಸ ಪೀಳಿಗೆಗೆ ಆಶ್ಚರ್ಯವಾಗುವುದು. ಆದರೆ ಹದಿನೈದನೇ ಶತಮಾನದಲ್ಲೇ ಅಫ್ಘಾನಿನ ನೆಲದಲ್ಲಿ‌‌ ಸಿಖ್ಖರು ವಾಸಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.

ADVERTISEMENT

ಈ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲಿರುವ ಮಾನವಶಾಸ್ತ್ರಜ್ಞ ರಾಬರ್ಟ್ ಬಲ್ಲಾರ್ಡ್ ತಮ್ಮ 2011 ರ ಕೃತಿಯಲ್ಲಿ, ಅಫ್ಘಾನಿಸ್ತಾನದಲ್ಲಿ ಸಿಖ್ ಧರ್ಮವು ಹದಿನೈದನೇ ಶತಮಾನದಲ್ಲೇ ಇತ್ತು ಎಂದು ದಾಖಲಿಸಿದ್ದಾರೆ. ಇತಿಹಾಸಜ್ಞ ಇಂದ್ರಜಿತ್ ಸಿಂಗ್ ಸಹ  ತಮ್ಮ‌ ಕೃತಿಯಲ್ಲಿ 16 ನೇ ಶತಮಾನದ ಆರಂಭದಲ್ಲೇ ಗುರು ನಾನಕ್ ಅವರು ಸಿಖ್ ಧರ್ಮದ ಸಂದೇಶವನ್ನು ಹರಡಲು ಕಾಬೂಲ್‌ಗೆ ಪ್ರಯಾಣ ಬೆಳೆಸಿದ್ದರು ಎಂದು ಬರೆದಿದ್ದಾರೆ.

‘ಹಿಂದುಸ್ತಾನದ ಸ್ವಂತ ಮಾರುಕಟ್ಟೆ’ ಎಂದು ಕಾಬೂಲನ್ನು ಉದ್ದೇಶಿಸಿ ತನ್ನ ಆತ್ಮಚರಿತ್ರೆಯಾದ ‘ಬಾಬರ್‌ನಾಮ’ದಲ್ಲಿ   ಬರೆದಿರುವ ಬಾಬರ್ ಸಹ 1504ರ ಆಸುಪಾಸಿನಲ್ಲಿ ಸಿಖ್ಖರು ಅಫ್ಘಾನಿಸ್ತಾನದ ಆಸುಪಾಸಿನಲ್ಲಿ ಬದುಕುತ್ತಿದ್ದುದನ್ನು ದಾಖಲಿಸಿದ್ದರು.

ವಾಯುವ್ಯ ಭಾರತೀಯ ಉಪಖಂಡವನ್ನು ಆಳಿದ ಸಿಖ್ ಸಾಮ್ರಾಜ್ಯದ ಮೊದಲ ರಾಜ ಮಹಾರಾಜಾ ರಂಜಿತ್ ಸಿಂಗ್ 19 ನೇ ಶತಮಾನದ ಆರಂಭದಲ್ಲಿ ತನ್ನ ರಾಜ್ಯವನ್ನು ಅಫಘಾನ್‌ವರೆಗೂ ವಿಸ್ತರಿಸಿರುವುದಕ್ಕೆ ಇತಿಹಾಸದಲ್ಲಿ ದಾಖಲೆಗಳಿವೆ. ಆದರೆ 1849ರ ಆಂಗ್ಲೋ ಸಿಖ್ ಕದನದಲ್ಲಿ ಇಡೀ ಸಿಖ್ ಸಾಮ್ರಾಜ್ಯ ಬ್ರಿಟಿಷರ ಪಾಲಾಯಿತು. 20 ನೇ ಶತಮಾನದ ಆರಂಭದ ವರ್ಷಗಳಲ್ಲಿ ಅಫ್ಘಾನಿಸ್ತಾನಕ್ಕೆ ಆಗಮಿಸಿದ ಮತಾಂತರ ಚಟುವಟಿಕೆಗಳಿಗೆ ಪ್ರತಿಕ್ರಿಯೆಯಾಗಿ ‘ಸಿಂಗ್ ಸಭಾ ಸುಧಾರಣಾವಾದಿ’ ಚಳುವಳಿಯು ಉಪಖಂಡದಲ್ಲಿ ಹೊರಹೊಮ್ಮಿತು. ಇದರ ಭಾಗವಾಗಿ  ಪ್ರಮುಖ ಸಿಖ್ ಬೋಧಕ ಅಕಾಲಿ ಕೌರ್ ಸಿಂಗ್ 1919 ರಲ್ಲಿ ಸಿಖ್ ಧರ್ಮದ ಬೋಧನೆಗಾಗಿ ಅಫ್ಘಾನಿಸ್ತಾನದ ನಂಗರಾರ್ ಪ್ರಾಂತ್ಯಕ್ಕೆ ಆಗಮಿಸಿದ್ದರು.  ಅವರ ನಾಯಕತ್ವದಲ್ಲಿ ‘ಖಾಲ್ಸಾ ದಿವಾನ್’ ಅಫ್ಘಾನಿಸ್ತಾನವನ್ನು ಸ್ಥಾಪಿಸಲಾಯಿತು, ಇದು ಈ ಪ್ರದೇಶದಲ್ಲಿ ಸಿಖ್ ಮೌಲ್ಯಗಳ ಪ್ರಸರಣ ಮತ್ತು ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

PC: the quint

ಅಫ್ಘಾನಿಸ್ತಾನದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದ ಸಿಖ್ಖರು ಮೊದಲ ಬಾರಿ ದೇಶ ತೊರೆಯುವಂತಹ ಪರಿಸ್ಥಿತಿ ಸೃಷ್ಟಿಯಾದದ್ದು ಅಮಿರ್ ಅಬ್ದುರ್ರಹ್ಮಾನ್ ಖಾನ್ ಆಳ್ವಿಕೆಯ ಸಮಯದಲ್ಲಿ . ಆಗ ಅಫಘಾನ್ ಸಮಾಜದ ಮೂಲಭೂತವಾದಿಗಳು ಸ್ಥಳೀಯ ಹಿಂದೂಗಳು ಮತ್ತು ಸಿಖ್ಖರನ್ನು ತೊಂದರೆಗೊಳಪಡಿಸಿದರು.  ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಸಿಖ್ಖರು ಬೇರೆ ದಾರಿಯಿಲ್ಲದೆ ತಮ್ಮ ತಾಯ್ನಾಡನ್ನು ತೊರೆದು ಭಾರತದಲ್ಲಿ ನೆಲೆಸಿದರು ಮತ್ತು ಪಂಜಾಬಿನ ಪಟಿಯಾಲದಲ್ಲಿ ‘ಅಫ್ಘಾನ್-ಸಿಖ್’ ಸಮುದಾಯವನ್ನು ರೂಪಿಸಿಕೊಂಡರು.

20 ನೇ ಶತಮಾನದ ಉತ್ತರಾರ್ಧದಲ್ಲಿ ಅಫ್ಘಾನಿಸ್ತಾನದಲ್ಲಿ ಹುಟ್ಟಿಕೊಂಡ ಮುಜಾಹಿದ್ದೀನ್ ಮತ್ತು ಅವರ ಅನ್ಯ ಧರ್ಮ ದ್ವೇಷವು ಅಫಘಾನ್ ಸಿಖ್ಖರ ಎರಡನೆಯ ಮತ್ತು  ವ್ಯಾಪಕ ವಲಸೆಯನ್ನು ಮತ್ತಷ್ಟು ಹೆಚ್ಚಿಸಿತು.

1992 ರಲ್ಲಿ, ಮುಜಾಹಿದ್ದೀನ್ ಕಾಬೂಲ್ ಅನ್ನು ವಶಪಡಿಸಿಕೊಂಡಾಗ, ಈ ಭಯೋತ್ಪಾದಕ ಗುಂಪು ನಗರದ ಅತಿದೊಡ್ಡ ಗುರುದ್ವಾರವಾದ ‘ಕಾರ್ತೆ ಪರ್ವನ್’ ಅನ್ನು ಅಪವಿತ್ರಗೊಳಿಸಿತು. ಇದರಿಂದ ಅಲ್ಲಿದ್ದ ಸಿಖ್ಖರು ಭೀತಿಗೊಳಗಾದರು ಮತ್ತು ಅದೇ ವರ್ಷ ಸುಮಾರು 65,000 ಹಿಂದುಗಳು ಮತ್ತು ಸಿಖ್ಖರು ಅಫ್ಘಾನಿಸ್ತಾನದಿಂದ ಪಲಾಯನ ಮಾಡಿ ಭಾರತಕ್ಕೆ ಬಂದರು ಎಂದು ಸಿಂಗ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ.

1996 ರಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತು. ಈ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡಿರುವ ವಿದ್ವಾಂಸ ರಾಬರ್ಟ್ ಬಲ್ಲಾರ್ಡ್ “ಅದುವರೆಗೂ ಅಫ್ಘಾನ್ ಇಸ್ಲಾಂನ ಲಕ್ಷಣವಾಗಿದ್ದ ಸಹಿಷ್ಣುತೆಯು ಮಾಯವಾಗಿ ಜಿಹಾದಿ ಮತ್ತು ತಾಲಿಬಾನರಿಂದ ಉತ್ತೇಜಿಸಲ್ಪಟ್ಟ ಮೂಲಭೂತವಾದಿ ಧೋರಣೆಗಳು ಹೆಚ್ಚಿನ ಪ್ರಾಮುಖ್ಯತೆ ಗಳಿಸಿಕೊಂಡವು” ಎಂದು ಹೇಳುತ್ತಾರೆ. ಯುಎನ್‌ಎಚ್‌ಸಿಆರ್ ಪತ್ರಿಕೆಯ ಪ್ರಕಾರ 2005 ರ ಹೊತ್ತಿಗೆ, ಸುಮಾರು 3,700 ವ್ಯಕ್ತಿಗಳು ಹಿಂದು ಮತ್ತು ಸಿಖ್ ಸಮುದಾಯಗಳಿಗೆ ಸೇರಿದವರು ಅಫ್ಘಾನಿಸ್ತಾನದಲ್ಲಿ ವಾಸವಾಗಿದ್ದರು.

ಯುದ್ಧ ಪೀಡಿತ ದೇಶದಲ್ಲಿ ಸಿಖ್ ಅಲ್ಪಸಂಖ್ಯಾತರ ಗಾತ್ರವು ಕಳೆದ ಕೆಲವು ದಶಕಗಳಲ್ಲಿ ತೀವ್ರವಾಗಿ ಕಡಿಮೆಯಾಗಿದೆ. ಅಲ್ ಜಜೀರಾ ವರದಿಯ ಪ್ರಕಾರ 2020 ರಲ್ಲಿ ಕೇವಲ 700 ಸಿಖ್ಖರು ಮಾತ್ರ ಅಫ್ಘಾನಿಸ್ತಾನದಲ್ಲಿ ಉಳಿದಿದ್ದರು.
ಭಯೋತ್ಪಾದಕ ಸಂಘಟನೆ ಐಎಸ್ ನಡೆಸಿದ 2018 ರ ಜಲಾಲಾಬಾದ್ ದಾಳಿಯಲ್ಲಿ 19 ಸಿಖ್ಖರು ಸಾವನ್ನಪ್ಪಿದ್ದರೆ, 2020 ರಲ್ಲಿ ಹರ್ ರಾಯ್ ಸಾಹಿಬ್ ಗುರುದ್ವಾರದ ಮೇಲೆ ನಡೆದ ಬಾಂಬ್ ಸ್ಫೋಟವು 25 ಸಮುದಾಯದವರ ಸಾವಿಗೆ ಕಾರಣವಾಯಿತು ಎಂದು ಬಿಬಿಸಿಯೂ ವರದಿ ಮಾಡಿದೆ.

ಅಫ್ಘಾನಿನಲ್ಲಿ ತಾಲಿಬಾನ್ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಅಫ್ಘಾನ್ ಸಿಖ್ಖರು ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಅವರೆಲ್ಲರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಈವರೆಗೆ 77 ಸಿಖ್ಖರನ್ನು ಸ್ಥಳಾಂತರಿಸಲಾಗಿದೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಆಗಸ್ಟ್ 24 ರಂದು ಹೇಳಿದ್ದಾರೆ. ಮತ್ತೊಮ್ಮೆ ಸಿಖ್ಖರ ಪವಿತ್ರ ಗ್ರಂಥವನ್ನು ತಾಲಿಬಾನಿಗರು ವಶಪಡಿಸಿಕೊಳ್ಳುವ ಸಾಧ್ಯತೆ ಇದ್ದು ಗುರು ಗ್ರಂಥ ಸಾಹಿಬ್‌ನ 3 ಪವಿತ್ರ ಸರೂಪ್‌ಗಳನ್ನು (ಭೌತಿಕ ಪ್ರತಿಗಳು) ಭಾರತಕ್ಕೆ ಸಾಗಿಸಲಾಗಿದೆ.

ತಾಲಿಬಾನ್ ಅಫ್ಘಾನಿಸ್ತಾನದ ಸಿಖ್ಖರು ಮತ್ತು ಹಿಂದುಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದು ಅಭಯ ನೀಡಿದೆ.  ಆದರೆ ಅವರು ತಮ್ಮ ಮಾತಿಗೆ ಬದ್ಧರಾಗಿರುತ್ತಾರೆ ಎನ್ನುವುದರ ಬಗ್ಗೆ ಯಾವುದೇ ನಂಬಿಕೆ ಇಲ್ಲದ ಅಲ್ಲಿನ ಅಲ್ಪಸಂಖ್ಯಾತ ಸಮುದಾಯ ಮತ್ತೆ ಶುರುವಿಂದಲೇ ಬದುಕು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆಯಲ್ಲಿ ಭಾರತ, ಕೆನಡಾ, ಅಮೆರಿಕ ಮತ್ತಿತರ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.

Tags: afganistanAfghan SikhsBJPIndiaಅಕಾಲಿ ಕೌರ್ ಸಿಂಗ್ಅಫ್ಘಾನ್-ಸಿಖ್ಅಮಿರ್ಅಲ್ ಜಜೀರಾತಾಲಿಬಾನ್ಬಿಜೆಪಿಮುಜಾಹಿದ್ದೀನ್ ಕಾಬೂಲ್ರಂಜಿತ್ ಸಿಂಗ್ಸ್ತಾನಹರ್ ರಾಯ್ ಸಾಹಿಬ್ ಗುರುದ್ವಾರಹರ್ದೀಪ್ ಸಿಂಗ್ ಪುರಿ
Previous Post

ಬೆಂದಕಾಳೂರಿನಿಂದ ʼಸಿಲಿಕಾನ್ ವ್ಯಾಲಿʼವರೆಗೆ: ಬೆಂಗಳೂರೆಂಬ ಮಹಾ ಅಜ್ಜಿ..!

Next Post

ಡೆಲ್ಟಾ ರೂಪಾಂತರಿಯನ್ನು ತಡೆಯುವಲ್ಲಿ ಕೋವಿಶೀಲ್ಡ್ ಪರಿಣಾಮಕಾರಿಯಲ್ಲ: IGIB ಅಧ್ಯಯನ

Related Posts

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು
ಕರ್ನಾಟಕ

ರೈಲ್ವೇ ಟಿಕೆಟ್ ದರ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು

by ಪ್ರತಿಧ್ವನಿ
July 2, 2025
0

ಕೇಂದ್ರ ಸರ್ಕಾರದ ಬೆಲೆಯೇರಿಕೆಗೆ ರಾಜ್ಯದ ಬಿಜೆಪಿ ನಾಯಕರ ಮೌನ ಖಂಡನೀಯ ರೈತರಿಗೆ ನೆರವಾಗಲು ನಾವು ಹಾಲಿನ ದರ ಹೆಚ್ಚಳ ಮಾಡಿದಾಗ ಜನವಿರೋಧಿ ಎಂದು ಬೊಬ್ಬಿಟ್ಟಿದ್ದ ಬಿಜೆಪಿಯವರು ಈಗ...

Read moreDetails
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

July 1, 2025

Mallikarjun Kharge: ಸಂಚಲನ ಸೃಷ್ಟಿಸಿದ ಮಲ್ಲಿಕಾರ್ಜುನ್ ಖರ್ಗೆ. ಶೀಘ್ರವೇ ಸಿಎಂ ಸಿದ್ದರಾಮಯ್ಯ ರಾಜೀನಾಮೆ.

July 1, 2025
ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

ಕಾಶ್ಮೀರದಲ್ಲಿ ನಡೆಯುತ್ತಿರುವುದು ಭಯೋತ್ಪಾದನೆ ಅಲ್ಲ..ಸ್ವತಂತ್ರ ಹೋರಾಟ : ಪಾಕ್ ಸೇನಾ ಮುಖ್ಯಸ್ಥ ಆಸಿಮ್ ಮುನಿರ್ 

July 1, 2025
Next Post
ಡೆಲ್ಟಾ ರೂಪಾಂತರಿಯನ್ನು ತಡೆಯುವಲ್ಲಿ ಕೋವಿಶೀಲ್ಡ್ ಪರಿಣಾಮಕಾರಿಯಲ್ಲ: IGIB ಅಧ್ಯಯನ

ಡೆಲ್ಟಾ ರೂಪಾಂತರಿಯನ್ನು ತಡೆಯುವಲ್ಲಿ ಕೋವಿಶೀಲ್ಡ್ ಪರಿಣಾಮಕಾರಿಯಲ್ಲ: IGIB ಅಧ್ಯಯನ

Please login to join discussion

Recent News

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ
Top Story

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

by Chetan
July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 
Top Story

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

by Chetan
July 2, 2025
ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 
Top Story

ಸಿದ್ದು..ಸೋನಿಯಾ ಭೇಟಿ ಮಾಡಿಸಿದ್ದು ನಾನಲ್ಲ..! – ಸಿದ್ದರಾಮಯ್ಯ ಮಾಸ್ ಲೀಡರ್ : ಯು ಟರ್ನ್ ಹೊಡೆದ ಬಿ.ಆರ್ ಪಾಟೀಲ್ 

by Chetan
July 2, 2025
ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 
Top Story

ಇನ್ನೇನು ಬಂದೇಬಿಟ್ಟ ನೋಡಿ ಡೆವಿಲ್..! – ನಟ ದರ್ಶನ್ ಅಭಿಮಾನಿಗಳಿಗೆ ಚಿತ್ರತಂಡದಿಂದ ಬಿಗ್ ಅಪ್ಡೇಟ್ 

by Chetan
July 2, 2025
ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.
Top Story

ಇಷ್ಟು ವರ್ಷಗಳು ಪತ್ರಿಕೆ ನಡೆಸುವುದು ಅಂದರೆ ಸಾಮಾನ್ಯ ಮಾತಲ್ಲ.

by ಪ್ರತಿಧ್ವನಿ
July 2, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಎಚ್ಚೆತ್ತ ಪೊಲೀಸ್ ಇಲಾಖೆ – ದೊಡ್ಡ ಸಮಾರಂಭಗಳಿಗೆ ಎಸ್‌ಒಪಿ ರಚನೆ

July 2, 2025
ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

ಸಿಎಂ ಖುರ್ಚಿಯಲ್ಲಿ ಸಿದ್ದರಾಮಯ್ಯ ಇರುವಾಗ ಯಾರೊಬ್ಬರೂ ಅಪಸ್ವರ ಎತ್ತಬಾರದು – ಶಾಸಕರಿಗೆ ಡಿಕೆ ವಾರ್ನಿಂಗ್ 

July 2, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada