ನವೆಂಬರ್ 1ರ ರಾಜ್ಯೋತ್ಸವ ಬರುವ ಸಂದರ್ಭದಲ್ಲಿ, ಕರ್ನಾಟಕ ಸರ್ಕಾರವೇ ಕನ್ನಡ ಶಾಲೆಗಳನ್ನು ಹೇಗೆ ನಾಶ ಮಾಡುತ್ತಿದೆ ಎಂಬುದರ ಕುರಿತು ಒಂದು ವಿಶೇಷ ವರದಿಯನ್ನು ‘ಪ್ರತಿಧ್ವನಿ’ ನಿಮ್ಮ ಮುಂದೆ ...
Read moreDetailsಕರೋನ ಸಾಂಕ್ರಾಮಿಕ ನಡುವೆಯು ರೈತರ ಆತ್ಮಾಹತ್ಯೆ ಮುಂದುವರೆದಿದ್ದು, ಕಳೆದ ಒಂದೂವರೆ ವರ್ಷದಲ್ಲಿ 746 ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡ ವರದಿಯಾಗಿದೆ. ರಾಜ್ಯ ಕೃಷಿ ಇಲಾಖೆಯ ಅಂಕಿಅಂಶ ಪ್ರಕಾರ, ...
Read moreDetails'ಹಿಂದೂಗಳ ಮೇಲೆ ನಡೆಯುವ ಹಲ್ಲೆಗೆ ನಾವು ಪ್ರತಿಕ್ರಿಯೆ ನೀಡಲು ಕತ್ತಿ ಹಿಡಿದರೆ ನಿಮಗೆ ಶವ ಹೂಳಲು ಜಾಗ ಇರುವುದಿಲ್ಲ' ಎಂದು ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ...
Read moreDetailsಮಹಿಳೆಯರ ವಿರುದ್ಧ ದ್ವೇಷ ಕಾರುವ ಮಾತುಗಳನ್ನಾಡಲು ಕರ್ನಾಟಕದ ಬಿಜೆಪಿ ನಾಯಕರು ಮತ್ತು ಸಚಿವರು ಪೈಪೋಟಿಯ ಮೇಲೆ ಮುಗಿಬಿದ್ದಿದ್ದಾರೆ. ಎರಡನೆ ಬಾರಿ ಆರೋಗ್ಯ ಸಚಿವರಾಗಿರುವ ಕೆ ಸುಧಾಕರ್, ನಿಮ್ಹಾನ್ಸ್ನಲ್ಲಿ ...
Read moreDetailsಇತ್ತೀಚೆಗೆ ಕರ್ನಾಟಕದ ಕರಾವಳಿ ಮತ್ತಿತರ ಜಿಲ್ಲೆಗಳಲ್ಲಿ ನಡೆಯುತ್ತಿರುವ ಮತಾಂಧರ ಧಾಳಿಯನ್ನು ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ “ಸಮಾಜದಲ್ಲಿ ಹಲವಾರು ಭಾವನೆಗಳ ಜನರಿದ್ದಾರೆ. ಈ ಭಾವನೆಗಳಿಗೆ ಧಕ್ಕೆ ಆಗದ ...
Read moreDetailsಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕದ ವಿಜಯಪುರ(Vijayapura), ಕೋಲಾರ ಮತ್ತು ಕಲಬುರಗಿ(Kalaburagi) ಜಿಲ್ಲೆಗಳಲ್ಲಿ ನಿರಂತರ ಭೂಮಿ ಕಂಪಿಸಿದ ಅನುಭವ ಆಗುತ್ತಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ...
Read moreDetailsಕೊರೋನಾ ಲಾಕ್ಡೌನ್ ನಿಂದಾಗಿ ರಾಜ್ಯ ಸಾರಿಗೆ ನಿಗಮಗಳು ಮಕಾಡೆ ಮಲಗಿವೆ. ಸದ್ಯ ಅನ್ ಲಾಕ್ ಆಗಿ ಸಂಪೂರ್ಣ ಬಸ್ ಸಂಚಾರ ಆರಂಭವಾದರೂ ನೌಕರರಿಗೆ ಸಂಬಳವನ್ನೂ ಕೊಡಲಾರದ ಸ್ಥಿತಿಗೆ ...
Read moreDetailsಯುಪಿಎಸ್ ಸಿ ಪರೀಕ್ಷೆಗಳು ಅಕ್ಟೋಬರ್ 10 ರಂದು ನಡೆಯುತ್ತಿದ್ದು ಈ ಬಾರಿಯೂ ಕನ್ನಡಿಗರಿಗೆ ಕನ್ನಡದಲ್ಲಿ ಪರೀಕ್ಷೆಗಳನ್ನು ಬರೆಯುವ ಅವಕಾಶ ನೀಡದೆ ಕನ್ನಡಿಗರನ್ನು ಎರಡನೇ ದರ್ಜೆ ಪ್ರಜೆಗಳಂತೆ ನೋಡಲಾಗುತ್ತಿದೆ. ...
Read moreDetailsರಾಜ್ಯದಲ್ಲಿ ಉಪಚುನಾವಣೆ ಕದನ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ಜೆಡಿಎಸ್ ಸಿಂದಗಿ, ಹಾನಗಲ್ ಕ್ಷೇತ್ರದ ಉಪಕದನಕ್ಕೆ ಅಭ್ಯರ್ಥಿಗಳನ್ನ ಅಂತಿಮಗೊಳಿಸಿದೆ. ಇತ್ತ ಕಾಂಗ್ರೆಸ್ ಕೂಡ ಸಿಂಧಗಿ ಕ್ಯಾಂಡಿಡೇಟ್ ಮೊದಲೇ ...
Read moreDetailsಮಳೆರಾಯ ಇಡೀ ಬೆಂಗಳೂರನ್ನೆ ತಲ್ಲಣಗೊಳಿಸಿದ್ದಾನೆ. ವರುಣನ ಅಬ್ಬರ ನಗರದ ಮಂದಿಯ ನಿತ್ಯಜೀವನದ ವೇಗವನ್ನೆ ಕುಂಠಿತಗೊಳಿಸಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆ, ಕಾರಿನಲ್ಲಿ ಒಡಾಡುವರಿಂದ ಹಿಡಿದು ಕಾಲಿನಲ್ಲಿ ...
Read moreDetailsಇತ್ತೀಚೆಗೆ ಪಂಜಾಬ್ ಸಿಎಂ ಸ್ಥಾನಕ್ಕೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ್ದರು. ಹೈಕಮಾಂಡ್ ಒತ್ತಾಯದ ಮೇರೆಗೆ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಸಿಎಂ ಸ್ಥಾನಕ್ಕೆ ದಲಿತ ನಾಯಕ ...
Read moreDetailsಈ ದಿನ ಬೆಳಿಗ್ಗೆ ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆಯಲ್ಲಿ ತೊಡಗಿದ್ದ ಸಾವಿರಾರು ರೈತರ ಮೇಲೆ, ಕೇಂದ್ರ ಸರಕಾರದ ಗೃಹ ಖಾತೆಯ ರಾಜ್ಯ ಸಚಿವ ...
Read moreDetailsಭಾರತದ ಸುಮಾರು 75% ಮಳೆಗೆ ಕಾರಣವಾಗುವ ಮುಂಗಾರು ಸಾಮಾನ್ಯವಾಗಿ ಕೇರಳದ ಮೂಲಕ ಜೂನ್ನಲ್ಲಿ ಭಾರತಕ್ಕೆ ಪ್ರವೇಶಿಸಿ, ಜುಲೈಯಲ್ಲಿ ಇಡೀ ಭಾರತದಾದ್ಯಂತ ಹರಡಿ ಸಪ್ಟೆಂಬರ್ನಲ್ಲಿ ಅಂತ್ಯವಾಗುತ್ತದೆ. ಆದರೆ ಸತತವಾಗಿ ...
Read moreDetailsಹಲವು ತಿಂಗಳುಗಳ ಬಳಿಕ ಇಡೀ ರಾಜ್ಯ ಯಥಾಸ್ಥಿತಿಗೆ ಮರಳುತ್ತಿದೆ. ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್, ಕ್ಲಬ್ ಎಲ್ಲದಕ್ಕೂ ಅನುಮತಿ ದೊರೆಯುತ್ತಿದೆ. ಕರೋನಾ ಗಣನೀಯವಾಗಿ ತಗ್ಗಿರುವ ಹಿನ್ನೆಲೆಯಲ್ಲಿ ಕಳೆದ 25ರಂದು ರಾಜ್ಯ ಸರ್ಕಾರ ಅಕ್ಟೋಬರ್ 1ರಂದು ಎಲ್ಲದಕ್ಕೂ 100% ರಷ್ಟು ಅನುಮತಿ ಕೊಟ್ಟು ಆದೇಶ ಹೊರಡಿಸಿತ್ತು. ಈ ನಿಟ್ಟಿನಲ್ಲಿ ಇಂದಿನಿಂದ ಎಲ್ಲವೂ ಸಂಪೂರ್ಣವಾಗಿ ಅನ್ ಲಾಕ್ ಆಗುತ್ತಿದೆ. ಕರೋನಾ ಎರಡನೇ ಅಲೆ ವೇಳೆ ಎಲ್ಲದರ ಮೇಲೂ ನಿರ್ಬಂಧ ಹೇರಿದ್ದ ಸರ್ಕಾರ.!!ಚಿತ್ರರಂಗಕ್ಕೆ ಹಿಡಿದಿದ್ದ ಗ್ರಹಣ ಇಂದಿಗೆ ಮುಕ್ತಾಯವಾಗುತ್ತಿದೆ. ಕರೊನಾ 2ನೇ ಅಲೆಯ ಬಳಿಕ, ಭರ್ತಿ 5 ತಿಂಗಳಾದ್ಮೇಲೆ 100% ಆಸನ ಭರ್ತಿಗೆ ಅವಕಾಶ ಸಿಕ್ಕಿದೆ. ಹೀಗಾಗಿ ಗಾಂಧಿನಗರದಲ್ಲಿ ಮತ್ತೆ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ಹೌದು, ಬರೋಬ್ಬರಿ 5 ತಿಂಗಳ ವನವಾಸ ಮುಗಿಸಿ, ಚಿತ್ರರಂಗ ಮತ್ತೆ ಪುಟಿದೇಳಲು ಸಜ್ಜಾಗಿದೆ. ಒಂದೂವರೆ ವರ್ಷದಿಂದ ಕರೊನಾ ಕಾಟಕ್ಕೆ ನಲುಗಿಹೋಗಿದ್ದ ಸ್ಯಾಂಡಲ್ವುಡ್ನಲ್ಲಿ, ಮತ್ತೆ ಭರವಸೆಯ ಬೆಳಕು ಮೂಡಿದೆ.. ಇಂದಿನಿಂದ 100 % ಆಸನ ಭರ್ತಿಗೆ ಸರಕಾರ ಅನುಮತಿ ಕೊಟ್ಟಿರುವುದರಿಂದ, ಗಾಂಧಿನಗರದಲ್ಲಿ ಸಡಗರ ಮನೆಮಾಡಿದೆ. ಏಪ್ರಿಲ್ 1ರಂದು ತೆರೆಕಂಡಿದ್ದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾಗೆ, ಮೂರೇ ದಿನದಲ್ಲಿ ಶಾಕ್ ಕೊಟ್ಟಿತ್ತು ಸರ್ಕಾರ. ಅದಾಗಿ 5 ತಿಂಗಳ ಬಳಿಕ ಇಂದಿನಿಂದ ಮತ್ತೆ ಬೆಳ್ಳಿಪರದೆಗೆ ಹೊಸ ರಂಗು ಬರಲಿದೆ. ಮೊದಲ ಚಿತ್ರವಾಗಿ ತೆರೆಗೆ ಬರ್ತಿದೆ ‘ಕಾಗೆ ಮೊಟ್ಟೆʼ & ʻಮೋಹನದಾಸʼ.!! 50% ನಿರ್ಬಂಧದ ನಡುವೆಯೇ ಕೆಲ ಚಿತ್ರಗಳು ರಿಲೀಸ್ ಆದರೂ, ಅಷ್ಟೇನೂ ಉತ್ತಮ ರೆಸ್ಪಾನ್ಸ್ ಸಿಕ್ಕಿರಲಿಲ್ಲ. ಈಗ 100% ಆಸನ ಭರ್ತಿಗೆ ಅವಕಾಶ ಸಿಕ್ಕಿರುವುದರಿಂದ, ಮೊದಲ ಚಿತ್ರವಾಗಿ ‘ಕಾಗೆ ಮೊಟ್ಟೆʼ ಹಾಗೂ ʻಮೋಹನದಾಸʼ ಎಂಬ ಎರಡು ಚಿತ್ರಗಳು ಬಿಡುಗಡೆ ಆಗ್ತಿದೆ. ನವರಸ ನಾಯಕ ಜಗ್ಗೇಶ್ ಅವರ ಪುತ್ರ ಗುರುರಾಜ್ ಅಭಿನಯದ, ‘ಕಾಗೆ ಮೊಟ್ಟೆ’ ಸಿನಿಮಾ ಥಿಯೇಟರ್ ಅಂಗಳಕ್ಕೆ ಕಾಲಿಡ್ತಿದೆ. ಈ ಮೂಲಕ ಸಿನಿಪ್ರಿಯರಿಗೆ ಬ್ಯಾಕ್ ಟು ಬ್ಯಾಕ್ ಹಬ್ಬವೋ ಹಬ್ಬ. ಮುಂದಿನ ವಾರದಿಂದ ಚಿತ್ರಮಂದಿರಗಳು ಮತ್ತಷ್ಟು ಕಳೆಗಟ್ಟುವ ನಿರೀಕ್ಷೆ ಇವೆ. ನಿನ್ನ ಸನಿಹಕೆ, ಸಲಗ, ಕೋಟಿಗೊಬ್ಬ-3, ಭಜರಂಗಿ-2 ಚಿತ್ರಗಳು, ಒಂದಾದ ಮೇಲೊಂದರಂತೆ ತೆರೆಮೇಲೆ ಅಪ್ಪಳಿಸಲಿವೆ. ಇಂದಿನಿಂದ ದೇವಸ್ಥಾನ, ಚಿತ್ರಮಂದಿರ, ಪಬ್, ಕ್ಲಬ್ ಎಲ್ಲಾ ಓಪನ್.!! ಚಿತ್ರ ಮಂದಿರದ ಜೊತೆಗೆ ಧಾರ್ಮಿಕ ಕ್ಷೇತ್ರದ ಕಾರ್ಯ ಚಟುವಟಿಕೆಗಳಿಗೂ ಸರ್ಕಾರ ಸಂಪೂರ್ಣ ಅನುಮತಿ ಕೊಟ್ಟಿದೆ. ಕರೋನಾ ಎರಡನೇ ವೇಳೆ ಬಂದ್ ಆಗಿದ್ದ ದೇವಸ್ಥಾನ ಮತ್ತು ಇತರೆ ಧಾರ್ಮಿಕ ದೇವಾಲಯಗಳು, ಅದಾದ ಬಳಿಕ ಹಂತ ಹಂತವಾಗಿ ಕಾರ್ಯಚರಿಸಲು ಅನುಮತಿ ಕೊಡಲಾಗಿತ್ತು. ಆದರೆ ಶೆ. 100 ಕ್ಕೆ ನೂರರಷ್ಟು ಅನುಮತಿ ಕೊಟ್ಟಿರಲಿಲ್ಲ. ಇದೀಗ ಇಂದಿನಿಂದ ದೇವಸ್ಥಾನಗಳ ಮೇಲಿನ ನಿರ್ಬಂಧ ಕೂಡ ತೆರವಾಗುತ್ತಿದೆ. ಇದರ ಜೊತೆಗೆ ಕ್ಲಬ್, ಪಬ್ ಕೂಡ ಇಂದಿನಿಂದ ಫುಲ್ ಬಿಂದಾಸ್ ಆಗಿ ಓಪನ್ ಆಗುತ್ತಿದೆ. ಅದ್ಯಾವಗ ಕೊರೋನಾ ಮೊದಲ ಅಲೆ ಅಪ್ಪಳಿಸಿತೋ ಆಗಲೇ ಪಬ್, ಕ್ಲಬ್ ಗಳ ವ್ಯವಹಾರಕ್ಕೆ ಕಡಿವಾಣ ಬಿದ್ದಿತ್ತು. ಅದಾದ ಬಳಿಕ ಸರ್ಕಾರ ಹಾಗೂ ಬಿಬಿಎಂಪಿ ಮೇಲೆ ಹಲವು ಬಾರಿ ಒತ್ತಡ ಬಿದ್ದಿದ್ದರೂ ಓಪನ್ ಮಾಡಲು ಅನುಮತಿ ಕೊಟ್ಟಿರಲಿಲ್ಲ. ಸಿಲಿಕಾನ್ ಸಿಟಿ ಬೆಂಗಳೂರು ಇಂದಿನಿಂದ ಫುಲ್ ಓಪನ್..!! ...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada