• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ರಾಜ್ಯಗಳು ಕರೋನ ಸಾವಿನ ಅಂಕಿಅಂಶಗಳನ್ನು ತನಿಖೆ ಮಾಡಬೇಕು -ಏಮ್ಸ್ ಮುಖ್ಯಸ್ಥ ಡಾ.ರಂದೀಪ್

Any Mind by Any Mind
June 13, 2021
in ದೇಶ
0
ರಾಜ್ಯಗಳು ಕರೋನ ಸಾವಿನ ಅಂಕಿಅಂಶಗಳನ್ನು ತನಿಖೆ ಮಾಡಬೇಕು -ಏಮ್ಸ್ ಮುಖ್ಯಸ್ಥ ಡಾ.ರಂದೀಪ್
Share on WhatsAppShare on FacebookShare on Telegram

ADVERTISEMENT

ಕರೋನದಿಂದ ಉಂಟಾಗುವ ಸಾವಿನ ಮಾಹಿತಿಯ ಬಗ್ಗೆ ಆಸ್ಪತ್ರೆಗಳು ಮತ್ತು ರಾಜ್ಯಗಳು ತನಿಖೆ ನಡೆಸಬೇಕು ಎಂದು ದೇಶದ ಹಿರಿಯ ವೈದ್ಯ ಮತ್ತು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ. ಕರೋನಾದಿಂದ ಉಂಟಾಗುವ ಸಾವುಗಳನ್ನು ತಪ್ಪಾಗಿ ವರ್ಗೀಕರಿಸುವುದು ಕರೋನ ವಿರುದ್ಧದ ನಮ್ಮ ಹೋರಾಟಕ್ಕೆ ಅಡ್ಡಿಯಾಗಬಹುದು ಎಂದು ಅವರು ಹೇಳಿದ್ದಾರೆ. ಈ ಸಂದರ್ಭಗಳಲ್ಲಿ ಪ್ರಾಣ ಕಳೆದುಕೊಂಡವರ ನಿಜವಾದ ಚಿತ್ರಣವನ್ನು ಪಡೆಯಲು ತನಿಖೆ ನಡೆಸಬೇಕು. ಕರೋನಾದಿಂದಾಗಿ ಸಾವಿಗೀಡಾದ ಸರಿಯಾದ ಅಂಕಿಗಳನ್ನು ರಾಜ್ಯಗಳು ಪಡೆದುಕೊಂಡರೆ ಒಂದು ನೈಜ್ಯ ಚಿತ್ರಣ ನಮಗೆ ಸಿಗಲಿದೆ ಎಂದು ಹೇಳಿದ್ದಾರೆ.

ಕರೋನ ಸಮಯದಲ್ಲಿ ಅನೇಕ ರಾಜ್ಯ ಸರ್ಕಾರಗಳು ಅಂಕಿಅಂಶಗಳನ್ನು ಕಡಿಮೆ ವರದಿ ಮಾಡಿವೆ ಎಂದು ಡಾ. ಗುಲೇರಿಯಾ ಆರೋಪಿಸಿದ್ದಾರೆ. ಏಪ್ರಿಲ್‌ನಲ್ಲಿ ಅಂತ್ಯಸಂಸ್ಕಾರ ಮಾಡಿದವರ ಸಂಖ್ಯೆಗೂ ಮತ್ತು ಅಧಿಕೃತ ಅಂಕಿ ಅಂಶಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದು ಹೇಳಿದ್ದಾರೆ.

ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ, ಡಾ. ಗುಲೇರಿಯಾ, ವ್ಯಕ್ತಿಯು ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಭಾವಿಸೋಣ. ಕರೋನಾದಿಂದ ಹೃದಯಾಘಾತವೂ ಆಗಬಹುದು. ಆದರೆ ನೀವು ಈ ಪ್ರಕರಣವನ್ನು ಕರೋನಾ ಅಲ್ಲದ ಸಾವಿನಲ್ಲಿ ಎಣಿಸುತ್ತೀರಿ. ಆದರೆ ವಾಸ್ತವದಲ್ಲಿ ಇದನ್ನು ಕರೋನ ಸಾವು ಎಂದೇ ಪರಿಗಣಿಸಿ ಎಣಿಸಬೇಕು ಎಂದು ಹೇಳಿದ್ದಾರೆ.

ಕರೋನಾ ವೈರಸ್‌ನಿಂದಾಗಿ ರೋಗಿಯು ಸಾವನ್ನಪ್ಪಿದ್ದಾನೋ ಇಲ್ಲವೋ ಎಂದು ಯಾರು ನಿರ್ಧರಿಸುತ್ತಾರೆ? ಎಂದು ಇತ್ತೀಚೆಗೆ ಕೇರಳ ವಿಧಾನಸಭೆಯಲ್ಲಿ ಚರ್ಚಿಸಲಾಯಿತು.

ಡಾ. ಗುಲೇರಿಯಾ ಮಾತನಾಡಿ,’ಆಸ್ಪತ್ರೆಗಳು ಮತ್ತು ರಾಜ್ಯವು ಸಾವಿನ ಅಂಕಿಅಂಶಗಳನ್ನು ಲೆಕ್ಕಪರಿಶೋಧಿಸುವುದು ಅವಶ್ಯಕತೆಯಾಗಿದೆ. ಇದರಿಂದ ನಾವು ಮರಣ ಪ್ರಮಾಣದ ಸ್ಥಿತಿ ಏನು ಮತ್ತು ಅದನ್ನು ಕಡಿಮೆ ಮಾಡಲು ಏನು ಮಾಡಬಹುದು ಎಂದು ತಿಳಿಯಲು ಸಾಧ್ಯವಾಗುತ್ತದೆ. ಇದರೊಂದಿಗೆ ನಾವು ಮರಣ ಪ್ರಮಾಣವನ್ನು ಕಡಿಮೆ ಮಾಡುವುದು ಹೇಗೆ ಎಂಬ ಕಾರ್ಯತಂತ್ರವನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಉತ್ತರಿಸಿದ್ದಾರೆ.

ನಮ್ಮಲ್ಲಿ ಸ್ಪಷ್ಟವಾದ ಅಂಕಿಅಂಶಗಳ ದಾಖಲೆ ಇಲ್ಲದಿದ್ದರೆ, ಸಾವುಗಳನ್ನು ಕಡಿಮೆ ಮಾಡಲು ಕಾರ್ಯತಂತ್ರ ರೂಪಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದಾರೆ.

Tags: Covid 19
Previous Post

AIADMK ಯನ್ನು ʼನನ್ನ ರಕ್ತದಿಂದ ಬೇರ್ಪಡಿಸಲು ಸಾಧ್ಯವಿಲ್ಲʼ ಶಶಿಕಲಾ ಸಂಭಾಷಣೆಯ ಆಡಿಯೋ ವೈರಲ್

Next Post

ದಿಢೀರ್ ನಾಯಕನಾಗಿ ಹೊರಹೊಮ್ಮಿರುವ ಅರವಿಂದ ಬೆಲ್ಲದ ಅವರ‌ ಹಿಂದೆ ಯಾರಿದ್ದಾರೆ?

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ದಿಢೀರ್ ನಾಯಕನಾಗಿ ಹೊರಹೊಮ್ಮಿರುವ ಅರವಿಂದ ಬೆಲ್ಲದ ಅವರ‌ ಹಿಂದೆ ಯಾರಿದ್ದಾರೆ?

ದಿಢೀರ್ ನಾಯಕನಾಗಿ ಹೊರಹೊಮ್ಮಿರುವ ಅರವಿಂದ ಬೆಲ್ಲದ ಅವರ‌ ಹಿಂದೆ ಯಾರಿದ್ದಾರೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada