• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ರಾಜಕೀಯ

AIADMK ಯನ್ನು ʼನನ್ನ ರಕ್ತದಿಂದ ಬೇರ್ಪಡಿಸಲು ಸಾಧ್ಯವಿಲ್ಲʼ ಶಶಿಕಲಾ ಸಂಭಾಷಣೆಯ ಆಡಿಯೋ ವೈರಲ್

Any Mind by Any Mind
June 13, 2021
in ರಾಜಕೀಯ
0
AIADMK ಯನ್ನು ʼನನ್ನ ರಕ್ತದಿಂದ ಬೇರ್ಪಡಿಸಲು ಸಾಧ್ಯವಿಲ್ಲʼ  ಶಶಿಕಲಾ ಸಂಭಾಷಣೆಯ ಆಡಿಯೋ ವೈರಲ್
Share on WhatsAppShare on FacebookShare on Telegram

ADVERTISEMENT

ತಮಿಳುನಾಡು  ರಾಜಕೀಯಕ್ಕೆ ವಿ.ಕೆ ಶಶಿಕಲಾ ಎಂಟ್ರಿ  ವಿಚಾರ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆಡಿಯೋ ವೈರಲ್‌ ಆಗುತ್ತಿದ್ದು, ಉಚ್ಚಾಟಿತ ಎಐಎಡಿಎಂಕೆ ಮುಖ್ಯಸ್ಥೆ ತನ್ನ ಬೆಂಬಲಿಗರೊಂದಿಗೆ ನಿರಂತರವಾಗಿ ಪೋನ್‌ ಕಾಲ್‌ ಮೂಲಕ ಸಂಭಾಷಣೆ ನಡೆಸುತ್ತಿದ್ದು, ನಿವೃತ್ತಿ ಘೋಷಿಸಿದ ನಾಯಕಿ ಮತ್ತೆ ರಾಜಕೀಯಕ್ಕೆ ಬರುವ ಸುಳಿವನ್ನು ಹರಿಬಿಟ್ಟಿದ್ದಾರೆ.

ಎಐಎಡಿಎಂಕೆ ಪಕ್ಷವನ್ನು ಸರಿದಾರಿಗೆ ತರಲು ನಾನು ಶೀಘ್ರದಲ್ಲಿಯೇ ರಾಜಕೀಯಕ್ಕೆ ಬರುತ್ತೇನೆ,  ಚಿಂತಿಸ ಬೇಡಿ, ಧೈರ್ಯವಾಗಿರಿ, ಕರೋನಾ ಸಾಂಕ್ರಾಮಿಕ ಮುಗಿಯಲಿ ಎಂದು ಶಶಿಕಲಾ ಕಾರ್ಯಕರ್ತನಿಗೆ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಕರ್ತ ನಾವು ನಿಮ್ಮ ಹಿಂದೆ ಇರುತ್ತೇವೆ ಅಮ್ಮ ಎಂದಿದ್ದಾನೆ. ಈ ಆಡಿಯೋ ಹೆಚ್ಚು ಸದ್ದು ಮಾಡಿದ ಬೆನ್ನೆಲೆ ಇದೀಗ ಮತ್ತೊಂದು ಆಡಿಯೋ ರೆಕಾರ್ಡಿಂಗ್ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್‌ ಆಗಿದೆ.

“ತನ್ನ ರಕ್ತದಿಂದ ಪಕ್ಷವನ್ನು  ಬೇರ್ಪಡಿಸಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಶಶಿಕಲಾ ರಾಜಕೀಯಕ್ಕೆ ಮರಳುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದಂತಿದೆ. ‘ನಾನು ಎಐಎಡಿಎಂಕೆ  ಪಕ್ಷವನ್ನು ಉತ್ತಮ ಸ್ಥಾನಕ್ಕೆ ತರಲು ಬಯಸುತ್ತೇನೆ ಏಕೆಂದರೆ ನಾನು ಪಕ್ಷಕ್ಕಾಗಿ ತುಂಬಾ ಕೆಲಸ ಮಾಡಿದ್ದೇನೆ. ಅದನ್ನು ನನ್ನ ರಕ್ತದಿಂದ ಬೇರ್ಪಡಿಸಲು ಸಾಧ್ಯವಿಲ್ಲ. ಕಾರ್ಯಕರ್ತರ  ದುಃಖವನ್ನು ಕೇಳಿ ನಾನು ಹೇಗೆ ಸುಮ್ಮನಿರಲಿ? ನಾನು ಖಂಡಿತವಾಗಿಯೂ ಎಐಎಡಿಎಂಕೆ ಗೆ ಮರಳುತ್ತೇನೆ”  ಎಂದಿದ್ದಾರೆ.

ಅಕ್ರಮ ಆಸ್ತಿಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ  ಶಶಿಕಲಾ 4 ವರ್ಷ ಜೈಲು ಸೇರಿದ್ದರು. ಶಿಕ್ಷೆಯ ಅವಧಿ ಪೂರ್ಣಗೊಂಡಿದ್ದರಿಂದ ಜನವರಿ 27 ರಂದು ನ್ಯಾಯಾಂಗ ಬಂಧನದಿಂದ ಬಿಡುಗಡೆಗೊಳಿಸಲಾಗಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅವರು ರಾಜಕೀಯ ನಿವೃತ್ತಿ ಘೋಷಿಸಿದ್ದರು. ರಾಜಕೀಯ ಹೊರತಾಗಿ ಏನಾದರೊಂದು ಮಾಡುತ್ತೇನೆ ಎಂದಿದ್ದರು.

ನನ್ನ ಅಕ್ಕ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಡಳಿತ ಸಮಯದಲ್ಲಿ ಇದ್ದ ಸುವರ್ಣಾಡಳಿತವನ್ನು  ಮತ್ತೆ ತರಲು ಪ್ರಯತ್ನಿಸುತ್ತೇನೆ, ಅವರ ದೃಷ್ಟಿಕೋನದಂತೆ ರಾಜ್ಯವನ್ನು ಮುನ್ನಡೆಸುವ  ಶಕ್ತಿಯನ್ನು ಆ ದೇವರು ನನಗೆ ಕೊಡಲಿ ಎಂದಿದ್ದರು. ರಾಜಕಾರಣದಿಂದ ದೂರವಿರುವುದಾಗಿ ಘೋಷಿಸಿದ್ದ ಶಶಿಕಲಾ ತಮ್ಮ ಇತ್ತೀಚಿನ ಆಡಿಯೋ ಸಂಭಾಷಣೆಗಳ ಮೂಲಕ ಸಕ್ರೀಯ ರಾಜಕೀಯಕ್ಕೆ ಮರಳಲು ಸೂಚನೆ ಕೊಡುತ್ತಿದ್ದಾರೆ.

ತಮಿಳುನಾಡು ವಿಧಾನಸಭೆಯಲ್ಲಿ ಎಐಎಡಿಎಂಕೆಯ ಉಪ ನಾಯಕ ಮತ್ತು ವಿಪ್ ಆಯ್ಕೆಗಾಗಿ ಜೂನ್ 14 ರಂದು ಶಾಸಕಾಂಗ ಪಕ್ಷದ ಸಭೆ ನಿಗದಿಯಾಗಿದೆ. ಎಐಎಡಿಎಂಕೆ ಕಾರ್ಯಕರ್ತರೊಂದಿಗೆ ಶಶಿಕಲಾ ನಿರಂತರ ಮಾತನಾಡುತ್ತಿರುವ ಆಡಿಯೋ ರೆಕಾರ್ಡಿಂಗ್ ಬಿಡುಗಡೆ ಮಧ್ಯೆ ನಡೆಯುತ್ತಿರುವ ಸಭೆ ಮಹತ್ವ ಪಡೆದುಕೊಂಡಿದೆ.

Tags: audio-clipPoliticsSasikalaTamilnadu
Previous Post

ಬಿಜೆಪಿ ನಾಯಕತ್ವ ಬದಲಾವಣೆ: ಮುಗಿಯದ ಗೊಂದಲ, ದಿನಕ್ಕೊಂದು ತಿರುವು

Next Post

ರಾಜ್ಯಗಳು ಕರೋನ ಸಾವಿನ ಅಂಕಿಅಂಶಗಳನ್ನು ತನಿಖೆ ಮಾಡಬೇಕು -ಏಮ್ಸ್ ಮುಖ್ಯಸ್ಥ ಡಾ.ರಂದೀಪ್

Related Posts

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ
ರಾಜಕೀಯ

ಬಂಗಾಳದಲ್ಲಿ ಆಡಳಿತ ವಿರೋಧಿ ಅಲೆ: ಟಿಎಂಸಿಗೆ ಸವಾಲು, ಬಿಜೆಪಿ ಮುನ್ನಡೆ? 

by ಪ್ರತಿಧ್ವನಿ
April 28, 2026
0

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಚಟುವಟಿಕೆಗಳು ಜೋರಾಗಿದ್ದು, ಆಡಳಿತ ವಿರೋಧಿ ಅಲೆ ಹೊಸ ಚರ್ಚೆಗೆ ಕಾರಣವಾಗಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ All India Trinamool Congress ಸರ್ಕಾರದ...

Read moreDetails
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿ: 56,432 ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಹಸಿರು ನಿಶಾನೆ

April 28, 2026
ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

ಬಂಗಾಳ ರಾಜಕೀಯದಲ್ಲಿ ತೀವ್ರ ಪೈಪೋಟಿ: ಮಮತಾ ವಿರುದ್ಧ ರಾಹುಲ್ ಗುಡುಗು, ಮೈತ್ರಿಗೆ ಶಾಕ್?

April 28, 2026
ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

ಬಂಗಾಳ ಅಸ್ಮಿತೆ ವಿರುದ್ಧ ಬಿಜೆಪಿ ಸವಾಲು: ಗೆಲುವಿಗೆ ತಂತ್ರವೇ? ಕುತಂತ್ರವೇ?

April 27, 2026
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಶಾರಿಕ್ ಪ್ರಕರಣದ ಸಂಪೂರ್ಣ ಚಿತ್ರಣ ಇಲ್ಲಿದೆ

ಬಂಗಾಳದಲ್ಲಿ ದೀದಿ ಎಷ್ಟು ಪವರ್ ಫುಲ್ ಲೇಡಿ..? ಮೋದಿ ಮಣಿಸುತ್ತಾಳಾ ಈ ಗಟ್ಟಿಗಿತ್ತಿ..?

April 27, 2026
Next Post
ರಾಜ್ಯಗಳು ಕರೋನ ಸಾವಿನ ಅಂಕಿಅಂಶಗಳನ್ನು ತನಿಖೆ ಮಾಡಬೇಕು -ಏಮ್ಸ್ ಮುಖ್ಯಸ್ಥ ಡಾ.ರಂದೀಪ್

ರಾಜ್ಯಗಳು ಕರೋನ ಸಾವಿನ ಅಂಕಿಅಂಶಗಳನ್ನು ತನಿಖೆ ಮಾಡಬೇಕು -ಏಮ್ಸ್ ಮುಖ್ಯಸ್ಥ ಡಾ.ರಂದೀಪ್

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada