• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, August 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯ ಉಪಚುನಾವಣೆ; ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ಸುರ್ಜೇವಾಲಾಗೆ; ಹೈಕಮಾಂಡ್ ಕೊಟ್ಟ ಸೂಚನೆಗಳೇನು?

ನಚಿಕೇತು by ನಚಿಕೇತು
October 22, 2021
in ಕರ್ನಾಟಕ, ರಾಜಕೀಯ
0
ಬಿಜೆಪಿಗೆ  ಯಾಕೆ ಮತ ಹಾಕುತ್ತಿದ್ದೀರಾ? ತೈಲ ಬೆಲೆ ಹೆಚ್ಚಳ ಮಾಡಿದ್ದಕ್ಕಾ? :  ರಣದೀಪ್‌ ಸುರ್ಜೆವಾಲ
Share on WhatsAppShare on FacebookShare on Telegram

ರಾಜ್ಯ ಉಪಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಹಾನಗಲ್ ಮತ್ತು ಸಿಂದಗಿಯಲ್ಲಿ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಲು ಮೂರು ಪಕ್ಷಗಳ ನಾಯಕರು ಅಬ್ಬರದ ಪ್ರಚಾರದಲ್ಲಿ ತೊಡಗಿದ್ದಾರೆ. ಜೊತೆಗೆ ಮಿನಿಕದನ ಗೆಲುವಿಗಾಗಿ ತಮ್ಮದೇ ಆದ ರಣತಂತ್ರಗಳನ್ನ ರೂಪಿಸಿ ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿವೆ.

ADVERTISEMENT

ಉಪಚುನಾವಣೆ ಗೆಲುವಿಗಾಗಿ ಮೂರು ಪಕ್ಷಗಳು ದಾಳವನ್ನ ಹಾಕುತ್ತಿವೆ. ತಮ್ಮದೇ ಆದ ತಂತ್ರ, ರಣತಂತ್ರಗಳನ್ನ ರೂಪಿಸಿಕೊಂಡು ಮಿನಿಕದನದಲ್ಲಿ ಸಮರಕ್ಕೆ ಸಿದ್ಧವಾಗುತ್ತಿವೆ. ಅಕ್ಟೋಬರ್ 30ರ ನಿರ್ಣಾಯಕ ಯುದ್ಧಕ್ಕೆ ವೋಟ್ ಎಂಬ ಶಸ್ತ್ರಾಸ್ತ್ರವನ್ನ ಜೋಡಿಸುತ್ತಿವೆ. ಇದೇ ನಿಟ್ಟಿನಲ್ಲಿ ಕಾಂಗ್ರೆಸ್ ಕೂಡಾ ತಮ್ಮ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳಲು ಸಜ್ಜಾಗಿದ್ದು, ಖುದ್ದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಬೈಎಲೆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ. ಹಾನಗಲ್ ಮತ್ತು ಸಿಂದಗಿಯಲ್ಲಿ ಪ್ರಚಾರ ನಡೆಸಲು ಮುಂದಾಗಿದ್ದಾರೆ.

ಇನ್ನು ಹಾನಗಲ್ ಮತ್ತು ಸಿಂದಗಿ ಉಪಚುನಾವಣೆ ಗೆಲುವಿಗಾಗಿ ಸುರ್ಜೇವಾಲಾಗೆ ಹೈಕಮಾಂಡ್ ಕೆಲವು ಸಲಹೆ, ಸೂಚನೆಗಳನ್ನೂ ಕೊಟ್ಟು ಕಳಿಸಿದೆ.

ಹೈಕಮಾಂಡ್ ಸೂಚನೆಗಳೇನು?

  1. ಬೈ ಎಲೆಕ್ಷನ್ ಸೇರಿ ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ರೂ ಭಾಗಿಯಾಗಿ
  2. ನಾಯಕರ ನಡುವೆ ಭಿನ್ನಾಭಿಪ್ರಾಯ, ಗೊಂದಲ ಮೂಡದಂತೆ ಎಚ್ಚರ ವಹಿಸಿ
  3. ಎಲ್ಲ ನಾಯಕರನ್ನೂ ಜೊತೆಗೂಡಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು
  4. ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬನ್ನಿ
  5. ಬೈ ಎಲೆಕ್ಷನ್ ಮೂಲಕ 2023ರ ಚುನಾವಣೆಗೂ ತಯಾರಿ ಆರಂಭಿಸಿ
  6. ನಾಯಕರ ಜೊತೆ ಸಂಪರ್ಕದಲ್ಲಿರಿ, ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಿ
  7. ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿಗಳ ಪ್ರಸ್ತಾಪ ಮಾಡಿ
  8. ಬೈ ಎಲೆಕ್ಷನ್ ಸೇರಿ ಪಕ್ಷದ ಯಾವುದೇ ಕಾರ್ಯಕ್ರಮಗಳಿದ್ರೂ ನೀವು ಭಾಗಿಯಾಗಬೇಕು ಅಂತಾ ಸುರ್ಜೇವಾಲಾಗೆ ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ನೀಡಿದೆ. ಜೊತೆಗೆ ಪಕ್ಷದಲ್ಲಿರುವ ನಾಯಕರ ನಡುವೆ ಯಾವುದೇ ಭಿನ್ನಾಭಿಪ್ರಾಯ, ಗೊಂದಲ ಮೂಡದಂತೆ ಎಚ್ಚರ ವಹಿಸಿ. ಎಲ್ಲ ನಾಯಕರನ್ನೂ ಜೊತೆಗೂಡಿಸಿಕೊಂಡು ಹೋಗುವ ಜವಾಬ್ದಾರಿ ನಿಮ್ಮದು ಅಂತಾ ಸಲಹೆ ನೀಡಿದೆ ಎನ್ನಲಾಗಿದೆ.

ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡು ಬನ್ನಿ ಅಂತಾ ಕಾಂಗ್ರೆಸ್ ವರಿಷ್ಟರು ತಿಳಿಸಿದ್ದಾರೆ ಎನ್ನಲಾಗಿದೆ. ಇನ್ನು ಬೈ ಎಲೆಕ್ಷನ್ ಮೂಲಕ 2023ರ ಚುನಾವಣೆಗೂ ತಯಾರಿ ಆರಂಭಿಸಿ. ಪಕ್ಷದ ನಾಯಕರ ಜೊತೆ ಸಂಪರ್ಕದಲ್ಲಿರಿ, ರಾಜ್ಯ ಸರ್ಕಾರದ ವೈಫಲ್ಯಗಳ ಬಗ್ಗೆ ಚರ್ಚಿಸಿ, ಜೊತೆಗೆ ಕೇಂದ್ರ ಸರ್ಕಾರದ ಬೆಲೆ ಏರಿಕೆ, ಜನ ವಿರೋಧಿ ನೀತಿಗಳನ್ನ ಪ್ರಸ್ತಾಪ ಮಾಡಿ ಅಂತಾ ಕಾಂಗ್ರೆಸ್ ಹೈ ಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ಈ ಸಂಬಂಧ ಮಾತಾಡಿದ ಸುರ್ಜೇವಾಲ ರಾಜ್ಯದ ಬೊಮ್ಮಾಯಿ ಸರ್ಕಾರ ಕಾಲಿನ ಉಗುರಿನಿಂದ, ತಲೆಗೂದಲಿನ ತನಕ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ವಜನ ಪಕ್ಷಪಾತದಲ್ಲಿ ಮುಳುಗಿದೆ. ಬೆಂಗಳೂರು ಉಸ್ತುವಾರಿಗಾಗಿ ತಮ್ಮಲ್ಲೇ ಕಚ್ಚಾಡುತ್ತಿರುವವರು ರಾಜ್ಯದ ಅಭಿವೃದ್ಧಿ ಹೇಗೆ ಮಾಡುತ್ತಾರೆ? ಉಸ್ತುವಾರಿಗಾಗಿ ಕಚ್ಚಾಡುತ್ತರುವುದರ ಅರ್ಥ ಇಷ್ಟೇ ಸಿಎಂಗೆ ಯಾರು ಹೆಚ್ಚಿನ ದುಡ್ಡು ಸಂದಾಯ ಮಾಡುತ್ತಾರೋ ಅವರಿಗೆ ಬೆಂಗಳೂರು ಉಸ್ತುವಾರಿ ಕೊಡುತ್ತಾರೆ ಎಂದು ಕಿಡಿಕಾರಿದ್ದಾರೆ.

ಇತ್ತ ವಿಜಯಪುರದಲ್ಲಿ ಪ್ರಚಾರಕ್ಕೆ ಹೊರಟಿದ್ದ ಕಾಂಗ್ರೆಸ್ ವಾಹನಗಳನ್ನ ಚುನಾವಣಾ ಅಧಿಕಾರಿಗಳು ತಡೆದಿದ್ದರು. ಬಳಿಕ ಅನುಮತಿ ಇಲ್ಲದೆ ಪ್ರಚಾರಕ್ಕೆ ಹೊರಟ್ಟಿದೆ ಎಂದು ತೆರೆದ ವಾಹನವನ್ನ ಸಿಂದಗಿ ಕ್ಷೇತ್ರ ವ್ಯಾಪ್ತಿಯ ಕೊನ್ನೊಳ್ಳಿ ಚೆಕ್ಪೋಸ್ಟ್ ಬಳಿ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದರು. ಜಿಲ್ಲಾಧಿಕಾರಿ, ಚುನಾವಣಾಧಿಕಾರಿಗಳಿಂದ ಅನುಮತಿ ಪತ್ರ ತರುವವರೆಗೂ ವಾಹನಗಳನ್ನ ಬಿಡುವುದಿಲ್ಲ ಅಂತಾ ತಡೆಹಿಡಿದಿದ್ರು ಸಿಂದಗಿಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ತಮ್ಮ ಅಭ್ಯರ್ಥಿ ನಾಜೀಯ ಶಕೀರ್ ಅಂಗಡಿ ಪರ ಭರ್ಜರಿ ಪ್ರಚಾರ ಮಾಡಿದ್ರು. ಈ ವೇಳೆ ಮಾತನಾಡಿದ ಅವ್ರು, ಕಾಂಗ್ರೆಸ್ನವರ ನಿಜವಾದ ಡ್ರಾಮ ಏನು ಎಂಬುದು ಮುಸ್ಲಿಂ ಸಮಾಜಕ್ಕೂ ಅರ್ಥ ಆಗ್ತಿದೆ. ನನಗೆ ಸಂಪೂರ್ಣ ವಿಶ್ವಾಸವಿದೆ, ಕಾಂಗ್ರೆಸ್, ಬಿಜೆಪಿ ಏನೇ ಅಪಪ್ರಚಾರ ಮಾಡಿದ್ರೂ, ಏನೇ ತಂತ್ರಗಳನ್ನು ಮಾಡಿದ್ರೂ ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಖಚಿತ ಎಂದಿದ್ದಾರೆ.

ಇನ್ನು ಎರಡು ಕ್ಷೇತ್ರಗಳ ಗೆಲುವಿಗಾಗಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಪ್ರತ್ಯೇಕವಾಗಿ ಕ್ಯಾಂಪೇನ್ ಮಾಡಲಿದ್ದಾರೆ ಎನ್ನಲಾಗಿದೆ. ಈ ಮೂಲಕ ಬಿಎಸ್ವೈ ಪ್ರತ್ಯೇಕವಾಗಿ ಗುರುತಿಸಿಕೊಳ್ಳುವ ತಂತ್ರಗಾರಿಕೆ ಹೆಣೆದಿದ್ದಾರೆ ಎನ್ನಲಾಗ್ತಿದೆ. ಅಲ್ಲದೇ ನಾಯಕತ್ವ ಬದಲಾದ್ರೂ ಬಿಎಸ್ವೈ ವರ್ಚಸ್ಸು ಕಡಿಮೆ ಆಗಿಲ್ಲವೆಂಬ ಸಂದೇಶವನ್ನ ಹೈಕಮಾಂಡ್ಗೆ ರವಾನಿಸಲು ಬಿಎಸ್ವೈ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ, ಉಪಚುನಾವಣೆ ಗೆಲುವಿಗೆ ಮೂರು ಪಕ್ಷಗಳು ಭಾರೀ ಸರ್ಕಸ್ ಮಾಡ್ತಿವೆ. ಆದರೆ, ಈ ಮಿನಿ ಕದನದಲ್ಲಿ ಮತದಾರ ಯಾರಿಗೆ ಮಣೆ ಹಾಕ್ತಾನೆ ಅನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ.

Tags: BJPByElectionbypollbypollsCongress PartyCovid 19ElectionhanagalRandeep Surjewalasindhagiಕರೋನಾಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಮಳೆರಾಯನ ಕೃಪೆ, ನಿಗದಿಯಂತೆ ತಮಿಳುನಾಡಿಗೆ ನೀರು, ತಣ್ಣಗಾದ ಕಾವೇರಿ ವಿವಾದ

Next Post

ಹೊತ್ತಿ ಉರಿಯುತ್ತಿದೆ ಆಂಧ್ರ; TDP, YSR ಕಾಂಗ್ರೆಸ್ ನಡುವೆ ಭಾರೀ ಘರ್ಷಣೆ; ಅಮಿತ್ ಶಾಗೆ ನಾಯ್ಡು ಪತ್ರ

Related Posts

ಸಾಕ್ಷ್ಯ ಬೆದರಿಕೆ ಪ್ರಕರಣದ ಆರೋಪಿನ ಭೇಟಿಯಾದ್ರಾ ವಿಜಯಲಕ್ಷ್ಮಿ ದರ್ಶನ್‌..?
Top Story

ಸಾಕ್ಷ್ಯ ಬೆದರಿಕೆ ಪ್ರಕರಣದ ಆರೋಪಿನ ಭೇಟಿಯಾದ್ರಾ ವಿಜಯಲಕ್ಷ್ಮಿ ದರ್ಶನ್‌..?

by ಪ್ರತಿಧ್ವನಿ
August 23, 2026
0

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷ್ಯಗಳಿಗೆ ಬೆದರಿಕೆ ಹಾಕಿದ ಆರೋಪದ ಪ್ರಕರಣದಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಕೆಲವರನ್ನು ಬಂಧಿಸಲಾಗಿದ್ದು, ಇನ್ನೂ ಕೆಲ ಆರೋಪಿಗಳು...

Read moreDetails
ಸ್ವಚ್ಛ ಬೆಂಗಳೂರು: ಬೆಸ್ಕಾಂನಿಂದ ವಾರಾಂತ್ಯದ ವಿಶೇಷ ಅಭಿಯಾನ

ಸ್ವಚ್ಛ ಬೆಂಗಳೂರು: ಬೆಸ್ಕಾಂನಿಂದ ವಾರಾಂತ್ಯದ ವಿಶೇಷ ಅಭಿಯಾನ

August 23, 2026
ರಾಜ್ಯದಲ್ಲಿ ಏಕಾಏಕಿ ಹೆಚ್ಚಿದ H1N1 ಪ್ರಕರಣಗಳು: ಆರೋಗ್ಯ ಇಲಾಖೆ ಕಟ್ಟೆಚ್ಚರ

ರಾಜ್ಯದಲ್ಲಿ ಏಕಾಏಕಿ ಹೆಚ್ಚಿದ H1N1 ಪ್ರಕರಣಗಳು: ಆರೋಗ್ಯ ಇಲಾಖೆ ಕಟ್ಟೆಚ್ಚರ

August 23, 2026
ಹೊಸಕೋಟೆ 4 ಗಂಟೆ ಬಿರಿಯಾನಿಗೆ ಬ್ರೇಕ್‌: ಕಾರಣವೇನು..?

ಹೊಸಕೋಟೆ 4 ಗಂಟೆ ಬಿರಿಯಾನಿಗೆ ಬ್ರೇಕ್‌: ಕಾರಣವೇನು..?

August 23, 2026
ರಾಜ್ಯದಲ್ಲಿ ಬರದ ಛಾಯೆ: ಮಳೆಗಾಗಿ ಕೊಡಗಿನಲ್ಲಿ ಕೃಷಿ ಸಚಿವರಿಂದ ವಿಶೇಷ ಪೂಜೆ

ರಾಜ್ಯದಲ್ಲಿ ಬರದ ಛಾಯೆ: ಮಳೆಗಾಗಿ ಕೊಡಗಿನಲ್ಲಿ ಕೃಷಿ ಸಚಿವರಿಂದ ವಿಶೇಷ ಪೂಜೆ

August 23, 2026
Next Post
ಹೊತ್ತಿ ಉರಿಯುತ್ತಿದೆ ಆಂಧ್ರ; TDP, YSR ಕಾಂಗ್ರೆಸ್ ನಡುವೆ ಭಾರೀ ಘರ್ಷಣೆ; ಅಮಿತ್ ಶಾಗೆ ನಾಯ್ಡು ಪತ್ರ

ಹೊತ್ತಿ ಉರಿಯುತ್ತಿದೆ ಆಂಧ್ರ; TDP, YSR ಕಾಂಗ್ರೆಸ್ ನಡುವೆ ಭಾರೀ ಘರ್ಷಣೆ; ಅಮಿತ್ ಶಾಗೆ ನಾಯ್ಡು ಪತ್ರ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada