ಬೆಂಗಳೂರು : ಪಂಜಾಬಿನ ಶಿರೋಮಣಿ ಅಕಾಳಿದಳದ ಮುಖ್ಯಸ್ಥ ಸುಖ್‌ಬೀರ್ ಸಿಂಗ್ ಬಾದಲ್ ಅವರ ಮೇಲೆ ನಡೆದಿದ್ದ ಗುಂಡಿನ ದಾಳಿಯ ಬಗ್ಗೆ ಹಲವು ರೀತಿಯ ಅನುಮಾನಗಳು ಸೃಷ್ಟಿಯಾಗಿವೆ. ಪಂಜಾಬ್‌ನಿಂದ ಮಹಾರಾಷ್ಟ್ರದ ನಾಂದೇಡ್‌ನಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ದೇವಾನ್ ಜಿ ಮುಗಾಟ್‌ಗೆ ಆಗಮಿಸುತ್ತಿದ್ದಂತೆಯೇ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ತೀವ್ರ ರಕ್ತಸ್ರಾವವಾಗುತ್ತಿದ್ದ ಗುರುವಾರ ಅವರನ್ನು ತಕ್ಷಣ ಹತ್ತಿರದ ಆಸ್ಪತ್ರೆಗೆ ದಾಖಲಾಗಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.

ಆದರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ಬಾದಲ್, ತಮ್ಮ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿ, ಪಂಜಾಬ್ ಅನ್ನು ವಶಪಡಿಸಿಕೊಳ್ಳುವುದಕ್ಕಾಗಿ ನನ್ನ ಮೇಲೆ ದಾಳಿ ನಡೆಸಲಾಗಿದೆ. ಇದೊಂದು ಮಿಷನ್‌ನಂತೆ ರೂಪಿಸಲಾಗಿದ್ದು, ನಾನು ಇವುಗಳಿಗೆಲ್ಲ ಹೆದರುವುದಿಲ್ಲ. ಇಡೀ ರಾಜ್ಯದಲ್ಲಿ ಏಕತೆ, ಶಾಂತಿ, ನೆಮ್ಮದಿ ಕಾಪಾಡಿಕೊಳ್ಳಲು ನಮ್ಮ ಪಕ್ಷ ಬದ್ಧವಾಗಿದೆ ಎಂದು ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಬಾದಲ್ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ.
ನಾವು ಪಂಜಾಬ್ ಅನ್ನು ಯಾರ ಕಂಟ್ರೋಲ್‌ಗೂ ನೀಡುವುದಿಲ್ಲ, ಹೀಗೆ ದಾಳಿಗಳನ್ನು ಮಾಡಿ ರಾಜ್ಯದಲ್ಲಿ ಶಾಂತಿ ಕದಡುವುದೆ ಕೆಲವು ದುಷ್ಟ ಶಕ್ತಿಗಳ ಉದ್ಧೇಶವಾಗಿದೆ. ಆದರೆ ಅಕಾಲಿದಳದ ಅಧ್ಯಕ್ಷನಾಗಿ ನಾನು ಆ ರೀತಿಯ ಬೆಳವಣಿಗೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ : ಅಂದು ಅಭಿಮಾನಿಯೊಬ್ಬರ ಅಂತ್ಯಕ್ರಿಯೆಗೆ ಯಶ್ ಹೋಗಲೇ ಇಲ್ಲ! ಅದಕ್ಕೆ ಕಾರಣವೇನು ಗೊತ್ತಾ?
ನಮ್ಮ ಪವಿತ್ರ ಸ್ಥಳಗಳ ಮೇಲೆ ಈಗಾಗಳೇ ಎರಡು ಬಾರಿ ದಾಳಿ ನಡೆಸಲಾಗಿದೆ, ಆದರೆ ಇಂತಹ ಬೆಳವಣಿಗೆಗಳಿಗೆ ನಾನು ಹೆದರುವುದಿಲ್ಲ. ಶಿರೋಮಣಿ ಅಕಾಲಿದಳ ಪಂಜಾಬ್‌ನ ಸಾಮರಸ್ಯ, ಸಹೋದರತ್ವ, ಏಕತೆಗೆ ಬದ್ಧವಾಗಿದೆ ಎಂದು ಪತ್ರಿಪಾದಿಸಿದ್ದಾರೆ.
ದಾಳಿಯ ರೂವಾರಿ ಜಸ್ಪಾಲ್ ಸಿಂಗ್..
ಪಂಜಾಬ್‌ನ ಮಾಜಿ ಡಿಸಿಎಂ ಬಾದಲ್ ಮೇಲಿನ ಈ ದಾಳಿಗೆ ಇದೇ ನಾಂದೇಡ್‌ನಲ್ಲಿ ಒಬ್ಬನೇ ವಾಸಿಸುತ್ತಿದ್ದ 62 ವರ್ಷದ ಜಸ್ಪಾಲ್ ಸಿಂಗ್ ಎಂಬ ವ್ಯಕ್ತಿ ಕಾರಣನಾಗಿದ್ದಾನೆ. ಅಕಾಲಿದಳದ ಮುಖ್ಯಸ್ಥರ ಮೇಲೆ ಯಾಕೆ ದಾಳಿ ನಡೆಸಲಾಗಿದೆ ಎಂಬ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಆದರೆ, ಕೊಲೆಗೆ ಯತ್ನ, ಅಪಾಯಕಾರಿ ಆಯುಧಗಳಿಂದ ಗಾಯಗೊಳಿಸುವುದು ಹಾಗೂ ಸಾರ್ವಜನಿಕ ಸೇವೆಗಳನ್ನು ನಿರ್ವಹಿಸದಂತೆ ತಡೆಯಲು ಯತ್ನಿಸಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.






