ಬೆಂಗಳೂರು: ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ‘ಟಾಕ್ಸಿಕ್’ ಸಿನಿಮಾದ ಹೈಲೆಟ್. ಅವರು ಗರ್ಭಿಣಿಯಾಗಿದ್ರೂ ಚಿತ್ರೀಕರಣದ ತುಂಬಾ ರಿಸ್ಕ್ ಸನ್ನಿವೇಶಗಳಲ್ಲೂ ನಟಿಸಿದ್ದರು. ಈ ಕುರಿತಂತೆ ನಟ ಯಶ್ ಆ ನೆನಪನ್ನು ಮೆಲುಕು ಹಾಕಿದ್ದಾರೆ. ಮುಂಬೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಶ್ ಕಿಯಾರ ಕುರಿತು ಮಾತನಾಡಿದ್ದಾರೆ.
ನಾಯಕಿ ಕಿಯಾರಾ ಅಡ್ವಾಣಿ ಅವರ ವೃತ್ತಿಪರತೆ ಮತ್ತು ಶ್ರದ್ಧೆ ಕುರಿತು ಶ್ಲಾಘಿಸಿರುವ ಯಶ್, ಚಿತ್ರೀಕರಣ ವೇಳೆ, ಕಿಯಾರಾ ಅಡ್ವಾಣಿ ಗರ್ಭಿಣಿ. ಆ ಸಮಯದಲ್ಲೂ ಅವರು ವೃತ್ತಿ ಬದ್ದತೆ ತೋರಿಸಿದ್ದರು. ಚಿತ್ರೀಕರಣದ ವೇಳೆ ನಾನು ಮತ್ತು ನಿರ್ದೇಶಕಿ ಗೀತು ಮೋಹನ್‌ದಾಸ್, ಕಿಯಾರಾಗೆ ಬಾಡಿಗಾರ್ಡ್ ರೀತಿ ಕೆಲಸ ಮಾಡಿದ್ದೆವು ಎಂಬ ವಿಷಯ ಹಂಚಿಕೊಂಡಿದ್ದಾರೆ.

‘ಕಿಯಾರಾ ತುಂಬಾ ವೃತ್ತಿಪರ ನಟಿ. ಫಸ್ಟ್ ಟೈಮ್ ಅವರ ಜೊತೆ ಮಾತನಾಡಿದಾಗ, ‘ಮಳೆ ಸೀಕ್ವೆನ್ಸ್ ಇತ್ಯಾದಿ ದೃಶ್ಯಗಳಲ್ಲಿ ನಟಿಸಿದ್ದೀರಾ? ಎಂದು ಪ್ರಶ್ನೆ ಮಾಡಿದ್ದೆ. ‘ಇಲ್ಲ’ ಎಂದಿದ್ದರು. ಅವರು ಗರ್ಭಿಣಿಯಾಗಿದ್ದರೂ ಸಹ ಪಾತ್ರಕ್ಕೆ ಬೇಕಾದಂತೆ ನಟಿಸಿದ್ದರು. ನಮಗೆ ಅವರ ಆರೋಗ್ಯದ ಬಗ್ಗೆ ಹೆಚ್ಚು ಆತಂಕವಿತ್ತು. ಹೀಗಾಗಿ ಸೆಟ್‌ನಲ್ಲಿ ಅವರ ರಕ್ಷಣೆಗೆ ನಾವೇ ಬಾಡಿಗಾರ್ಡ್‌ಗಳಂತೆ ನಿಂತಿದ್ದವು ಎಂದಿದ್ದಾರೆ ಯಶ್.
ಇನ್ನು, ಚಿತ್ರದ ‘ತಬಾಹಿ’ ಹಾಡು ರಿಲೀಸ್ ಆದಾಗ, ಕೆಲವು ದೃಶ್ಯಗಳಲ್ಲಿ ಕಿಯಾರಾ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಜೊತೆಗೆ ಟೀಕೆಗೂ ಒಳಗಾಗಿದ್ದರು. ಇತ್ತೀಚೆಗೆ ಬೆಂಗಳೂರಲ್ಲಿ ನಡೆದ ಟಾಕ್ಸಿಕ್ ಟ್ರೇಲರ್ ವೇಳೆ ಯಶ್, ವೇದಿಕೆಯಲ್ಲಿ ‘ಒಬ್ಬ ನಟಿಯಾಗಿ ಅನುಭವಿಸುವ ಸವಾಲುಗಳಿಗೆ ತಲೆಕೆಡಿಸಿಕೊಳ್ಳಬಾರದು. ನಾವು ನಮ್ಮ ಕೆಲಸವನ್ನು ನಂಬಿ ಮುನ್ನಡೆಯಬೇಕು. ಕಾಲಕ್ರಮೇಣ ಜನರು ಅದನ್ನು ಮೆಚ್ಚಿಕೊಳ್ಳುತ್ತಾರೆ’ ಎಂದಿದ್ದರು.






