Tag: Attack

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ..!!

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ಚಾಕುವುನಿಂದ ದಾಳಿ ಮಾಡಲಾಗಿದೆ. ಶ್ರೀಮಂತ ನಟ ಎಂಬ ಕಾರಣಕ್ಕೆ ಕೆಲವರು ಅವರ ಮನೆಗೆ ಕನ್ನ ಹಾಕಲು ಪ್ರಯತ್ನಿಸಿದ್ದಾರೆ. ಈ ...

Read moreDetails

ಪೇಶಾವರದಲ್ಲಿ ಭಯೋತ್ಪಾದಕ ಧಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿ ಸಾವು

ಪೇಶಾವರ: ವಾಯುವ್ಯ ಪಾಕಿಸ್ತಾನದ ಪ್ರಕ್ಷುಬ್ಧ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪೋಲಿಯೊ ಕಾರ್ಮಿಕರನ್ನು ಸಾಗಿಸುತ್ತಿದ್ದ ವಾಹನವನ್ನು ಗುರಿಯಾಗಿಸಿಕೊಂಡು ನಡೆದ ಸ್ಫೋಟದಲ್ಲಿ ಮೂವರು ಭದ್ರತಾ ಪಡೆ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ...

Read moreDetails

ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತರನ್ನು ರಕ್ಷಿಸಲು ಹಂಗಾಮಿ ಸರ್ಕಾರ ವಿಫಲ ;ಶೇಖ್‌ ಹಸೀನಾ ಆರೋಪ

ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಅಲ್ಪಸಂಖ್ಯಾತರ ಕಿರುಕುಳದ ಆರೋಪದ ಮೇಲೆ ದೇಶದ ಹಂಗಾಮಿ ನಾಯಕ ಮುಹಮ್ಮದ್ ಯೂನಸ್ ಮೇಲೆ ಕುಟುಕು ದಾಳಿ ನಡೆಸಿದ್ದಾರೆ. ನ್ಯೂಯಾರ್ಕ್‌ನಲ್ಲಿ ...

Read moreDetails

ಆಟವಾಡುತ್ತಿದ್ದ ಮಗುವಿನ ಮೇಲೆ ನಾಯಿಗಳ ದಾಳಿ

ಬೆಳಗಾವಿ: ಆಟವಾಡುತ್ತಿದ್ದ ಮಗುವಿನ ಮೇಲೆ ನಾಯಿ ದಾಳಿ ನಡೆಸಿದ್ದು, ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಪಟ್ಟಣದ ನ್ಯೂ ಗಾಂಧಿನಗರ ಮತ್ತು ಉಜ್ವಲ‌್ ನಗರದಲ್ಲಿ ಈ ಘಟನೆ ...

Read moreDetails

ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ!

ಚಿಕ್ಕಮಗಳೂರು: ಯುವಕರ ಗುಂಪೊಂದು ಏಕಾಏಕಿ ಬಂದು ಹಿಂದೂ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಘಟನೆಯೊಂದು ತಾಲೂಕಿನ ಉಜೈನಿ ಮತಗಟ್ಟೆ ಹತ್ತಿರ ಕೇಳಿ ಬಂದಿದೆ. ಮತಗಟ್ಟೆಗಳ ವೀಕ್ಷಕನಾಗಿ ತೆರಳಿದ್ದ ...

Read moreDetails

ಶಿವಮೊಗ್ಗದಲ್ಲಿ ಹಿಂದೂ ಯುವಕನಿಗೆ ಚಾಕು ಇರಿತ, ಸ್ಥಿತಿ ಗಂಭೀರ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ಪಟ್ಟಣದಲ್ಲಿ ಹಿಂದೂ ಯುವಕನಿಗೆ ಚಾಕು ಇರಿಯಲಾಗಿದೆ. 23 ವರ್ಷದ ಉಪನ್ಯಾಸಕ ಸುಶೀಲ್ ಚಾಕು ಇರಿತಕ್ಕೊಳಗಾದ ಯುವಕ. ಕುಮದ್ವತಿ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕಾರ್ಯ ನಿರ್ವಹಿಸುತ್ತಿದ್ದು, ...

Read moreDetails

Mysore ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ‌‌ ದಾಳಿ ನಡೆಸಿದ ಚಿರತೆ.ಹಾಡಹಗಲಿನಲ್ಲೇ ಚಿರತೆ ದಾಳಿ | Mysuru |

ಮೈಸೂರು: ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದ ರೈತನ ಮೇಲೆ‌‌ ದಾಳಿ ನಡೆಸಿದ ಚಿರತೆ. ಹಾಡಹಗಲಿನಲ್ಲೇ ಚಿರತೆ ದಾಳಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡ ರೈತ.

Read moreDetails

ಮಣಿಪುರದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರ ದಾಳಿ; ಕಮಾಂಡೆಂಟ್‌ ಸೇರಿ ಆರು ಜನರ ಸಾವು

ಮಣಿಪುರದ ಚುರಾಚಂದ್‌ಪುರ ಜಿಲ್ಲೆಯ ಸಿಂಘತ್ ಉಪವಿಭಾಗದಲ್ಲಿರುವ ಅಸ್ಸಾಂ ರೈಫಲ್ಸ್ ಘಟಕದ ಭಾರತೀಯ ಸೇನೆಯ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ಶನಿವಾರ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಸೇನೆಯ ಕಮಾಂಡೆಂಟ್‌ ...

Read moreDetails

ಬಾಂಗ್ಲಾದೇಶದಲ್ಲಿನ ಹಿಂಸಾಚಾರ ಖಂಡಿಸಿ ಬೆಂಗಳೂರಲ್ಲಿಇಸ್ಕಾನ್ ನಿಂದ ಕೃಷ್ಣ ಕೀರ್ತನೆ ಹಾಡಿ ವಿನೂತನ ಪ್ರತಿಭಟನೆ !

ಬಾಂಗ್ಲಾದೇಶದಲ್ಲಿ  ಹಿಂದೂಗಳ ಮೇಲಿನ ಹಲ್ಲೆ ದೇಗುಲಗಳ ಮೇಲಿನ ದಾಳಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆ ಆಗುತ್ತಿದೆ. ಈ ಘಟನೆಯನ್ನು ವಿರೋಧಿಸಿ ಕ್ರಮಕ್ಕೆ ಆಗ್ರಹಿಸಿ ಇಂದು ಇಸ್ಕಾನ್‌ ಕ್ಯಾಂಪಸ್‌ ನಲ್ಲಿ ವಿನೂತನ ಮಾದರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಕಪ್ಪುಪಟ್ಟಿ ಧರಿಸಿ, ಹರೇಕೃಷ್ಣ ಗೀತೆ ಹಾಡಿ, ಕಾಲ್ನಡಿಗೆ ಮಾಡಿ ಪ್ರತಿಭಟನೆ ! ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ಹಲ್ಲೆ ಹಾಗೂ ಧಾರ್ಮಿಕ ಕ್ಷೇತ್ರಗಳ ಧ್ವಂಸಕ್ಕೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಘಟನೆ ಈಗ ಸಾಕಷ್ಟು ...

Read moreDetails

ಭಾರತ ಸರ್ಕಾರದ ಮೇಲೆ ಭರವಸೆಯಿಲ್ಲ- ಬಾಂಗ್ಲಾ ಹಿಂದೂಗಳ ಆಕ್ರೋಶ

ಬಾಂಗ್ಲಾದೇಶದಲ್ಲಿ ಹಿಂದೂ ದೇವಾಲಯಗಳ ಮೇಲೆ ಹಾಗೂ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆಗೆ ಭಾರತ ಸರ್ಕಾರ ನೀಡಿರುವ ಪ್ರತಿಕ್ರಿಯೆ ಕುರಿತು ಅಲ್ಲಿನ ಹಿಂದೂ ಸಂಘಟನೆಗಳು ಅಸಮಾಧಾನ ವ್ಯಕ್ತಪಡಿಸಿವೆ. ಬಾಂಗ್ಲಾದಲ್ಲಿ ಹಿಂದೂಗಳಿಗೆ ರಕ್ಷಣೆ ಸಿಗುತ್ತಿಲ್ಲವಾದರೂ, ಬಿಜೆಪಿ ಕಾಟಾಚಾರಕ್ಕೆ ಮಾತ್ರ ತನ್ನ ಸಹಾನುಭೂತಿ ತೋರುತ್ತಿದೆ. ಬಾಂಗ್ಲಾದೇಶ ಸರ್ಕಾರದ ಮೇಲೆ ಒತ್ತಡ ಹೇರುವ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಎಂದು ಬಾಂಗ್ಲಾದೇಶ್ ಜಯಿತೊ ಹಿಂದೂ ಮೊಹಾಜೊತೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಗೋಬಿಂದ ಚಂದ್ರ ಪ್ರಮಾಣಿಕ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ದುರ್ಗಾ ಪೂಜೆಯ ಪೆಂಡಾಲ್’ಗಳಲ್ಲಿ ಕುರಾನ್’ಗೆ ಅಪಚಾರವೆಸಗಲಾಗಿದೆ ಎಂಬ ಆರೋಪದಡಿ ಅಕ್ಟೋಬರ್ 13ರ ನಂತರ ಹಲವು ಕಡೆಗಳಲ್ಲಿ ಹಿಂದೂಗಳ ಮೇಲೆ ದಾಳಿ ನಡೆಸಲಾಗಿತ್ತು. ಸುಮಾರು ಆರು ದಿನಗಳ ಕಾಲ ನಿರಂತರವಾಗಿ ಹಲವೆಡೆ ಈ ದಾಳಿಗಳು ನಡೆದಿದ್ದವು. ಈ ದಾಳಿಗಳನ್ನು ಖಂಡಿಸಿ ಬಾಂಗ್ಲಾದೇಶದ ಹಲವು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದವು.  ಭಾರತದಲ್ಲಿಯೂ ಹಿಂದೂಪರ ಸಂಘಟನೆಗಳು ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದವು. ಭಜರಂಗದಳ, ವಿಶ್ವ ಹಿಂದೂ ಪರಿಷತ್, ಆರ್‌ಎಸ್ಎಸ್, ಹಿಂದೂ ಮಹಾಸಭಾ ಸೇರಿದಂತೆ ಹಲವು ಸಂಘಟನೆಗಳು ತೀವ್ರವಾಗಿ ಈ ದಾಳಿಗಳನ್ನು ಖಂಡಿಸಿದ್ದವು. ಆದರೆ, ಸರ್ಕಾರದ ಮಟ್ಟದಲ್ಲಿ ಯಾವ ರೀತಿ ಬಾಂಗ್ಲಾದೇಶದ ಮೇಲೆ ಒತ್ತಡ ಹೇರಲಾಗಿದೆ ಎಂದು ಗಮನಿಸಿದರೆ, ನಿರಾಶದಾಯಕ ಉತ್ತರ ಸಿಕ್ಕಿದೆ, ಎಂದು ಬಾಂಗ್ಲಾದೇಶದ ಹಿಂದೂ ಸಂಘಟನೆಗಳು ಆರೋಪಿಸಿವೆ.  ಈ ಕುರಿತಾಗಿ ‘ದಿ ವೈರ್’ಗೆ ಸಂದರ್ಶನ ನೀಡಿರುವ ಗೋಬಿಂದ ಚಂದ್ರ ಪ್ರಮಾಣಿಕ್, ಕಳೆದ ಹಲವು ವರ್ಷಗಳಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದಿರುವ ದಾಳಿಗಳಲ್ಲಿ ಆಡಳಿತರೂಢ ಅವಾಮಿ ಲೀಗ್ ನಾಯಕರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಸರ್ಕಾರವು ಕೋಮುವಾದಿ ಶಕ್ತಿಗಳ ಬೆಂಬಲಕ್ಕೆ ನಿಂತಿರುವುದು ಈ ಹಿಂದೆಯೂ ಸಾಬೀತಾಗಿದೆ. ಹಾಗಾಗಿ ಇಲ್ಲಿ ಪದೇ ಪದೇ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಲೇ ಇವೆ, ಎಂದಿದ್ದಾರೆ.  “ಹಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ, ಆರೋಪಿಗಳನ್ನು ಬಂಧಿಸಿದ್ದರೂ ಇಲ್ಲಿನ ಪರಿಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆಯಾಗಿಲ್ಲ. ಅಕ್ಟೋಬರ್ 18-19ರಂದು ಕೂಡಾ ಹಿಂದೂಗಳ ಮೇಲೆ ದಾಳಿ ನಡೆಸಲಾಗಿದೆ. ಭಾರತದಲ್ಲಿ ಮುಸ್ಲಿಮರ ಮೇಲೆ ನಡೆಯುತ್ತಿರುವ ದಾಳಿಗೆ ಪ್ರತಿಯಾಗಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಸಿರುವ ಸಾಧ್ಯತೆಗಳಿವೆ ಎಂದು ಈಗಾಗಲೇ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ. ಆದರೆ, ಇದು ಸ್ವೀಕಾರಾರ್ಹವಾದ ಉತ್ತರವಲ್ಲ,” ಎಂದು ಅವರು ಹೇಳಿದ್ದಾರೆ.  ಮುಂದುವರೆದು, ಬಹುತೇಕ ಅವಾಮಿ ಲೀಗ್ ನಾಯಕರು ಬಿಜೆಪಿ, ಆರ್‌ಎಸ್ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ತನ್ನು ಭಯೋತ್ಪಾದಕ ಸಂಘಟನೆಗಳಂತೆ ಗುರುತಿಸುವ ಕಾರಣದಿಂದ, ಇಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಬಿಜೆಪಿಯನ್ನು ಇಷ್ಟಪಡದ ನಾಯಕರು ಸರ್ಕಾರದಲ್ಲಿ ಹೆಚ್ಚಾಗಿರುವುದರಿಂದ ಭಾರತ ಸರ್ಕಾರದ ಮಾತುಗಳಿಗೆ ಇಲ್ಲಿ ಬೆಲೆಯಿಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಆರ್‌ಎಸ್ಎಸ್ ಹಾಗು ವಿ ಹೆಚ್ ಪಿ ಕುರಿತಾಗಿ ಅವಾಮಿ ಲೀಗ್ ನಾಯಕರು ಬೃಹತ್ ಅಭಿಯಾನವನ್ನೇ ಆರಂಭಿಸಿರುವ ಕಾರಣ ಇಲ್ಲಿ ಹಿಂದೂಗಳ ವಿರುದ್ದ ಅಸಹನೆ ಹೆಚ್ಚಾಗಿದೆ, ಎಂದು ಗೋಬಿಂದ್ ಹೇಳಿದ್ದಾರೆ.  “ಬಾಂಗ್ಲಾದೇಶದ ಹಿಂದೂಗಳು ಭಾರತ ಸರ್ಕಾರದ ನಡವಳಿಕೆಯ ವಿರುದ್ದ ತೀವ್ರವಾದ ಆಕ್ರೋಶವನ್ನು ಹೊಂದಿದ್ದಾರೆ. ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಭಾರತಕ್ಕೆ ನೇರವಾಗಿ ಎಚ್ಚರಿಕೆ ನೀಡುವ ಮಟ್ಟಿಗೆ ತಲುಪಿದ್ದರೂ, ಭಾರತ ಸರ್ಕಾರ ಇಲ್ಲಿನ ಹಿಂದೂಗಳ ಮೇಲಿನ ದಾಳಿಯನ್ನು ಕನಿಷ್ಟ ಖಂಡಿಸುವ ಹೇಳಿಕೆಯನ್ನೂ ನೀಡಿಲ್ಲ. ಬಾಂಗ್ಲಾ ಸರ್ಕಾರಕ್ಕೆ ಎಚ್ಚರಿಕೆಯನ್ನೂ ರವಾನಿಸಿಲ್ಲ. ಬದಲಾಗಿ, ಹಿಂದೂಗಳ ಮೇಲಿನ ದಾಳಿಗೆ ಕ್ರಮ ಕೈಗೊಂಡ ಶೇಖ್ ಹಸೀನಾ ಅವರಿಗೆ ಭಾರತದ ವಿದೇಶಾಂಗ ಇಲಾಖೆ ಅಭಿನಂದನೆ ತಿಳಿಸಿದೆ. ವಿಶ್ವ ಸಂಸ್ಥೆ ಹಾಗೂ ಅಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆ ಈ ದಾಳಿಯನ್ನು ತೀವ್ರವಾಗಿ ಖಂಡಿಸಿವೆ. ಇಂತಹ ಸಂದರ್ಭದಲ್ಲಿ ಭಾರತ ಸರ್ಕಾರದ ಮೌನ ನಿಜಕ್ಕೂ ಬೇಸರ ಮೂಡಿಸಿದೆ,” ಎಂದು ಗೋಬಿಂದ್ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.  ಇನ್ನು ಭಾರತೀಯ ಮೂಲದ ಹಿಂದೂ ಸಂಸ್ಥೆಗಳ ಬಳಿ ಮನವಿ ಮಾಡಿದರೂ, ಅವರ ನೆರವು ದಕ್ಕದೇ ಇರುವುದು ಮತ್ತಷ್ಟು ನೋವಿಗೆ ಕಾರಣವಾಗಿದೆ ಎಂದು ಹೇಳಿರುವ ಗೋಬಿಂದ್ ಪ್ರಮಾಣಿಕ್, ಬಿಜೆಪಿ, ಆರ್ಎಸ್ಎಸ್ ಹಾಗೂ ವಿ ಹೆಚ್ ಪಿ ಸಂಸ್ಥೆಯೊಂದಿಗೆ ನಿರಂತರವಾಗಿ ನಾವು ಸಂಪರ್ಕದಲ್ಲಿ ಇದ್ದೇವೆ. ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಅವರಲ್ಲಿ ವಿನಂತಿಸಿಕೊಂಡಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ದಿವಂಗತ ಸುಷ್ಮಾ ಸ್ವರಾಜ್, ಆರ್ಎಸ್ಎಸ್’ನ ಹಿರಿಯ ನಾಯಕ ರಾಮ್ ಮಾಧವ್ ಅವರು ನಮ್ಮ ಕುರಿತಾಗಿ ಅಪಾರ ಸಹಾನುಭೂತಿ ಹೊಂದಿದ್ದರು. ಇತರರು ನಮ್ಮನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ನಮಗೆ ಅರ್ಥವಾಗದ ಯಾವುದೋ ಕಾರಣಕ್ಕಾಗಿ ಬಾಂಗ್ಲಾ ಸರ್ಕಾರದ ಮೇಲೆ ಒತ್ತಡ ಹೇರಲು ಹಿಂಜರಿಯುತ್ತಿದ್ದಾರೆ, ಎಂದು ಹೇಳಿದ್ದಾರೆ.  ಪಶ್ಚಿಮ ಬಂಗಾಳದ ನಾಯಕರಾದ ದಿಲೀಪ್ ಘೋಷ್ ಹಾಗೂ ಸುವೆಂದು ಅಧಿಕಾರಿ ಅಲ್ಪ ಮಟ್ಟಿನ ಬೆಂಬಲವನ್ನು ನಮಗೆ ನಿಡಿದ್ದು ಖುಶಿ ತಂದಿದೆ. ಆದರೆ, ಭಾರತ ಸರ್ಕಾರದ ಮೇಲೆ ನಮಗೆ ಎಳ್ಳಷ್ಟೂ ಭರವಸೆ ಉಳಿದಿಲ್ಲ, ಎಂದು ಗೋಬಿಂದ್ ಅವರು ಹೇಳಿರುವುದು ಆರ್ಎಸ್ಎಸ್ ಹಾಗೂ ಬಿಜೆಪಿಯ ಹಿಂದೂ ಪ್ರೇಮಕ್ಕೆ ಹಿಡಿದಿರುವ ಕೈಗನ್ನಡಿಯಾಗಿದೆ. 

Read moreDetails

ರಾಷ್ಟ್ರ ರಾಜಧಾನಿ ಮೇಲೆ ಭಯೋತ್ಪಾದಕ ದಾಳಿಗೆ ಸಂಚು – ಒರ್ವ ಶಂಕಿತ ಉಗ್ರನ ಬಂಧನ

ದೆಹಲಿ ಪೊಲೀಸರ ವಿಶೇಷ ಕೋಶವು ಮಂಗಳವಾರ ಪಾಕಿಸ್ತಾನ ಮೂಲದ ಭಯೋತ್ಪಾದಕನನ್ನು ನಗರದಲ್ಲಿ ಸೆರೆಹಿಡಿದಿದ್ದು, ದೆಹಲಿಯ ನವರಾತ್ರಿಯನ್ನು ಗುರಿಯಾಗಿಸಿಕೊಂಡು ದೊಡ್ಡ ಭಯೋತ್ಪಾದಕ ದಾಳಿ ನಡೆಸುವ ಉದ್ದೇಶವಿತ್ತು ಆದರೆ ಅದನ್ನು ...

Read moreDetails

ಮುಸ್ಲಿಮನೆಂದು ಭಾವಿಸಿ ಹಲ್ಲೆ ನಡೆಸಿದ ಬಳಿಕ ಮಧ್ಯಪ್ರದೇಶ ಪೊಲೀಸರ ಹೈಡ್ರಾಮಾ.!

ಪೊಲೀಸರು ಬುಂಡೆಲೆಗೆ ಕೊಟ್ಟ ವಿವರಣೆಯಲ್ಲಿ ನಾವು ನಿಮ್ಮನ್ನು ಮುಸ್ಲಿಮನೆಂದುಕೊಂಡು ತಪ್ಪಾಗಿ ಗುರುತಿಸಿದೆವು. ಈ ಕಾರಣಕ್ಕಾಗಿ

Read moreDetails

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!