• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, August 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ

ಪ್ರತಿಧ್ವನಿ by ಪ್ರತಿಧ್ವನಿ
August 14, 2026
in Top Story, ಕರ್ನಾಟಕ, ರಾಜಕೀಯ
0
ಪಿಎಸ್‌ಐಗೆ ಕಪಾಳಮೋಕ್ಷ: ಮಗಳ ಪರವಾಗಿ ಕ್ಷಮೆ ಕೇಳಿದ ಶಾಸಕ ಬಿ.ಸುರೇಶ್‌ಗೌಡ
Share on WhatsAppShare on FacebookShare on Telegram
ADVERTISEMENT

ಮಂಡ್ಯ: ಮಂಡ್ಯದ ಆರತಿ ಉಕ್ಕಡ ದೇವಸ್ಥಾನದಲ್ಲಿ ಮಹಿಳಾ ಪಿಎಸ್‌ಐಗೆ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಕಪಾಳಮೋಕ್ಷ ಮಾಡಿದ ಆರೋಪದ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಈ ಘಟನೆಗೆ ಸಂಬಂಧಿಸಿದಂತೆ ಶಾಸಕ ಬಿ. ಸುರೇಶ್‌ಗೌಡ ಅವರು ತಮ್ಮ ಮಗಳ ಪರವಾಗಿ ಸಾರ್ವಜನಿಕವಾಗಿ ಕ್ಷಮೆ ಕೇಳಿದ್ದಾರೆ.

U. T. Khader : ಸಿದ್ದರಾಮಯ್ಯಗೆ ಥ್ಯಾಂಕ್ಸ್ ಹೇಳೋದನ್ನು ಮರೆಯಲಿಲ್ಲ ನೋಡಿ ಖಾದರ್...

ʼತಪ್ಪು ಯಾರಿಂದಲೇ ಆಗಿರಲಿ ಕಾನೂನಿನ ಪ್ರಕಾರ ಶಿಕ್ಷೆಯಾಗಲಿ. ನನ್ನ ಮಗಳು ಕಪಾಳಕ್ಕೆ ಹೊಡೆದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಪೊಲೀಸರು ಕರ್ತವ್ಯ ನಿರ್ವಹಿಸುವಾಗ ಬಹಳ ಒತ್ತಡದಲ್ಲಿರುತ್ತಾರೆ. ಸಾರ್ವಜನಿಕ ಜೀವನದಲ್ಲಿರುವ ನಾವುಗಳು ಅಹಂಕಾರ ಪಡಬಾರದು ಹಾಗೂ ತಾಳ್ಮೆ ಕಳೆದುಕೊಳ್ಳಬಾರದಿತ್ತು. ನನ್ನ ಮಗಳ ಪರವಾಗಿ ನಾನು ಕ್ಷಮೆ ಕೇಳುತ್ತೇನೆ. ಕಾನೂನು ಕ್ರಮವನ್ನು ನಾವು ಎದುರಿಸುತ್ತೇವೆʼ ಎಂದು ಬಿ. ಸುರೇಶ್‌ಗೌಡ ಹೇಳಿದ್ದಾರೆ.

ʼಸಾರ್ವಜನಿಕ ಮತ್ತು ಧಾರ್ಮಿಕ ಸ್ಥಳಗಳಲ್ಲಿ ವಿಐಪಿ ಪ್ರೋಟೋಕಾಲ್ ವ್ಯವಸ್ಥೆಯನ್ನು ತೆಗೆದುಹಾಕಬೇಕು. ದೇವರ ಮುಂದೆ ನಾವೆಲ್ಲರೂ ಸಮಾನರು. ಈ ವಿಚಾರವನ್ನು ಇಲ್ಲಿಗೆ ಬಿಟ್ಟುಬಿಡಿ, ಅನಗತ್ಯವಾಗಿ ಬೆಳೆಸಬೇಡಿʼ ಎಂದು ಶಾಸಕ ಬಿ. ಸುರೇಶ್‌ಗೌಡ ಮನವಿ ಮಾಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು..?

ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಆರತಿ ಉಕ್ಕಡದ ಪ್ರಸಿದ್ಧ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದರು. ಶಾಸಕ ಬಿ. ಸುರೇಶ್‌ಗೌಡ ಅವರ ಕಿರಿಯ ಪುತ್ರಿ ಐಶ್ವರ್ಯ ಕೂಡ ದೇವಸ್ಥಾನಕ್ಕೆ ಬಂದಿದ್ದರು. ಪ್ರಭಾವ ಬಳಸಿ ವಿಐಪಿ ಸಾಲಿನಲ್ಲಿ ಪ್ರವೇಶ ಪಡೆದ ಐಶ್ವರ್ಯ, ಬಳಿಕ ನೇರವಾಗಿ ದೇವರ ಗರ್ಭಗುಡಿಯೊಳಗೆ ಪ್ರವೇಶಿಸಲು ಯತ್ನಿಸಿದ್ದಾರೆ ಎನ್ನಲಾಗಿದೆ.

Siddaramaiah  : ಸದನದಲ್ಲಿ ಸಿದ್ದರಾಮಯ್ಯ ಸೈಲೆಂಟ್ !‌  ಹಿಂದೆ ಕುಳಿತಿದ್ದು ಯಾಕೆ?  #pratidhvani

ಈ ವೇಳೆ ಸ್ಥಳದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಕ್ಯಾತನಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಸವಿತಾ ತಡೆದಿದ್ದು, ಐಶ್ವರ್ಯ ಹಾಗೂ ಪಿಎಸ್‌ಐ ನಡುವೆ ತೀವ್ರ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಐಶ್ವರ್ಯ ಅವರು ಕರ್ತವ್ಯನಿರತ ಪಿಎಸ್‌ಐ ಸವಿತಾ ಅವರ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿಪಡಿಸಿ, ಹಲ್ಲೆ ನಡೆಸಿದ ಹಿನ್ನೆಲೆಯಲ್ಲಿ ಶಾಸಕ ಸುರೇಶ್‌ಗೌಡ ಪುತ್ರಿ ಐಶ್ವರ್ಯ ವಿರುದ್ಧ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

R. Ashoka : ಸಿಎಂ  ಡಿಕೆಶಿ ಎದುರೇ ಸಿದ್ದರಾಮಯ್ಯನ ಹೊಗಳಿದ ಆರ್ ಅಶೋಕ್ #pratidhvani
Previous Post

ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

Next Post

80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

Related Posts

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ ೧
Top Story

ವಸಾಹತುಶಾಹಿಯ ಎರಡು ಮಗ್ಗುಲುಗಳು-ಭಾಗ 2

by ನಾ ದಿವಾಕರ
August 14, 2026
0

(ಕೃಪೆ : ಸಂವಾದ ಮಾಸಪತ್ರಿಕೆ ಆಗಸ್ಟ್ 2026) ಶೋಷಿತರ ಕಣ್ಣೋಟದಲ್ಲಿ ಚರಿತ್ರೆ ತಳಸಮುದಾಯಗಳ ದೃಷ್ಟಿಯಿಂದ ಬ್ರಿಟೀಷ್ ಆಳ್ವಿಕೆಯನ್ನು ನೋಡಬಹುದಾದ ಮತ್ತೊಂದು ಆಯಾಮ ಎಂದರೆ ಭೂಮಿಯ ಮೇಲಿನ ಹಕ್ಕುಗಳು...

Read moreDetails
ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

ನಾನು ಯಾರಿಗೂ ಹೆದರಲ್ಲ, ಯಾವುದಕ್ಕೂ ಬಗ್ಗಲ್ಲ : ವಿರೋಧಿಗಳ ವಿರುದ್ಧ ಗುಡುಗಿದ‌ ಬಾದಲ್..!

August 14, 2026
‘ಟಾಕ್ಸಿಕ್’ ಶೂಟಿಂಗ್‌ ವೇಳೆ ಗರ್ಭಿಣಿ ಕಿಯಾರಾಗೆ ಯಶ್‌-ಗೀತು ಬಾಡಿಗಾರ್ಡ್ ಆಗಿದ್ದರಂತೆ!

‘ಟಾಕ್ಸಿಕ್’ ಶೂಟಿಂಗ್‌ ವೇಳೆ ಗರ್ಭಿಣಿ ಕಿಯಾರಾಗೆ ಯಶ್‌-ಗೀತು ಬಾಡಿಗಾರ್ಡ್ ಆಗಿದ್ದರಂತೆ!

August 14, 2026
80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

August 14, 2026
ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

ನನ್ನ ಅಧಿಕಾರವನ್ನು ಯಾರ ವಿರುದ್ಧವೂ ಬಳಸುವುದಿಲ್ಲ: ಸಿಎಂ ಡಿ.ಕೆ ಶಿವಕುಮಾರ್‌ ಭರವಸೆ

August 14, 2026
Next Post
80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

80th Independence Day: ರಾಜ್ಯದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ʼರಾಷ್ಟ್ರಪತಿ ಪದಕʼ ಗೌರವ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!