• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 27, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಹಿಂದುತ್ವ ಪ್ರಚಾರದ ಪತ್ರಿಕೆ ವಿತರಣೆ: ತನಿಖೆ ಆರಂಭಿಸಿದ IRCTC

ಫೈಝ್ by ಫೈಝ್
April 24, 2022
in ದೇಶ
0
ಹಿಂದುತ್ವ ಪ್ರಚಾರದ ಪತ್ರಿಕೆ ವಿತರಣೆ: ತನಿಖೆ ಆರಂಭಿಸಿದ IRCTC
Share on WhatsAppShare on FacebookShare on Telegram

ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಕರಿಗೆ ಹಿಂದುತ್ವ ಪ್ರಚಾರದ ಪತ್ರಿಕೆಯನ್ನು ಅನಧಿಕೃತವಾಗಿ ವಿತರಿಸಿರುವುದು ಬೆಳಕಿಗೆ ಬಂದ ನಂತರ ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ ಶುಕ್ರವಾರ ವಿಚಾರಣೆ ಆರಂಭಿಸಿದೆ.

ADVERTISEMENT

ಪ್ರತಿ ಇನ್ನೊಂದು ಸೀಟಿನಲ್ಲಿ ʼದಿ ಆರ್ಯವರ್ತ ಎಕ್ಸ್‌ಪ್ರೆಸ್‌ʼ ಪತ್ರಿಕೆಯನ್ನು ಇಡಲಾಗಿತ್ತು ಎಂದು ರೈಲು ಯಾತ್ರಿಕರೊಬ್ಬರು ಟ್ವಿಟರಿನಲ್ಲಿ ಮಾಹಿತಿ ಹಂಚಿಕೊಂಡ ಮೇಲೆ ಈ ವಿಷಯ ಗಮನಕ್ಕೆ ಬಂದಿದೆ.  

ಪತ್ರಿಕೆಯಲ್ಲಿ “ಇಸ್ಲಾಮಿಕ್ ಆಳ್ವಿಕೆಯಡಿಯಲ್ಲಿ ಹಿಂದೂಗಳು, ಸಿಖ್ ಮತ್ತು ಬೌದ್ಧರ ನರಮೇಧವನ್ನು ಗುರುತಿಸಬೇಕಾಗಿದೆ”, “ಸಿಐಎ ಏಜೆಂಟ್, ಕಾಂಗ್ರೆಸ್ ಮಹಿಳೆ ಇಲ್ಹಾನ್ [ಒಮರ್] POK [ಪಾಕಿಸ್ತಾನ-ಆಕ್ರಮಿತ ಕಾಶ್ಮೀರ] ಗೆ ಭೇಟಿ ನೀಡಿದ್ದಾರೆ” ಮತ್ತು “ಔರಂಗಜೇಬ್ ಅವರನ್ನು ಹಿಟ್ಲರ್ ನಂತಹ ಹತ್ಯಾಕಾಂಡದ ರುವಾರಿ ಎಂದು ಶಾಶ್ವತವಾಗಿ ಮುದ್ರೆಯೊತ್ತಬೇಕು” ಎಂಬಂತಹ ವಿವಾದಾತ್ಮಕ ಲೇಖನಗಳು ಲೇಖಕರ ಹೆಸರುಗಳನ್ನು ಹೊಂದಿಲ್ಲದೆ ಪ್ರಕಟಿಸಲಾಗಿದೆ.

 “ಇಂದು ಬೆಳಿಗ್ಗೆ ನಾನು ಬೆಂಗಳೂರು-ಚೆನ್ನೈ ಶತಾಬ್ದಿ ಎಕ್ಸ್‌ಪ್ರೆಸ್ ಅನ್ನು ಹತ್ತಿದೆ, ಉಳಿದೆಲ್ಲ ಆಸನಗಳಲ್ಲಿ ಪ್ರೊಪಗಾಂಡ ಪತ್ರಿಕೆ ಆರ್ಯವರ್ತ್ ಎಕ್ಸ್‌ಪ್ರೆಸ್ ಅನ್ನು ಇತಿಸಲಾಗಿತ್ತು” ಎಂದು ಪ್ರಯಾಣಿಕರಾದ ಗೋಪಿಕಾ ಬಾಶಿ ಟ್ವೀಟ್‌ ಮಾಡಿದ್ದಾರೆ. “ಅದರ ಬಗ್ಗೆ ಎಂದೂ ಕೇಳಿರಲಿಲ್ಲ. ರೈಲ್ವೇ ಇಲಾಖೆ ಇದನ್ನು ಹೇಗೆ ಅನುಮತಿಸುತ್ತಿದ್ದಾರೆ?” ಎಂದು ಅವರು ಪ್ರಶ್ನಿಸಿದ್ದರು.

This morning I boarded the Bangalore-Chennai Shatabdi Express only to be greeted by this blatantly propagandist publication on every other seat- The Aryavarth Express. Had never even heard of it. How is @IRCTCofficial allowing this??? pic.twitter.com/vJq7areg8u

— Gopika Bashi (@gopikabashi) April 22, 2022

ಪತ್ರಿಕೆಯ ವೆಬ್‌ಸೈಟ್‌ನಲ್ಲಿ “ಕೋವಿಡ್ ಬಗ್ಗೆ ಅಪಾಯಕಾರಿಯಾದ ತಪ್ಪು ಮಾಹಿತಿ” ಇದೆ ಎಂದು ಪತ್ರಕರ್ತೆ ರೋಹಿಣಿ ಮೋಹನ್ ಗಮನ ಸೆಳೆದಿದ್ದಾರೆ. ಈ ಪತ್ರಿಕೆಯನ್ನು ಬೆಂಗಳೂರಿನಿಂದ ಪ್ರಕಟನೆ ಮಾಡಲಾಗುತ್ತಿದೆ ಎಂದು scroll.in ವರದಿ ಮಾಡಿದೆ.

IRCTC ಭಾರತೀಯ ರೈಲ್ವೆಗಾಗಿ ಆಹಾರ, ಆನ್‌ಲೈನ್ ಟಿಕೆಟಿಂಗ್ ಮತ್ತು ಅಡುಗೆ ಸೇವೆಗಳನ್ನು ನಿರ್ವಹಿಸಲು ಅಧಿಕಾರ ಹೊಂದಿರುವ ಏಕೈಕ ಕಂಪನಿಯಾಗಿದೆ.ರೈಲುಗಳಲ್ಲಿ ವಿತರಿಸಲು ಅನುಮೋದಿಸಲಾದ ಪ್ರಕಟಣೆಗಳಲ್ಲಿ ಪತ್ರಿಕೆ ಇಲ್ಲ ಎಂದು ಕಂಪನಿಯ ವಕ್ತಾರ ಆನಂದ್ ಝಾ ಹೇಳಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.”ನಾವು ಈ ಬಗ್ಗೆ ತನಿಖೆಗೆ ಆದೇಶಿಸಿದ್ದೇವೆ ಮತ್ತು ಕಾರಣರಾದವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಝಾ ತಿಳಿಸಿದ್ದಾರೆ. ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಂದ ತನಿಖೆ ನಡೆಸಲಾಗುತ್ತಿದೆ ಎಂದು ಚೆನ್ನೈನ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.

ರೈಲು ಬೆಂಗಳೂರು ವಿಭಾಗಕ್ಕೆ ಸೇರಿದ್ದು ಮತ್ತು ಅಲ್ಲಿ ಘಟನೆ ಸಂಭವಿಸಿದೆ ಎಂದು ನಾವು ಎಲ್ಲರಿಗೂ ತಿಳಿಸಲು ಬಯಸುತ್ತೇವೆ. ಅವರು ಸೂಕ್ತ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ನಮಗೆ ಭರವಸೆ ಇದೆ ಎಂದು ಚೆನ್ನೈ  ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

The latest update is that @drmsbc is investigating the issue on how an unauthorised newspaper found its way into the train. We like to inform everyone that the train belongs to Bengaluru division and the incident happened there. We are sure they would take appropriate action. https://t.co/jaOTF2nOTE

— DRM Chennai (@DrmChennai) April 22, 2022

ಹೀಗೊಂದು ಪತ್ರಿಕೆ ರೈಲಿನಲ್ಲಿ ಸಿಕ್ಕಿದ್ದು ಹೇಗೆ ಎಂದು ಕಾಂಗ್ರೆಸ್ ಸಂಸದ ಬಿ.ಮಾಣಿಕಂ ಟ್ಯಾಗೋರ್ ಪ್ರಶ್ನಿಸಿದ್ದಾರೆ.  ಅಲ್ಲದೆ, ಈ ವಿಷಯವನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಐಆರ್‌ಸಿಟಿಸಿ ಚಂದಾದಾರರಾಗಿರುವ ಪತ್ರಿಕೆಗಳ ಪಟ್ಟಿಗೆ ಆರ್ಯವರ್ತ್ ಎಕ್ಸ್‌ಪ್ರೆಸ್ ಹೇಗೆ ಸೇರಿದೆ ಎಂದು ಕಾಂಗ್ರೆಸ್ ನಾಯಕ ಕಾರ್ತಿ ಚಿದಂಬರಂ ಕೂಡಾ ಪ್ರಶ್ನಿಸಿದ್ದಾರೆ.

Tags: BJPCongress PartyPassenger flags blatantly propagandist newspaper distributed on train IRCTC initiates probeನರೇಂದ್ರ ಮೋದಿಬಿಜೆಪಿ
Previous Post

ಮಸೀದಿಯಂತೆ ಹೆಚ್ಚು ಶಬ್ದ ಮಾಡದಂತೆ ದೇವಸ್ಥಾನಗಳಿಗೆ ಎಚ್ಚರಿಕೆ ! 

Next Post

ಮುಸ್ಲಿಮರ ವಿರುದ್ಧದ ನರಮೇಧದ ಕರೆಗಳ ವಿರುದ್ಧ  ಸುಪ್ರೀಂ ಕೋರ್ಟ್‌ ಮೊರೆ ಹೋದ ನಿವೃತ್ತ ಯೋಧರು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

April 23, 2026
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

ಸಂವಿಧಾನದ ಅಶಯಗಳು -ಬಾಬು ಜಗಜೀವನ್‌ರಾಮ್‌-

April 23, 2026
Next Post
ಮುಸ್ಲಿಮರ ವಿರುದ್ಧದ ನರಮೇಧದ ಕರೆಗಳ ವಿರುದ್ಧ  ಸುಪ್ರೀಂ ಕೋರ್ಟ್‌ ಮೊರೆ ಹೋದ ನಿವೃತ್ತ ಯೋಧರು

ಮುಸ್ಲಿಮರ ವಿರುದ್ಧದ ನರಮೇಧದ ಕರೆಗಳ ವಿರುದ್ಧ  ಸುಪ್ರೀಂ ಕೋರ್ಟ್‌ ಮೊರೆ ಹೋದ ನಿವೃತ್ತ ಯೋಧರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada