ಬಿರುಬಿಸಿಲ ಜೊತೆಗೆ ಬರದಿಂದ ಬೆಂದಿದ್ದ ರಾಜ್ಯದಲ್ಲಿ ಈಗ ಕೊಂಚ ಮಳೆರಾಯ ತಂಪೆರೆಯುತ್ತಾ ಬರುತ್ತಿದ್ದಾನೆ.. ಆದ್ರೆ ವರುಣನ ಅಬ್ಬರಕ್ಕೆ ಈಗಾಗಲೇ ಕೆಲ ಅವಘಡಗಳು ಸಂಭವಿಸಿವೆ. ಇಬ್ಬರ ಪ್ರಾಣ ಪಕ್ಷಿ ಹಾರಿ ಹೋಗಿದೆ..

ಕಲಬುರಗಿಯಲ್ಲಿ (KALBURGI) ಕೊಂಚ ಮಳೆಯಾಗಿದೆ. ಕಲಬುರಗಿ ಸೇರಿ ಜಿಲ್ಲೆಯ ಕೆಲವೆಡೆ ಮಳೆಯಾಗಿದೆ (Rain), ಬಿಸಿಲಿಗೆ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. 43-44 ಡಿಗ್ರಿ ತಾಪಮಾನಕ್ಕೆ ಜನ ತತ್ತರಿಸಿದ್ದರು. ಈಗ ಮಳೆ ನೋಡಿ ಖುಷಿಯಾಗಿದ್ದಾರೆ. ಗುಡುಗು-ಮಿಂಚು-ಗಾಳಿ ಸಹಿತ ಸಾಧಾರಣ ಮಳೆಯಾಗಿದ್ದು ಕಲಬುರಗಿ ಜಿಲ್ಲೆಯಾದ್ಯಂತ ಮೋಡ ಮುಸುಕಿನ ವಾತಾವರಣ (cloudy) ನಿರ್ಮಾಣವಾಗಿದೆ.

ಇನ್ನು ಮಳೆಯ ಪರಿಣಾಮ ಇತ್ತ ಶಿವಮೊಗ್ಗ (shivamogga) ಪೊಲೀಸರು ವಾಹನ ಸವಾರರ ಬಳಿ ಮನವಿ ಮಾಡಿದ್ದಾರೆ.. ಶಿವಮೊಗ್ಗ ನಗರದಲ್ಲೂ ಕೂಡ ಕೆಲ ಕಾಲ ಮಳೆ ಸುರಿದಿದೆ..ಸಣ್ಣ ಮಳೆಗೆ 15 ಕ್ಕೂ ಹೆಚ್ಚು ವಾಹನಗಳು ರಸ್ತೆಯಲ್ಲಿ ಸ್ಕಿಡ್ (skid) ಆಗಿ ಬಿದ್ದಿದೆ.. ತಕ್ಷಣವೇ ಎಚ್ಚೆತ್ತುಕೊಂಡ ಶಿವಮೊಗ್ಗ ಟ್ರಾಫಿಕ್ ಪೋಲಿಸರು (Traffic police), ರಸ್ತೆ ಜಾರದಂತೆ ಮಣ್ಣು ಮತ್ತು ಮರದ ದೂಳನ್ನು ತಂದು ರಸ್ತೆ ಮೇಲೆ ಹಾಕಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ನಿಧಾನವಾಗಿ ಚಲಿಸುವಂತೆ ಮನವಿ ಮಾಡಿದ್ದಾರೆ.

ಇತ್ತ ವಿಜಯಪುರ (Vijayapura) ಜಿಲ್ಲೆಯಲ್ಲಿ ನಿನ್ನೆ ಸಿಡಿಲಾಘಾತಕ್ಕೆ ಇಬ್ಬರು ಬಲಿಯಾಗಿದ್ದಾರೆ. ಇಂಡಿ ಪಟ್ಟಣದ ಮಸಳಿ ಗ್ರಾಮದ 16 ವಯಸ್ಸಿನ ಯುವಕ ಬೀರಪ್ಪ ನಿಂಗಪ್ಪ ಅವರಾದಿ ಹಾಗೂ ಮಸಳಿ ಬಿ.ಕೆ.ಗ್ರಾಮದ 45 ವಯ್ಯಸ್ಸಿನ ರೈತ ಸೋಮಶೇಖರ ಪಟ್ಟಣಶೆಟ್ಟಿ ಸಿಡಿಲು ಬಡಿದು ಸಾವಿಗೀಡಾಗಿದ್ದಾರೆ. ಮಾವಿನಹಳ್ಳಿ ರಸ್ತೆ ಜಲದಪ್ಪನ ಕೆರೆಯ ಜಮೀನಿನಲ್ಲಿ ಭೀರಪ್ಪ ನಿಂಗಪ್ಪ ಮೃತಪಟ್ಟಿದ್ದಾನೆ
ಹಲವು ತಿಂಗಳಿನಿಂದ ಬಿಸಿಲ ತಾಪಕ್ಕೆ ಬಸವಳಿದಿದ್ದ ರಾಜ್ಯದ ಜನತೆಗೆ ಮಳೆರಾಯ ಸ್ವಲ್ಪ ರಿಲೀಫ್ ಕೊಡೋ ಮನಸ್ಸು ಮಾಡಿದ್ದಾನೆ..