
PUC ಟಾಪರ್ ವಿದ್ಯಾರ್ಥಿನಿಗೆ ಸಚಿವ CRS ಶಹಬ್ಬಾಸ್ ಅಂದಿದ್ದಾರೆ.ನಾಗಮಂಗಲ ವಿಧಾನಸಭಾ ಕ್ಷೇತ್ರದ ಬೆಳ್ಳೂರು ಹೋಬಳಿಯ ಕಾಳಿಂಗನಹಳ್ಳಿ ಪಂಚಾಯಿತಿಯ ವಡೇರಹಳ್ಳಿ ಗ್ರಾಮದ ರೈತಾಪಿ ಕುಟುಂಬದ ಮಂಜುಳಾ ಮತ್ತು ಮಂಜುನಾಥ ಅವರ ಮಗಳು ಜ್ಞಾನವಿ ಅವರು 2024ರ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ತಮ್ಮ ಕಠಿಣ ಪರಿಶ್ರಮದಿಂದ ಪ್ರತಿಶತ 600 ಕ್ಕೆ 597 ಅಂಕಗಳನ್ನು ಗಳಿಸಿ ಕರ್ನಾಟಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವ ಮೂಲಕ ತನ್ನ ಹೆತ್ತವರಿಗೆ ಹಾಗೂ ಮಂಡ್ಯ ಜಿಲ್ಲೆ ಮತ್ತು ನಾಗಮಂಗಲ ತಾಲ್ಲೂಕಿಗೆ ಮತ್ತು ಕಲಿತ ಕಾಲೇಜಿಗೆ ಕೀರ್ತಿ ತಂದಿದ್ದಾರೆ.ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರು ದ್ವೀತಿಯ ಪಿಯುಸಿಯಲ್ಲಿ ಸಾಧನೆ ಮಾಡಿದ ಜಾನವಿಯವರನ್ನು ಭೇಟಿ ಮಾಡಿದರು.. ಇದೇ ವೇಳೆ ಜಾನವಿ ಅವರಿಗೆ ಸಿಹಿ ತಿನ್ನಿಸಿ ಮುಂದೆಯೂ ಸಿಗುವ ಅವಕಾಶಗಳನ್ನು ಬಳಸಿಕೊಂಡು ಅಕ್ಷರಗಳ ಮೂಲಕ ಹಸಿವು ನೀಗಿಸಿಕೊಳ್ಳುವುದರ ಜೊತೆಗೆ, ಬೆಳಕು ಕಾಣುವ ದಾರಿಯಲ್ಲಿ ಮುನ್ನಡೆಯಲಿ, ಯಶಸ್ಸು ಹಾಗೂ ಕೀರ್ತಿಯನ್ನು ಗಳಿಸಲಿ ಎಂಬ ಕಿವಿಮಾತುಗಳನ್ನು ಸಚಿವರು ತಿಳಿಸಿದರು.ಈ ಸಮಯದಲ್ಲಿ ಗ್ರಾಮದ ಮುಖಂಡರುಗಳು ಸಹ ಜೊತೆಯಲ್ಲಿದ್ದರು..|