ಒಂದಿಷ್ಟು ಜನಕ್ಕೆ ಕಾಡ್ತಾ ಇರುವ ಸಮಸ್ಯೆ ಅಂತ ಹೇಳಿದ್ರೆ ಅವರ ವಯಸ್ಸು ಚಿಕ್ಕದಿದ್ರು ನೋಡೋದಕ್ಕೆ ಏಜ್ ಆದವರಂತೆ ಕಾಣುತ್ತಾರೆ ಹೇಗೆ ಅಂದ್ರೆ ಮುಖ ಸುಕ್ಕು ಕಟ್ಟಿದಂತಾಗುವುದು ,ಕಣ್ಣಿನ ಅಕ್ಕಪಕ್ಕ ವೃಂಕಲ್ ಆಗುವುದು, ಮುಖದ ಹೊಳಪು ಕಡಿಮೆಯಾಗುತ್ತದೆ..

ನಮ್ಮ ಚರ್ಮವು ವಿವಿಧ ಕಾರಣಗಳಿಂದಾಗ ವಯಸ್ಸಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಅಂದ್ರೆ ಬಿಸಿಲು..ನಾವೂ ಹೆಚ್ಚು ಹೊತ್ತು ಬಿಸಿಲಲ್ಲಿ ಇರೋದು ಅಥವಾ ಬಿಸಿಲಿನಲ್ಲಿ ಕೆಲಸ ಮಾಡುವುದು..ಸುಮಾರು 25 ವರ್ಷ ವಯಸ್ಸಿನಿಂದಲೇ ವಯಸ್ಸಾದ ಮೊದಲ ಚಿಹ್ನೆಗಳು ಚರ್ಮದ ಮೇಲ್ಮೈಯಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.
ಈ ಒಂದು ಸಮಸ್ಯೆ ಇಂದ ಹೊರಬರಬೇಕು ಅಂದ್ರೆ ಈ ಟಿಪ್ಸ್ ನ ಫಾಲೋ ಮಾಡಿ..
ಬಾಳೆಹಣ್ಣಿನ ಮಾಸ್ಕ್
ಬಾಳೆಹಣ್ಣನ್ನು ಚೆನ್ನಾಗಿ ರುಬ್ಬಿ ಆ ಪೇಸ್ಟ್ ನ ಮುಖಕ್ಕೆ ಹಚ್ಚಿ ಅರ್ಧ ಗಂಟೆ ಬಿಟ್ಟು ವಾಶ್ ಮಾಡುವುದರಿಂದ ಮುಖದ ಸುಕ್ಕು ಕಡಿಮೆ ಆಗೋದಿಕ್ಕೆ ಹೆಲ್ಪ್ ಮಾಡುತ್ತೆ. ಬಾಳೆಹಣ್ಣಿನಲ್ಲಿ ನೈಸರ್ಗಿಕ ಎಣ್ಣೆ ಇರುತ್ತದೆ ಹಾಗೂ ವಿಟಮಿನ್ ಅಂಶ ಹೆಚ್ಚಿರುವುದರಿಂದ ನಮ್ಮ ಸ್ಕಿನ್ ಗೆ ತುಂಬಾನೆ ಒಳ್ಳೆಯದು ಮುಖದಲ್ಲಿರುವಂತ ಕಪ್ಪು ಕಲೆಗಳನ್ನ ತೆಗೆದು ಮುಖದ ಹೊಳಪನ್ನು ಹೆಚ್ಚಿಸುತ್ತದೆ.

ಎಗ್ ವೈಟ್ ಮಾಸ್ಕ
ಮೊಟ್ಟೆಯ ಬಿಳಿಯ ಭಾಗವನ್ನು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿ ಇರುವಂತಹ ವೃಂಕಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೂ ಮುಖಕ್ಕೆ ಬೇಕಾದಂತಹ ಎಸೆನ್ಶಿಯಲ್ ಆಯಿಲ್ ಸಪ್ಲೈ ಮಾಡುತ್ತದೆ ಹಾಗೂ ಎಗ್ ವೈಟ್ ಅಲರ್ಜಿ ಇರುವವರು ಇದನ್ನ ಹಚ್ಚೋದಿಕ್ಕೆ ಹೋಗಬಾರದು..

ಡಿಹೈಡ್ರೇಶನ್
ನಮ್ಮ ದೇಹದಲ್ಲಿ ನೀರಿನ ಕೊರತೆ ಇದ್ದರೆ ಏಜಿಂಗ್ ಪ್ರಾಬ್ಲಮ್ ಹೆಚ್ಚಾಗುತ್ತೆ ಹಾಗಾಗಿ ನಮ್ಮ ಬಾಡಿಯನ್ನ ಹೈಡ್ರೇಟ್ ಆಗಿ ಇಟ್ಟುಕೊಳ್ಳಬೇಕು ಇದಕ್ಕಾಗಿ ಹೆಚ್ಚಿನ ನೀರನ್ನು ಕುಡಿಬೇಕು.. ನೀರಿನ ಅಂಶ ಹೆಚ್ಚಿರುವ ಹಣ್ಣು ತರಕಾರಿಗಳನ್ನು ತಿನ್ನಬೇಕು ನಮ್ಮ ದೇಹದಲ್ಲಿ ನೀರಿನ ಅಂಶ ಜಾಸ್ತಿ ಇದ್ರೆ ಯಾವ ಒಂದು ಆರೋಗ್ಯ ಸಮಸ್ಯೆಯೂ ಎದುರಾಗಲ್ಲ.. ಜೊತೆಗೆ ನಮ್ಮ ಸ್ಕಿನ್ ಕೂಡ ಚೆನ್ನಾಗಿರುತ್ತೆ ಯಾವುದೇ ಒಂದು ಕಲೆಗಳು ಕೂಡ ನಮ್ಮ ಮುಖದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಪ್ರತಿನಿತ್ಯ ಈ ಟಿಪ್ಸ್ ನ ಫಾಲೋ ಮಾಡೋದ್ರಿಂದ ನಿಮ್ಮ ಏಜಿಂಗ್ ಪ್ರಾಬ್ಲಮ್ ಬೇಗನೆ ದೂರವಾಗುತ್ತದೆ..