ಗೂಗಲ್,ಅಮೇಜಾನ್ ಮಾತ್ರವಲ್ಲ ಕೇಂದ್ರ ಸರ್ಕಾರದಿಂದಲೂ ನಾಡು-ನುಡಿಗೆ ವಂಚನೆ & ಅಗೌರವ.!

ಕಳೆದ ಎರಡು ದಿನಗಳ ಹಿಂದೆಯಷ್ಟೆ ಕನ್ನಡ ನಾಡು ನುಡಿಗೆ ಅಪಮಾನಿಸುವಂತ ಕಂಟೆಂಟ್ ಅನ್ನು ಸರ್ಚ್ ಇಂಜಿನ್ಗೆ ಅವಕಾಶ ಕೊಟ್ಟ ಗೂಗಲ್ ವಿರುದ್ಧ ಕನ್ನಡಿಗರಿಂದ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ ಈಗ ಅಮೇಜಾನ್ ಶಾಪಿಂಕ್ ವೆಬ್ ಸೈಟ್ ನಿಂದ ಅಪಮಾನ ನಡೆದಿದೆ. ಅಮೇಜಾನ್ ಸೈಟ್ ನಿಂದ ಆನ್​ಲೈನ್​ ಮೂಲಕ ಮಾರಾಟ ಮಾಡುವ ಮಹಿಳೆಯರ ಒಳಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನದ ಬಳಕೆಯಾಗಿದೆ. ಅಮೇಜಾನ್ ಆನ್​ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ, ಲಾಂಛನಕ್ಕೆ ಹೀಗೆ ಅಪಮಾನ ವಿರುದ್ಧ ಈಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಏನಿದು ಗೂಗಲ್ ವಿವಾದ?, ಕನ್ನಡಿಗರಿಗೆ ಆಕ್ರೋಶ ಬರಿಸುವಂತ ವಿಷಯವೇನಿತ್ತು? 

ಗೂಗಲ್​ನ ಸರ್ಚ್ ಎಂಜಿನ್‌ನಲ್ಲಿ ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದೆ. ಆ ಮೂಲಕ ಕನ್ನಡ ಭಾಷೆಗೆ, ಕನ್ನಡಿಗರಿಗೆ ಅವಮಾನ ಮಾಡಲಾಗಿತ್ತು. ಈತರದ ಸುದ್ದಿ ಎಲ್ಲಾ ಕಡೆ ವೈರಲ್ ಆಗುತ್ತಿದ್ದಂತೆ ಹೆಚ್ಚೆತ ಕನ್ನಡಿಗರು ಗೂಗಲ್ ಗೆ feedback ನೀಡುವ ಮೂಲಕ ಗೂಗಲ್ search engine ತೋರಿಸುತ್ತಿರೋ ವೆಬ್ ಸೈಟ್ ಮತ್ತು search result ಧ್ವೇಶದಿಂದ ಕೂಡಿದೆ ಎಂದು ಬರೆದು ಪೋಸ್ಟ್ ಮಾಡಿದ್ದರು. ಇನ್ನೂ ಕೆಲವರು ಕನ್ನಡ ನನ್ನ ಎರಡನೇ ತಾಯಿ ಎಂದು ಗೂಗಲ್ ಅನ್ನು ಟ್ಯಾಗ್ ಮಾಡಿ ಟ್ವೀಟ್ ಮಾಡಿದ ಬೆನ್ನಲ್ಲೇ ಗೂಗಲ್ ಇಂಡಿಯಾ ತನ್ನ ತಪ್ಪನ್ನು ಒಪ್ಪಿಕೊಂಡು ಟ್ವೀಟರ್ ಮತ್ತು ಪೇಸ್ ಬುಕ್ ನಲ್ಲಿ ಕ್ಷಮಾಪಣೆ ಪೋಸ್ಟ್ ಒಂದನ್ನು ಪೋಸ್ಟ್ ಮಾಡಿತ್ತು. ಎರಡುವರೆ ಸಾವಿರ ವರ್ಷಗಳ ಇತಿಹಾಸ, ಶರಣರು, ಸಂತರು, ದಾಸರು, ಕಬೀರರು ಕಟ್ಟಿದಂತ ಭಾಷೆಗೆ ಅಪಮಾನ ಆದರೆ ಯಾವ ಕನ್ನಡಿಗ/ತಿ ತಾನೆ ಸುಮ್ಮನಿರುತ್ತಾರೆ ಹೇಳಿ.?
ಗೂಗಲ್ ಸರ್ಚ್ ಇಂಜಿನ್ ಹೇಗೆ ಕೆಲಸ ಮಾಡುತ್ತೆ?
ವೆಬ್ ಸೈಟ್ ಗಳನ್ನು ರೂಪಿಸಿದಾಗ, ಪ್ರತೀ ಪುಟದಲ್ಲೂ ಸರ್ಚ್ ಎಂಜಿನ್ ಹುಡುಕಲು ಸಹಕಾರಿಯಾಗುವಂತೆ ಒಂದಿಷ್ಟು ಪದಗಳನ್ನು “ಕೀ ವರ್ಡ್ಸ್ ” ಹಾಕಲಾಗುತ್ತೆ. ಈ ಪದಗಳ ಮೂಲಕ ಸರ್ಚ್ ಎಂಜಿನ್ ನ ಕ್ರಮಾವಳಿಗಳು ಜನರು ಹುಡುಕುವ ಪದವನ್ನು ಮಾಡಿ ಸರ್ಚ್ ರಿಜಲ್ಟ್ ತೋರಿಸುತ್ತವೆ. 

ಗೂಗಲ್, ಬಿಂಗ್ ತರಹದ ಕಂಪನಿಗಳು ಸರ್ಚ್ ಎಂಜಿನ್ ಗೆ ಬೇಕಾದ ಕ್ರಮಗಳನ್ನು ರೂಪಿಸಿದ ಮೇಲೆ, ಆ ಸರ್ಚ್ ಎಂಜಿನ್ ಗಳು ವೆಬ್ ಸೈಟ್ ಸ್ಕ್ಯಾನ್ ಮಾಡಿ ಪದಗಳನ್ನು ಮತ್ತು  ವೆಬ್ ಪೇಜ್ ಗಳನ್ನು ತನ್ನ ಡೇಟಾಬೇಸ್ ನಲ್ಲಿ ಇಟ್ಟುಕೊಂಡಿರುತ್ತದೆ, ಈ ಕೆಲಸ ಆಟೋಮೆಟಿಕ್ ಆಗಿ ನಡೆಯೊ ಕೆಲಸ. 

ಏನಿದು ಅಮೇಜಾನ್ ವಿವಾದ? ಕನ್ನಡಿಗರಿಗೆ ಆಕ್ರೋಶ ಬರುಸುವಂತ ವಿಷಯವೇನಿದೆ?

ಅಮೇಜಾನ್ ಶಾಪಿಂಕ್ ವೆಬ್ ಸೈಟ್ನಿಂದ ಆನ್​ಲೈನ್​ ಮೂಲಕ ಮಾರಾಟ ಮಾಡುವ ಮಹಿಳೆಯರ ಒಳಉಡುಪುಗಳ ಮೇಲೆ ಕನ್ನಡ ಬಾವುಟ, ಲಾಂಛನದ ಬಳಕೆಯಾಗಿದೆ. ಅಮೇಜಾನ್ ಆನ್​ಲೈನ್ ಶಾಪಿಂಗ್ ವೆಬ್ ಸೈಟ್ ನಲ್ಲಿ ಕನ್ನಡ ಧ್ವಜ, ಲಾಂಛನಕ್ಕೆ ಹೀಗೆ ಅಪಮಾನ ಆಗಿರುವುದನ್ನು ಖಂಡಿಸಿ, ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ, ವಿರೋಧ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅಮೇಜಾನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.

ಈತರಹದ ನಡವಳಿಗೆ ಮತ್ತೆ ಮರುಕಳಿಸದಂತೆ ರಾಜ್ಯ ಸರ್ಕಾರ ಏನು ಮಾಡಬೇಕು?

ರಾಜ್ಯ ಸರ್ಕಾರ ಕನ್ನಡಿಗರಿಗಾಗಿಯೇ ಒಂದು ಸೈಬರ್ ಕ್ರೈಮ್ ಸೆಲ್ ಶುರು ಮಾಡಬೇಕು. ಈತರದ ಕೃತ್ಯಗಳು ನಡೆದರೆ ಅದರ ವಿರುದ್ಧ ಸ್ವಯಂ ಪ್ರಕರಣ ದಾಖಲು ಮಾಡಿ ಕಾನೂನು ರೀತಿಯಲ್ಲಿ ಪ್ರಶ್ನಿಸುವ ಪ್ರತ್ಯೇಕ ತಂಡ ಇರಿಸಬೇಕಿದೆ. 

“ಗೂಗಲ್ ಮತ್ತು ಅಮೇಜಾನ್ ಮಾತ್ರವಲ್ಲ ಕನ್ನಡ ನಾಡು ನುಡಿಯನ್ನು ಕೇಂದ್ರ ಸರ್ಕಾರ ಕೂಡ ವಂಚಿಸುತ್ತಿದೆ ಮತ್ತು ಅಪಮಾನಿಸುತ್ತಿದೆ.”

ಭಾಷೆ ತಾರತಮ್ಯ.!

ಗೂಗಲ್ ನ ಒಂದು ಪೇಜ್ ಅಲ್ಲಿ ಬಂದಿರುವ ವಿಚಾರಕ್ಕೆ ಲಕ್ಷಾಂತರ ಕನ್ನಡಿಗರು ರಿಪೋರ್ಟ್ ಮಾಡುತ್ತಾರೆ. ಮತ್ತು ಗೂಗಲ್ ಅದನ್ನು ತೆಗೆದುಹಾಕುತ್ತದೆ. ಆದರೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಕೇಂದ್ರ ಸರ್ಕಾರದ ಪರೀಕ್ಷೆಗಳಲ್ಲಿ ಕನ್ನಡ (ಇತರೆ ಪ್ರಾದೇಶಿಕ ಭಾಷೆಗಳೂ ಸೇರಿದಂತೆ) ಭಾಷೆ ಇಲ್ಲವೇ ಇಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಪರೀಕ್ಷೆ ನೀಡುತ್ತಲೇ ಇಲ್ಲ. ಅಥವಾ ಆಯಾ ರಾಜ್ಯದಲ್ಲಿನ ನೇಮಕಾತಿಯಲ್ಲಿ ಆಯಾ ರಾಜ್ಯದ ಅಭ್ಯರ್ಥಿಗಳಿಗೆ ನೇಮಕಾತಿ ನೀಡುತ್ತಿಲ್ಲ ಎಂದು ನಟರಾಜ್.ಎಚ್.ಎನ್ ತಮ್ಮ ಪೇಸ್ ಬುಕ್ ಕಾತೆಯಲ್ಲಿ ಬರೆದುಕೊಂಡಿದ್ದಾರೆ.
ಹೌದು, ಪ್ರಾಥಮಿಕದಿಂದ ಪದವಿ, ಸ್ನಾತಕೋತ್ತರ ಪದವಿಯವರೆಗೆ ಕನ್ನಡ ಮಾಧ್ಯಮದಲ್ಲಿ ಓದಿ ಉತ್ತಮ ಅಂಕ ಪಡೆದಿದ್ದರು ಆತ ತನ್ನ ತಾಯಿ ಭಾಷೆಯಲ್ಲಿ ಕೇಂದ್ರ ಸರ್ಕಾರದ ಪರೀಕ್ಷೆ ಬರೆಯಲಾರ, ನೆಟ್ (National eligibility test) ಪರೀಕ್ಷೆ ಬರೆಯಲಾರ, ತನ್ನದೇ ರಾಜ್ಯದ ಕೇಂದ್ರ ಸರ್ಕಾರದ ಇಲಾಖೆ/ಸಂಸ್ಥೆಯಲ್ಲಿ ಕನ್ನಡದಲ್ಲಿ ಸಂದರ್ಶನ ಎದುರಿಸುವ ಅವಕಾಶ ಇಲ್ಲ. 
ಕೊರೋನಾ 2ನೇ ಅಲೆಯ ಕುರಿತ ಮುನ್ನೆಚ್ಚರಿಕೆಯ ಕಾಲರ್ ಟ್ಯೂನ್ ಕೇವಲ ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ಇದೆ. ಬ್ಯಾಂಕ್ ಗಳಲ್ಲಿ, ವಿಮೆ ಕಂಪನಿಗಳಲ್ಲಿ, ಅಂಚೆ ಕಚೇರಿಗಳಲ್ಲಿ, ರೈಲ್ವೆಯಲ್ಲಿ, ಸಾರ್ವಜನಿಕ ವಲಯದ ಕಂಪನಿಗಳಲ್ಲಿ ಕನ್ನಡ ಭಾಷೆ ಓದಿದವರಿಗೆ ಕೆಲಸ ಎನ್ನುವ ನಿಯಮ ತೆಗೆದು ವಲಸಿಗರನ್ನು ಒಳಗೆ ಬಿಟ್ಟುಕೊಂಡು ಅವರ ಭಾಷೆಯನ್ನು ನಾವು ಕಲಿತು ಸೇವೆ ಪಡೆಯುವ ಸ್ಥಿತಿ ನಿರ್ಮಾಣ ಆಗಿದೆ. 

ತೆರಿಗೆ ಹಂಚಿಕೆಯಲ್ಲಿ ತಾರತಮ್ಯ.!

ಕೇಂದ್ರದಿಂದ ಕರ್ನಾಟಕಕ್ಕೆ ತೆರಿಗೆ ಹಂಚಿಕೆಯಲ್ಲಿ ಮೋಸ, ನೆರೆ ಪರಿಹಾರದಲ್ಲಿ ಮೋಸ, ಆಮ್ಲಜನಕವನ್ನು ಕೊಡಿ ಎಂದು ಸುಪ್ರೀಂ ಕೋರ್ಟಿನ ಆದೇಶದ ನಂತರ ರಾಜ್ಯಕ್ಕೆ ಆಮ್ಲಜನಕ ಬಂದದ್ದು, ಕಪ್ಪು ಶಿಲೀಂಧ್ರದ ಔಷಧಗಳು ಸಮರ್ಪಕವಾಗಿ ಪೂರೈಕೆ ಆಗದ್ದು. ಜಿಎಸ್‌ಟಿ ಪಾಲಿನಲ್ಲಿ ತಾರತಮ್ಯ, ನೆರೆ ಪರಿಹಾರದಲ್ಲಿ ತಾರತಮ್ಯ ಈಗೆ ಅನೇಕ ವಿಷಯದಲ್ಲಿ ನಾಡಿಗೆ ಮೀಸವಾಗಿರುವುದು ನೋಡಬಹುದು. ಕನ್ನಡಿಗರು ಈ ವಿಚಾರಗಳಲ್ಲಿ ಕೂಡಾ ಆಸಕ್ತಿ ತೋರುವುದು ಎಂಬುದು ಪ್ರಶ್ನೆ.

ಕನ್ನಡದ ಬಗ್ಗೆ ಅಭಿಮಾನವಿರೊ ಪ್ರತಿಯೊಬ್ಬರೂ ಒಟ್ಟಾಗಿ ಸೇರಿದರೆ ಕನ್ನಡಕ್ಕೆ ಗ್ರಾಹಕ ಸೇವೆಯಲ್ಲಿ ಸಿಗಬೇಕಾದ ಗೌರವ ಸಿಗಲಿದೆ. ಕನ್ನಡಿಗರ ಮೇಲೆ ಆಗುತ್ತಿರು ಭಾಷೆ ಹೇರಿಕೆ ನಿಲ್ಲುತ್ತದೆ, ಕನ್ನಡದಲ್ಲಿ ಎಲ್ಲಾ ಹಂತದ ಶಿಕ್ಷಣವೂ ಸಿಗಲಿದೆ, ಕನ್ನಡ ಭಾರತ ಸರಕಾರದ ಆಡಳಿತ ಭಾಷೆಯಾಗಲಿದೆ ಎಂಬುದಕ್ಕೆ ಗೂಗಲ್ ವಿವಾದವನ್ನು ಒಗ್ಗೂಡಿ ಪರಿಹಾರಿಸಿದ್ದೆ ದೊಡ್ಡ ಉದಾಹರಣೆ ಎನ್ನಬಹುದ

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...