ಕೇಂದ್ರದಿಂದ ಅಂತಿಮ ನೊಟೀಸ್: ಇಕ್ಕಟ್ಟಿಗೆ ಸಿಲುಕಿದ ಟ್ವಿಟರ್

ಕೇಂದ್ರ ಸರ್ಕಾರದ ಹೊಸ  ಐಟಿ ನಿಯಮದ ವಿರುದ್ಧ ಸೆಣೆಸಾಡಿದ ಟ್ವಿಟರ್‌ ಸಂಸ್ಥೆ ಇದೀಗಾ ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟರ್ ಖಾತೆಗೆ   ನೀಡಲಾಗಿದ್ದ ‘ಪರಿಶೀಲನೆಯ’ ನೀಲಿ ಗುರುತನ್ನು ಟ್ವಿಟ್ಟರ್ ಕೆಲವು ಸಮಯ ತೆರವುಗೊಳಿಸಿತ್ತು. ಇದಾದ ಬೆನ್ನಲೆ, ಆರ್‌ಎಸ್‌ಎಸ್‌ ಮುಖಂಡ ಮೋಹನ್‌ ಭಗವಾತ್‌ ಸೇರಿದಂತೆ ಇನ್ನೂ ಕೆಲವು ಮುಖಂಡರ ಟ್ವಿಟರ್‌ ಖಾತೆ ತೆರವುಗೊಳಿಸಿ ವಿವಾದ ಸೃಷ್ಟಿ ಮಾಡಿಕೊಂಡಿತ್ತು.

ಟ್ವಿಟರ್‌ ಬ್ಲೂವ್‌ ಟಿಕ್‌ ಎಂದರೇನು..?

ಟ್ವಿಟರ್‌ ಸಂಸ್ಥೆಯಿಂದ ಪರಿಷ್ಕೃತಗೊಂಡ ಖಾತೆಯಾಗಿದ್ದು, ಈ ಬ್ಲೂವ್ ಟಿಕ್ ಪಡೆಯಲು ಯಾರೆಲ್ಲ ಅರ್ಹರು ಎಂಬ ಪ್ರಶ್ನೆ ಉದ್ಭವಿಸುವುದು ಸಹಜ, ಸರ್ಕಾರಿ ಸಂಸ್ಥೆಗಳಿಗೆ,  ಸುದ್ದಿ ಸಂಸ್ಥೆಗಳಿಗೆ ಸಿನಿಮಾ, ಕ್ರೀಡೆ ಸೇರಿದಂತೆ ಜನಪ್ರೀಯ ವ್ಯಕ್ತಿಗಳು ಇದನ್ನು ಪಡೆಯಲು ಅರ್ಹರಾಗಿರುತ್ತಾರೆ. ಆದರೆ ಸಂಸ್ಥೆಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿದವರಿಗೆ ಮಾತ್ರಾ ಅವಕಾಶ ಕಲ್ಪಿಸಿ ಕೊಡಲಾಗುವುದು. 2017ರಲ್ಲಿ ಟ್ವಿಟರ್‌ ವೇರಿಫಿಕೇಶನ್ ಬ್ಯಾಡ್ಜ್ ಸ್ಥಗಿತಗೊಂಡಿತ್ತು. ಆದರೀಗಾ ಮತ್ತೆ ಪುನರಾರಂಭಿಸಿದೆ. ಅಕೌಂಟ್‌ ವೇರಿಫೀಕೇಶನ್ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೂಡ ತುಂಬಾ ಸುಲಭವಾಗಿದೆ. ಬ್ಲೂ ಟಿಕ್ಗಾಗಿ ಅರ್ಜಿ ಸಲ್ಲಿಸುವವರು. ಟ್ವಿಟ್ಟರ್ ಮಾರ್ಗಸೂಚಿಯನ್ನು ಉಲ್ಲಂಘಿಸಿದ ಅಕೌಂಟ್ಗಳನ್ನು ಪರಿಗಣಿಸುವುದಿಲ್ಲ. ಪ್ರೊಫೈಲ್, ಫೋಟೋ, ಇಮೇಲ್ ಮತ್ತು ಫೋನ್ ನಂಬರ್ ಇಲ್ಲದ ಖಾತೆ ಕೂಡ ಈ ಬ್ಲೂ ಟಿಕ್ ಪಡೆಯಲು ಅರ್ಹತೆ ಪಡೆದಿರುವುದಿಲ್ಲ ಎಂದು ತಿಳಿಸಿದೆ.

ಯಾಕೆ ಟ್ವಿಟರ್‌ ಬ್ಯೂವ್‌ ಟಿಕ್‌ ರದ್ದು ಮಾಡಿದ್ದು..?

ಟ್ವಿಟರ್‌ನಲ್ಲಿ ಸಕ್ರೀಯವಾಗಿಲ್ಲದ ಕಾರಣ ಟ್ವಿಟರ್‌ ಬ್ಲೂವ್‌ ಟಿಕ್‌ ಅನ್ನು ತೆಗೆದು ಹಾಕಲಾಗಿದೆ ಎಂದು ಸಂಸ್ಥೆ ಸ್ಪಷ್ಟ ಪಡಿಸಿತ್ತು.  ಇದರಿಂದ ಟ್ವಿಟರ್‌ ಮತ್ತೊಮ್ಮೆ ಟೀಕೆಗೆ ಸಿಲುಕಿದ್ದು, ಎರಡು ಮೂರು ವರ್ಷಗಳ ಹಿಂದೆಯೇ ಮರಣ ಹೊಂದಿದ ರಾಜಕೀಯ ವ್ಯಕ್ತಿಗಳ ಟ್ವಿಟರ್‌ ಖಾತೆಯು ಇಂದಿಗೂ ಬ್ಲೂವ್‌ ಟಿಕ್‌ನಲ್ಲಿದೆ. ಅದನ್ನೇಕೆ ತೆಗೆದಿಲ್ಲ ಎಂಬ ಪ್ರಶ್ನೆ ಉದ್ಭವಿಸಿತ್ತು. ಕೂಡಲೇ ಎಚ್ಚೆತ್ತುಕೊಂಡ ಟ್ವಿಟರ್‌ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಟ್ವಿಟರ್‌ ಖಾತೆಗೆ  ಬ್ಲೂವ್‌ ಟಿಕ್‌ ಮಾರ್ಕ್‌ನ್ನು ವಾಪಾಸ್‌ ನೀಡಿದೆ.

ಹೊಸ ಐಟಿ ನಿಯಮ ಪಾಲಿಸದ ಟ್ವಿಟರ್‌- ಕೇಂದ್ರ ಸರ್ಕಾರದಿಂದ ಕೊನೆಯ ನೋಟಿಸ್

ಕೇಂದ್ರಸರ್ಕಾರ ಜಾರಿಗೆ ತಂದಿರುವ ಹೊಸ ಐಟಿ ನಿಯಮವನ್ನು ತಕ್ಷಣ ಪಾಲಿಸಬೇಕೆಂದು ಕೇಂದ್ರ ಸರ್ಕಾರ ಟ್ವಿಟರ್‌ಗೆ  ಕೊನೆಯ ಅವಕಾಶ ನೀಡಿದೆ. ನಿಯಮ  ಪಾಲಿಸದೆ ಇದ್ದಲ್ಲಿ ಕಾನೂನು ಕಾನೂನು ವಿನಾಯಿತಿಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಖಡಕ್‌ ಎಚ್ಚರಿಕೆ ನೀಡಿದೆ.

Related posts

Latest posts

ಬಡವರಿಗೆ ನೆರವಾಗುವುದನ್ನು ತಡೆಯುವ ಪೊಲೀಸ್ ಅಧಿಕಾರಿಗಳಿಗೆ ಬಿಜೆಪಿ ಬ್ಯಾಡ್ಜ್, ಬಾವುಟ ಕೊಡಿ; ಸರಕಾರದ ವಿರುದ್ಧ ಡಿಕೆಶಿ ಗರಂ

'ಬಿಜೆಪಿ ನಾಯಕರು ಜನರ ತೆರಿಗೆ ಹಣದಲ್ಲಿ ನೀಡುವ ಸರ್ಕಾರಿ ಆಹಾರ ಕಿಟ್, ಔಷಧಿ ಮೇಲೆ ತಮ್ಮ ಹಾಗೂ ಪ್ರಧಾನಿ ಫೋಟೋ ಹಾಕಿಕೊಂಡು ಪ್ರಚಾರ ಪಡೆಯುತ್ತಿದ್ದರೆ, ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ತಮ್ಮ ಶ್ರಮಪಟ್ಟು ದುಡಿದ...

ಸುರಕ್ಷಿತವಾಗಿ ಲಾಕ್‌ಡೌನ್ ತೆರವುಗೊಳಿಸಲು ಸರ್ಕಾರಕ್ಕೆ 10 ಶಿಫಾರಸು ನೀಡಿದ ತಜ್ಞರ ತಂಡ SAGE

ಕರ್ನಾಟಕದಲ್ಲಿ ಕರೋನಾ ನಿಯಂತ್ರಿಸಲು ಹೇರಿರುವ ಲಾಕ್‌ಡೌನ್ ಅನ್ನು ಹೇಗೆ ಸುರಕ್ಷಿತವಾಗಿ ಹಾಗೂ ಸೂಕ್ತವಾಗಿ ತೆರವುಗೊಳಿಸಬಹುದೆಂದು ತಜ್ಞರ ತಂಡವು ಸರ್ಕಾರಕ್ಕೆ ಹತ್ತು ಶಿಫಾರಸುಗಳನ್ನು ನೀಡಿದೆ. ಕೋವಿಡ್ ವಿಪತ್ತಿನ ವಿರುದ್ಧದ ಹೋರಾಟಕ್ಕೆ ರೂಪುಗೊಂಡ SAGE (ಸಮಾಜಮುಖಿ ಕಾರ್ಯಪ್ರವೃತ್ತ...

ಬೆಲೆ ಏರಿಕೆ ಮಾಡಿ ಸರ್ಕಾರ ಜನರನ್ನು ಪಿಕ್ ಪಾಕೆಟ್ ಮಾಡುತ್ತಿದೆ- ಡಿ.ಕೆ ಶಿವಕುಮಾರ್

 ಇಂಧನ ಬೆಲೆ ಏರಿಕೆ ಹಿನ್ನೆಲೆ,  ರಾಜ್ಯಾದ್ಯಂತ ಜೂನ್‌ 11 ರಿಂದ 15 ರವರೆಗೆ '100 ನಾಟ್ ಔಟ್' ಹೆಸರಲ್ಲಿ ಕಾಂಗ್ರೆಸ್‌ ಪಕ್ಷದಿಂದ ಆಂದೋಲನ ನಡೆಸಲಾಗುತ್ತಿದೆ. ರಾಜ್ಯಾದ್ಯಂತ ಇಂದು 900ಕ್ಕೂ ಹೆಚ್ಚು ಜಿ.ಪಂ, ಹೋಬಳಿ...