ಕರ್ನಾಟಕ ಸೇರಿದಂತೆ ಒಟ್ಟು 6 ರಾಜ್ಯಗಳಲ್ಲಿ ಭಾನುವಾರ ದಾಳಿ ನಡೆದಿದ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.
ಐಸಿಸ್ ಸಂಪರ್ಕದ ಆರೋಪದ ಮೇರೆಗೆ 2021ರಲ್ಲಿ ಭಟ್ಕಳದಲ್ಲಿ ಓರ್ವನನ್ನ ಬಂಧಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಮುಂದುವರೆಸಿದ್ದ ಎನ್ಐಎ, ಭಾನುವಾರ ಜುಲೈ 31 ರಂದು ಮಧ್ಯ ಪ್ರದೇಶದ ಎರಡು ಕಡೆ, ಗುಜರಾತ್ ರಾಜ್ಯದ ನಾಲ್ಕು ಕಡೆ, ಮಹಾರಾಷ್ಟ್ರ, ಕರ್ನಾಟಕದಲ್ಲಿ ತಲಾ ಎರಡು ಕಡೆ ಹಾಗೂ ಉತ್ತರ ಪ್ರದೇಶ ಮತ್ತು ಬಿಹಾರದಲ್ಲೂ ದಾಳಿ ನಡೆಸಿದೆ.
ಗುಜರಾತ್ ರಾಜ್ಯದ ಸೂರತ್ ಹಾಗೂ ಕರ್ನಾಟಕದ ಭಟ್ಕಳ ಪಟ್ಟಣದಲ್ಲಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ