ಬಾಲಕನ ಮಾಸ್ಕ್ ಜಾಗೃತಿ: ಮಾಸ್ಕ್ ಮಾರಿ ತಾಯಿಗೆ ಆರ್ಥಿಕ ನೆರವು

[Sassy_Social_Share]

ಮಾರುಕಟ್ಟೆಯಲ್ಲಿ ಜನರು ಮುಂಜಾನೆ ತರಕಾರಿ ಹಾಗೂ ದಿನಸಿ ತೆಗೆದುಕೊಳ್ಳಲು ಬಂದವರಿಗೆ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಎಚ್ಚರಿಸುತ್ತ

ಮಾಸ್ಕ್ ತುಗೊಳಿ ಸಾರ್…ಹೇ ಒಂದಾದ್ರೂ ಮಾಸ್ಕ್ ತಗೊಳ್ರಿ…ಕರೋನಾ ಐತಿ….ಎನ್ನುತ್ತ ಕಾಣಸಿಗುತ್ತಾನೆ.  ಹಲವರ ಮನಕುಲುವಂತೆ ಮಾಡ್ತಿರೋ ಈ ಪುಟಾಣಿ ಬಾಲಕನ ಹೆಸರು ಮೊಹ್ಮದ್ ರಿಯಾಜ್ ಅಂತ..ಈತನ ವಯಸ್ಸೆನೋ ಚಿಕ್ಕದು….ಆದ್ರೆ‌ ಈತ ಮಾಡ್ತಿರೋ ಕೆಲಸ ಮಾತ್ರ ದೊಡ್ಡವರನ್ನೂ ಒಂದು ಕ್ಷಣ ದಂಗು ಬಡಿದು ನಿಲ್ಲಿಸುವಂತೆ ಮಾಡುತ್ತೆ. ಹೌದು..ಗದಗ ನಗರದ ಪುಟಾಣಿ ಬಾಲಕ ಮೊಹ್ಮದ್ ಸದ್ಯ ನಾಲ್ಕನೆ ತರಗತಿಯಲ್ಲಿ ಓದುತ್ತಿದ್ದಾನೆ. ಚಿಕ್ಕವನಿದ್ದಾಗಲೇ ತಂದೆ ಕಾಣದ ಈತ ತನ್ನ ತಾಯಿ ಆಶ್ರಯದಲ್ಲಿ ಬೆಳೆಯುತ್ತಿದ್ದಾನೆ.ತಾಯಿ ಮನೆಯಲ್ಲಿ ಟೇಲರಿಂಗ್ ಕೆಲಸದ ಜೊತೆಗೆ ಇನ್ನಿತರ ಕೆಲಸ ಮಾಡಿ ತಮ್ಮ ಜೀವನದ ಬದುಕಿನ ಬಂಡಿ ಸಾಗಿಸ್ತಿದಾಳೆ. 

ಇದನ್ನ ಬಹಳ ಹತ್ತಿರದಿಂದ ಕಂಡಿರೋ ಮೊಹ್ಮದ್ ರಿಯಾಜ್ ತಾನೂ ಸಹ ಏನಾದರೂ ಮಾಡಿ ಅಮ್ಮನಿಗೆ ಆಸರೆ ಆಗಬೇಕು ಅನ್ನೋದು ಆತನ ಬಯಕೆ. ಅದಕ್ಕಾಗಿ ಆತ ಕರೋನಾ ಲಾಕ್ಡೌನ್ ಪ್ರಾರಂಭ ಯಾವಾಗ ಆಯಿತೋ ಅಂದಿನಿಂದ ಮಾಸ್ಕ್ ಮಾರಾಟ ಮಾಡಿ ತನ್ನ ತಾಯಿಗೆ ಆರ್ಥಿಕವಾಗಿ ನೆರವು ನೀಡ್ತಿದ್ದಾನೆ. ಶಾಲಾ ಓದಿನಲ್ಲೂ ಸೈ ಅನಿಸಿಕೊಂಡಿರೋ ಮೊಹ್ಮದ್ ತನ್ನ ಪುಟ್ಟ ದುಡಿಮೆಯಲ್ಲೂ ಸೈ ಅನಿಸೋ ಮೂಲಕ ಎಲ್ಲರ ಮನಗೆದ್ದಿದ್ದಾನೆ. ನನ್ನ ಅಮ್ಮ ಬೇಡ ಅಂದ್ರೂ ನಾನು ಮಾಸ್ಕ್ ಮಾರುತ್ತೇನೆ. ಅಮ್ಮ ಒಬ್ರೇ ಕೆಲಸ ಮಾಡ್ತಾರೆ.ಮನೆಲಿ ಇರೋಕು ಬೇಜಾರು..ಹೀಗಾಗಿ ಮಾಸ್ಕ್ ಮಾರಾಟ ಮಾಡಿ ಬಂದ ದುಡ್ಡನ್ನು ಅಮ್ಮನ ಕೈಗೆ ಕೊಡ್ತೆನೆ. ಆಮೇಲೆ ಗೆಳೆಯರ ಜೊತೆ ಆಟಕ್ಕೂ ಹೋಗ್ತೆನೆ ಅನ್ನೋದು ಈ ಪುಟಾಣಿ ಪೋರನ ಮಾತು.

ಮೊಹ್ಮದ್ ಗದಗ ನಗರದ ಪ್ರಮುಖ ರಸ್ತೆಗಳಲ್ಲಿ ಪುಟ್ಟ ಸೈಕಲ್ ನೊಂದಿಗೆ ಸಂಚರಿಸ್ತಾನೆ ಬೆನ್ನಿಗೆ ಒಂದು ಬ್ಯಾಗ್ ಕಟ್ಟಿಕೊಂಡು ಮಾಸ್ಕ ಟ್ರೇ ಹಿಡಕೊಂಡು ಮಾಸ್ಕ್ ಹಾಕಿದವರನ್ನು ಹಾಗೂ ಹಾಕದೇ ಇದ್ದವರನ್ನೂ ಮಾತನಾಡಿಸಿ ಒಂದೇ ಒಂದು ಮಾಸ್ಕ್ ತಗೊಳ್ರಿ ಅಂತ ರಿಕ್ವೆಸ್ಟ್ ಮಾಡಿಕೊಳ್ತಾನೆ.

ಈತನನ್ನು ನೋಡಿದವರು ಯಾರೂ ಸಹ ಮಾಸ್ಕ್ ಖರೀದಿ ಮಾಡದೇ ಹಾಗೇ ಹೋಗೊಲ್ಲ‌ಇಂದಿನ ಲಾಕ್ಡೌನ್ ಶಾಲಾ ರಜೆಗಳನ್ನ ಈ ರೀತಿ ಯೂಸ್ ಮಾಡಿಕೊಂಡಿರೋ ಬಾಲಕ ಕಳೆದ ವರ್ಷ ಲಾಕ್ಡೌನ್ ಸಮಯದ ನಂತರವೂ ಮಾಸ್ಕ್ ಮಾರಾಟ ಮಾಡಿ ಕರೋನಾ ನೆಗಲೆಟ್ ಮಾಡಬೇಡಿ ಅನ್ನೋ ಸಂದೇಶ ಸಾರಿದ್ದ. ಇನ್ನು ಕರೋನಾ 2ನೇ ಅಲೆಯು ಕರ್ನಾಟಕದಲ್ಲಿ ಅಬ್ಬರಿಸಿ ಎಲ್ಲರನ್ನೂ ಸಾವಿನ ಕೂಪಕ್ಕೆ ತಳ್ಳುತ್ತಿದೆ. ಇಂಥಹ ಸಂಧಿಘ್ನ ಪರಿಸ್ಥಿತಿಯಲ್ಲೂ ಜನ ಮಾತ್ರ ಮುನ್ನೆಚ್ಚೆರಿಕೆ ಕ್ರಮವಾಗಿ ಮಾಸ್ಕ ಹಾಕ್ತಿಲ್ಲ,ಅದೆಷ್ಟೇ ಹೇಳಿದರೂ ಕಾಟಾಚಾರಕ್ಕೆ ಎಂಬಂತೆ ಮಾಸ್ಕ ಧರಿಸ್ತಿದ್ದಾರೆ.ಅಂತದ್ರಲ್ಲಿ ಈ ಬಾಲಕ ಎಲ್ಲರಿಗೂ ಮಾಸ್ಕ್ ಕೊಟ್ಟು ತಾನಷ್ಟೆ ಜೀವನೋಪಾಯ ಕಂಡುಕೊಳ್ಳದೇ ಇತರರಿಗೂ ಜೀವನದ ಪಾಠ ಹೇಳ್ತಿರೋದಕ್ಕೆ  ಸ್ಥಳಿಯರು ಮೆಚ್ಚುಗೆ ವ್ಯಕ್ಯಪಡಿಸಿ ತಮ್ಮ ಕೈಲಾದ ಸಹಾಯ ಮಾಡ್ತಿದಾರೆ ಜೊತೆಗೆ ಈ ಬಾಲಕನಿಂದ ಮಾಸ್ಕ್ ಖರಿದಿಸಿ ತಾವೂ ಸಹ ಮಾಸ್ಕ್ ಧರಿಸ್ತಿದ್ದಾರೆ.

ಒಟ್ಟಾರೆ ಕೊರೊನಾ ಮಾಹಾಮಾರಿ ಮನುಕುಲವನ್ನೇ ಬುಡಮೇಲು ಮಾಡ್ತಿದೆ. ಅದರಲ್ಲೂ ಬಡ ಹಾಗೂ ಮಧ್ಯಮ ವರ್ಗದವರ ಪಾಡಂತೂ ಹೇಳತೀರದಾಗಿದೆ. ಆದರೆ ಈ ಪುಟಾಣಿ ಬಾಲಕ‌ನ ದುಡಿಮೆ‌ ಹಾಗೂ ಜಾಗೃತಿ ನೋಡಿದಾಗ ಒಂದೆಡೆ ಕಣ್ಣೀರು ಮತ್ತೊಂದೆಡೆ ಆತ್ಮಸ್ಥೈರ್ಯ ಹುಟ್ಟುತ್ತೆ.ಕುಟುಂಬಕ್ಕೆ ಆಸರೆಯಾದ ಬಾಲಕನನ್ನು ನೋಡಿ ಸಂತೋಷ ಪಡಬೇಕೋ ಅಥವಾ ಕರೋನಾ ಅಟ್ಟಹಾಸ ಇಷ್ಟು ಚಿಕ್ಕ ಪುಟಾಣಿಯನ್ನೂ ಸಹ ದುಡಿಮೆಗೆ ಹಚ್ಚಿತಲ್ಲಾ ಎಂದು ದುಃಖಿಸಬೇಕೋ ಆ ದೇವರೆ ಹೇಳಬೇಕು. ಮಹಮಾರಿ ಕರೋನಾ ವಿರುದ್ಧ ಹೋರಾಡಲು ಮಾಸ್ಕ್‌ ಧರಿಸಿ, ಸಾಮಾಜಿಕ ಅಂತರ ಕಾಪಾಡಿ. ನಮ್ಮ ಜೀವ ರಕ್ಷಿಸಿಕೊಳ್ಳುವುದರ ಜೊತೆಗೆ ಇನ್ನೊಬ್ಬರ ಜೀವವನ್ನು ರಕ್ಷಿಸೋಣ.

Related posts

Latest posts

ನೆಹರೂ-ಗಾಂಧಿ ಕುಟುಂಬದಿಂದಲೇ ಭಾರತ ಇಂದು ಉಳಿದುಕೊಂಡಿದೆ: ಕೇಂದ್ರಕ್ಕೆ ಚಾಟಿಯೇಟು ನೀಡಿದ ಶಿವಸೇನೆ

COVID-19 ಅನ್ನು ನಿಭಾಯಿಸಲು ನೆರೆಹೊರೆಯ ಸಣ್ಣ ದೇಶಗಳು ಭಾರತಕ್ಕೆ ಸಹಾಯ ನೀಡುತ್ತಿದ್ದರೆ, ದೆಹಲಿಯಲ್ಲಿ ಬಹುಕೋಟಿ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸುವ ಕನಿಷ್ಟ ಸೌಜನ್ಯವನ್ನೂ ಮೋದಿ ಸರ್ಕಾರ ತೋರುತ್ತಿಲ್ಲ ಎಂದು ಕೇಂದ್ರ ಸರ್ಕಾರವನ್ನು...

ರಾಜ್ಯಗಳಿಗೆ ಆಕ್ಸಿಜನ್ ವಿತರಿಸಲು 12 ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿದ ಸುಪ್ರೀಂ ಕೋರ್ಟ್.!

ದೇಶಾದ್ಯಂತ ಕರೋನ ಎರಡನೇ ಅಲೆ ವ್ಯಾಪಕವಾಗಿ ಹರಡಿರುವ ಮಧ್ಯೆ ಬಹುತೇಕ ರಾಜ್ಯಗಳು ಮತ್ತು ಕೇಂದ್ರಾಡಳಿತಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ಅದನ್ನು ಸಮರ್ಪಕವಾಗಿ ಎದುರಿಸಲು ಮತ್ತು ವೈಜ್ಞಾನಿಕವಾಗಿ ಮೆಡಿಕಲ್ ಆಕ್ಸಿಜನ್ಗಳನ್ನು ಹಂಚುವ ವಿಧಾನವನ್ನು ರೂಪಿಸಲು...

ಲಾಕ್ ಡೌನ್ ಘೋಷಿಸಿ ಬಡವರ್ಗದವರಿಗೆ ಯಾವುದೇ ಯೋಜನೆ ಘೋಷಿಸದ ರಾಜ್ಯ ಸರ್ಕಾರ

ಕೊರೋನ ಸಾಂಕ್ರಮಿಕವು ದಿನೇ ದಿನೇ ಉಲ್ಪಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಇದಕ್ಕೆ ಕಡಿವಾಣ ಹಾಕಲು ಸರ್ಕಾರಗಳು ಲಾಕ್ ಡೌನ್ ಘೋಷಿಸಿವೆ. ಇದು ಅನಿವಾರ್ಯ ಕ್ರಮವೂ ಕೂಡ ಆಗಿದೆ. ಆದರೆ ಈ ಲಾಕ್ ಡೌನ್ ಘೋಷಣೆಯಿಂದ...