• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಚಿರ ಯುವಕರನ್ನ ನಾಚಿಸುವಂತೆ ದುಡಿಯವ ವೃದ್ಧರು

Any Mind by Any Mind
April 30, 2021
in ಕರ್ನಾಟಕ
0
ಚಿರ ಯುವಕರನ್ನ ನಾಚಿಸುವಂತೆ ದುಡಿಯವ ವೃದ್ಧರು
Share on WhatsAppShare on FacebookShare on Telegram

ADVERTISEMENT

ಕರೋನಾ ಸಂಕಷ್ಟ ಕಾಲದಲ್ಲಿ ಉತ್ತರ ಕರ್ನಾಟಕದ ಗ್ರಾಮೀಣ ಭಾಗಗಳಲ್ಲಿ ಬಹುತೇಕ ಕೈಹಿಡಿದಿದ್ದು ನರೇಗಾ ಯೋಜನೆ. ಗುಳೆ ಹೋದವರು, ಇಲ್ಲೇ ಇದ್ದವರು, ಯುವಕರು ಮತ್ತು ಮಹಿಳೆಯರು ನರೇಗಾ ಯೋಜನೆಯಲ್ಲಿ ಕೆಲಸಕ್ಕೆ ಬರಲು ಮುಂದೆ ಬಂದಿದ್ದಾರೆ. ಆದರೆ ಕೆಲ ಭಾಗಗಳಲ್ಲಿ ವಿಶೇಷ ಏನೆಂದರೆ 60 ವಯಸ್ಸಿಗಿಂತ ಮೇಲ್ಪಟ್ಟ ವೃದ್ಧರೂ ಈ ಕೆಲಸಕ್ಕೆ ಬರುವುದು ನೋಡಿ ಯುವಕರು ನಾಚಿ ನೀರಾಗುತ್ತಿದ್ದಾರೆ. ಮೈಗಳ್ಳತನದಿಂದ ಕೆಲಸವೇ ಸಿಗಲಿಲ್ಲ ಎಂದು ಸರ್ಕಾರವನ್ನು ಬೈಯುವ ಯುವಕರಿಗೆ ವೃದ್ಧರು ಹುರುಪಿನಿಂದ ಮಾಡುವ ಕೆಲಸ ನೋಡಿ ಮುಜುಗರ ತರಿಸುವಂತಾಗಿದೆ.

ಹೀಗೊಬ್ಬ ವೃದ್ಧರು ನಮ್ಮ ತಂಡದ ಕಣ್ಣಿಗೆ ಬಂದಿದ್ದು, ಶಿರಹಟ್ಟಿ ಹತ್ತಿರದ ಬನ್ನಿಕೊಪ್ಪದ ಬಳಿ ಹೊಲವೊಂದರಲ್ಲಿ.

ಹೌದು ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬನ್ನಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬನ್ನಿಕೊಪ್ಪ ಗ್ರಾಮದ ರೈತರ ಹೊಲಗಳಲ್ಲಿ ಸಾಮೂಹಿಕ ಬದು ನಿರ್ಮಾಣ ಕಾಮಗಾರಿಯಲ್ಲಿ ಹಿರಿಯ ಜೀವಿಗಳ ಕಾಯಕನಿಷ್ಠೆ ಎಂತಹ ಚಿರ ಯುವಕರನ್ನೂ ನಾಚಿಸುವಂತೆ ಮಾಡಿದೆ. 

ಪ್ರತಿವರ್ಷವೂ ಕೂಡ ನರೇಗಾ ಯೋಜನೆ ಕೆಲಸ ಮಾಡುತ್ತಾ ಬಂದಿರುವ ಸಹೋದರ- ಸಹೋದರಿಯರು, ಬೇಸಿಗೆಯ ಅವಧಿಯಲ್ಲಿ ನರೇಗಾದಲ್ಲಿ ಶುರುವಾಗುವ ಕಾಮಗಾರಿಗಳಲ್ಲಿ ಭಾಗವಹಿಸುವುದನ್ನು ಮರೆಯುವುದಿಲ್ಲ, ತಮ್ಮ ಗ್ರಾಮದ ಜಮೀನಿ ನಲ್ಲಿ ರೈತರ ಹೊಲಗಳಲ್ಲಿ ಬದು ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಯಿಂದ ನೀಡಿದ ಅಳತೆಗೆ ತಕ್ಕ ಪ್ರಮಾಣದ ಕೆಲಸವನ್ನು ಸರಿಯಾದ ಪ್ರಮಾಣದಲ್ಲಿ ಕಡೆದು ಹಾಕುತ್ತಾರೆ.

ಇವರ ಕೆಲಸವನ್ನು ಕಂಡು ಚಿರ ಯುವಕರು ಕೂಡ ನಾಚುವಂತ ಹಾಗೂ ಗ್ರಾಮಸ್ಥರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ನಮಗೆ ವಯಸ್ಸಾಯ್ತು ನಮ್ಮ ಶಕ್ತಿ ಕುಂದಿತ್ತು ಎಂದು ಎಷ್ಟೋ ಜನಗಳ ಮಧ್ಯೆ ಬನ್ನಿಕೊಪ್ಪ ಗ್ರಾಮದ ಹಿರಿಯ ಜೀವಿಗಳ ಕಾಯಕನಿಷ್ಠೆ ವಿಶೇಷವಾಗಿ ಕಾಣಿಸುತ್ತದೆ.

ಇವರ ಕಾಯಕ ನಿಷ್ಠೆ ನೋಡಿ ಗ್ರಾಮ ಪಂಚಾಯತಿಯ ಸದಸ್ಯರೊಬ್ಬರು ಹೇಳಿದ್ದು ಹೀಗೆ, “ಈ ವೃದ್ಧರು (ಹಾಗಂದರೆ ಸರಿ ಅನಿಸಲ್ಲ ಆದರೂ) ಬಂದು ನಮಗೆ ಊರಲ್ಲಿ ಎಲ್ಲಿಯೂ ಕೆಲಸ ಸಿಗುತ್ತಿಲ್ಲ, ನೀವು ಕೊಟ್ಟರೆ ಸರಿಯಾಗಿ ನಿಮಗೆ ಯಾವ ಸಮಸ್ಯೆಯೂ ಬರದಂತೆ ಸರಿಯಾದ ಸಮಯದಲ್ಲಿ ಕೆಲಸ ಮಾಡುತ್ತೇವೆ ಎಂದರು. ಆಗ ನಾವು ನೋಡೋಣ, ನರೇಗಾದಲ್ಲಿ ಇವರಿಗೆ ಕೆಲಸ ಕೊಟ್ಟು ನೋಡೋಣ ಎಂದುಕೊಂಡೆವು, ಇವರ ಉತ್ಸಾಹ ನೋಡಿ ನಮಗೂ ಖುಷಿಯಾಗಿದೆ” ಇವರನ್ನು ಮಾತನಾಡಿಸಿ ಹೆಸರು ಕೇಳಿದಾಗ ಹೆಸರಲ್ಲೇನಿದೆ ಬೇಕಾದರೆ ಫೋಟೊ ತೆಗೆದುಕೊಳ್ಳಿ ಎಂದರು. “ನಾವಷ್ಟೇ ಅಲ್ಲ ಈಗ ಎಲ್ಲರಿಗೂ ಸಂಕಷ್ಟದ ಸಮಯ ಬಂದಿದೆ. ಎಲ್ಲರೂ  ಮೈ ಬಗ್ಗಿಸಿ ದುಡಿದು ತಿನ್ನೋಣ, ಕಳ್ಳತನ, ಮೋಸ, ಸುಲಿಗೆ, ಹರಾಮಿ ದುಡ್ಡಿಗೆ ಆಸೆ ಪಡಬೇಡಿ ಎಂದು ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ” ಎಂದರು.

ಹೌದಲ್ಲ ಎಷ್ಟು ನಿಜ…ಇಂದು ಬಹಳಷ್ಟು ಜನರು ರೇಷನ್ ಫ್ರೀ ಎಂದು ದುಡಿಯದೇ ಕಾಲ ಕಳೆಯುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಯನ್ನಂತೂ ನಾವು ನೋಡಿಯೇ ಇರುತ್ತೇವೆ. ಅದೆಷ್ಟು ಸತ್ಯವೋ ಅಥವಾ ಸುಳ್ಳು ಅನ್ನುವುದಕ್ಕಿಂತ ಈ ವೃದ್ಧರ ಮಾತು ಮಾತ್ರ ನಿಜ ಅನಿಸುತ್ತದೆ. ಇವರೂ ನೂರು ಕಾಲ ಸುಖವಾಗಿರಲಿ ಎಂಬುದು ನಮ್ಮ ಶುಭಹಾರೈಕೆ.   

Previous Post

ನನ್ನ ಕ್ಷೇತ್ರದಲ್ಲಿ ಬೆಡ್‌ ಕೊರತೆ ಇದೆ, ಆಕ್ಸಿಜನ್‌ ಸಿಗದೆ ನನ್ನ ಸಂಬಂಧಿಕರೇ ಮೃತಪಟ್ಟಿದ್ದಾರೆ -ಶಾಸಕ ಕೆ ಜೆ ಜಾರ್ಜ್

Next Post

ಎಲ್ಲೆಡೆ ಲಸಿಕೆ ಕೊರತೆ: ಮತ್ತೆ ಬಯಲಾಯ್ತು ಸರ್ಕಾರದ ಅಸಡ್ಡೆ!

Related Posts

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು
ಕರ್ನಾಟಕ

ಸಿಎಂ ಬದಲಾವಣೆ ಚರ್ಚೆಗೆ ತೆರೆ? ಜಿ. ಪರಮೇಶ್ವರ್ ಸ್ಪಷ್ಟನೆ ಏನು

by ಪ್ರತಿಧ್ವನಿ
April 28, 2026
0

ಕಲಬುರಗಿ: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಕುರಿತ ಚರ್ಚೆಗಳು ರಾಜಕೀಯ ವಲಯದಲ್ಲಿ ಗರಿಗೆದರಿರುವ ನಡುವೆಯೇ, ಗೃಹ ಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ಅವರು,...

Read moreDetails
ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

ಕಬ್ಬನ್ ಪಾರ್ಕ್ ನಿಗೂಢ ಸಾವು ಪ್ರಕರಣದ ಸತ್ಯ ಬಯಲು

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

ಬೆಂಗಳೂರು ಅಭಿವೃದ್ಧಿಗೆ ದೆಹಲಿಯಲ್ಲಿ ದೌಡಾಯಿಸಿದ ಡಿ.ಕೆ. ಶಿವಕುಮಾರ್; ಸಾವಿರಕ್ಕೂ ಹೆಚ್ಚು ಯೋಜನೆಗಳಿಗೆ ಕೇಂದ್ರದ ಗಮನ

April 26, 2026
ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

ಅನ್ನ-ನೀರಿಗೆ ಭವಿಷ್ಯದಲ್ಲಿ ಸಂಕಷ್ಟ ಎಚ್ಚರಿಕೆ: ಹವಾಮಾನ ಬದಲಾವಣೆಯ ಕುರಿತು ಕೋಡಿಮಠ ಶ್ರೀಗಳ ಭವಿಷ್ಯವಾಣಿ

April 25, 2026
Next Post
ಎಲ್ಲೆಡೆ ಲಸಿಕೆ ಕೊರತೆ: ಮತ್ತೆ ಬಯಲಾಯ್ತು ಸರ್ಕಾರದ ಅಸಡ್ಡೆ!

ಎಲ್ಲೆಡೆ ಲಸಿಕೆ ಕೊರತೆ: ಮತ್ತೆ ಬಯಲಾಯ್ತು ಸರ್ಕಾರದ ಅಸಡ್ಡೆ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada