ಕೋವಿಡ್ ಜಾಗೃತಿ ಮೂಡಿಸುತ್ತಿರುವ ಕನ್ನಡಿಗ ಮುತ್ತಣ್ಣ: ದಿನಕ್ಕೆ 80 ಕಿಮೀ ಪಯಣ

ಕರೋನಾ ವೈರಸ್ ಈಗ ಎಲ್ಲೆಡೆ ಕೇಕೆ ಹಾಕುತ್ತಿದೆ. ದಿನೇ ದಿನೇ ಕೇಸುಗಳು ಹೆಚ್ಚುತ್ತಲಿದ್ದರೂ ಜನರು ಮಾತ್ರ ಮಾಸ್ಕ್ ಧರಿಸುತ್ತಿಲ್ಲ, ಕೋವಿಡನ ಮುಖ್ಯ ರೂಲ್ಸ್ ಗಳಾದ ಸಾಮಾಜಿಕ ಅಂತರ, ಪರಸ್ಪರ ಕೈ ಮಿಲಾಯಿಸುವಿಕೆ ಹೀಗೆ ಎಲ್ಲವನ್ನು ಗಾಳಿಗೆ ತೂರಿ ತಮಗೆ ಬರಲ್ಲ ಎನ್ನುವ ಹಾಗೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಜನ್ರಿಗೆ ಕರೋನಾ ಬಗ್ಗೆ ಜಾಗೃತರಾಗಿ ಎಂದು ಗದಗ ಜಿಲ್ಲೆ ರೋಣ ತಾಲೂಕಿನ ಕರ್ಕಿಕಟ್ಟೆಯ ಮುತ್ತಣ್ಣ ತಿರ್ಲಾಪುರ ಈಗ  ಜಾಗೃತಿ ಮೂಡಿಸುವಲ್ಲಿ ಮುಂದಾಗಿದ್ದಾರೆ

ಇವರು ಉತ್ತರ ಕರ್ನಾಟಕದ ಗಾಂಧಿ ಎಂದೇ ಪ್ರಸಿದ್ಧ. ಶ್ರೀಮಂತ ನೇನಲ್ಲ ಆದರೂ ಹೃದಯ ಶ್ರೀಮಂತಿಕೆ ದೊಡ್ಡದು. ಇವರು ಸ್ವಾತಂತ್ರೋತ್ಸವ ದಿನ, ಗಣರಾಜ್ಯೋತ್ಸವ ದಿನ ಹಾಗೂ ಕನ್ನಡ ರಾಜ್ಯೋತ್ಸವದಂದು ವಿಶಿಷ್ಟ ರೀತಿಯಲ್ಲಿ ದೇಶ ಭಕ್ತಿ ಹಾಗೂ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗ್ರತಿ ಮೂಡಿಸುವುದು ಹವ್ಯಾಸ ಬೆಳಸಿಕೊಂಡಿರುವ ಮುತ್ತಣ್ಣ ಅಪಾರ ದೇಶಭಕ್ತಿ ಹೊಂದಿದ್ದಾರೆ. ಈಗ ರೋಣ ಪಟ್ಟಣದಲ್ಲಿ ಜಾಗೃತಿ  ಕಾರ್ಯಕ್ರಮ ಆರಂಭಿಸಿದ್ದಾರೆ. ಆದರೆ ಈ ಬಾರಿ ಕಾಸ್ಟೂಮ್ ಚೇಂಜ್. ಎಲ್ಲ ಕನ್ನಡಮಯ. ಹಳದಿ ಅಂಗಿ ಮತ್ತು ಕೆಂಪು ಪ್ಯಾಂಟು, ಕೈಯಲ್ಲಿ ಕನ್ನಡ ಧ್ವಜ, ಒಂದು ಹಲಗೆ, ಸೈಕಲ್, ಹಳದಿ ಕೆಂಪು ಬಣ್ಣದ ಟೋಪಿ, ಮಾಸ್ಕ್ ಅಂತೂ ಕಡ್ಡಾಯ.

ಈಗ ಒಂದು ವಾರದಿಂದ ಸೈಕಲ್ ಏರಿ ಗದಗ ಜಿಲ್ಲೆ ರೋಣ ತಾಲೂಕು ಹಾಗೂ ನರಗುಂದ ತಾಲೂಕಿನ ಅನೇಕ ಹಳ್ಳಿಗಳಿಗೆ ತೆರಳಿ ಕರೋನಾದಿಂದ ಹೇಗೆ ಜಾಗೃತರಾಗಿರ ಬೇಕು ಎಂಬುವುದರ ಬಗ್ಗೆ  ಡಂಗುರ ಸಾರಿ ಕರಪತ್ರಗಳನ್ನು ಹಂಚುವ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಇವರ ಈ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ವಿರೇಶ ಪತ್ತಾರ, ಶಿರೋಳ ಗ್ರಾಮಸ್ಥರರೊಬ್ಬರು ಇವರ ಬಗ್ಗೆ ಹೇಳಿದ್ದು ಹೀಗೆ, “ಮುತ್ತಣ್ಣ ಈಗಾಗಲೇ ದಿನಕ್ಕೆ 80 ಕಿ.ಮೀ ಕ್ರಮಿಸಿ ರೋಣ ಪಟ್ಟಣಕ್ಕೆ ಆಗಮಿಸಿದ್ದಾರೆ. ಸಾವ೯ಜನಿಕ ಸ್ಥಳಗಳಲ್ಲಿ ಹಾಗೂ ಸರಕಾರಿ ಕಚೇರಿಗಳ ಆವರಣದಲ್ಲಿ ಹಲಗೆ ಬಡಿದು ಡಂಗುರ ಸಾರಿದ ಮುತ್ತಣ್ಣ ಕರ ಪತ್ರಗಳನ್ನು ಹಂಚುವ ಮೂಲಕ ನಾಗರಿಕ ಸಮುದಾಯದಲ್ಲಿ ಸಾಮಾಜಿಕ ಅಂತರದ ಬಗ್ಗೆ ಅರಿವು ಮೂಡಿಸುತ್ತಿರೋದು ಸಾವ೯ಜನಿಕರು ಗಾಂಧೀಜಿಯನ್ನು ನೋಡಿ ಕರೋನಾ ಜಾಗೃತಿಗೆ ಕೈಜೋಡಿಸುವ ಸಮ್ಮತಿ ಸೂಚಿಸಿದ್ದಾರೆ”.

ಮುತ್ತಣ್ಣ ಹೇಳಿದ್ದು ಹೀಗೆ, “ಜನರು ಇನ್ನೂ ಕರೋನಾ ವೈರಸ್ ಬಗ್ಗೆ ಜಾಗೃತರಾಗಬೇಕು. ಅದಕ್ಕಾಗಿ ನನ್ನದೊಂದು ಸಣ್ಣ ಪ್ರಯತ್ನ. ಎಲ್ಲರೂ ಸುರಕ್ಷಿತವಾಗಿರಿ. ಕೋವಿಡ್ ರೂಲ್ಸ್ ಪಾಲಿಸಿ. 14 ದಿನಗಳು ಮನೆಯಿಂದ ಹೊರಗಡೆ ಬರಬೇಡಿ. ಆರಕ್ಷರ ಸಾಥ ನೀಡಿ. ಕರೋನಾ ಓಡಿಸೋಣ, ನೆಮ್ಮದಿಯ ಬದುಕು ಸಾಗಿಸೋಣ”. 

Related posts

Latest posts

ಕರೋನಾ ಪ್ರಕರಣ ಇಳಿಕೆಯಾಗಿದೆ ಅನ್ನುವುದು ಭ್ರಮೆ, ಭಾರತದ ಅಂಕಿಅಂಶಗಳು ವಿಶ್ವಾಸಾರ್ಹವಲ್ಲ – ತಜ್ಞರ ಕಳವಳ

ಕೋವಿಡ್‌ ಸೋಂಕುಗಳಲ್ಲಿ ಕಳೆದೊಂದು ತಿಂಗಳಿನಿಂದ ತತ್ತರಿಸಿರುವ ಭಾರತ ಕ್ರಮೇಣ ಸೋಂಕಿನ ತೀವ್ರತೆ ಇಳಿಯುತ್ತಿರುವುದಾಗಿ ವರದಿ ಮಾಡುತ್ತಿದೆ. ಅದಾಗ್ಯೂ, ಕೋವಿಡ್‌ ಸಂಬಂಧಿತ ದೈನಂದಿನ ಸಾವಿನ ಪ್ರಮಾಣ ಈಗಲೂ 4 ಸಾವಿರಕ್ಕೂ ಹೆಚ್ಚಿದೆ. ಭಾರತದ ಗ್ರಾಮೀಣ...

ಬ್ಲಾಕ್ ಫಂಗಸ್: ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ, ಉಚಿತ ಚಿಕಿತ್ಸೆ ಕೊಡಿ ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ

ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕೋವಿಡ್ ನಿಂದಾಗಿ ಸಾವು...

ನಾರದಾ ಲಂಚ ಪ್ರಕರಣ- ಟಿಎಂಸಿ ಶಾಸಕ, ಸಚಿವರ ಬಂಧನ ವಿರೋಧಿಸಿ ಸಿಬಿಐ ಕಚೇರಿ ಮುಂದೆ ಟಿಎಂಸಿ ಬೆಂಬಲಿಗರಿಂದ ಪ್ರತಿಭಟನೆ

ನಾರದಾ ಲಂಚಪ್ರಕರಣದ ಆರೋಪದಡಿ ತೃಣಮೂಲ ಕಾಂಗ್ರೆಸ್ ಶಾಸಕರಾದ ಫಿರ್ಹಾದ್ ಹಕೀಮ್, ಸುಬ್ರತಾ ಮುಖರ್ಜಿ, ಮದನ್ ಮಿತ್ರ ಮತ್ತು ಮಾಜಿ ಸಚಿವ, ಕೋಲ್ಕತಾ ಮೇಯರ್ ಶೋವನ್ ಚಟರ್ಜಿಯನ್ನು ಕೇಂದ್ರ ತನಿಖಾ ದಳ (ಸಿಬಿಐ) ವು...