ಬೆಡ್‌ ಸಿಗದೆ ಅಲೆದಾಡಿದ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ

[Sassy_Social_Share]

ಕರೋನಾ ಸಾಂಕ್ರಾಮಿಕದ ತೀವೃತೆಗೆ ಧುರೀಣರೂ, ಬಡವರೂ ತತ್ತರಿಸುತ್ತಿದ್ದಾರೆ. ಸಚಿವರ ಕಛೇರಿಯವರೆಗೂ ಸಂಪರ್ಕವಿದ್ದರೂ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದಂತಹ ಪರಿಸ್ಥಿತಿ ಬೆಂಗಳೂರಿನಲ್ಲಿ ಇದೆ.

ಕನ್ನಡದ ಹಿರಿಯ ಕವಿ ಡಾ. ಸಿದ್ದಲಿಂಗಯ್ಯ ಕೂಡಾ ಕರೋನಾ ಸೋಂಕಿಗೆ ತುತ್ತಾಗಿದ್ದು, ಬೆಡ್‌ ಸಿಗದೆ ಎರಡು ದಿನ ಅಲೆದಾಡಿದ್ದಾರೆ.

ಸಿದ್ದಲಿಂಗಯ್ಯ ಅವರಿಗೆ ಕರೋನಾ ಸೋಂಕು ಧೃಡಪಟ್ಟಿದ್ದು, ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೆಮ್ಮು ಹಾಗೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಿದ್ದಲಿಂಗಯ್ಯ ಭಾನುವಾರದಿಂದ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ್ದಾರೆ. ಅದಾಗ್ಯೂ,  ಬೆಡ್ ಸಿಕ್ಕಿರಲಿಲ್ಲ. ಎರಡು ದಿನದ ಅಲೆದಾಟದ ಬಳಿಕ ಕೊನೆಗೂ ದಲಿತ ಕವಿಗೆ ಕೊನೆಗೂ ಬೆಡ್  ದೊರೆತಿದೆ.

ಬಲ್ಲ ಮಾಹಿತಿಗಳ ಪ್ರಕಾರ, ಸಿದ್ದಲಿಂಗಯ್ಯ ಅವರಿಗೆ ಬೆಡ್‌ ಸಿಗಲು ಡಿಸಿಎಂ ಅಶ್ವಥ್ ನಾರಾಯಣ ಹಾಗೂ ಸಿಎಂ ಕಚೇರಿಯಿಂದಲೇ ಫೋನ್ ಕರೆ ಹೋಗಿದೆ. ನಾಡಿನ ಹಿರಿಯ ಕವಿಗೆ ಬೆಡ್‌ ಒದಗಿಸಲಾಗದ ಸರ್ಕಾರದ ವಿಫಲತೆಯ ಕುರಿತು ವರದಿಯಾಗುತ್ತಿದ್ದಂತೆ ಸ್ವತಃ ಸರ್ಕಾರವೇ ಎಚ್ಚೆತ್ತುಕೊಂಡಿದೆ ಎನ್ನಲಾಗಿದೆ.  ಇದೀಗ ರಂಗದೊರೈ ಆಸ್ಪತ್ರೆಯಲ್ಲಿ  ಕವಿ ಸಿದ್ದಲಿಂಗಯ್ಯ ದಾಖಲಾಗಿದ್ದಾರೆ. 

Related posts

Latest posts

ಮೈಸೂರು, ಚಾಮರಾಜನಗರ ಡಿಸಿ ಕಚೇರಿ, ಆಸ್ಪತ್ರೆಯ ಎಲ್ಲ ದಾಖಲೆ ಜಪ್ತಿ: ಹೈಕೋರ್ಟ್ ಆದೇಶ

ಕರೋನಾ ಸಂದರ್ಭದಲ್ಲಿ ರಾಷ್ಟ್ರದ ನಾನಾ ಸರಕಾರಗಳ ನಿಷ್ಕ್ರಿಯತೆಗಳ ಬಗ್ಗೆ ಚಾಟಿ ಬೀಸುತ್ತಿರುವ ದೇಶದ ನ್ಯಾಯಾಲಯಗಳ ಸಾಲಿಗೆ ರಾಜ್ಯದ ಹೈಕೋರ್ಟ್ ಕೂಡ ಸೇರ್ಪಡೆಗೊಂಡಿದ್ದು, ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಇತ್ತೀಚೆಗೆ ಆಮ್ಲಜನಕದ ಕೊರತೆಯಿಂದ ರೋಗಿಗಳು ಮೃತರಾಗಿರುವ...

ಚಾಮರಾಜನಗರ ಆಕ್ಸಿಜನ್ ‌ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ‌ – ಹೆಚ್‌ಡಿ ಕುಮಾರಸ್ವಾಮಿ

ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಸಿ ಎಂ ಹೆಚ್ ಡಿ ಕುಮಾರಸ್ವಾಮಿ ಬಿಜೆಪಿ...

ಆಕ್ಸಿಜನ್‌ ಕೊರತೆ: ಕೇಂದ್ರ ಸರ್ಕಾರ ರಾಜ್ಯಕ್ಕೆ ಆಕ್ಸಿಜನ್ ಪೂರೈಸಲು ಕ್ರಮ ಕೈಗೊಳ್ಳಬೇಕು -ಸಿದ್ದರಾಮಯ್ಯ

ರಾಜ್ಯದಲ್ಲಿ ಆಕ್ಸಿಜನ್‌ ಕೊರತೆ ಹಿನ್ನಲೆ, ಕರ್ನಾಟಕದಲ್ಲಿ ಉತ್ಪಾದನೆ ಆಗುವ ಆಕ್ಸಿಜನ್ ಅನ್ನು ರಾಜ್ಯದ ಬಳಕೆಗೇ ಮೀಸಲಿಡಬೇಕು, ಈಗ ರಾಜ್ಯಕ್ಕೆ ನಿಗದಿ ಮಾಡಿರುವ ಆಕ್ಸಿಜನ್ ಪ್ರಮಾಣ ಬೇಡಿಕೆಯ ಶೇ. 50ರಷ್ಟು ಸಹ ಇಲ್ಲ. ಬೇಡಿಕೆಗೆ...