• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 22, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Tobacco free day : ವರ್ಷದ 365 ದಿನವೂ ತಂಬಾಕು ರಹಿತ ದಿನವಾಗಲಿ

Any Mind by Any Mind
May 31, 2023
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
Tobacco free day : ವರ್ಷದ 365 ದಿನವೂ ತಂಬಾಕು ರಹಿತ ದಿನವಾಗಲಿ
Share on WhatsAppShare on FacebookShare on Telegram
  • ಡಾ.ಕೆ.ವಿ ರಾಜೇಂದ್ರ

ತಂಬಾಕು ರಹಿತ ದಿನವೆಂಬುದು ಕೇವಲ ಒಂದು ದಿನಕ್ಕೆ ಸೀಮಿತವಾಗಿರದೆ 365 ದಿನವೂ ತಂಬಾಕು ರಹಿತ ದಿನವಾಗಬೇಕು ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ ವಿ ರಾಜೇಂದ್ರ ಅವರು ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇ ಕ್ಷಣಾ ಘಟಕ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ ಎನ್.ಸಿ.ಡಿ ಕೋಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ, ಜೆಎಸ್ಎಸ್ ಶುಶ್ರೂಷ ಶಾಲೆ, ಬಿಜಿಎಸ್ ಅಪೋಲೋ ಶುಶ್ರೂಷ ಕಾಲೇಜು, ಶ್ರೀ ಗೋಪಾಲಗೌಡ ಶಾಂತವೇರಿ ಮೆಮೋರಿಯಲ್ ಶುಶ್ರೂಷ ಕಾಲೇಜು, ಮೈಸೂರು ಹಾಗೂ ಪೃಥ್ವಿ ಇನ್ಫ್ರಾಸ್ಟ್ರಕ್ಚರ್ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಗರದ ಅರಮನೆಯ ಆವರಣದಲ್ಲಿ ಹಮ್ಮಿಕೊಂಡಿದ್ದ “ವಿಶ್ವ ತಂಬಾಕು ರಹಿತ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ADVERTISEMENT

ಯುವ ಜನತೆ ತಂಬಾಕು ಚಟಕ್ಕೆ ಬಲಿಯಾಗದೆ ತಮ್ಮ ಜೀವನ ಶೈಲಿಯನ್ನ ಸುಗಮ ರೀತಿಯಲ್ಲಿ ನಡೆಸಬೇಕು. ಶಾಲಾ ಕಾಲೇಜುಗಳ ಸುತ್ತಲೂ ತಂಬಾಕು ಮುಕ್ತ ವಲಯ ಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವನೆಯು ಕೋಟ್ಪಾ ಕಾಯ್ದೆಯ ಉಲ್ಲಂಘನೆ ಯಾಗುವುದಲ್ಲದೆ ತಂಬಾಕು ಸೇವನೆ ಮಾಡದೆ ಇರುವ ವ್ಯಕ್ತಿಯ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.

ತಂಬಾಕು ಸೇವನೆಯು ಸ್ಲೋ ಪಾಯಿಸನ್ ಆಗಿರುವುದರಿಂದ ಅದರ ಚಟಕ್ಕೆ ಬಲಿಯಾದವರು ಅದರಿಂದ ಹೊರ ಬಂದು ಸುಭದ್ರ ಆರೋಗ್ಯ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಮಾರ್ಗದರ್ಶನ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ.ಪ್ರಸಾದ್ ಅವರು ಮಾತನಾಡಿ “ನಮಗೆ ತಂಬಾಕು ಬೇಡ ಆಹಾರ ಬೇಕು” ಎಂಬ ಧ್ಯೇಯ ವಾಕ್ಯದೊಂದಿಗೆ 2023 ರ ತಂಬಾಕು ರಹಿತ ದಿನವನ್ನು ಆಚರಿಸುತ್ತಿದ್ದು, ತಂಬಾಕಿನ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕಾಗಿದೆ ಎಂದು ತಿಳಿಸಿದರು.

ಮನುಷ್ಯನಿಗೆ ಇರುವ ಆರೋಗ್ಯವು ತುಂಬಾ ಅಮೂಲ್ಯವಾದದ್ದು ಅದನ್ನು ನಮ್ಮ ಕೈಯಾರ ಹಾಳು ಮಾಡಿಕೊಳ್ಳದೆ ಕಾಪಾಡಿಕೊಳ್ಳುವ ಹೊಣೆಗಾರಿಕೆ ನಮ್ಮದೇ ಆಗಿದೆ ಎಂದರು.ಪಿರಿಯಾಪಟ್ಟಣ ತಾಲೂಕಿನ ಹಾರನಹಳ್ಳಿ ಹೋಬಳಿಯ ಅಡಗೂರು ಎಂಬ ಗ್ರಾಮದಲ್ಲಿ ಮುಂಚೆ ಹೆಚ್ಚಾಗಿ ತಂಬಾಕನ್ನು ಬೆಳೆಯಲಾಗುತ್ತಿತ್ತು ಆದರೆ ಈಗ ಈ ಗ್ರಾಮವು ತಂಬಾಕು ಮುಕ್ತ ಗ್ರಾಮವಾಗಿ ಹೊರಹೊಮ್ಮಿರುವುದು ಖುಷಿಯ ವಿಚಾರ ಎಂದು ಹರ್ಷ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳಾದ ಡಾ. ಮಹದೇವ ಪ್ರಸಾದ್, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳಾದ ಸಿರಾಜ್ ಅಹಮದ್, ಜಿಲ್ಲಾ ತುಂಬಾಕು ನಿಯಂತ್ರಣದ ಸಲಹೆಗಾರರಾದ ಶಿವಕುಮಾರ್ ಜಿ, ಐ.ಇ.ಸಿ ಅಧಿಕಾರಿಗಳು, ಹಾಗೂ ರೈತ ಮುಖಂಡರಾದ ವಸಂತ್, ಪ್ರಗತಿಪರ ರೈತರಾದ ಸುಪ್ರೀತ್ ಅವರು ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags: 365 days should be tobacco free dayBGSDistrict HealthDr. K V RajendraFamily Welfare DepartmentGopal Gowda ShantaveriJSS School of NursingMedical CollegeMysoreNCDResearch InstituteTobacco free dayWorld No Tobacco Day
Previous Post

Basavaraja Bommai : ಸಂಪುಟ ತೀರ್ಮಾನಕ್ಕೆ ಕಾದು ನೋಡೋಣ ; ಬಸವರಾಜ ಬೊಮ್ಮಾಯಿ

Next Post

DCM DKShivakumar tweeted : ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಟ್ವಿಟ್ ಮಾಡಿದ ಡಿಸಿಎಂ ಡಿಕೆಶಿ

Related Posts

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!
Top Story

ರಾಜಕಾರಣಿಗಳಿಂದ ರಸ್ತೆ ತಡೆ ಮಾಡಿಸಿ ಪ್ರತಿಭಟನೆ : ಕೆರಳಿತು ಸಾರ್ವಜನಿಕರ ತಾಳ್ಮೆ..!

by ಪ್ರತಿಧ್ವನಿ
April 22, 2026
0

ಮುಂಬೈ : ಟ್ರಾಪೀಕ್‌ ಕಿರಿ ಕಿರಿ ಅನುಭವಿಸಿದ ಮಹಿಳೆಯೊಬ್ಬಳು ಪೊಲೀಸ್‌ ಅಧಿಕಾರಿ ಹಾಗೂ ಇಲ್ಲಿನ ಸಚಿವರಿಗೆ ಖಡಕ್‌ ಕ್ಲಾಸ್‌ ತೆಗೆದುಕೊಂಡ ಘಟನೆ ನಡೆದಿದೆ. ಮಂಗಳವಾರ ವರ್ಲಿ ಪ್ರದೇಶದಲ್ಲಿ...

Read moreDetails
ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

ಗಮನ ಸೆಳೆದ ಗದಗ ಜಿಲ್ಲಾಸ್ಪತ್ರೆ : ಬಿಸಿಲಿನ ಬೇಗೆಯಲ್ಲಿ ರೋಗಿಗಳಿ ಆಶಾಕಿರಣವಾದ ವೈದ್ಯರು, ಏನಿದು ವಿಶೇಷ..?

April 22, 2026
ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

ಫಾರಿನ್‌ ಸ್ಟೈಲ್‌ ಲವ್‌ & ಮರ್ಡರ್‌ : ಕಿರಾತಕಿ ಪ್ರೇಮಾಳಿಂದ ಕೊಲೆ ಸ್ಫೋಟಕ ರಹಸ್ಯ ಬಯಲು..

April 22, 2026
ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

ರಾಹುಲ್‌ ಯಡವಟ್ಟಿನಿಂದ ಹೈದ್ರಾಬಾದ್‌ ಎದುರು ಶರಣಾದ ಡೆಲ್ಲಿ ಕ್ಯಾಪಿಟಲ್ಸ್..

April 22, 2026
ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

ಸಂವಿಧಾನದ ಅಶಯಗಳು -ಬಾಬು ಜಗಜೀವನ್ ರಾಮ್-

April 21, 2026
Next Post
DCM DKShivakumar tweeted : ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಟ್ವಿಟ್ ಮಾಡಿದ  ಡಿಸಿಎಂ ಡಿಕೆಶಿ

DCM DKShivakumar tweeted : ಗಾಳಿ ಸುದ್ದಿಗೆ ಕಿವಿಗೊಡಬೇಡಿ ಎಂದು ಟ್ವಿಟ್ ಮಾಡಿದ ಡಿಸಿಎಂ ಡಿಕೆಶಿ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada