ತೀವ್ರ ಅನಾರೋಗ್ಯ ಹಾಗೂ ಕೋವಿಡ್ ಸೊಂಕಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಗಾಯಕಿ ಲತಾ ಮಂಗೇಶ್ಕರ್ರವರು ಸುಧಾರಿಸಿಕೊಳ್ಳತ್ತಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಮಹಾರಾಷ್ಟ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿನ ರಾಜೇಶ್ ಟೋಪೆ ತಿಳಿಸಿದ್ದಾರೆ.
ಈ ಕುರಿತು ಮಾತನಾಡಿರುವ ಟೋಪೆ, “ಲತಾಜಿಗೆ ಚಿಕ್ಸಿತೆ ನೀಡುತ್ತಿರುವ ಡಾ.ಪ್ರತೀತ್ ಸಮ್ದಾನಿಯೊಂದಿಗೆ ಮಾತನಾಡಿದ್ದೇನೆ ಅವರು ವೆಂಟಿಲೇಟರ್ನಲ್ಲಿದ್ದಾರೆ ಮತ್ತು ಈಗೀಗ ಅವರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆʼʼ ಎಂದು ಹೇಳಿದ್ದಾರೆ.
ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಅಸೋಸಿಯೇಟ್ ಪ್ರೊಫೆಸರ್ ಡಾ ಪ್ರತೀತ್ ಸಮ್ದಾನಿ ಈ ಖಾಸಗಿ ಸುದ್ದಿತಾಣದೊಂದಿಗೆ ಮಾತನಾಡಿದ್ದು, “ಲತಾ ಮಂಗೇಶ್ಕರ್ ಅವರು ಐಸಿಯುನಲ್ಲಿಯೇ ಇದ್ದಾರೆ. ಅವರು ಮೂರು ದಿನಗಳಿಂದ ವೆಂಟಿಲೇಟರ್ ನಲ್ಲಿ ಇಲ್ಲ ಮತ್ತು ಪ್ರಸ್ತುತ ಪ್ರಜ್ಞೆ ಹೊಂದಿದ್ದಾರೆ. ಅವರ ಆರೋಗ್ಯದ ಹಿತದೃಷ್ಠಿಯಿಂದ ಡಿಸ್ಚಾರ್ಜ್ ಬಗ್ಗೆ ಕಾದು ನೋಡಬೇಕು ಎಂದು ಹೇಳಿದ್ದಾರೆ.
ದಕ್ಷಿಣ ಮುಂಬೈನಲ್ಲಿರುವ ಪ್ರಸಿದ್ದ ಆಸ್ಪತ್ರೆ ಬ್ರೀಚ್ ಕ್ಯಾಂಡಿಯಲ್ಲಿ ಲತಾ ಮಂಗೇಶ್ಕರ್ಗೆ ಚಿಕಿತ್ಸೆ ನೀಡಲಾಗುತ್ತಿದೆ.