
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ (Amit shah) ನೇತೃತ್ವದಲ್ಲಿ ಇಂದು (ಏ.25) ಮಹತ್ವದ ಸಭೆ ನಡೆಯಲಿದೆ. ಪಾಕಿಸ್ತಾನದ (Pakistan) ಜೊತೆಗೆ ಸಿಂಧೂ ನದಿಯ (Sindhu river) ನೀರು ಹಂಚಿಕೆ ಒಪ್ಪಂದವನ್ನು ತಾತ್ಕಾಲಿಕವಾಗಿ ಅಮಾನತ್ತಿನಲ್ಲಿಟ್ಟ ಹಿನ್ನಲೆ ಈ ಸಭೆ ಮಹತ್ವ ಪಡೆದುಕೊಂಡಿದೆ.

ಭಾರತದ ಜಲಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿ ಮತ್ತು ಕೇಂದ್ರದ ಹಿರಿಯ ಅಧಿಕಾರಿಗಳ ಜೊತೆ ಅಮಿತ್ ಶಾ ಸಭೆ ನಡೆಸಲಿದ್ದಾರೆ.ಈ ನದಿ ನೀರು ಒಪ್ಪಂದ ರದ್ದಿನಿಂದ ಆಗುವ ಪರಿಣಾಮದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗುತ್ತೆ.

ಇದರ ಜೊತೆಗೆ ಭದ್ರತಾ ದೃಷ್ಟಿಯಿಂದಲೂ ಸಭೆ ಅಮಿತ್ ಶಾ ಸಭೆ ನಡೆಸಲು ಮುಂದಾಗಿದ್ದಾರೆ.ದೆಹಲಿಯ ಅಮಿತ್ ಶಾ ಕಚೇರಿಯಲ್ಲಿ ಸಭೆ ನಡೆಯಲಿದ್ದು, ನಿನ್ನೆ ನದಿ ನೀರು ತಡೆ ಬಗ್ಗೆ ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಅಮಿತ್ ಶಾ ವರದಿ ನೀಡಿದ್ದರು.






