ವಿಶ್ವ ಸಂಸ್ಥೆಯ ನಾಲ್ಕನೇ ತಂಬಾಕು ಪ್ರವೃತಿಗಳ ಪ್ರಕಾರ ಭಾರತದಲ್ಲಿ 2025ರ ಹೊತ್ತಿಗೆ ತಂಬಾಕು ಉತ್ಪನಗಳ ಬಳಕೆಯಲ್ಲಿ ಶೇ.30%ರಷ್ಟು ಕಡಿತ ಸಾಧಿಸುವ ಗುರಿಯಲ್ಲಿರುವ 60 ದೇಶಗಳ ಪೈಕಿ ಭಾರತವು ಸೇರಿದೆ ಎಂದು ವಿಶ್ವ ಸಂಸ್ಥೆಯ ವರಿದಿಯಲ್ಲಿ ತಿಳಿಸಲಾಗಿದೆ.
ವರದಿಯಲ್ಲಿ ತಿಳಿಸಿರುವಂತೆ 2015ರಲ್ಲಿ 1.32 ಬಿಲಿಯನ್ನಿಂದ 2020ರ ವೇಳೆಗೆ 1.30ಬಿಲಿಯನ್ಗೆ ಇಳಿದಿದೆ. ಇದು 2025ರ ವೇಳೆಗೆ 1.27 ಬಿಲಿಯನ್ಗೆ ಇಳಿಯುವ ಸಾಧ್ಯತೆಯಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ ಆಗ್ನೇಯ ಏಷ್ಯಾ ಪ್ರದೇಶದಲ್ಲಿ ತಂಬಾಕು ಉತ್ಪನಗಳ ಬಳಕೆಯಲ್ಲಿ ಅತಿ ವೇಗದ ಕುಸಿತ ಕಂಡಿದೆ ಎಂದು ತಿಳಿಸಿದೆ. ಧೂಮಪಾನ ಮಾಡುವ ಪುರುಷರ ಸರಾಸರಿ ಶೇ50% ರಿಂದ 25% ಗೆ ಇಳಿದಿದೆ. ಇನ್ನು ಧೂಮಪಾನ ಮಾಡುವ ಮಹಿಳೆಯರ ಸಂಖ್ಯೆ 8.9ರಿಂದ 1.6 ಕ್ಕೆ ಕುಸಿದಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಗ್ನೇಯ ಏಷ್ಯಾ ವಲಯದ ಪ್ರಾದೇಶಿಕ ನಿರ್ದೇಶಕಿ ಡಾ|| ಪೂನಂ ಖೇತ್ರಪಾಲ್ ಸಿಂಗ್ ʻದೇಶಗಳಲ್ಲಿ ತಂಬಾಕು ಉಪಯೋಗಿಸುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ಸ್ಥಿರವಾಗಿ ಪ್ರಚಾರ ಮಾಡುತ್ತಿರುವುದರಿಂದ ತಂಬಾಕು ಉತ್ಪನಗಳ ಬಳಕೆಯಲ್ಲಿ ತೀವ್ರ ಕುಸಿತಕ್ಕೆ ಕಾರಣʼ ಎಂದು ಹೇಳಿದ್ದಾರೆ.
ದಕ್ಷಿಣ ಏಷ್ಯಾ ಪ್ರದೇಶವು ಪ್ರಸ್ತುತ ಅತ್ಯಧಿಕ ತಂಬಾಕು ಬಳಕೆದಾರರನ್ನು ಹೊಂದಿದೆ. ಸುಮಾರು 432 ಬಿಲಿಯನ್ನಷ್ಟು ಜನ ಅಥವಾ ಆ ಪ್ರದೇಶದ ಜನಸಂಖ್ಯೆಯ ಶೇ.29% ರಷ್ಟು ಜನ ಪ್ರಸ್ತುತ ತಂಬಾಕು ಉತ್ಪನಗಳನ್ನು ಬಳಸುತ್ತಿದ್ದಾರೆ. ಜಾಗತಿಕವಾಗಿ 355 ಮಿಲಿಯನ್ ಜನರಲ್ಲಿ 266 ಮಿಲಿಯನ್ ಜನರು ಹೊಗೆ ರಹಿತ ತಂಬಾಕನ್ನು ಬಳಸುತ್ತಿದ್ದಾರೆ.
ತಂಬಾಕು ಸೇವನೆಯು Non Communicable Diseases(NCD)ಗೆ ಪ್ರಮುಖ ದಾರಿಯಾಗಿದೆ. ಇದರ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಪರಿಣಾಮಕಾರಿ ಅಂಶ ಜಾರಿಗೆ ತರುವ ಅಗತ್ಯವಿದೆ ಎಂದು ವರದಿಯಲ್ಲಿ ತಿಳಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಫ್ರೇಮ್ ವರ್ಕ್ ಆನ್ ಟೊಬ್ಯಾಕ್ಕೋ (FCTC)ಯ ಪ್ರಕಾರ ಮತ್ತು MPower ನ ಅಡಿಯಲ್ಲಿ ಪರಿಣಾಮಕಾರಿ ಮತ್ತು ಸಮಗ್ರ ತಂಬಾಕು ನಿಯಂತ್ರಣ ನೀತಿಗಳಿಂದ ಇಲ್ಲಿಯವರೆಗೆ ತಂಬಾಕು ಉತ್ಪನಗಳ ಜಾಗೃತಿ ಬಗ್ಗೆ ಅರಿವು ಮೂಡಿಸಿ ಕಲ್ಷಾಂತರ ಜೀವಗಳನ್ನು ಉಳಿಸಲಾಗಿದೆ.
ತಂಬಾಕು ನಿಯಂತ್ರಣ ಪ್ರಯತ್ನಗಳು ಪ್ರಸ್ತುತ ಮಟ್ಟದಲ್ಲಿ ಮುಂದುವರೆದರೆ ಆಗ್ನೇಯ ಏಷ್ಯಾ ಪ್ರದೇಶದಲ್ಲಿ 2025ರ ವೇಳೆಗೆ ಶೇ.11% ರಷ್ಟು ತಲುಪಬಹುದು ಇದು ಆಫ್ರಿಕಾದ ನಂತರ ಕಡಿಮೆ ಪ್ರಾದೇಶಿಕ ದರವಾಗಿರಲಿದೆ ಎಂದು ಸಿಂಗ್ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ವರದಿಯ ಪ್ರಕಾರ 150 ದೇಶಗಳ ತಂಬಾಕು ಬಳಕೆಯಲ್ಲಿ ಇಳಿಕೆ ದರವನ್ನು ತೋರಿಸಿವೆ. ಎರಡು ವರ್ಷಗಳ ಹಿಂದಿನ ವರದಿ ಪ್ರಕಾರ 32 ದೇಶಗಳ ಬದಲು 60 ದೇಶಗಳು ಪಟ್ಟಿಯಲ್ಲಿವೆ ಕೋವಿಡ್ 19ರ ಸಾಂಕ್ರಾಮಿಕದ ಹೊರತಾಗಿಯೂ.
ಪ್ರತಿ ವರ್ಷ ಜನರು ತಂಬಾಕು ಉಪಯೋಗಿಸುವುದರಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಮತ್ತು ಹೆಚ್ಚಿನ ದೇಶಗಳು ಜಾಗತಿಕ ಗುರಿಯನ್ನು ತಲುಪುವ ಹಾದಿಯಲ್ಲಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ನಿರ್ದೇಶಕರಾದ ಡಾ|| ಟೆಡ್ರೂಸ್ ಅಧಾನಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ʻನಾವು ಈ ವಿಚಾರದಲ್ಲಿ ಇನ್ನು ಬಹಳ ದೂರ ಸಾಗಬೇಕಿದೆ. ಸದ್ಯ ಲಭ್ಯವಿರುವ ಪರಿಣಾಮಕಾರಿ ಅಂಶಗಳನ್ನು ಉತ್ತಮವಾಗಿ ಬಳಸಿಕೊಳ್ಳುವಂತೆ ನಾವೂ ಎಲ್ಲಾ ದೇಶಗಳಿಗು ಪ್ರೋತ್ಸಾಹಿಸುತ್ತಿದ್ದೇವೆ. ಜನರು ತಂಬಾಕು ಬಳಸುವುದರಿಂದ ದೂರ ಮಾಡಿ ಅವರ ಜೀವ ಉಳಿಸುವುದೇ ನಮ್ಮ ಆದ್ಯ ಕರ್ತವ್ಯʼ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ ತಂಬಾಕು ಉದ್ಯಮವು ಭಾರತ ಸೇರಿದಂತೆ 80 ದೇಶಗಳಲ್ಲಿ ಸರ್ಕಾರದ ಮೇಲೆ ಕೋವಿಡ್ನಿಂದ ಪ್ರಭಾವ ಬೀರಿವೆ ಎಂದು ತಿಳಿಸಿವೆ.ಆದರೆ, ತಂಬಾಕು ಉದ್ಯಮದ ವಾಚ್ಡಾಗ್ STOP ನ ವರದಿಯ ಪ್ರಕಾರ ಭಾರತವು ಆರೋಗ್ಯ ನೀತಿಯನ್ನು ರಕ್ಷಿಸುವ ಪ್ರಯತ್ನಗಳನ್ನು ಹೆಚ್ಚಿಸಿದೆ.
2020 ರಲ್ಲಿ, ಜಾಗತಿಕ ಜನಸಂಖ್ಯೆಯ 22.3 ಪ್ರತಿಶತದಷ್ಟು ಜನರು ತಂಬಾಕು ಬಳಸುತ್ತಿದ್ದಾರೆ ಎಂದು WHO ವರದಿಯು ತೋರಿಸಿದೆ, ಎಲ್ಲಾ 36.7% ಪುರುಷರು ಮತ್ತು 7.8% ಮಹಿಳೆಯರು ತಂಬಾಕು ಬಳಸುತ್ತಿದ್ದಾರೆ.