• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, July 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ರಾಮ ಮಂದಿರದ ಬೆನ್ನಲ್ಲೇ ಇನ್ನೊಂದು ಐತಿಹಾಸಿಕ ತೀರ್ಥ ಕ್ಷೇತ್ರದ ದೇಣಿಗೆಯಲ್ಲಿ ಅಕ್ರಮ : ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ..!

ದೇಣಿಗೆಯ ಹಣದ ವಿಚಾರದಲ್ಲಿ ಅಕ್ರಮದ ವಾಸನೆ ಬಂದ ತಕ್ಷಣವೇ ತನಿಖೆಗೆ ಆದೇಶಿಸಿದ ಸಿಎಂ ಪುಷ್ಕರ್‌ ಸಿಂಗ್‌ ಧಾಮಿ..

ಪ್ರತಿಧ್ವನಿ by ಪ್ರತಿಧ್ವನಿ
July 8, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
Badarinath Kedarnath Temple

Badarinath Kedarnath Temple

Share on WhatsAppShare on FacebookShare on Telegram

ಬೆಂಗಳೂರು : ರಾಮ ಮಂದಿರದ ಬೆನ್ನಲ್ಲೇ ಇದೀಗ ದೇಶದ ಮತ್ತೊಂದು ಐತಿಹಾಸಿಕ ದೇವಾಲಯದಲ್ಲಿ ಕಾಣಿಕೆ ಹುಂಡಿಯ ಹಣದಲ್ಲಿ ಅಕ್ರಮದ ವಾಸನೆ ಎದ್ದಿದೆ.  ಈ ಕುರಿತು ಉನ್ನತ ಮಟ್ಟದ ತನಿಖೆಗಾಗಿ ಮೂವರು ಅಧಿಕಾರಿಗಳ ತಂಡವನ್ನು ಉತ್ತರಾಖಂಡ ಸರ್ಕಾರ ನೇಮಕ ಮಾಡಿದ್ದು, ಇದರಿಂದ ದೇಶದಲ್ಲಿನ ಧಾರ್ಮಿಕ ಕ್ಷೇತ್ರಗಳ ಹಣದ ಸುರಕ್ಷತೆಯ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುವಂತೆ ಮಾಡಿದೆ.

ADVERTISEMENT
Sriramulu : ಡಿಕೆಶಿ ವಿರುದ್ಧ ಶ್ರೀರಾಮುಲು ಸ್ಫೋಟಕ ಆರೋಪ. #pratidhvani

ಪ್ರಮುಖವಾಗಿ ಬದರಿನಾಥ ಕೇದಾರನಾಥ ಟ್ರಸ್ಟ್‌ ಕಮೀಟಿಯ ನಿರ್ವಹಣೆ ಹಾಗೂ ಹಣಕಾಸು ವ್ಯವಹಾರದಲ್ಲಿ ಅವ್ಯವಹಾರದ ದೂರಗಳು ಬಂದ ಹಿನ್ನೆಲೆಯಲ್ಲಿ ದೇವಸ್ಥಾನದ ಆಪ್ತ ಸಹಾಯಕ ಪ್ರಮೋದ್‌ ನೌಟಿಯಾಲ್‌ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.

ತನಿಖೆಯಲ್ಲಿ ಬಯಲಾದ ಸತ್ಯವೇನು..?

ಪ್ರಾಥಮಿಕ ಮೂಲಗಳ ಪ್ರಕಾರ ಆಪ್ತ ಸಹಾಯಕ ತಮ್ಮ ಜವಾಬ್ದಾರಿಯನ್ನು ನಿಭಾಯಿಸುವಲ್ಲಿ ಗಂಭೀರ ಲೋಪಗಳನ್ನು ಎಸಗಿದ್ದಾರೆ. ಈ ಕಾರಣಕ್ಕೆ ಟ್ರಸ್ಟ್‌ ವತಿಯಿಂದ ನೌಟಿಯಾಲ್‌ ಅವರಿಗೆ ಶೋ-ಕಾಸ್‌ ನೀಡಲಾಗಿತ್ತು. ನೋಟಿಸ್‌ಗೆ ನೀಡಿರುವ ಉತ್ತರ ಹಾಗೂ ಇದರ ತನಿಖೆಗಾಗಿ ನೇಮಕ ಮಾಡಿದ್ದ ಸಮಿತಿಯ ವರದಿಯಲ್ಲೂ ಲೋಪಗಳು ಕಂಡು ಬಂದಿವೆ. ಹೀಗಾಗಿ ಇಡೀ ತನಿಖೆಯು ಪೂರ್ಣಗೊಳ್ಳುವವರೆಗೂ ಪ್ರಮೋದ್‌ ನೌಟಿಯಾಲ್‌ ಅವರನ್ನು ಜ್ಯೋತಿರ್ಮಠದ ಟ್ರಸ್ಟ್‌ಗೆ ಕಳುಹಿಸಲಾಗಿದೆ.

ಇದನ್ನೂ ಓದಿ : Wayanad: ವಯನಾಡಿನಲ್ಲಿ ಭೀಕರ ಭೂಕುಸಿತ: 5 ಸಾ**, ಹಲವರು ಸಿಲುಕಿರುವ ಶಂಕೆ

ಇನ್ನೂ ಈ ವಿಷಯವು ಉತ್ತರಾಖಂಡ ಸರ್ಕಾರದ ಗಮನವನ್ನೂ ಸೆಳೆದಿದೆ. ಬದರಿನಾಥ ಧಾಮದಲ್ಲಿ ದೇಣಿಗೆ ಮತ್ತು ಕಾಣಿಕೆಗಳಿಗೆ ಸಂಬಂಧಿಸಿದ ಅಕ್ರಮಗಳನ್ನು ಪರಿಶೀಲಿಸಲು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ನಿರ್ದೇಶನದ ಮೇರೆಗೆ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯು ತನ್ನ ವರದಿ ಮತ್ತು ಶಿಫಾರಸುಗಳನ್ನು 15 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುವಂತೆ ಗಡುವು ನೀಡಲಾಗಿದೆ.

ಸರ್ಕಾರದ ಆದೇಶದಲ್ಲೇನಿದೆ..?

ಹೀಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎರಡೂ ಸಮಿತಿಯವರು ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.  ದೇವಾಲಯದಲ್ಲಿ ಸ್ವೀಕರಿಸಿದ ದೇಣಿಗೆಗಳ ವಿವಿಧ ಅಂಶಗಳು ಮತ್ತು ಅವುಗಳ ನಿರ್ವಹಣೆಯ ಬಗ್ಗೆ ಸಮಿತಿಯು ವಿವರವಾದ ತನಿಖೆ ನಡೆಸಲಿದೆ ಎಂದು ಪ್ರವಾಸೋದ್ಯಮ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬ್ಯಾಲ್ ಆದೇಶ ಹೊರಡಿಸಿದ್ದಾರೆ. ಪ್ರಮುಖವಾಗಿ ಈ  ಸಮಿತಿಯು ತನ್ನ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವ ಮೊದಲು ಟ್ರಸ್ಟ್‌ಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳು, ಹಣಕಾಸಿನ ವಿವರಗಳನ್ನು ಪರಿಶೀಲಿಸುವ ಕಾರ್ಯ ನಡೆಸಲಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Karavali Film Clash : ಕರಾವಳಿ ಟ್ರೇಲರ್ ಲಾಂಚ್ ವೇಳೆ ಗದ್ದಲ ಆಗಿದ್ದು ಈ ಕಾರಣಕ್ಕೆ... #pratidhvani

ಇನ್ನೂ ಈ ಅಕ್ರಮದ ಬಗ್ಗೆ ಸಲ್ಲಿಕೆಯಾಗಿರುವ ದೂರುಗಳು ಮತ್ತು ವಿಷಯದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು, ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆಗಾಗಿ ಈ ನಿರ್ಧಾರ ಮಾಡಲಾಗಿದೆ ಎಂದು ಉತ್ತರಾಖಂಡ ಸರ್ಕಾರ ತಿಳಿಸಿದೆ.

ದೇವಸ್ಥಾನದ ಟ್ರಸ್ಟ್‌ ಹೇಳಿದ್ದೇನು..? 

ದೇಶವಲ್ಲದೆ ವಿದೇಶಗಳಿಂದ ದೇವಾಯಲಯದ ಮೇಲಿನ ನಂಬಿಕೆ ಹುಸಿಯಾಗದಂತೆ ಕಾಪಾಡಿಕೊಳ್ಳುವುದು ನಮ್ಮ ಹೊಣೆಗಾರಿಕೆ. ಅಪಾರ ಭಕ್ತರ ವಿಶ್ವಾಸವನ್ನುಉ ಉಳಿಸಿಕೊಂಡು ಎಲ್ಲವೂ ಪಾರದರ್ಶಕವಾಗಿ ನಡೆಯುವಂತೆ ಹಾಗೂ ಹಣಕಾಸಿನ ವಿಚಾರದಲ್ಲಿ ಯಾವುದೇ ಲೋಪಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ದೇವಸ್ಥಾನ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಹೇಮಂತ್‌ ದ್ವಿವೇದಿ ಅಭಯ ನೀಡಿದ್ದಾರೆ.

ಈಗಾಗಲೇ ದೇಶದಲ್ಲಿನ ದೇವಾಲಯದ ಆಡಳಿತ ಮಂಡಳಿಗಳಿಗೆ ತನಿಖೆಯ ಬಿಸಿ ಮುಟ್ಟಿದ ಸಮಯದಲ್ಲಿಯೇ ಧಾರ್ಮಿಕ ಕ್ಷೇತ್ರಗಳ ನಿರ್ವಹಣೆಯ ಬಗ್ಗೆ ಜನರಲ್ಲಿ ಬೇಸರದ ಛಾಯೆ ಆವರಿಸಿದೆ. ಹೀಗಿರುವಾಗ ಇದೀಗ ಬದರಿನಾಥ – ಕೇದಾರನಾಥ ದೇವಾಲಯದ ದೇಣಿಗೆ ವಿಚಾರದಲ್ಲಿ ಅವ್ಯವಹಾರದ ವಾಸನೆ ಎದ್ದಿರುವುದು ತನಿಖೆಯಲ್ಲಿ ಯಾವೆಲ್ಲ ಅಂಶಗಳು ಪತ್ತೆಯಾಗಲಿವೆ ಎಂಬುವುದು ಸದ್ಯದ ಕುತೂಹಲವಾಗಿದೆ.

Tags: Badarinath Kedarnath TempleBJP GovernmentBKTCBKTC TrustDonation RowFinancial Crimenational newsPratidhvanipushkar singh dhamiUttarakhan Chief Minister
Previous Post

ಭ್ರಷ್ಟ ಅಧಿಕಾರಿಗಳಿಗೆ ಲೋಕಾ ಶಾಕ್: ಇಲ್ಲಿದೆ ಸಂಪೂರ್ಣ ವಿವರ

Next Post

ರಾಮ ಮಂದಿರ ನಿರ್ಮಾಣ ವಿರೋಧಿಸಿದ್ದ ಕಾಂಗ್ರೆಸ್‌ನಿಂದ ಈಗ ರಾಮನ ಹೆಸರಿನಲ್ಲಿ ರಾಜಕೀಯ : ಕಂಗನಾ ವಾಗ್ದಾಳಿ

Related Posts

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ
Top Story

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಗೊಂದಲಕ್ಕೆ ತೆರೆ: KPCL ಅಧಿಕೃತ ಸ್ಪಷ್ಟನೆ

by ಪ್ರತಿಧ್ವನಿ
July 12, 2026
0

ಬೆಂಗಳೂರು: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಬಗ್ಗೆ ಹರಡಿರುವ ಸುದ್ದಿಗಳಿಗೆ ಕರ್ನಾಟಕ ವಿದ್ಯುತ್ ನಿಗಮ ನಿಯಮಿತವು ಅಧೀಕೃತ ಸ್ಪಷ್ಟನೆ ನೀಡಿದೆ. https://youtu.be/bDNDeS0JMK0?si=wll7H9RZqriYtIzB ಈ ಬಗ್ಗೆ ಪ್ರಕಟಣೆ ಹೊರಡಿಸಿರುವ...

Read moreDetails
ಮಗನ ಅಗಲಿಕೆಯ ನೋವಿನಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್. ಜಾನಕಿ

ಮಗನ ಅಗಲಿಕೆಯ ನೋವಿನಲ್ಲೇ ಕೊನೆಯುಸಿರೆಳೆದ ಗಾನಕೋಗಿಲೆ ಎಸ್. ಜಾನಕಿ

July 11, 2026
Boat Tragedy In Vietnam

BREAKING NEWS : ದೋಣಿ ಮುಳುಗಿ 15 ಭಾರತೀಯರ ದುರ್ಮರಣ : ವಿಯೆಟ್ನಾಂ ಪ್ರವಾಸಕ್ಕೆ ತೆರಳಿದ್ದವರು ಮಸಣಕ್ಕೆ..

July 11, 2026
DK Vs HDK

ಕಂಬಳದಿಂದ ವೈಶಿಷ್ಟ್ಯಪೂರ್ಣ ದಸರಾದ ಘನತೆಗೆ ಧಕ್ಕೆ ಬೇಡ : ಸರ್ಕಾರದ ನಡೆಗೆ HDK ವಿರೋಧ..!

July 11, 2026
Janardhan Reddy Vs Naidu

ಜನಾರ್ದನ ರೆಡ್ಡಿಗೆ ನಾಯ್ಡು ಸರ್ಕಾರದ ಶಾಕ್‌ : ಬ್ರಾಹ್ಮಣಿ ಸ್ಟೀಲ್ಸ್‌ಗೆ ನೀಡಿದ್ದ ಜಮೀನು ವಾಪಸ್..!

July 11, 2026
Next Post
Kangana Ranaut Angry

ರಾಮ ಮಂದಿರ ನಿರ್ಮಾಣ ವಿರೋಧಿಸಿದ್ದ ಕಾಂಗ್ರೆಸ್‌ನಿಂದ ಈಗ ರಾಮನ ಹೆಸರಿನಲ್ಲಿ ರಾಜಕೀಯ : ಕಂಗನಾ ವಾಗ್ದಾಳಿ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada