• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ವರದಿಯೇ ಇಲ್ಲದ MSP ಸಮಿತಿಯಿಂದ ಲಕ್ಷ ಲಕ್ಷ ವೆಚ್ಚ : ಏನಾಗ್ತಿವೆ ಮೋದಿ ಸರ್ಕಾರ ರೈತರಿಗೆ ನೀಡಿರುವ ಭರವಸೆಗಳು..?

ಡಜನ್‌ಗಟ್ಟಲೇ ಸಭೆಗಳು ನಡೆದಿದ್ದರೂ ಸಹ ಇದುವರೆಗೂ ಬಯಲಾಗದ ಸಮಿತಿ ಸಭೆಯ ಅಂಶಗಳು...!

ಪ್ರತಿಧ್ವನಿ by ಪ್ರತಿಧ್ವನಿ
July 8, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
PM Modi MSP Price

PM Modi MSP Price

Share on WhatsAppShare on FacebookShare on Telegram

ನವದೆಹಲಿ : ದೇಶದಲ್ಲಿನ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡುವ ವಿಚಾರದಲ್ಲಿ ಇಂದಿಗೂ ಅನ್ನದಾತ ಜಾತಕ ಪಕ್ಷಿಯಂತೆ ಕಾಣುತ್ತಿದ್ದಾನೆ. 2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಹಲವಾರು ನಿರೀಕ್ಷೆಗಳನ್ನು ಹೊಂದಿದ್ದ ರೈತರು ಅದರಲ್ಲೇ ಕಾಲ ಕಳೆಯುವಂತಾಗಿದೆ. ಇನ್ನೂ ಪ್ರಮುಖವಾಗಿ ಖುದ್ದು ಪ್ರಧಾನಿಯೇ ಬೆಂಬಲ ಬೆಲೆ ನೀಡುವ ಬಗ್ಗೆ ಭರವಸೆ ನೀಡಿದ್ದರೂ ಇದುವರೆಗೂ ಕಾರ್ಯರೂಪಕ್ಕೆ ಬರದಿರುವುದು ರೈತರಲ್ಲಿ ನಿರಾಸೆಗೆ ಕಾರಣವಾಗಿದೆ.

ADVERTISEMENT
Student Doubtful Death Case:ಅನುಮಾನಾಸ್ಪದ ರೀತಿಯಲ್ಲಿ ವಿದ್ಯಾರ್ಥಿ ಸಾ*ವು.!  #pratidhvani

ಇದಕ್ಕಾಗಿಯೇ ಸಮಿತಿಯಿದ್ದರೂ ಉಪಯೋಗಕ್ಕೆ ಇಲ್ಲ ಎನ್ನುವ ಸ್ಥಿತಿಯಿದೆ. ಕಾರಣ 54 ಲಕ್ಷ ರೂಪಾಯಿಗಳಷ್ಟು ಹಣವನ್ನು ವಿನಿಯೋಗಿಸಿರುವ ಸಮಿತಿಯು ವರದಿಯನ್ನು ಮಾತ್ರ ಸಿದ್ಧಪಡಿಸಿಲ್ಲ ಎನ್ನುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ. ಸಮಿತಿಯು ಸಭೆಯ ಮೇಲೆ ಸಭೆಗಳನ್ನು ನಡೆಸಿದ್ದು ಬಿಟ್ಟರೆ ಅದರ ಲಾಭವೇನು ಎಂಬುವುದು ತಿಳಿದಿಲ್ಲ. ಅಲ್ಲದೆ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿದರೂ ಸಹ ಈ ಬಗ್ಗೆ ಆರ್‌ಟಿಐ ಅಡಿಯಲ್ಲಿ ಯಾವುದೇ ಮಾಹಿತಿ ಲಭ್ಯವಾಗದಿರುವುದು ವ್ಯವಸ್ಥೆಯ ಬಗ್ಗೆ ಹಲವು ರೀತಿಯ ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ದೇಶದಲ್ಲಿನ ಪ್ರತಿಯೊಬ್ಬ ರೈತ ತಾನು ಬೆಳೆದ ಬೆಳೆಗೆ ಸರ್ಕಾರದಿಂದ ಕನಿಷ್ಠ ಬೆಂಬಲ ಬೆಲೆಯ (MSP) ನಿಗದಿಗಾಗಿ ಹಲವು ವರ್ಷಗಳಿಂದಲೂ ವ್ಯಾಪಕ ಬೇಡಿಕೆ, ಒತ್ತಡಗಳಿದ್ದರೂ ಸಹ ಅದು ಅಧಿಕೃತವಾಗಿ ಜಾರಿಗೆ ಬರದಿರುವುದು ರೈತರ ಆಕ್ರೋಶ ಹೆಚ್ಚಾಗುವಂತೆ ಮಾಡಿದೆ. ಅಲ್ಲದೆ ಈ ಬೇಡಿಕೆಯ ಈಡೇರಿಕೆಗಾಗಿ ಪ್ರತಿಭಟನೆಗಳು ನಿಂತಿಲ್ಲ, ಆದರೆ ಸರ್ಕಾರ ತನ್ನ ಜವಾಬ್ದಾರಿಯನ್ನು ಮಾತ್ರ ಮರೆತಂತೆ ಕಾಣುತ್ತಿದೆ.

ಇದನ್ನೂ ಓದಿ : ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

ಕಳೆದ 2022ರ ಜುಲೈ ತಿಂಗಳ 18ರಂದು ರಚನೆಯಾಗಿರುವ ಬೆಂಬಲ ಬೆಲೆ ನಿಗದಿ ಸಮಿತಿಯು ಒಟ್ಟು ಈವರೆಗೆ 6 ಹಾಗೂ 42 ಉಪ ಸಮಿತಿಗಳ ಸಭೆಗಳನ್ನು ನಡೆಸಿದೆ. ಇನ್ನೂ ಈ ವರ್ಷದ ಸಭೆಯು ಮೇ 14 ರಂದು ಜರುಗಿತ್ತು. ಇದೇ ವಿಚಾರಕ್ಕೆ ಮಾಹಿತಿ ಹಕ್ಕಿನಡಿಯಲ್ಲಿ ಕೇಳಲಾಗಿದ್ದ ಮಾಹಿತಿಗೆ ಕೇಂದ್ರ ಕೃಷಿ ಹಾಗೂ ರೈತ ಕಲ್ಯಾಣದ ಸಚಿವಾಲಯವು ಸಮರ್ಪಕವಾಗಿರುವ ಉತ್ತರವನ್ನು ನೀಡದೆ ಜಾರಿಕೊಂಡಿದೆ.

ಸಮಿತಿಯ ವ್ಯಾಪ್ತಿಗೆ ಸಂಬಂಧಿಸಿದ ಕಾರ್ಯಕಲಾಪಗಳು, ಸಭೆಗಳ ಮಾಹಿತಿಗಳೆಲ್ಲವೂ ಗೌಪ್ಯವಾಗಿರುತ್ತವೆ. ಸಮಿತಿಯ ಸಭೆಗೆ ಅಧ್ಯಕ್ಷರು ಹಾಗೂ ಸದಸ್ಯರಷ್ಟೇ ಭಾಗಿಯಾಗುತ್ತಾರೆ ಎಂದು ನಿರ್ದಿಷ್ಟ ಮಾಹಿತಿಯನ್ನು ನೀಡಲು ಕೇಂದ್ರೀಯ ಸಾರ್ವಜನಿಕ ಮಾಹಿತಿ ಅಧಿಕಾರಿ (Central Public Information Officer) ಮುಂದೆ ಬರಲಿಲ್ಲ.

Karunakar Ex Army Podcast : ಬಿಜೆಪಿಯವ್ರು ಚರಿತ್ರೆಯನ್ನು ಉಳಿಸ್ತಿಲ್ಲಾ, ಅಳಿಸ್ತಿದ್ದಾರೆ.. #pratidhvani #ram

ಅಲ್ಲದೆ ಕಳೆದ ಮೇ 17 ರವರೆಗಿನ ಒಟ್ಟು ಖರ್ಚು 53,97,280 ರೂಪಾಯಿಗಳಾಗಿದ್ದು, ಏಪ್ರಿಲ್ 2 ರಂದು ನಡೆದ ಒಂದೇ ಸಭೆಗೆ 62,380 ರೂ.ಗಳಷ್ಟು ವೆಚ್ಚವಾಗಿದೆ ಎಂಬ ಮಾಹಿತಿ ನೀಡಿದ್ದು, ಸಮಿತಿಯ ಕಾರ್ಯವೈಖರಿಯನ್ನು ಪ್ರಶ್ನಿಸುವಂತೆ ಮಾಡಿದೆ. ಕಳೆದ 2021ರಲ್ಲಿ ರೈತರ ಐತಿಹಾಸಿಕ ಹೋರಾಟದ ಸಮಯದಲ್ಲಿ ಕನಿಷ್ಠ ಬೆಂಬಲ ಬೆಲೆ (Minimum Supporting Price)  ಕೇಂದ್ರ ಸರ್ಕಾರ ಜಾರಿಯ ಬಗ್ಗೆ ಹೇಳಿತ್ತು. ಆದರೆ ಇದುವರೆಗೂ ಯಾವುದೇ ರೀತಿಯ ಘೋಷಣೆಗಳು ಹೊರಬೀಳದಿರುವುದು ರೈತರು ಕೇಂದ್ರ ಸರ್ಕಾರದ ನಡೆಯನ್ನು ಖಂಡಿಸುವ ಸನ್ನಿವೇಶ ನಿರ್ಮಾಣವಾಗಿದೆ.

Tags: agriculture MinistryFormers CropsFormers Demandsformers problemsGovernment of IndiaIndian FormersMinimum Supporting PricemspNarendra ModiPratidhvaniShivaraj Singh Chauhan
Previous Post

ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

Next Post

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

Related Posts

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌
Top Story

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

by ಪ್ರತಿಧ್ವನಿ
July 8, 2026
0

ಬೆಂಗಳೂರು: ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮೂವರನ್ನು ಮಾಧ್ಯಮ ಕಾರ್ಯದರ್ಶಿಯವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಸಿ.ಎಂ.ಡಿ.ಕೆ.ಶಿವಕುಮಾರ್‌ ಅವರ ಜೊತೆ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡಿದ್ದ ಪಿ.ತ್ಯಾಗರಾಜ್‌ ಅವರನ್ನು ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ-1...

Read moreDetails
ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

July 8, 2026
ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

July 8, 2026
TMC ED Raids

ಟಿಎಂಸಿ ಪಕ್ಷಕ್ಕೆ ಇಡಿ ಬಿಗ್‌ ಶಾಕ್‌ : 440 ಕೋಟಿ ಹಣದ ಬ್ಯಾಂಕ್‌ ಅಕೌಂಟ್‌ ಸೀಜ್‌ ; ತನಿಖೆ ಚುರುಕು..!

July 8, 2026
ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

July 8, 2026
Next Post
ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada