• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಟಿಎಂಸಿ ಪಕ್ಷಕ್ಕೆ ಇಡಿ ಬಿಗ್‌ ಶಾಕ್‌ : 440 ಕೋಟಿ ಹಣದ ಬ್ಯಾಂಕ್‌ ಅಕೌಂಟ್‌ ಸೀಜ್‌ ; ತನಿಖೆ ಚುರುಕು..!

112 ಕೋಟಿ ರೂಪಾಯಿ ಎಂಬ್ರೇಸರ್‌ ಲೆಗಸಿ 600 ವಿಮಾನ, ಆಗಸ್ಟಾ 109 ಎಸ್‌ಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಹೂಡಿಕೆ ಆರೋಪ..!

ಪ್ರತಿಧ್ವನಿ by ಪ್ರತಿಧ್ವನಿ
July 8, 2026
in Top Story, ಇದೀಗ, ದೇಶ, ರಾಜಕೀಯ
0
TMC ED Raids

TMC ED Raids

Share on WhatsAppShare on FacebookShare on Telegram

ನವದೆಹಲಿ : ಇಡಿ ಅಧಿಕಾರಿಗಳು ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ 5 ಸ್ಥಳಗಳಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆಯ ಪ್ರಕರಣದ ಭಾಗವಾಗಿ ನಡೆದಿರುವ ದಾಳಿಯಲ್ಲಿ ಟಿಎಂಸಿ ಪಕ್ಷಕ್ಕೆ ಸಂಬಂಧಿಸಿದ ಬ್ಯಾಂಕ್‌ ಖಾತೆಯನ್ನು ಬ್ಲಾಕ್‌ ಮಾಡಲಾಗಿದ್ದು, ಪ್ರಮುಖವಾಗಿ 44.20 ಕೋಟಿ ರೂಪಾಯಿ ಹಣದ ಮೇಲೆ ನಿಗಾವಹಿಸಿದೆ.

ADVERTISEMENT
Toxic Tabaahi 🔥 | Toxic | Rocking Star Yash & Kiara Advani | Vishal Mishra | Yogaraj Bhat

ಅಕ್ರಮ ಹಣ ವರ್ಗಾವಣೆಯ ಕಾಯ್ದೆ  17 (1-A) ಅಡಿಯಲ್ಲಿ ನಡೆದಿರುವ ಈ ದಾಳಿಯಲ್ಲಿ ಟಿಎಂಸಿ ಪಕ್ಷದ ಖಾತೆಗಳ ಮೂಲಕ ಅಕ್ರಮವಾಗಿ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂಬ ಆರೋಪದ ಮೇಲೆ ಈ ದಾಳಿಯನ್ನು ಇಡಿ ನಡೆಸಿದೆ. ಇನ್ನೂ ಇಡೀ ದಾಳಿಯ ಕ್ಷೇತ್ರವ್ಯಾಪ್ತಿಯು ಏವಿಯೇಷನ್‌ಗೆ ಸಂಬಂಧಿಸಿದ ಕೇರ್‌ವೆಲ್‌ ಗ್ರೂಪ್‌ ಆಫ್‌ ಕಂಪನಿಯ ಸ್ಥಳಗಳಿಗೆ ವಿಸ್ತರಿಸಿದೆ.

ಕಳೆದ 2023 ರಿಂದ ಜೂನ್‌ 2026ರ ಅವಧಿಯಲ್ಲಿ ಬರೊಬ್ಬರಿ 160 ಕೋಟಿ ರೂಪಾಯಿ ಹಣವನ್ನು ಟಿಎಂಸಿ ಖಾತೆಯಿಂದ ಕೇರ್‌ವೆಲ್‌ ಏವಿಯೇಷನ್‌ ಇಂಡಿಯಾ ಪ್ರೈವೆಟ್‌ ಲಿಮಿಟೆಡ್‌ ಗ್ರೂಪ್‌ಗೆ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ಬಯಲಾಗಿರುವ ಬಗ್ಗೆ ಮೂಲಗಳು ತಿಳಿಸಿವೆ. ಅಲ್ಲದೆ ಈ ಏವಿಯೇಷನ್‌ ಕಂಪನಿಯಿಂದ 82.96 ಕೋಟಿ ರೂಪಾಯಿ ಹಣವನ್ನು ಇನ್ನೊಂದು ನೂತನವಾಗಿ ಆರಂಭವಾಗಿರುವ ಸಂಸ್ಥೆಗೆ ವರ್ಗಾಯಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಕೇಂದ್ರ ವಿತ್ತ ಸಚಿವಾಲಯದ ಭಾಗವಾಗಿರುವ ಸಂಸ್ಥೆಯೊಂದು ಅದು ಕೂಡ ರಾಜಕೀಯ ಪಕ್ಷವೊಂದರ ಆದಾಯ, ಖರ್ಚು ವೆಚ್ಚಗಳ ವಿಚಾರದಲ್ಲಿ ಇದೇ ಮೊದಲ ಬಾರಿಗೆ ದಾಳಿ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ : Shapoor Zadran: ದೆಹಲಿಯಲ್ಲಿ ಅಫ್ಘಾನ್ ಮಾಜಿ ವೇಗಿ ಶಪೂರ್ ಝದ್ರಾನ್ ನಿಧ**

ಈ ದಾಳಿಯಲ್ಲಿ ಪತ್ತೆಯಾಗಿರುವ ಅಂಶಗಳ ಪ್ರಕಾರ, ದಾಳಿಗೊಳಗಾದ ಕಂಪನಿಯು 112 ಕೋಟಿ ರೂಪಾಯಿ ವೆಚ್ಚಗಳಲ್ಲಿ ಎಂಬ್ರೇಸರ್‌ ಲೆಗಸಿ 600 ವಿಮಾನ ಹಾಗೂ ಆಗಸ್ಟಾ 109 ಎಸ್‌ಪಿ ಹೆಲಿಕಾಪ್ಟರ್ ಖರೀದಿಯಲ್ಲಿ ಹೂಡಿಕೆ ಮಾಡಲಾಗಿದೆ. ಇದಲ್ಲದೆ ಹೀಗೆ ಖರೀದಿಸಿದ್ದ ಹೆಲಿಕಾಪ್ಟರ್‌, ವಿಮಾನವನ್ನು ಬಾಡಿಗೆ ಆಧಾರದಲ್ಲಿ ಇದೇ ಟಿಎಂಸಿ ಪಕ್ಷಕ್ಕೆ ನೀಡಲಾಗಿತ್ತು ಎಂಬ ಅಂಶ ಬಯಲಾಗಿದೆ. ಮುಖ್ಯವಾಗಿ ಪಕ್ಷದ ಖಾತೆಯಿಂದ ನಡೆದ ವಹಿವಾಟುಗಳು ಅನುಮಾನ ಹುಟ್ಟಿಸುವಂತಿದ್ದು, ನೈಜತೆಯನ್ನು ಮುಚ್ಚಿಡುವ ಉದ್ದೇಶವನ್ನು ಹೊಂದಿವೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.

Street vendors :  ಮನೆ ಕಟ್ಟಿಸುತ್ತಿದ್ದೇನೆ ದಂಡ ಹಾಕಿದ್ದಾರೆ.!   #pratidhvani

ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೈಗೊಂಡಿರುವ ದಾಳಿ ಹಾಗೂ ತನಿಖೆಯು ಅಕ್ರಮ ಹಣ ವರ್ಗಾವಣೆ ಕಾಯ್ದೆ 2002ರ ಅನ್ವಯ ನಡೆದಿದೆ. ಅಲ್ಲದೆ ದೂರಿನ ಆಧಾರದ ಮೇಲೆಯೇ ಇಡಿ ದಾಳಿ ನಡೆದಿರುತ್ತದೆ. ಆದರೆ ಇದುವರೆಗೂ ದಾಳಿ ನಡೆದು ತನಿಖೆಯಲ್ಲಿ ಬಯಲಾದ ವಿಚಾರವೆಲ್ಲ ಪ್ರಾಥಮಿಕವಾಗಿ ಲಭ್ಯವಾಗಿರುವ ಮಾಹಿತಿಯಾಗಿದೆ. ಈ ಇಡೀ ದಾಳಿಯ ವಿಚಾರದಲ್ಲಿ ದೂರಿನ ಅಂಶಗಳೇನು ಎನ್ನುವುದು ಪ್ರಶ್ನೆಯಾಗಿದೆ.

ಕಳೆದ ಕೆಲ ದಿನಗಳಿಂದಲೂ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳೂ ಸಹ ಈ ದಾಳಿಯ ಭಾಗವಾಗಿರುವುದನ್ನು ಇಲ್ಲಿ ತಳ್ಳಿ ಹಾಕುವಂತಿಲ್ಲ. ತೃಣಮೂಲ ಕಾಂಗ್ರೆಸ್‌ ಅಧಿಪತ್ಯಕ್ಕೆ ಅಂತ್ಯ ಹಾಡುವ ಮೂಲಕ ಭರ್ಜರಿ ಬಹುಮತದಿಂದ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಟಿಎಂಸಿಯನ್ನು ಗುರಿಯಾಗಿಸಲಾಗುತ್ತಿದೆ ಎಂಬ ಆರೋಪಗಳ ನಡುವೆ ಈ ದಾಳಿ ನಡೆದಿದೆ. ಹೀಗಾಗಿ ಟಿಎಂಸಿ ಹೋಳಾಗಿರುವ ಸನ್ನಿವೇಶದಲ್ಲಿ ನಡೆದಿರುವ ಈ ಸಮಯದಲಿ ನಡೆದಿರವು ಈ ದಾಳಿಯು ಹಲವು ರೀತಿಯ ಚರ್ಚೆಗಳಿಗೆ ನಾಂದಿ ಹಾಡಿದೆ.

Tags: Aero PlaneAugusta HelicopterBank Account SeizedBJP governementChoperED raidsEnforecement DirectorateGovernment of IndiaMamata BanerjeePratidhvaniTMCTrinmool Congresswest bengal politics
Previous Post

ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

Next Post

ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

Related Posts

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌
Top Story

ಮುಖ್ಯಮಂತ್ರಿ ಸಚಿವಾಲಯಕ್ಕೆ ಮೂವರು ನೂತನ ಮಾಧ್ಯಮ ಕಾರ್ಯದರ್ಶಿಗಳ ನೇಮಕ‌

by ಪ್ರತಿಧ್ವನಿ
July 8, 2026
0

ಬೆಂಗಳೂರು: ಮುಖ್ಯಮಂತ್ರಿಯವರ ಸಚಿವಾಲಯಕ್ಕೆ ಮೂವರನ್ನು ಮಾಧ್ಯಮ ಕಾರ್ಯದರ್ಶಿಯವರನ್ನು ನೇಮಕ ಮಾಡಿ ಆದೇಶಿಸಲಾಗಿದೆ. ಸಿ.ಎಂ.ಡಿ.ಕೆ.ಶಿವಕುಮಾರ್‌ ಅವರ ಜೊತೆ ಮಾಧ್ಯಮ ಸಲಹೆಗಾರರಾಗಿ ನೇಮಕಗೊಂಡಿದ್ದ ಪಿ.ತ್ಯಾಗರಾಜ್‌ ಅವರನ್ನು ಮುಖ್ಯಮಂತ್ರಿಯವರ ಮಾಧ್ಯಮ ಕಾರ್ಯದರ್ಶಿ-1...

Read moreDetails
PM Modi MSP Price

ವರದಿಯೇ ಇಲ್ಲದ MSP ಸಮಿತಿಯಿಂದ ಲಕ್ಷ ಲಕ್ಷ ವೆಚ್ಚ : ಏನಾಗ್ತಿವೆ ಮೋದಿ ಸರ್ಕಾರ ರೈತರಿಗೆ ನೀಡಿರುವ ಭರವಸೆಗಳು..?

July 8, 2026
ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

ರೀಲ್‌ನಲ್ಲಷ್ಟೇ ಅಲ್ಲ, ರಿಯಲ್‌ನಲ್ಲೂ ಪವನ್‌ ಕಲ್ಯಾಣ್ ಹೀರೋ!

July 8, 2026
ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

July 8, 2026
ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

ಕಿಕ್ಕೇರಿಸಿದ ಟಾಕ್ಸಿಕ್‌ ತಬಾಹಿ ಸಾಂಗ್! ಯಶ್-ಕಿಯಾರ ಕೆಮಿಸ್ಟ್ರಿ ಸಖತ್‌ ವರ್ಕೌಟ್

July 8, 2026
Next Post
ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

ಫುಟ್‍ಬಾಲ್ ಜಗತ್ತಿನ ಅಧಿಪತಿಯ ಕರಾಳ ಕ್ಷಣಕ್ಕೆ ಸಾಕ್ಷಿಯಾದ ಆ ಸೋಲು..!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada