ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಈಗ ಏನೇ ಮಾತನಾಡಿದರು ಸುದ್ದಿಯಲ್ಲಿ ಇರ್ತಾರೆ. ಸದ್ಯ ಈಗ ಕಾನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಬ್ಯುಸಿಯಾಗಿರುವ ಅನುರಾಗ್ ಫ್ರಾನ್ಸ್ಲ್ಲಿದ್ದಾರೆ. ಇನ್ನು ಈ ಫಿಲಂ ಫೆಸ್ಟಿವಲ್ನಲ್ಲಿ ಅನುರಾಗ್ ಕಶ್ಯಪ್ ನಿರ್ದೇಶನದ ಕೆನಡಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ ಕಶ್ಯಪ್ ಕಾಲಿವುಡ್ ಸ್ಟಾರ್ ನಟನ ಬಗ್ಗೆ ಬೇಸರವನ್ನ ವ್ಯಕ್ತಪಡಿಸಿದ್ದಾರೆ
ಈ ಬಗ್ಗೆ ಮಾತನಾಡಿರುವ ಅವರು ಈ ಸಿನಿಮಾದ ಹೆಸರಿಗೂ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ಅವರಿಗೂ ಸಂಬಂಧವಿದೆ ಅಂತ ಹೇಳಿ ಎಲ್ಲರನ್ನ ಅಚ್ಚರಿಗೆ ದೂಡಿದ್ದಾರೆ. ಇದೇ ವೇಳೆ ವಿಕ್ರಮ್ ಅವರನ್ನ ಕೆನಡಿ ಅಂತ ಕರೆಯುತ್ತಾರೆ ಎಂದು ಅನುರಾಗ್ ತಿಳಿಸಿದ್ದಾರೆ.
ಇನ್ನು ಅನುರಾಗ್ ಕಶ್ಯಪ್ ಅವರ ನೇತೃತ್ವದಲ್ಲಿ ಮೂಡಿ ಬಂದಿರುವ ಕೆನಡಿ ಸಿನಿಮಾದಲ್ಲಿ ರಾಹುಲ್ ಭಟ್, ಸನ್ನಿ ಲಿಯೋನ್ ಮತ್ತು ಅಭಿಲಾಷ್ ಥಪ್ಲಿಯಾಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ನಿದ್ರಾಹೀನತೆಯ ಸಮಸ್ಯೆಯಲ್ಲಿ ಇರುವ ಮಾಜಿ ಪೋಲೀಸ್ ಸುತ್ತ ಸುತ್ತುವ ಕಥಾ ಹಂದರವನ್ನ ಈ ಸಿನಿಮಾ ಹೊಂದಿದೆ. ಈ ಸಿನಿಮಾದ ಬಗ್ಗೆ ಮಾತನಾಡಿದ ನಿರ್ದೇಶಕ ಅನುರಾಗ್ ಕಶ್ಯಪ್, ನಟ ರಾಹುಲ್ ಭಟ್ ಈ ಸಿನಿಮಾಗೆ ಮೊದಲ ಆಯ್ಕೆ ಆಗಿರಲಿಲ್ಲ ಎನ್ನುವ ವಿಚಾರವನ್ನ ಬಹಿರಂಗ ಪಡಿಸಿದ್ದಾರೆ. ‘ನಾನು ಈ ಸಿನಿಮಾಗೆ ಸ್ಟ್ರಿಪ್ಟ್ ಮಾಡುವಾಗ ಒಬ್ಬ ಪ್ರಮುಖ ಸ್ಟಾರ್ ನಟನನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದೆ. ಅದಕ್ಕಾಗಿಯೇ ಈ ಚಿತ್ರಕ್ಕೆ ಕೆನಡಿ ಎಂದು ಟೈಟಲ್ ಇಟ್ಟಿದ್ದು’ ಅಂತ ತಿಳಿಸಿದ್ದಾರೆ.
ಯಾವ ನಟ ನಿಮ್ಮ ಮೊದಲ ಆಯ್ಕೆ ಆಗಿತ್ತು ಎಂಬ ಪ್ರಶ್ನೆಗೆ ಉತ್ತರಿಸಿದ ಅನುರಾಗ್ ಕಶ್ಯಪ್, ‘ಆ ಸ್ಟಾರ್ ನಟನ ನಿಕ್ ನೇಮ್ ಕೆನಡಿ. ಹಾಗಾಗಿ ಈ ಸಿನಿಮಾಗೆ ಕೆನಡಿ ಪ್ರಾಜೆಕ್ಟ್ ಅನ್ನೋ ಹೆಸರನ್ನ ಕೊಡಲಾಯಿತು. ಆ ಸ್ಟಾರ್ ನಟನ ಈಗಿನ ಹೆಸರು ಚಿಯಾನ್ ವಿಕ್ರಮ್. ಚಿಯಾನ್ ವಿಕ್ರಮ್ ಅವರ ನಿಜವಾದ ಹೆಸರು ಕೆನಡಿ. ಹೀಗಾಗಿ ಈ ಸಿನಿಮಾದ ಉದ್ದೇಶದಿಂದಾಗಿ ನಾನು ಅವರನ್ನು ಹಲವು ಬಾರಿ ಸಂಪರ್ಕಿಸಿದೆ. ಅವರು ಯಾವತ್ತೂ ನನಗೆ ಸರಿಯಾದ ಪ್ರತಿಕ್ರಿಯೆ ನೀಡಿಲ್ಲ. ಆಗ, ನಾನು ರಾಹುಲ್ರನ್ನು ಭೇಟಿ ಮಾಡಿದೆ. ನಾನು ಸ್ಟ್ರಿಪ್ಟ್ ಕೊಟ್ಟು ಓದಲು ಹೇಳಿದೆ. ಅವರ ಪ್ರತಿಕ್ರಿಯೆ ಉತ್ಸಾಹಭರಿತವಾಗಿತ್ತು. ಸ್ಕ್ರಿಪ್ಟ್ ಓದಿದ ಅವರು ಈ ಪಾತ್ರವನ್ನು ಯಾರು ಮಾಡುತ್ತಿದ್ದಾರೆ? ಎಂದು ಕೇಳಿದ್ರು, ಇದಕ್ಕೆ ನಾನು, ನೀವು ಅದನ್ನು ಮಾಡುತ್ತೀರಾ? ಎಂದು ಕೇಳಿದೆ, ನಾನಾ? ಎಂದು ಕೇಳಿದರು. ಹೌದು ಅಂತ ಹೇಳಿದೆ. ಹಾಗಾಗಿ ಈ ಸಿನಿಮಾ ಈಗ ಮೂಡಿ ಬಂದಿದೆ ಎಂದು ಹೇಳಿಕೆಯನ್ನ ನೀಡಿದ್ದಾರೆ.
ಸದ್ಯದ ಮಟ್ಟಿಗೆ ಅನುರಾಗ ಕಶ್ಯಪ್ ಅವರ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಈ ಬಗ್ಗೆ ಭಿನ್ನ ವಿಭಿನ್ನವಾದ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗ್ತಾ ಇವೆ.