ಚಿತ್ರದುರ್ಗದಲ್ಲಿ (Chitrdurga) ಬಿಜೆಪಿ ನಾಯಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA basana gowda Patil yatnal) ಹೇಳಿಕೆ ಖಂಡಿಸಿ ರಾಷ್ಟ್ರೀಯ ಬಸವದಳದಿಂದ ಪ್ರತಿಭಟನೆ ನಡೆಸಲಾಗಿದೆ.ನಗರದ ಬಸವ ಮಂಟಪದಿಂದ ಡಿಸಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯ್ತು.

ವಕ್ಫ್ (Waqf) ಹೋರಾಟದ ವೇಳೆ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬಸವಣ್ಣನವರ ಕುರಿತು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. ಇದೆ ರೀತಿ ವಕ್ಫ್ ಬೋರ್ಡ್ ನಿಮ್ಮ ಆಸ್ತಿಯನ್ನು ಕಬಳಿಸುತ್ತಿದ್ದರೂ ನೀವು ಮನೆಯಿಂದ ಹೊರಬಂದಿಲ್ಲವಾದ್ರೆ, ಬಸವಣ್ಣ ನವರ (Basavanna) ರೀತಿ ನದಿಗೆ ಹಾರಿಕೊಳ್ಳಬೇಕಾಗುತ್ತೆ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು.
ಹೀಗಾಗಿ ಶಾಸಕರ ಈ ಹೇಳಿಕೆಯನ್ನು ವಿರೋಧಿಸಿ ಇಂದು ರಾಷ್ಟ್ರೀಯ ಬಸವ ಬಳಗದಿಂದ ಹೋರಾಟ ಮಾಡಲಾಗಿದ್ದು, ಕೂಡಲೇ ಯತ್ನಾಳ್ ರನ್ನು ಶಾಸಕ ಸ್ಥಾನದಿಂದ ವಜಾ ಮಾಡುವಂತೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.