ಕೆಲವೊಮ್ಮೆ ಕೆಲವೊಂದು ಸಾಹಸಗಳಿಗೆ ವಯಸ್ಸಿನ ಅಂತರವಿರುವುದಿಲ್ಲ ಆದರೆ ಇನ್ನೂ ಕೆಲವರು ಹದಿಹರೆಯದಲ್ಲೂ ತಮ್ಮಿಂದ ಸಾಧ್ಯವಾಗದೆ ಇರುವುದು ಯಾವುದು ಇಲ್ಲ ನಿಮ್ಮಂತೆ ಬದುಕುತ್ತಾರೆ. ಹೀಗೆ ಜೀವನ ಸಾಗಿಸುವವರು ಇಂದಿನ ತಲೆಮಾರಿನ ಯುವಕ ಯುವತಿಯರು ನಾಚುವಂತಹ ಅದ್ಭುತವಾದ ಸಾಹಸಗಳನ್ನು ಮಾಡುತ್ತಲೇ ಇರುತ್ತಾರೆ ಅಂತಹ ಸಾಹಸಿಗಳು ಮುಂದಿನ ಪೀಳಿಗೆಗೆ ಮಾದರಿಯಾಗಿ ಇರುತ್ತಾರೆ.

ಇನ್ನು ಇಂತಹ ಸಾಹಸಿಗಳು ಕೇವಲ ವೃತ್ತಿಪರ ಸಾಹಸಿಗಳಾಗಿ ಮಾತ್ರ ಇರ್ತಾರೆ ಅಂತ ನೀವೇನಾದ್ರೂ ಅಂದುಕೊಂಡರೆ ಅದು ನಿಮ್ಮ ತಪ್ಪು ಕಲ್ಪನೆ ಆಗಿರುತ್ತೆ. ಹೌದು ಇತ್ತೀಚಿಗೆ ವೃತ್ತಿಪರಲ್ಲದವರು ಕೂಡ ಅದ್ಭುತವಾದ ಮೂಲಕ ಜನಸಾಮಾನ್ಯರ ಹುಬ್ಬೆರುವಂತೆ ಮಾಡುತ್ತಾರೆ.

ಅದರಲ್ಲೂ ನಾವು ಇವತ್ತು ಹೇಳೋದಕ್ಕೆ ಹೊರಟಿರೋದು 70ರ ಹರೆಯದ ಕಾಂಗ್ರೆಸ್ ನಾಯಕ ಹಾಗೂ ಆರೋಗ್ಯ ಸಚಿವರು ಒಬ್ಬರ ಕಥೆ. ಹೌದು ಇವರು ವಯಸ್ಸು 70 ಹೆಸರು ಟಿ ಎಸ್ ಸಿಂಗ್ ದಿಯೋ ಇವರು ಛತ್ತೀಸ್‌ಘಡದ ಆರೋಗ್ಯ ಸಚಿವರು ಇದೀಗ ಇವರ ಸಾಹಸ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಆಸ್ಟ್ರೇಲಿಯಾದಲ್ಲಿ ಸ್ಕೈ ಡೈವಿಂಗ್ ಮಾಡುವ ಮೂಲಕ ನೆಟ್ಟಿಗರು ಹಾಗೂ ತಮ್ಮ ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದ್ದಾರೆ. ಅನುಭವಿ ಮಾರ್ಗದರ್ಶಕರ ನೆರವಿನೊಂದಿಗೆ ಸ್ಕೈ ಡೈವ್ ಮಾಡುವ ಮೂಲಕ ತಮ್ಮ ಜೀವನೋತ್ಸಾಹ ಎಂತಹದ್ದು ಎಂಬುದನ್ನ ಈ ಕೈ ನಾಯಕ ತೋರಿಸಿಕೊಟ್ಟಿದ್ದಾರೆ.


ಮಾರ್ಗದರ್ಶಕರ ಸೂಚನೆಯಂತೆ ಟಿಎಸ್ ಸಿಂಗ್ ಸ್ಕೈ ಡೈ ಸೂಟ್ ಅನ್ನ ಧರಿಸಿದ್ರುವ ಸ್ಕೈ ಡೈವ್ ಸುರಕ್ಷತಾ ಕ್ರಮಗಳನ್ನು ಪಾಲಿಸಿ ಮಾರ್ಗದರ್ಶಕರ ಸೂಚನೆಯಂತೆ ಸ್ಕೈ ಡೈವ್ ಮಾಡಿದ್ದಾರೆ.

ಟಿಎಸ್ ಸಿಂಗ್ ಈ ಸಾಹಸವನ್ನು ಚತ್ತೀಸಘಡ ಸಿಎಂ ಭೂಪೇಶ್ ಬಾಗೆಲ್ ಅವರು ಮೆಚ್ಚಕೊಂಡಿದ್ದಾರೆ. “ಮಹಾರಾಜ್ ಸಾಬ್ ನೀವು ಅತ್ಯುತ್ತಮ ಮೈಲಿಗಲ್ಲನ್ನ ಸಾಧಿಸಿದ್ದೀರಿ. ನಿಮ್ಮ ಈ ಜೀವನ ಉತ್ಸಾಹ ಯಾವತ್ತೂ ಹೀಗೆ ಉತ್ತುಂಗದಲ್ಲಿರಲಿ ಅಂತ ಟ್ವೀಟ್ ಮಾಡಿದ್ದಾರೆ. ಇನ್ನು ಟಿ.ಎಸ್. ಸಿಂಗ್ ಅವರ ಈ ಸಾಧನೆಗೆ ಹಲವು ನಾಯಕರು, ಬೆಂಬಲಿಗರು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಉತ್ಸಾಹ ಚಿಲುಮೆಯಾಗಿ, ತೋರಿದ ಧೈರ್ಯ ಸಾಹಸ ಎಲ್ಲರಿಗೂ ಮಾದರಿ ಎಂದಿದ್ದಾರೆ.


ಒಟ್ಟಾರೆಯಾಗಿ ಟಿಎಸ್ ಸಿಂಗ್ ಅವರ ಈ ಸಾಧನೆಗೆ ಛತ್ತೀಸ್ಗಡದ ರಾಜಕಾರಣಿಗಳು ಸಾರ್ವಜನಿಕರು ಅಭಿಮಾನಿಗಳು ವ್ಯಾಪಕವಾದ ಮೆಚ್ಚುಗೆ ಹಾಗು ಅಭಿನಂದನೆಗಳನ್ನು ಸಲ್ಲಿಸುತ್ತಿದ್ದಾರೆ