Tag: Chikkamagalur District

ಕಾಂಗ್ರೆಸ್ಸಿಗರು ಕಳ್ಳ ನಾಟಕ ಆಡುತ್ತಿದ್ದಾರೆ: ಸಚಿವ ಆರ್‌. ಅಶೋಕ್‌

ಕಾಂಗ್ರೆಸ್ಸಿಗರು ಕಳ್ಳ ನಾಟಕ ಆಡುತ್ತಿದ್ದಾರೆ: ಸಚಿವ ಆರ್‌. ಅಶೋಕ್‌

ರಾಜಕಾರಣಿಗಳು, ಮಂತ್ರಿಗಳು, ಶಾಸಕರನ್ನ ಕರೆದುಕೊಂಡು ಹೋಗಬೇಡಿ. ಅಧಿಕಾರಿಗಳಷ್ಟೆ ಹೋಗಿ ಬೆಳೆ ಹಾನಿ ಬಗ್ಗೆ ಮಾಹಿತಿ ಸಂಗ್ರಹಿಸಿ ಎಂದು ಅಧಿಕಾರಿಗಳಿಗೆ ಚಿಕ್ಕಮಗಳೂರಲ್ಲಿ ಕಂದಾಯ ಸಚಿವ ಆರ್.ಅಶೋಕ್ ಸೂಚನೆ ನೀಡಿದ್ದಾರೆ ...

ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ 4ನೇ ತರಗತಿ ವಿದ್ಯಾರ್ಥಿ ಮನವಿ: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

ದತ್ತಾತ್ರೇಯ ಪೀಠ ವಿವಾದ: ಹೈ ಕೋರ್ಟ್ ಆದೇಶದಲ್ಲಿ ಇರುವುದಾದರು ಏನು ?

ಚಿಕ್ಕಮಗಳೂರು ಜಿಲ್ಲೆಯ ದತ್ತಾತ್ರೇಯ ಪೀಠದಲ್ಲಿ ಪೂಜಾ ವಿಧಿ ವಿಧಾನ ನೆರವೇರಿಸಲು ಮುಸ್ಲಿಂ ಮೌಲ್ವಿ ಸೈಯದ್ ಗೌಸ್ ಮೊಹಿದ್ದೀನ್ ಅವರನ್ನು ನೇಮಿಸಿ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು 2018ರಲ್ಲಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ ಶ್ರೀಗುರು ದತ್ತಾತ್ರೇಯ ಪೀಠ ದೇವಸ್ಥಾನ ಸಂವರ್ಧನಾ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ ವಿಚಾರಿಸಿ ತೀರ್ಪು ಪ್ರಕಟಿಸಿದೆ. ಈ ವೇಳೆ ಧಾರ್ಮಿಕ ದತ್ತಿ ಆಯುಕ್ತರು 2018ರ ಮಾರ್ಚ್ 19ರಂದು ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿದ ಪೀಠ, ಪ್ರಕರಣವನ್ನು ರಾಜ್ಯ ಸರ್ಕಾರ ಹೊಸದಾಗಿ ಕಾನೂನು ರೀತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಈ ಕುರಿತು ಹಿಂದೆ ಉನ್ನತ ಮಟ್ಟದ ಸಮಿತಿ ನೀಡಿದ್ದ ವರದಿಯನ್ನು ಪರಿಗಣಿಸಬಾರದು ಎಂದು ನಿರ್ದೇಶಿಸಿತು. ಈ ಪ್ರಕರಣ ರಾಜ್ಯದಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿದ ಪ್ರಕರಣವಾಗಿತ್ತು. ಬಿಜೆಪಿ ಚಿಕ್ಕಮಗಳೂರು ಕಡೆ ತನ್ನ ಬೇರು ಗಟ್ಟಿಗೊಳಿಸಲು ಈ ಪ್ರಕರಣವನ್ನು ಬಳಸಿಕೊಂಡಿತ್ತು. ಮತ್ತು ಅದರಲ್ಲಿ ಬಿಜೆಪಿಯವರು ಯಶಸ್ವಿ ಕೂಡ ಆಗಿದ್ದರು. ಹೀಗಾಗಿ ಈ ಪ್ರಕರಣದ ಕುರಿತು ಇತ್ತೀಚೆಗೆ ಹೊರ ಬಿದ್ದ ತೀರ್ಪಿನ ಮುಖ್ಯಾಂಶಗಳು ʻಪ್ರತಿಧ್ವನಿʼ ಓದುಗಾರರಾದ ನೀವು ತಿಳಿದುಕೊಳ್ಳುವ ಅಗತ್ಯವಿದೆ. ತೀರ್ಪಿನ ಮುಖ್ಯಾಂಶಗಳು :  •2010ರಲ್ಲಿ ಸುಪ್ರೀಂಕೋರ್ಟ್‌ಗೆ ಧಾರ್ಮಿಕ ದತ್ತಿ ಆಯುಕ್ತರು ಸಲ್ಲಿಸಿರುವ ವರದಿಯಲ್ಲಿ ಒಟ್ಟು 1015 ಜನರಿಂದ ಹೇಳಿಕೆಗಳನ್ನು ಪಡೆಯಲಾಗಿದೆ. ಅವರಲ್ಲಿ ಬಹುತೇಕ ಮಂದಿ ಹಿಂದು ಹಾಗೂ ಮುಸ್ಲಿಂ ಸಮುದಾಯದ ಇಬ್ಬರೂ ಪೂಜೆ ಹಾಗೂ ಪ್ರಾರ್ಥನೆಗಳನ್ನು ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ. ಈ 1015 ಜನರಲ್ಲಿ 1969 ರಿಂದ  1975ರವರೆಗೆ ಮುಜಾವರ್ ಆಗಿದ್ದ ಎಂ.ಎನ್. ಬಾಷಾ ಅವರ ಹೇಳಿಕೆಯೂ ಇದ್ದು, ದೇವಾಲಯದಲ್ಲಿದ್ದ ಪಾದುಕೆಗಳನ್ನು ಬ್ರಾಹ್ಮಣ ಅಥವಾ ಲಿಂಗಾಯತ ಅರ್ಚಕರು ಅವರ ಸಂಪ್ರದಾಯದ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಜತೆಗೆ, ಹಳೆಯ ಪದ್ಧತಿಯನ್ನೇ ಮುಂದುವರಿಸಿಕೊಂಡು ಹೋಗಬೇಕೆಂದು ಬಾಷಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. • ದಾಖಲೆಗಳ ಪ್ರಕಾರ ಮೈಸೂರು ಮಹಾರಾಜರು ದತ್ತಾತ್ರೇಯ ದೇವರು ಹಾಗೂ ಬಾಬಾ ಬುಡನ್ ದರ್ಗಾ ಎರಡಕ್ಕೂ ಪ್ರತ್ಯೇಕವಾಗಿ ದತ್ತಿ ಹಾಗೂ ಅನುದಾನಗಳನ್ನು ನೀಡಿದ್ದಾರೆ. 1995ರ ಬಳಿಕ ಇನಾಮು ನಿಷೇಧಗೊಂಡ ಬಳಿಕ ಪ್ರತ್ಯೇಕ ತಸ್ತಿಕ್ ನಿಗದಿಪಡಿಸಲಾಗಿದೆ. ಆದರೆ, ಸರ್ಕಾರ ಪೂಜಾ ವಿಧಿ ವಿಧಾನ ಪೂರೈಸಲು ಮುಜಾವರ್ ನೇಮಕ ಮಾಡಿ, ಅವರಿಗೆ ಮಾತ್ರ ಗುಹೆಯೊಳಗೆ ಪ್ರವೇಶಿಸಲು ಹಾಗೂ ಹಿಂದು ಮತ್ತು ಮುಸ್ಲಿಮರಿಬ್ಬರಿಗೂ ತೀರ್ಥ ವಿತರಿಸಲು ಅವಕಾಶ ಕಲ್ಪಿಸಲಾಗಿದ್ದು, ಪಾದುಕೆಗಳಿಗೆ ಹೂವುಗಳನ್ನಿಡಲು ಹಾಗೂ ನಂದಾದೀಪ ಬೆಳಗಿಸಲು ಅವಕಾಶ ನೀಡಲಾಗಿದೆ. ಈ ವಿಚಾರಗಳು ಮುಸ್ಲಿಮರ ಆಚರಣೆಗಳಿಗೆ ವಿರುದ್ಧವಾಗಿವೆ. ಏಕೆಂದರೆ, ಇಸ್ಲಾಂ ಧರ್ಮದಲ್ಲಿ ವಿಗ್ರಹ ಆರಾಧನೆಗೆ ಮಾನ್ಯತೆ ಇಲ್ಲ. •ಮೊದಲನೆಯದಾಗಿ, 2018ರ ಮುಜಾವರ್ ನೇಮಿಸುವ ಮೂಲಕ ಸರ್ಕಾರ ಹಿಂದು ಸಂಪ್ರದಾಯದ ಪ್ರಕಾರ ಪೂಜೆ, ಅರ್ಚನೆಗಳನ್ನು ನೆರವೇರಿಸುವ ಹಿಂದು ಸಮುದಾಯದ ಜನರ ಹಕ್ಕುಗಳನ್ನು ಮೊಟಕುಗೊಳಿಸಲಾಗಿದೆ ಎಂದು ಕೆಲವರು ಆರೋಪಿಸಿದ್ದರು. ಎರಡನೆಯದಾಗಿ, ಇಸ್ಲಾಂ ನಂಬಿಕೆಗಳಿಗೆ ವಿರುದ್ದವಾಗಿ ದೇವಾಲಯದಲ್ಲಿರುವ ಪಾದುಕೆಗಳಿಗೆ ಹೂವು ಇಡುವ ಹಾಗೂ ನಂದಾದೀಪ ಬೆಳಗಿಸುವ ಕೆಲಸವನ್ನು ಮುಜಾವರ್ ಮೇಲೆ ಹೇರಲಾಗಿದೆ. ಈ ಅಂಶಗಳು ಸಂವಿಧಾನದ ಪರಿಚ್ಛೇದ 25ರ ಅಡಿಯಲ್ಲಿ ಎರಡೂ ಸಮುದಾಯಗಳಿಗೆ ನೀಡಿರುವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ. • ಧಾರ್ಮಿಕ ದತ್ತಿ ಆಯುಕ್ತರ ಮುಂದೆ ಹೇಳಿಕೆ ನೀಡಿರುವವರಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಹಿಂದು ಹಾಗೂ ಮುಸ್ಲಿಂ ಇಬ್ಬರೂ ಅವರವರ ಸಂಪ್ರದಾಯಗಳ ಪ್ರಕಾರ ಪೂಜೆ ನೆರವೇರಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದರೂ, ಸರ್ಕಾರ ಉನ್ನತ ಮಟ್ಟದ ಸಮಿತಿಯ ವರದಿಯನ್ನೇ ಅಂತಿಮವಾಗಿ ಪರಿಗಣಿಸಿದೆ. • ಇದು ಪೂಜಾ ಸ್ಥಳವನ್ನು ಪರಿವರ್ತಿಸಿದ ಪ್ರಕರಣವಲ್ಲ. ಹಿಂದು ಮತ್ತು ಮುಸ್ಲಿಂ ಇಬ್ಬರೂ ಪೂಜೆ ಮಾಡುವಂತಹ ಸ್ಥಳವಾಗಿದೆ. ಆದರೆ, ಪೂಜೆ ನೆರವೇರಿಸಲು ಮೌಲ್ವಿಯನ್ನು ನೇಮಿಸಲು ಶಿಫಾರಸು ಮಾಡುವ ಮೂಲಕ ಉನ್ನತ ಮಟ್ಟದ ಸಮಿತಿಯು ಪಕ್ಷಪಾತ ಎಸಗಿದೆ. • ನಂಬಿಕೆ ಎಂಬುದು ವೈಯಕ್ತಿಕ ವಿಚಾರ. ಅದು ನಿಜವಾದ ನಂಬಿಕೆ ಎಂಬುದಾಗಿ ಒಪ್ಪಲು ಕೋರ್ಟ್‌ಗೆ ಸೂಕ್ತ ದಾಖಲೆ ದೊರೆತಾಗ ನಂಬುವವರಿಗೆ ಬಿಟ್ಟುಬಿಡಬೇಕಾಗುತ್ತದೆ. ಹಿಂದು ಅಥವಾ ಮುಸ್ಲಿಂ ಪೈಕಿ ಯಾರೇ ಆಗಲಿ ಅವರ ಧಾರ್ಮಿಕ ನಂಬಿಕೆಯನ್ನು ಗುರುತಿಸಬೇಕಾಗುತ್ತದೆ. ಸಂಪ್ರದಾಯವನ್ನು ಸಮಾನವಾಗಿ ಗೌರವಿಸುವುದೇ ಜಾತ್ಯಾತೀತ ಸಂವಿಧಾನದ ಮೌಲ್ಯವಾಗಿರುತ್ತದೆ ಎಂದು ಸುಪ್ರೀಂಕೋರ್ಟ್ ರಾಮಜನ್ಮಭೂಮಿ ಪ್ರಕರಣದಲ್ಲಿ ಆದೇಶಿಸಿದ್ದ ಈ ಮಾತನ್ನು ಪುನಃ ಮತ್ತೆ ಇಲ್ಲಿ ನೆನಪಿಸಿಕೊಳ್ಳಲಾಯ್ತು. ...

Welcome Back!

Login to your account below

Retrieve your password

Please enter your username or email address to reset your password.

Add New Playlist