ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ಗೆ ಇಂದು ನಿರ್ಣಾಯಕ ದಿನವಾಗಿದೆ.ನಟ ದರ್ಶನ್ಗೆ ಮನೆಯೂಟ ಸಿಗುತ್ತಾ..? ಜೈಲು ಊಟನೇ ಖಾಯಂ ಆಗುತ್ತಾ ಎಂಬುದು ಇಂದು ನಿರ್ಧಾರವಾಗಲಿದೆ.
ಇಂದು ಮ್ಯಾಜಿಸ್ಟ್ರೇಟ್ ಕೊಡುವ ತೀರ್ಪು ಜೈಲುವಾಸದಲ್ಲಿ ಇರುವ ದರ್ಶನ್ಗೆ ನಿರ್ಣಾಯಕವಾಗಲಿದೆ. ದರ್ಶನ್ಗೆ ಅತಿಸಾರ ಭೇದಿ, ಬೆನ್ನುನೋವು, ವೈರಲ್ ಫೀವರ್ ಕಾಡುತ್ತಿದೆ. ಹೀಗಾಗಿ ಮನೆ ಊಟದ ವ್ಯವಸ್ಥೆಗೆ ಅವಕಾಶ ಮಾಡಿಕೊಡಿ ಎಂದು ಕೇಳಿಕೊಂಡಿದ್ದರು.
ಆರೋಗ್ಯ ಸಮಸ್ಯೆಯಿಂದ ಹೊರಗಿನ ಊಟ, ಹಾಸಿಗೆ, ಬಟ್ಟೆಗೆ ಮನವಿ ಮಾಡಲಾಗಿತ್ತು. ಸ್ವಂತ ಖರ್ಚಿನಲ್ಲಿ ಎಲ್ಲಾ ಹೊರಗಿನಿಂದ ಊಟಕ್ಕೆ ಮನವಿ ಮಾಡಿರುವ ಅರ್ಜಿ ಸಲ್ಲಿಸಿದ್ದರು. ಸೋಮವಾರ ಅರ್ಜಿಯ ಸಂಪೂರ್ಣ ವಾದ ಪ್ರತಿವಾದ ಆಲಿಸಿದ್ದ ಕೋರ್ಟ್ ತೀರ್ಪನ್ನ ಕಾಯ್ದಿರಿಸಿತ್ತು. ನ್ಯಾ,ವಿಶ್ವನಾಥ್ ಸಿ.ಗೌಡರ್ ಅವರಿಂದ ಈ ಬಗ್ಗೆ ಇಂದು ಆದೇಶ ಹೊರಬೀಳಲಿದೆ. ಈಗಾಗಲೇ ನಟ ದರ್ಶನ್ ಪರ ವಕೀಲ ರಾಘವೇಂದ್ರ ಸುದೀರ್ಘ ವಾದ ಮಂಡನೆ ಮಾಡಿದ್ದರು.
ಕಾನೂನಿನ ಪ್ರಕಾರ ವಿಚಾರಾಣಾಧೀನ ಖೈದಿಗೆ ಹೊರಗಿನ ಊಟ, ಬಟ್ಟೆ, ಹಾಸಿಗೆ ಪಡೆಯಲು ಅರ್ಹರು ಎಂಬುದು ಜೈಲಿನ ನಿಯಮ. ಈ ಅಧಿಕಾರವನ್ನ ಕಿತ್ತುಕೊಂಡರೆ ಮೂಲಭೂತ ಹಕ್ಕು ಉಲ್ಲಂಘನೆ ಆಗುತ್ತದೆ ಎಂದು ವಾದಿಸಿದ್ರು.
ಮತ್ತೊಂದೆಡೆ ಪೊಲೀಸರ ಪರ ಎಸ್ಪಿಪಿ ಪಿ.ಪ್ರಸನ್ನಕುಮಾರ್ ವಾದ ಮಂಡನೆ ಮಾಡಿದ್ರು.ಯಾವುದೇ ವಿಚಾರಾಣಾಧೀನ ಖೈದಿ ಮನೆಯೂಟ ಪಡೆಯಲುಕಾನೂನಿನಲ್ಲಿ ಅವಕಾಶವೇ ಇಲ್ಲ, ಸಿನಿಮ ನಟ ಅನ್ನೋ ಕಾರಣಕ್ಕೆ ಕಾನೂನು ಉಲ್ಲಂಘನೆ ಸಾಧ್ಯವಿಲ್ಲ ಎಂದಿದ್ದರು.
ಅನಾರೋಗ್ಯ ಸಮಸ್ಯೆ ಇದ್ರೆ, ಜೈಲು ಊಟದಲ್ಲೆ ಸ್ವಲ್ಪ ಬದಲಾವಣೆಗೆ ಅವಕಾಶ ಇದೆ.ವೈದ್ಯರ ಸಲಹೆ ಮೇರೆಗೆ ಜೈಲಿನ ಊಟದಲ್ಲೇ ಬದಲಾವಣಗೆ ಐಜಿ ನಿರ್ಧಾರ ಮಾಡ್ತಾರೆ. ದರ್ಶನ್ಗೆ ಅವಕಾಶ ಕೊಟ್ರೆ ಜೈಲಿನಲ್ಲಿರುವ 5 ಸಾವಿರ ಖೈದಿಗಳೂ ಕೇಳ್ತಾರೆ ಎಂಬ ವಾದವು ಜರುಗಿತ್ತು. ಅಂತಿಮವಾಗಿ ಇಂದು ತೀರ್ಪು ಬರಬೇಕಿದೆ.