• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಆಸ್ತಿಗಾಗಿ ಮಗನಿಗೆ ಹತ್ಯೆಗೆ ಗುಂಡಿಟ್ಟಳಾ ಅಮ್ಮ ಅನುರಾಧ..?

ಕೃಷ್ಣ ಮಣಿ by ಕೃಷ್ಣ ಮಣಿ
April 20, 2025
in Top Story, ಕರ್ನಾಟಕ, ಶೋಧ
0
ಆಸ್ತಿಗಾಗಿ ಮಗನಿಗೆ ಹತ್ಯೆಗೆ ಗುಂಡಿಟ್ಟಳಾ ಅಮ್ಮ ಅನುರಾಧ..?
Share on WhatsAppShare on FacebookShare on Telegram

ಆಸ್ತಿ ಹಂಚಿಕೆ ವಿಚಾರಕ್ಕೆ ರಿಕ್ಕಿ ರೈನ ಟಾರ್ಗೆಟ್ ಮಾಡಲಾಗಿದೆ ಎನ್ನಲಾಗಿದೆ.. ರಿಕ್ಕಿ ರೈ ತಂದೆ ಮುತ್ತಪ್ಪ ರೈ ಮೂರು ಜನಕ್ಕೆ ಆಸ್ತಿ ಹಂಚಿಕೆ ಮಾಡಿದ್ದಾರೆ.. ಮೊದಲ ಪತ್ನಿಯ ಇಬ್ಬರು ಮಕ್ಕಳು ಹಾಗೂ 2ನೇ ಪತ್ನಿಗೆ ಆಸ್ತಿ ಹಂಚಿಕೆ ಮಾಡಿದ್ದಾರೆ.. ಮೊದಲ ಪತ್ನಿಯ ಮಕ್ಕಳಾದ ರಿಕ್ಕಿ ಹಾಗೂ ರಾಕಿಗೆ ಆಸ್ತಿ ಕೊಟ್ಟಿದ್ದು, ಕೊನೇ ಕಾಲದಲ್ಲಿ ಕೈಹಿಡಿದಿದ್ದ 2ನೇ ಪತ್ನಿಗೂ ಮುತ್ತಪ್ಪ ರೈ ಆಸ್ತಿಯಲ್ಲಿ ಪಾಲು ಕೊಟ್ಟಿದ್ರು.. ಬದುಕಿದ್ದಾಗಲೇ 3 ಜನಕ್ಕೆ ಆಸ್ತಿ ಹಂಚಿಕೆ ಮಾಡಿ ವಿಲ್ ಮಾಡಿಟ್ಟಿದ್ದಾರೆ..

ADVERTISEMENT

ಆಸ್ತಿ ಹಂಚಿಕೆ ಮಾಡಿ ವಿಲ್​ ಮಾಡಿಟ್ಟರೂ 2ನೇ ಪತ್ನಿಗೆ ಚಿನ್ನಾಭರಣಗಳು, 1 ಕಾರು, ಅಲ್ಲದೇ ದೊಡ್ಡ ಮೊತ್ತದ ಕ್ಯಾಶ್, H.D ಕೋಟೆಯಲ್ಲಿ ಒಂದು ಆಸ್ತಿ, ಬೆಂಗಳೂರಿನ ಸಹಕಾರ ನಗರದಲ್ಲಿ 1 ಕಟ್ಟಡ ಕೊಟ್ಟಿದ್ದಾರಂತೆ. ಆದ್ರೆ ಸಮನಾಗಿ ಆಸ್ತಿ ಹಂಚಿಲ್ಲ ಎಂದು ಮುತ್ತಪ್ಪ ರೈ ಅವರ 2ನೇ ಹೆಂಡತಿ ಅನುರಾಧ ತಕರಾರು ತೆಗೆದು, ಕೋರ್ಟ್​ ಮೊರೆ ಹೋಗಿದ್ದಾರೆ.. ಜೊತೆಗೆ ಇದೇ ವಿಚಾರಕ್ಕೆ ಆಗಾಗ ರಿಕ್ಕಿ ಹಾಗೂ ರಾಕಿ ಜೊತೆಗೂ ಜಗಳ ಕೂಡ ಮಾಡ್ತಿದ್ರಂತೆ.. ಆಸ್ತಿ ವಿಚಾರವಾಗಿ ರಿಕ್ಕಿಯನ್ನ ಚಿಕ್ಕಮ್ಮ ಅನುರಾಧ ಕೊಲ್ಲಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಫಾರ್ಮ್‌ಹೌಸ್‌ ಮುಂದಿನ ರಸ್ತೆ-ಖಾಸಗಿ ಜಾಗದ ಮಧ್ಯೆ ಕೂತಿದ್ದ ಆಗಂತುಕರು ಫಾರ್ಮ್‌ಹೌಸ್‌ನಿಂದ ರಿಕ್ಕಿ ಹೊರಕ್ಕೆ ಬರುತ್ತಲೇ ಕಾಂಪೌಂಡ್‌ ಮಧ್ಯೆ ಅವಿತು ಕುಳಿತು ದಾಳಿ ಮಾಡಿದ್ದಾರೆ. ರಾತ್ರೋರಾತ್ರಿ ರಿಕ್ಕಿ ರೈ ಸಂಚಾರದ ಬಗ್ಗೆ ಸುಳಿವು ಕೊಟ್ಟವರು ಯಾರು..? ಕೊಲೆ ಸಂಚಿನ ಹಿಂದೆ ಇರೋ ಮಾಸ್ಟರ್‌ಮೈಂಡ್ ಯಾರು..? ಯಾವ ಕಾರಣಕ್ಕೆ ಈ ದಾಳಿ ಅನ್ನೋದು ಇನ್ನೂ ನಿಗೂಢವಾಗೇ ಉಳಿದಿದೆ. ರಿಕ್ಕಿ ರೈ ಮೇಲಿನ ದಾಳಿ ಬಗ್ಗೆ ರಾಮನಗರ ಪೊಲೀಸರು ತಲೆ ತನಿಖೆ ನಡೆಸಿದ್ದಾರೆ. ರಾಮನಗರ ಎಸ್‌ಪಿ ಶ್ರೀನಿವಾಸಗೌಡ, ಕೇಂದ್ರ ವಲಯ ಐಜಿಪಿ ಲಾಬುರಾಮ್‌ ಖುದ್ದು ಅಖಾಡಕ್ಕೆ ಇಳಿದಿದ್ದು, ಬಿಡದಿ ಸ್ಟೇಷನ್‌ನಲ್ಲಿ ಸಭೆ, ಸ್ಥಳ ಮಹಜರು, ದಾಳಿ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿದ್ದಾರೆ. DySPಗಳ ನೇತೃತ್ವದಲ್ಲಿ ತನಿಖೆಗಾಗಿ 3 ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ.

ಎಸ್​ಪಿ ಶ್ರೀನಿವಾಸ್ ಗೌಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್​ ಮಾಡಲಾಗಿದೆ. ರಿಕ್ಕಿ ರೈ ಎಂಬುವವರ ಮೇಲೆ ತಡರಾತ್ರಿ ಅಟ್ಯಾಕ್ ಆಗಿದೆ. ಬಿಡದಿಯ ಅವರ ಫಾರ್ಮ್​ ಹೌಸ್ ಎದುರು ಗುಂಡಿನ ದಾಳಿ ಆಗಿದೆ. ಈ ಸಂಬಂಧ ಬಿಡದಿ ಠಾಣೆಯಲ್ಲಿ ಏಫ್ಐಆರ್ ದಾಖಲಾಗಿದೆ. ಗಾಯಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಅವರ ಸ್ಟೇಟ್ ಮೆಂಟ್ ಪಡೆದು ತನಿಖೆ ಮುಂದುವರಿಸುತ್ತೇವೆ‌. ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನ ವಶಕ್ಕೆ ತೆಗೆದುಕೊಂಡು ಪರಿಶೀಲನೆ ಮಾಡ್ತಿದ್ದೇವೆ. ಯಾವ ಗನ್​ನಿಂದ ಫೈರಿಂಗ್ ಆಗಿದೆ ಅಂತ ತನಿಖೆ ಮಾಡ್ತಿದ್ದೇವೆ‌. ರಿಕ್ಕಿ ರೈ ಹೆಚ್ಚಾಗಿ ಹೊರದೇಶದಲ್ಲಿ ಇರ್ತಾರೆ. ಯಾವುದೋ ಕೋರ್ಟ್ ಕೇಸ್ ಅಟೆಂಡ್ ಮಾಡಲು ಬಂದಿದ್ದರು. ಬಿಡದಿ ನಿವಾಸಕ್ಕೆ ಬಂದು ವಾಪಸ್ ಹೋಗುವಾಗ ದಾಳಿ ಆಗಿದೆ. ರಿಕ್ಕಿ ರೈ ಜೊತೆ ಡ್ರೈವರ್, ಗನ್ ಮ್ಯಾನ್ ಜೊತೆ ಇದ್ರು. ಡ್ರೈವರ್ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಸಿವಿಲ್ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಅನುಮಾನ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಭೂಗತ ಲೋಕದ ನಂಟಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಘಟನೆ ಸಂಬಂಧ ಯಾರನ್ನೂ ವಶಕ್ಕೆ ಪಡೆದಿಲ್ಲ. ಸದ್ಯಕ್ಕೆ ಮೂರು ಡಿವೈಎಸ್ಪಿಗಳ ನೇತೃತ್ವದಲ್ಲಿ ತಂಡ ರಚನೆ ಮಾಡಿದ್ದೇವೆ. ಆರೋಪಿಗಳ ಪತ್ತೆಗೆ ತನಿಖೆ ಮುಂದುವರಿಸಿದ್ದೇವೆ ಎಂದಿದ್ದಾರೆ ರಾಮನಗರ ಎಸ್​ಪಿ ಶ್ರೀನಿವಾಸ್ ಗೌಡ.

Tags: attack on rikki raidon muthappa raiformer underworld don muthappa rai's son ricky rai shot at in bidadigun attack on ricky raigun firing on muthappa rai son ricky raimiscreants opened fire at ricky raimuthappa raimuttappa raimuttappa rai son riki raimutthappa rai son rikki rairicky rai attackedricky rai injuredrikki rairikki rai car drivertargeted shooting on ricky raiunderworld don muthappa rai son
Previous Post

ಕುರುಬ ಸಾಹಿತ್ಯ ಸಮ್ಮೇಳನದಲ್ಲಿ ಮನಬಿಚ್ಚಿ ಮಾತನಾಡಿದ ಸಿಎಂ

Next Post

ಜನಿವಾರ ಜಟಾಪಟಿ.. ಸರ್ಕಾರದಿಂದ ಸಸ್ಪೆಂಡ್​.. ಕಾಲೇಜಿನಿಂದ ವಜಾ

Related Posts

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?
Top Story

ಮಿತವ್ಯಯಕ್ಕೆ ಮೋದಿ ಹೊಸ ಹೆಜ್ಜೆ; ಪ್ರಧಾನಿ ಬೆಂಗಾವಲು ವಾಹನಗಳ ಸಂಖ್ಯೆ ಇಳಿಕೆ

by ಪ್ರತಿಧ್ವನಿ
May 13, 2026
0

ನವದೆಹಲಿ: ಇಂಧನ ಉಳಿತಾಯ ಮತ್ತು ಮಿತವ್ಯಯ ಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕೃತ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಗಣನೀಯವಾಗಿ ಕಡಿತಗೊಳಿಸಿರುವುದು ಇದೀಗ ದೇಶಾದ್ಯಂತ ಚರ್ಚೆಗೆ...

Read moreDetails
ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

ಚಿನ್ನ ಖರೀದಿ ಕಡಿಮೆ ಮಾಡಿದರೆ ಭಾರತಕ್ಕೆ ಲಾಭ?; ಮೋದಿ ಕರೆಯಿಂದ ಯಾವ ದೇಶಕ್ಕೆ ನಷ್ಟ ?

May 13, 2026
BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

May 13, 2026
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
Next Post
ಜನಿವಾರ ಜಟಾಪಟಿ.. ಸರ್ಕಾರದಿಂದ ಸಸ್ಪೆಂಡ್​.. ಕಾಲೇಜಿನಿಂದ ವಜಾ

ಜನಿವಾರ ಜಟಾಪಟಿ.. ಸರ್ಕಾರದಿಂದ ಸಸ್ಪೆಂಡ್​.. ಕಾಲೇಜಿನಿಂದ ವಜಾ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada