• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, May 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಕುರುಬ ಸಾಹಿತ್ಯ ಸಮ್ಮೇಳನದಲ್ಲಿ ಮನಬಿಚ್ಚಿ ಮಾತನಾಡಿದ ಸಿಎಂ

ಪ್ರತಿಧ್ವನಿ by ಪ್ರತಿಧ್ವನಿ
April 20, 2025
in ಕರ್ನಾಟಕ, ರಾಜಕೀಯ
0
ಕುರುಬ ಸಾಹಿತ್ಯ ಸಮ್ಮೇಳನದಲ್ಲಿ ಮನಬಿಚ್ಚಿ ಮಾತನಾಡಿದ ಸಿಎಂ
Share on WhatsAppShare on FacebookShare on Telegram

ತುಮಕೂರು: ಕುರುಬ ಸಾಹಿತಿಗಳ ಸಮಾವೇಶದ ಸಿಎಂ ಸಿದ್ದರಾಮಯ್ಯ ಭಾಷಣ ಮಾಡಿದ್ದು, ಈ ಕಾರ್ಯಕ್ರಮಕ್ಕೆ ಬರಬೇಕು ಅಂತಾ ಆಹ್ವಾನ ಮಾಡಿದ್ರು. ನನಗೆ ಎಡಗಾಲು ಸ್ವಲ್ಪ ನೋವಾಗಿದೆ. ಒತ್ತಾಯ ಮಾಡಿದಕ್ಕೆ ಬಂದಿದ್ದೇನೆ. ನನಗೆ ಹೆಚ್ಚು ಟ್ರಾವೆಲ್ ಮಾಡಲು ಆಗಲ್ಲ, ಬಹಳ ಸಮಯ ನಿಂತು ಮಾತಾಡಲು ಆಗಲ್ಲ. ನಾನು ಬಾತ್ ರೂಮ್ ನಿಂದ ಹೊರಗೆ ಬರುವಾಗ ಬಿದ್ದುಬಿಟ್ಟೆ. ನಾನು 2005 ರಲ್ಲಿ ಕಬ್ಬಡಿ ಆಡುವಾಗ ಲಿಗಮೆಂಟ್ ಕಟ್ ಆಗಿತ್ತು.. ಈಗ ಅದೇ ಲಿಗಮೆಂಟ್ ಪೆಟ್ಟು ಬಿದ್ದಿದೆ. ಹೀಗಾಗಿ ಹೆಚ್ಚು ತಿರುಗಾಡಲು ಆಗ್ತಾ ಇಲ್ಲ. ತಿರುಗಾಡೋ ಕಡೆ ತಿರುಗಾಡ್ತಿದ್ದೀನಿ ಎಂದಿದ್ದಾರೆ.

ADVERTISEMENT

1947 ರಲ್ಲಿ ಸ್ವತಂತ್ರ ಬಂತು, 1950 ಜನವರಿ 26ಕ್ಕೆ ಸಂವಿಧಾನ ಜಾರಿಯಾಯ್ತು. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಅವಕಾಶ ಸಿಗಲಿದೆ ಅಂತಾ ಹೇಳಿಕೊಂಡಿದ್ದೆವೆ. ಸಂವಿಧಾನ ಬಂದು 75 ವರ್ಷ ಆಗಿದೆ. ಇಷ್ಟು ವರ್ಷ ಆದರೂ ಇನ್ನೂ ಅಸೃಷ್ಯತೆ ಹೋಗಿಲ್ಲ, ಅನೇಕ ಕಡೆ ದೇವಾಲಯ ಗಳ ಒಳಗೆ ಬಿಡಲ್ಲ. ಆರ್ಥಿಕವಾಗಿ ಸಾಮಾಜಿಕವಾಗಿ ಬೆಳವಣಿಗೆ ಆಗಿಲ್ಲ. ಸಮಾಜದಲ್ಲಿ ಯಾರ್ಯಾರಿಗೆ ಅವಕಾಶ ಸಿಕ್ಕಿದೆ ಅವರೆಲ್ಲರೂ ಇಂದು ಚಿಂತನೆ ಮಾಡಬೆಕಿದೆ. ‌ನಾನು ಶಿಕ್ಷಣ ಪಡೆದಿರೋದು ನನ್ನ ಸ್ವಾರ್ಥಕ್ಕಲ್ಲ ಅಂತಾ ಅಂಬೇಡ್ಕರ್ ಹೇಳಿದ್ದರು. ಈ ಸಮಾಜದಲ್ಲಿ ಯಾರಿಗೆ ನೋವಾಗ್ತಿದೆ. ಸಾಮಾಜಿಕವಾಗಿ ಬಳಲುತ್ತಿದ್ದಾರೆ ಅವರಿಗೆ ವಿದ್ಯೆ ನೀಡಲು, ಇಂತಹ ಸಂವಿಧಾನ ಬರಲಿಲ್ಲ ಅಂದರೆ ನಾವ್ಯಾರು ಹೀಗೆ ಆಗಲು ಆಗ್ತಾ ಇರಲಿಲ್ಲ ಎಂದಿದ್ದಾರೆ.

Yuddakanda :  ಹಣ ಹಾಕಿದವರ ಮೊಗದಲ್ಲೂ ಮಂದಹಾಸ ಮೂಡಿಸುತ್ತೆ. #pratidhvani  #ajayrao #yudhakanda

ದೇಶದಲ್ಲಿ ಅನೇಕ ವರ್ಷಗಳ ಕಾಲ‌ ಮನುಸ್ಮೃತಿ ಜಾರಿಯಲ್ಲಿತ್ತು. ಮನುಸ್ಮೃತಿ ಪ್ರಕಾರ ಜಾತಿ ವ್ಯವಸ್ಥೆ ಜಾರಿಯಲ್ಲಿತ್ತು. ಜಾತಿ ವ್ಯವಸ್ಥೆಯಿಂದ ಸಮಾಜದಲ್ಲಿ ಅಸಮಾನತೆ ಬರಲು ಕಾರಣವಾಯ್ತು. ಊಟ ಬಟ್ಟೆ ‌ಮನೆಯಿಲ್ಲ ಅಂತಾ ಬಹಳಷ್ಟು ಜನ ತಿಳಿದಿದ್ದಾರೆ. ಇದಕ್ಕೆ ಅವರು ಇದು ನಮ್ಮ ಹಿಂದಿನ‌ ಕರ್ಮ ಅಂತಾ ಹೇಳ್ತಾರೆ. ಇದಕ್ಕೆ ವೈಜ್ಞಾನಿಕ ವಾಗಿ ಪರಿಹಾರ ಕಂಡುಕೊಂಡಿಲ್ಲ. ಬಸವಣ್ಣನವರು ಕರ್ಮ ಸಿದ್ದಾಂತವನ್ನ ತಿರಸ್ಕಾರ ಮಾಡಿ ಅಂತಾ ಹೇಳಿದ್ರು. ಕರ್ಮ ಸಿದ್ದಾಂತ ವನ್ನ ಬಹಳ ಜನ ವಿದ್ಯಾವಂತರು ಇನ್ನೂ ಬಿಟ್ಟಿಲ್ಲ. ನೀನು ಯಾಕಪ್ಪ ಹೀಗೆ ಆಗಿದಿಯಾ ಅಂದರೆ ನಮ್ಮ ಹಣೆ ಬರಹ ಸ್ವಾಮಿ, ಬ್ರಹ್ಮ ಲಿಖಿತ ಅಂತಾರೆ. ಹಣೆಯಲ್ಲಿ ಒಬ್ಬ ಶ್ರೀಮಂತ, ನಿರುದ್ಯೋಗಿ, ಊಟ ತಿನ್ನಬೇಡ ಅಂತಾ ಬ್ರಹ್ಮ ಬರೆಯುತ್ತಾನಾ ಎಂದು ಪ್ರಶ್ನಿಸಿದ್ದಾರೆ.

ಬಹಳಷ್ಟು ಜನರು ಡಾಕ್ಟರ್​ಗಳು ಹೇಳ್ತಾರೆ ಇದು ನಮ್ಮ ಹಣೆ ಬರಹ ಅಂತ. ಇದೆಲ್ಲಾ ಹೋಗಬೇಕಲ್ವಾ, ಇದೆಲ್ಲಾ ಬರೆಯಬೇಕಲ್ವಾ..? ಯಾರು ಈ ಪರಿಣಾಮ ಅನುಭವಿಸಿದರೆ ಅವರು ಬರೆಯಬೇಕು.‌. ಪಟ್ಟಭದ್ರ ಹಿತಾಸಕ್ತಿಗಳು ಬರೆಯುತ್ತಾರಾ ಬರೆಯದೆ ಇಲ್ಲ ಅವರು.. ಬಸವಣ್ಣ ಕ್ರಾಂತಿ ಮುಂದುವರೆಸಲು ಬಿಡಲೇ ಇಲ್ಲ. ಕುರುಬರು ಹಿಂದುಳಿದವರು, ದಲಿತರು ಬಡವರು ಯಾಕಪ್ಪ ಹಿಂದೆ ಉಳಿದಿದ್ದಾರೆ.. ಅಕ್ಕಿ ಯಾಕೆ ಕೊಟ್ಟೆ ಅಂದರೆ ನಮ್ಮ ಮನೆಯ ಪಕ್ಕದಲ್ಲಿ ಸವಿತಾ ಸಮಾಜ ಕುಟುಂಬ ಇತ್ತು.. ಒಂದು ತುತ್ತು ಅನ್ನಕ್ಕೆ ನಮ್ಮ ಮನೆ ಬಳಿಗೆ ಬಂದು ನಿಲ್ಲೋರು.. ನಮ್ಮ ಅವ್ವ ಗೊಣಕಿಕೊಂಡು ಕೊಡೋರು. ಯಾರು ಕೂಡ ಯಾರ ಮನೆ ಬಾಗಿಲಿಗೆ ಅನ್ನಕ್ಕಾಗಿ ನಿಲ್ಲಬಾರದು..

ನಮ್ಮ ಶಾಸಕರೆ ಮಾತಾಡಿದ್ರು ಅಕ್ಕಿ ಕೊಟ್ಟು ಜನರನ್ನ ಸೊಮಾರಿಗಳನ್ನ ಮಾಡಿಬಿಟ್ಟರು. ನಾನು ಸದನದಲ್ಲಿ ‌ಹೇಳಿದ್ದೆ ನೋಡಯ್ಯ ಗುರುಪಾದಪ್ಪ ನೀನು ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿಲ್ಲ ಅನಿಸುತ್ತೆ.. ಎಲ್ಲರೂ ತೊಡಗಿಸಿಕೊಳ್ಳಬೇಕು ಅದನ್ನ ಎಲ್ಲರಿಗೂ ಹಂಚಬೇಕು. ಕಾಯಕ ಮಾಡಿ‌ ಬದುಕುಬೇಕು, ಅವರು ಕೆಲಸ ಮಾಡಿ ಸುಸ್ತಾಗಿದ್ದರು, ನೀವು ಇನ್ನೂ ಸ್ವಲ್ಪ ಕಾಲ‌ ಕೆಲಸ ಮಾಡಿ ಅಂತಾ ಹೇಳಿದ್ದೆ. ನೀವೆಲ್ಲಾ ಕುಳಿತು ಬೊಜ್ಜು ಬೆಳೆಸಿಕೊಂಡಿದ್ದಿರಿ ಈಗ ನೀವು ಕೆಲಸ ಮಾಡಿ ಅಂದೆ.. ನಿಮ್ಮ ಅನುಭವ ಆಚಾರ ವಿಚಾರ ಸಂಸ್ಕೃತಿಗಳು ಹೊರಗೆ ಬರಬೇಕು.. ಎಲ್ಲಾ ಜಾತಿಯವರು ರೂಡಿಸಿಕೊಳ್ಳಬೇಕು. ಶಿಕ್ಷಣ ಬಂದ ಮೇಲೆ ಎಲ್ಲಾರಿಗೂ ಸಿಕ್ತಾ ಇದೆ..

ನಮ್ಮ ತಂದೆ ತಾಯಿ ಓದಿರಲಿಲ್ಲ. ನಾನು ಓದಿಲ್ಲ ಅಂದರೆ ಇಂದು ಸಿಎಂ ಆಗಲು ಆಗುತ್ತಿತ್ತಾ..? ನಿಮಗೆ ಅವಕಾಶ ಸಿಕ್ಕಿದೆ ನಿಮ್ಮ ಅನುಭವವನ್ನ ಬರೆಯರಿ.‌ ವೃತ್ತಿ, ಪ್ರತಿಭೆ ಇದೆಯಲ್ಲ ಯಾರ ಪಿತ್ರಾರ್ಜಿತ ಸ್ವತ್ತಲ್ಲ.‌. ಅವಕಾಶ ಜ್ಞಾನ ಪಡೆಯಬೇಕು.. ಜ್ಞಾನ ವೈಜ್ಞಾನಿಕ ಹಾಗೂ ವೈಚಾರಿಕತೆಯಿಂದ ಇರಬೇಕು. ಗುಲಾಮಗಿರಿಯಿಂದ ಹೊರಗೆ ಬರಬೇಕು. ಸ್ವಾಭಿಮಾನ ಇಲ್ಲಾಂದ್ರೆ ಹೇಗೆ ಆಗುತ್ತೆ ಗುಲಾಮಗಿರಿ..? ದಲಿತ ಕುಟುಂಬ ಓದಿ ಶ್ರೀಮಂತರಾದರೆ ಬಾರಯ್ಯ ಅಂತಾರೆ.. ಆದೆ ಮೇಲ್ವರ್ಗದವರು ಬಂದು ಅಡುಗೆ ಮಾಡಿದ್ರೆ ಬನ್ನಿ ಸ್ವಾಮಿ ಅಂತಾ ಇದೆ ಮನುಸ್ಮೃತಿ.. ವೈಜ್ಞಾನಿಕವಾಗಿ ಎಲ್ಲಾ ತಿಳಿಯಬೇಕು.. ಲೋಹಿಯಾ ಹೇಳೊರು ಜಾತಿ ಸಮ್ಮೇಳನ ಮಾಡಬೇಕಾ ಬೇಡ್ವಾ ಅಂತಾ.. ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯವರೆಗೆ ಜಾತಿ ಸಮ್ಮೇಳನ ಮಾಡಬೇಕು. ಎಂದಿದ್ದಾರೆ.

Tags: BJPCongress Partyಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ಬಯಲಸೀಮೆ ಜಿಲ್ಲೆಯ ಜನರ ನೀರಿನ ಬವಣೆಗೆ ಶಾಶ್ವತ ಪರಿಹಾರ ಸಚಿವ ಎನ್‌ ಎಸ್‌ ಭೋಸರಾಜು

Next Post

ಆಸ್ತಿಗಾಗಿ ಮಗನಿಗೆ ಹತ್ಯೆಗೆ ಗುಂಡಿಟ್ಟಳಾ ಅಮ್ಮ ಅನುರಾಧ..?

Related Posts

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ
Top Story

BREAKING NEWS : ಶಾಲಾ, ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿ : ಸಚಿವ ಮಧು ಬಂಗಾರಪ್ಪ ಘೋಷಣೆ

by ಪ್ರತಿಧ್ವನಿ
May 13, 2026
0

ಬೆಂಗಳೂರು : ರಾಜ್ಯದ ಶಾಲಾ - ಕಾಲೇಜುಗಳಲ್ಲಿ ಧಾರ್ಮಿಕ ವಸ್ತ್ರ ಸಂಹಿತೆ ಜಾರಿಗೆ ತರುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿ, ರಾಜ್ಯಾದ್ಯಂತ ಎಲ್ಲ...

Read moreDetails
ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ : ಮೋದಿ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡ “ಕೈ” ಸಚಿವ

May 13, 2026
ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

ದೀದಿ ವಿರುದ್ಧ ಗೆದ್ದಿರುವ ದಾದಾ ದಿಢೀರ್ ರಾಜೀನಾಮೆ : ಕಾರಣ ಏನಿರಬಹುದು..?

May 13, 2026
“ತಂತ್ರಜ್ಞಾನ ನಾವೀನ್ಯತೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕಲ್ಯಾಣ ಕರ್ನಾಟಕಕ್ಕೂ ವ್ಯಾಪಿಸಲಿ”

“ತಂತ್ರಜ್ಞಾನ ನಾವೀನ್ಯತೆಗಳು ಬೆಂಗಳೂರಿಗೆ ಮಾತ್ರ ಸೀಮಿತವಾಗದೆ, ಕಲ್ಯಾಣ ಕರ್ನಾಟಕಕ್ಕೂ ವ್ಯಾಪಿಸಲಿ”

May 13, 2026
ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

ಬೆಂಗಳೂರಿಗರಿಗೆ ಡಿಕೆ ಶಿವಕುಮಾರ್‌‌ ಕೊಟ್ಟ ಗುಡ್‌ ನ್ಯೂಸ್ ಏನು..?

May 13, 2026
Next Post
ಆಸ್ತಿಗಾಗಿ ಮಗನಿಗೆ ಹತ್ಯೆಗೆ ಗುಂಡಿಟ್ಟಳಾ ಅಮ್ಮ ಅನುರಾಧ..?

ಆಸ್ತಿಗಾಗಿ ಮಗನಿಗೆ ಹತ್ಯೆಗೆ ಗುಂಡಿಟ್ಟಳಾ ಅಮ್ಮ ಅನುರಾಧ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada