ಕೋವಿಡ್ ಎರಡನೇ ಅಲೆಯಿಂದ ಸಂಪೂರ್ಣಗಿ ನಲುಗುತ್ತಿರುವ ಇಂತಹ ಸಮಯದಲ್ಲಿ ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದಾಗಿ ಬಡ, ಮಧ್ಯಮ ವರ್ಗದ ಕುಟುಂಬಗಳು ತತ್ತರಿಸಿ ಹೋಗಿವೆ. ಅಡುಗೆ ಎಣ್ಣೆಯ ಬೆಲೆ ಕೂಡ ದಾಖಲೆ ಮಟ್ಟದಲ್ಲಿ ಏರಿಕೆ ಕಾಣುತ್ತಿದೆ. ಹಾಗಾಗಿ ಅಡುಗೆ ಎಣ್ಣೆಯ ಬೆಲೆ ನಿಯಂತ್ರಿಸುವಂತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆಹಾರ ಮಂತ್ರಿ ಉಮೇಶ್ ಕತ್ತಿ ಅವರಿಗೆ ಒತ್ತಾಯಿಸಿ ಸಂಸದ ಡಿ.ಕೆ ಸುರೇಶ್ ಪತ್ರ ಬರೆದಿದ್ದಾರೆ.
ಡಿ.ಕೆ. ಸುರೇಶ್ ಬರೆದಿರುವ ಪತ್ರದಲ್ಲಿ, ಕೋವಿಡ್-೧೯ ಮಹಾಮಾರಿಯಿಂದಾಗಿ ಲಾಕ್ ಡೌನ್, ಡಿಸೇಲ್ – ಪೆಟ್ರೋಲ್ನ ಏರಿಕೆ ಮತ್ತು ದಿನನಿತ್ಯ ಬಳಸುವ ಅಗತ್ಯ ವಸ್ತುಗಳ ಬೆಲೆ ನಿರಂತರ ಏರಿಕೆಯಿಂದ ಈಗಾಗಲೇ ಜನಸಾಮಾನ್ಯರು ತೀವ್ರ ಆರ್ಥಿಕ ಹೊರೆಯಿಂದ ಸಂಕಷ್ಟಕ್ಕೆ ಒಳಗಾಗಿದ್ದು, ಪ್ರತಿನಿತ್ಯ ಬಳಸುವ ಅಡುಗೆ ಎಣ್ಣೆಯ ದರದ ದುಪ್ಪಟ್ಟು ಬೆಲೆಯಿಂದಾಗಿ ಜನಸಾಮಾನ್ಯರು ಹೈರಾಣಾಗಿದ್ದಾರದ. ಪ್ರಸ್ತುತ ಅಡುಗೆ ಎಣ್ಣೆ ದರ ಲೀಟರ್ಗೆ ರೂ 150 ರಿಂದ 180 ರವರೆಗೆ ಮತ್ತು ಬ್ರಾಂಡಡ್ ದರ ದೂ 230 ವರೆಗೂ ಇದ್ದು, ಕರೋನಾ ಲಾಕ್ ಡೌನ್ನ ಈ ಸಂದರ್ಭದಲ್ಲಿ ದುಡಿಮೆಯೇ ಇಲ್ಲದೇ ಪ್ರತಿನಿತ್ಯ ಒಂದು ಹೊತ್ತಿನ ಊಟಕ್ಕೆ ಕಷ್ಟಪಡುವ ಬಡವರ ಮತ್ತು ಜನಸಾಮಾನ್ಯರ ಪಾಲಿಗೆ ಅಡುಗೆ ಎಣ್ಣೆಯ ದರ ಬಹು ದುಬಾರಿಯಾಗಿರುತ್ತದೆ. ಜನಸಾಮಾನ್ಯರು ಸಂಕಷ್ಟದಲ್ಲಿರುಬ ಈ ಸಂದರ್ಭದಲ್ಲಿ ಹೆಚ್ಚುತ್ತಿರುವ ಅಡುಗೆ ಎಣ್ಣೆಯ ದರವನ್ನು ಕಡಿಮೆ ಮಾಡಲು ಕೈಗೊಳ್ಳಬೇಕಾದ ನಿಯಂತ್ರಣಕ್ಕೆ ಸರ್ಕಾರವು ಮಧ್ಯಪ್ರವೇಶಿಸುವುದು ಅತ್ಯಗತ್ಯವಾಗಿದೆ. ಅದುದರಿಂದ ಹೆಚ್ಚುತ್ತಿರುವ ಅಡುಗೆ ಎಣ್ಣೆಯ ದರದ ನಿಯಂತ್ರಣಕ್ಕೆ ಆಮದು ಸುಂಕ ಮತ್ತು ಜಿಎಸ್ಟಿ ಕಡಿಮೆ ಮಾಡಲು ಕೇಂದ್ರ ಸರ್ಕಾರಕ್ಕೆ ಕೋರಲು ಹಾಗೂ ದೇಶೀಯ ಉತ್ಪಾದನೆಯನ್ನು ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡಿ ಬೆಲೆ ಏರಿಕೆಯನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳು ತಮ್ಮನ್ನು ಕೋರುತ್ತೇನೆ ಎಂದು ತಿಳಿಸಿದ್ದಾರೆ.