• Home
  • About Us
  • ಕರ್ನಾಟಕ
Thursday, October 23, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಕ್ಯಾನ್ಸರ್‌ಗೆ ಅಭಿವೃದ್ಧಿ ಪಡಿಸಿದ ಔಷಧಿ ಕೋವಿಡ್ ಚಿಕಿತ್ಸೆಗೆ! – DRDO ಬಿಡುಗಡೆ ಮಾಡಿದ ಔಷಧಿ ಸುತ್ತ ಹುಟ್ಟಿಕೊಂಡಿದೆ ಗೊಂದಲ

ಫಾತಿಮಾ by ಫಾತಿಮಾ
May 19, 2021
in ದೇಶ
0
ಕ್ಯಾನ್ಸರ್‌ಗೆ ಅಭಿವೃದ್ಧಿ ಪಡಿಸಿದ ಔಷಧಿ ಕೋವಿಡ್ ಚಿಕಿತ್ಸೆಗೆ! – DRDO ಬಿಡುಗಡೆ ಮಾಡಿದ ಔಷಧಿ ಸುತ್ತ ಹುಟ್ಟಿಕೊಂಡಿದೆ ಗೊಂದಲ
Share on WhatsAppShare on FacebookShare on Telegram

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಕರೊನಾ ವೈರಸ್ ವಿರೋಧಿ ಔಷಧಿಯನ್ನು ರಾಷ್ಟ್ರ ರಾಜಧಾನಿಯ ಕೆಲವು ಆಸ್ಪತ್ರೆಗಳಿಗೆ ಸುಮಾರು 10,000 ಡೋಸ್‌ಗಳನ್ನು ವಿತರಿಸುವ ಮೂಲಕ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ನಿನ್ನೆ ಬಿಡುಗಡೆ ಮಾಡಿದರು.

ADVERTISEMENT

2-deoxy-D-glucose ಅಥವಾ 2-DG ಎಂದು ಕರೆಯಲ್ಪಡುವ ಈ ಔಷಧಿಯನ್ನು ಹೈದರಾಬಾದ್ ಮೂಲದ ಫಾರ್ಮಾ ದೈತ್ಯ ಡಾ.ರೆಡ್ಡಿ’ಸ್ ಲ್ಯಾಬೊರೇಟರೀಸ್ ಸಹಯೋಗದೊಂದಿಗೆ ಡಿಆರ್‌ಡಿಒ ಲ್ಯಾಬ್ ಅಭಿವೃದ್ಧಿಪಡಿಸಿದೆ.  ದೇಶದ ಉನ್ನತ ಮಟ್ಟದ ಔಷಧ ನಿಯಂತ್ರಕ ಸಂಸ್ಥೆಯಾದ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ತುರ್ತು ಬಳಕೆಗಾಗಿ ಈ ಔಷಧಿಯನ್ನು ಅನುಮೋದಿಸಿದೆ.

ಮೂಲತಃ ಈ ಔಷಧಿಯನ್ನು ಕ್ಯಾನ್ಸರ್ ಚಿಕಿತ್ಸೆಗೆಂದು ತಯಾರಿಸಲಾಗಿತ್ತು. ಆದರೆ ಡ್ರಗ್ ಕಂಟ್ರೋಲರ್ ‌ನಿಂದ ಅದಕ್ಕೆ‌ ಅನುಮತಿ ಸಿಕ್ಕಿರಲಿಲ್ಲ.

ಈ ಔಷಧವನ್ನು ಡಿಆರ್‌ಡಿ‌ಒ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿತ್ತು ಮತ್ತು ಸಹಯೋಗದ ಭಾಗವಾಗಿ 2014 ರಲ್ಲಿ ಡಾ. ರೆಡ್ಡಿ ಅವರ ಪ್ರಯೋಗಾಲಯಗಳಿಗೆ ನೀಡಲಾಯಿತು ಎಂದು ಡಿಆರ್‌ಡಿಒನ INMAS ಹೆಚ್ಚುವರಿ ನಿರ್ದೇಶಕ ಡಾ. ಸಧೀರ್ ಚಂದ್ನಾ ಹೇಳಿದ್ದಾರೆ. ಔಷಧದ ಮೂಲ ಕಾರ್ಯವಿಧಾನವು ಗ್ಲೈಕೋಲಿಸಿಸ್ ಅನ್ನು ಪ್ರತಿಬಂಧಿಸುತ್ತದೆ, ಅಥವಾ ಜೀವಕೋಶಗಳು ಶಕ್ತಿಗಾಗಿ ಗ್ಲೂಕೋಸ್ ಅನ್ನು ಒಡೆಯುವ ವಿಧಾನಗಳಲ್ಲಿ ಒಂದಾಗಿದೆ.  ಈ ವಿಧಾನವನ್ನು ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಬಳಸಿದಾಗ ಅದು ವೈರಸ್ ಕೋಶಗಳನ್ನೂ ತಡೆದಿತ್ತು.

ಹಾಗಾಗಿ ಔಷಧದ ಗರಿಷ್ಠ ಡೋಸೇಜ್ ಅನ್ನು ಮೌಲ್ಯಮಾಪನ ಮಾಡಲು ರೆಡ್ಡಿ ಲ್ಯಾಬ್ಸ್ DCGIನ ವಿಷಯ ತಜ್ಞರ ಸಮಿತಿಗೆ (Subject Expert Committee) ಈ ಔಷಧಿಯನ್ನು ಒದಗಿಸಿತ್ತು. ವಾಣಿಜ್ಯಿಕವಾಗಿ ಮಾರುಕಟ್ಟೆಗೆ ಅನುಮತಿ ಪಡೆಯಲು ಎರಡನೇ ಹಂತದ ಪ್ರಯೋಗದ ದತ್ತಾಂಶವನ್ನು ಒದಗಿಸಿತ್ತು. ಆದರೆ ಎಸ್‌ಇಸಿ ಕೋವಿಡ್ ವೈರಸನ್ನು ಕೊಂದಿದೆ ಎಂದು ಸಾಬೀತು ಪಡಿಸಲು ದೊಡ್ಡ ರೀತಿಯಲ್ಲಿ 3ನೇ ಹಂತದ ಪ್ರಯೋಗವನ್ನು ‘ಸಾಕಷ್ಟು ಮಾದರಿ’ಗಳೊಂದಿಗೆ  ಮತ್ತು ‘ಸ್ಪಷ್ಟವಾಗಿ ವ್ಯಾಖ್ಯಾನಿಸಲಾದ’ ಮಾನದಂಡಗಳೊಂದಿಗೆ ನಡೆಸಬೇಕು  ಶಿಫಾರಸು ಮಾಡಿತ್ತು ಎಂದು ‘ದಿ ಹಿಂದು’ ವರದಿ ಮಾಡಿದೆ.

ಔಷಧದ ಯಶಸ್ಸನ್ನು ಪ್ರಕಟಿಸಿದ ಡಿಆರ್‌ಡಿಒ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು  “ಈ molecule ಆಸ್ಪತ್ರೆಗೆ ದಾಖಲಾದ ರೋಗಿಗಳನ್ನು ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದು ಕ್ಲಿನಿಕಲ್ ಪ್ರಯೋಗ ಫಲಿತಾಂಶಗಳು ತೋರಿಸಿವೆ” ಎಂದು ಹೇಳಿದೆ.

DRDO ಅಭಿವೃದ್ಧಿಪಡಿಸಿದ ಕೋವಿಡ್‌ ನಿರೋಧಕ ʼಔಷಧಿʼ ಇಂದು ಬಿಡುಗಡೆ

ಆದರೆ, “ಕ್ಯಾನ್ಸರ್ ಕೋಶಗಳು ಅವುಗಳ ಉಳಿವಿಗಾಗಿ ಗ್ಲೂಕೋಸ್ ಅನ್ನು ಹೆಚ್ಚು ಅವಲಂಬಿಸಿವೆ ಮತ್ತು ಆದ್ದರಿಂದ ಅವುಗಳನ್ನು 2ಡಿಜಿಯೊಂದಿಗೆ ಟ್ಯಾಗ್ ಮಾಡುವ ಮೂಲಕ ನಾವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ನಿರ್ಬಂಧಿಸಬಹುದು. ಆದರೆ ಇದು ಮೆದುಳಿನ ಜೀವಕೋಶಗಳಂತಹ (ನ್ಯೂರಾನ್‌ಗಳು) ಹೆಚ್ಚಿನ ಗ್ಲೂಕೋಸ್ ಬಳಸುವ ಸಾಮಾನ್ಯ ಕೋಶಗಳ ಮೇಲೂ ಪರಿಣಾಮ ಬೀರಬಹುದು ಮತ್ತು ಮೆದುಳಿಗೆ ಸಂಬಂಧಿಸಿದ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು ”ಎಂದು ಕೇರಳದ ರಾಜಗಿರಿ ಆಸ್ಪತ್ರೆಯ ಹೆಪಟಾಲಜಿ ಮತ್ತು ಲಿವರ್ ಟ್ರಾನ್ಸ್‌ಪ್ಲಾಂಟ್ ಮೆಡಿಸಿನ್‌ನಲ್ಲಿ ಪರಿಣತಿ ಹೊಂದಿರುವ ಡಾ. ಸಿರಿಯಾಕ್ ಅಬ್ಬಿ ಫಿಲಿಪ್ಸ್ ತಿಳಿಸಿರುವುದಾಗಿ ‘ದಿ‌ ಹಿಂದು’ ವರದಿ ಮಾಡಿದೆ.

ಅಲ್ಲದೆ, ಸರಿಯಾಗಿ ನಡೆಸಿದ ಪ್ರಯೋಗವನ್ನು ಎರಡೆರಡು ಬಾರಿ ಪರೀಕ್ಷೆ ಮಾಡಬೇಕು ಮತ್ತು ನಿರೀಕ್ಷಿತ ಫಲಿತಾಂಶಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು. ಆದರೆ‌ ಈ ಔಷಧದ ವಿಚಾರಣೆಯ ವಿವರಗಳಲ್ಲಿ ಇದು ಸ್ಪಷ್ಟವಾಗಿಲ್ಲ ಎಂದು ನವದೆಹಲಿಯ ಹೆಪಟಾಲಜಿ ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ ಸಹಾಯಕ ಪ್ರಾಧ್ಯಾಪಕ ಡಾ.ಸಹಾಜ್ ರತಿ ಹೇಳಿರುವುದಾಗಿಯೂ ‘ದಿ ಹಿಂದು’ ವರದಿ ಮಾಡಿದೆ.

ಈ ಔಷಧಿ ಸೇವಿಸಿದ 42%ದಷ್ಟು ಕೋವಿಡ್ ರೋಗಿಗಳಿಗೆ ಪರ್ಯಾಯ ಆಕ್ಸಿಜನ್ ನ ಅವಲಂಬನೆಯನ್ನು ಮೂರು ದಿನಗಳೊಳಗೆ ಕಡಿಮೆ ಮಾಡಿದೆ ಎಂದು ಹೇಳುತ್ತದೆ ಆದರೆ ಈ ಸುಧಾರಣೆ ನಿರಂತರವಾಗಿದೆಯೇ?  ರೋಗಿಗಳು ವೆಂಟಿಲೇಟರ್‌ಗೆ ಹೋಗುವುದನ್ನು ಇದು ನಿಜವಾಗಿಯೂ ತಡೆಯುತ್ತಿದೆಯೇ?  ಇದು ಸಾವುಗಳನ್ನು ತಡೆಯುತ್ತದೆಯೇ ಎಂಬ ನಿರ್ಣಾಯಕ ಪ್ರಶ್ನೆಗಳಿಗೆ ಎಲ್ಲಿಯೂ ಉತ್ತರ ದೊರಕುವುದಿಲ್ಲ ಎನ್ನುತ್ತಾರೆ ಡಾ. ರತಿ.

ಇಷ್ಟೆಲ್ಲಾ ಪ್ರಶ್ನೆ, ಗೊಂದಲಗಳ ನಡುವೆಯೇ ವಾಟ್ಸಪ್, ಫೇಸ್‌ಬುಕ್‌ ಗಳಂತಹ ಸೋಶಿಯಲ್ ಮೀಡಿಯಾದಲ್ಲಿ ಭಾರತವು ಕೊರೊನಾಗೆ ಔಷಧಿ ಕಂಡುಹಿಡಿದಿದೆಯೆಂದೂ, ಇದು ಪ್ರಪಂಚದ ಮೊದಲ ಕೊರೊನಾ ಔಷಧಿಯೆಂದೂ ಪ್ರಚಾರ ಪಡಿಸಲಾಗುತ್ತಿದೆ. ಅಡ್ಡ ಪರಿಣಾಮಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದ, ಮೂರನೇ ಹಂತದ ಪ್ರಯೋಗವನ್ನು ನಡೆಸದ, ಡ್ರಗ್ ಕಂಟ್ರೋಲರ್ ಇಲಾಖೆಯಿಂದ ಒಮ್ಮೆ ತಿರಸ್ಕೃತವಾದ ಔಷಧಿಯನ್ನು ಸರ್ಕಾರದ ಇಮೇಜ್ ಕಾಪಾಡಿಕೊಳ್ಳುವ ಏಕೈಕ ಉದ್ದೇಶದಿಂದ ಕೊರೋನಾಗೆ ದಿವ್ಯೌಷಧ ಎಂದು ಆಡಳಿತ ಪಕ್ಷದ ಬೆಂಬಲಿಗರು ಪ್ರಚಾರ ಮಾಡುತ್ತಿರುವುದು ದಿನವೊಂದಕ್ಕೆ ಸುಮಾರು ಮೂರು ಲಕ್ಷ ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವ ದೇಶವೊಂದರ ವ್ಯಂಗ್ಯ.

Previous Post

ಕರೋನಾದ ವಿರುದ್ಧ ಮೋದಿ ಸಮರ ಮತ್ತು ಗ್ರಾಮೀಣ ಭಾರತದ ವಾಸ್ತವ..!

Next Post

ಕರ್ನಾಟಕ ಲಾಕ್‌ಡೌನ್: 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ – ಯಾವ ವರ್ಗಕ್ಕೆ ಎಷ್ಟು ಪರಿಹಾರ, ಇಲ್ಲಿದೆ ಮಾಹಿತಿ

Related Posts

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ
Top Story

ಸೈದ್ಧಾಂತಿಕ ಸಂಘರ್ಷವೂ ಪರ್ಯಾಯದ ಶೋಧವೂ

by ಪ್ರತಿಧ್ವನಿ
October 23, 2025
0

ಮಿಲೆನಿಯಂ ಸಮೂಹದ ಮುಂದೆ ಪರ್ಯಾಯವೊಂದನ್ನು  ಇಡದಿದ್ದರೆ  ನಮ್ಮ ಶ್ರಮ ನಿರರ್ಥಕವಾಗುತ್ತದೆ ನಾ ದಿವಾಕರ  ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್)‌ ರಾಜಕೀಯ ಚಟುವಟಿಕೆಗಳನ್ನು ನಿಯಂತ್ರಿಸುವ ಭರದಲ್ಲಿ...

Read moreDetails
ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

ಪ್ರಭಾಸ್‌ಗೆ ಜನ್ಮದಿನದ ಶುಭಾಶಯಗಳು!

October 22, 2025

ನವೆಂಬರ್‌ ಕ್ರಾಂತಿ ನಡುವೆ ಡಿಕೆಶಿ ಟೆಂಪಲ್‌ ರನ್..!‌ ಗುರು ರಾಘವೇಂದ್ರ ಸ್ವಾಮಿಗಳ ಬೃಂದಾವನಕ್ಕೆ ಪೂಜೆ ಸಲ್ಲಿಸಿದ ಡಿಕೆ ಶಿವಕುಮಾರ್ ಮತ್ತು ಪತ್ನಿ ಉಷಾ

October 22, 2025

ದರ್ಶನ್‌ನ ಟಾರ್ಗೆಟ್‌ ಮಾಡಿದ್ದೇ ಸರ್ಕಾರ..?

October 22, 2025

ದರ್ಶನ್ ಅವರ ತಮ್ಮ ನೋಡಿ ನನ್ನ ಬಾಲಿವುಡ್ ಹೀರೋ ಅನ್ಕೊಂಡ್ರೂ

October 22, 2025
Next Post
ಕರ್ನಾಟಕ ಲಾಕ್‌ಡೌನ್: 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ – ಯಾವ ವರ್ಗಕ್ಕೆ ಎಷ್ಟು ಪರಿಹಾರ, ಇಲ್ಲಿದೆ ಮಾಹಿತಿ

ಕರ್ನಾಟಕ ಲಾಕ್‌ಡೌನ್: 1250 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ - ಯಾವ ವರ್ಗಕ್ಕೆ ಎಷ್ಟು ಪರಿಹಾರ, ಇಲ್ಲಿದೆ ಮಾಹಿತಿ

Please login to join discussion

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್
Top Story

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

by ಪ್ರತಿಧ್ವನಿ
October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ
Top Story

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

by ಪ್ರತಿಧ್ವನಿ
October 23, 2025
ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ
Top Story

ಒಕ್ಕೂಟ ಸರ್ಕಾರದ ಅನುದಾನ ತಾರತಮ್ಯ ಚರ್ಚೆ- ಸಿದ್ದರಾಮಯ್ಯ ವಿರುದ್ಧ ಜೋಷಿ ಕಿಡಿ

by ಪ್ರತಿಧ್ವನಿ
October 23, 2025
ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ
Top Story

ಡಿಕೆಶಿಯನ್ನ ಗಂಗಾನದಿಯಲ್ಲಿ ಮುಳುಗಿಸಿದಂತಾಗಿದೆ

by ಪ್ರತಿಧ್ವನಿ
October 23, 2025
Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ
Top Story

Home Minister G. Parameshwar: ಸತೀಶ್ ಜಾರಕಿಹೊಳಿ ನಾಯಕತ್ವ ಮಾತು : ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

by ಪ್ರತಿಧ್ವನಿ
October 23, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

BSY ವಿರುದ್ಧ ಪೊಕ್ಸೋ ಕೇಸ್- ಆದೇಶ ಕಾಯ್ದಿರಿಸಿದ ಹೈಕೋರ್ಟ್

October 23, 2025
ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಬೆಂಬಲಿಕ ಶಾಸಕ ಕಿಡಿ

October 23, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada