ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಕೊಂಚ ರಿಲೀಫ್ ನೀಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್ ಗೆ...
Read moreDetailsಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಲಸಿಕಾ ಅಭಿಯಾನದ ಖರ್ಚು ನಿಭಾಯಿಸಲು ಅಂತರರಾಷ್ಟ್ರೀಯ ಬ್ಯಾಂಕುಗಳಿಮದ ಸಾಲ ಪಡೆಯಲು ಮುಂದಾಗಿದೆ. ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ‘ಸುರಕ್ಷಿತ ಹಾಗೂ ಪರಿಣಾಮಕಾರಿ ಕೋವಿಡ್ ಲಸಿಕೆ’ ಪಡೆಯಲು 500 ಮಿಲಿಯನ್ ಡಾಲರ್ ಮೊತ್ತದ ಸಾಲ ಕೇಳಿದೆ! ಇದಲ್ಲದೇ, ಏಷಿಯಾ ಪೆಸಿಫಿಕ್ ವ್ಯಾಕ್ಸಿನ್ ಆ್ಯಕ್ಸೆಸ್ ಫೆಸಿಲಿಟಿ ಪ್ರೋಗ್ರಾಂ (Asia Pacific Vaccine Access Facility programme) ಅಡಿಯಲ್ಲಿ ಕೂಡಾ ನಾಲ್ಕು ಮಿಲಿಯನ್ ಡಾಲರ್ ಸಾಲವನ್ನು ಭಾರತ ಪಡೆಯಲಿದೆ. ಈ ಸಾಲವನ್ನು ತಾಂತ್ರಿಕ ವಿಭಾಗಗಳಾದ ಲಸಿಕಾ ಕೇಂದ್ರಗಳ ಅಭಿವೃದ್ದಿ ಹಾಗೂ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಬಳಸಲಾಗುವುದು. ಅಂದಹಾಗೆ ಲಸಿಕೆಗಳಿಗಾಗಿ ಭಾರತ ಮಾಡಿರುವುದು ಕೇವಲ ಇಷ್ಟು ಮಾತ್ರ ಸಾವಲ್ಲ. ಇದಕ್ಕು ಮೊದಲು ಏಷಿಯನ್ ಡೆವೆಲಪ್ಮೆಂಟ್ ಬ್ಯಾಂಕಿನಿಂದ ಲಸಿಕೆ ಖರೀದಿಗಾಗಿ 1.5 ಬಿಲಿಯನ್ ಡಾಲರ್ ಮೊತ್ತದ ಹಣ, ಸಾಲದ ರೂಪದಲ್ಲಿ ಭಾರತಕ್ಕೆ ಸಿಗಲಿದೆ. 670 ಮಿಲಿಯನ್ ಡೋಸ್ ಲಸಿಕೆ ಖರೀದಿಸಲು ಏಷಿಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕಿನಿಂದ ಸಾಲ ಪಡೆಯಲಾಗುತ್ತಿದೆ ಎಂದು ವರದಿಯಾಗಿದೆ. ಈವರೆಗೆ ಲಸಿಕಾ ಅಭಿಯಾನಕ್ಕೆ ಸರ್ಕಾರ ಎಷ್ಟು ಮೊತ್ತವನ್ನು ವ್ಯಯಿಸಿದೆ ಎಂಬ ಕುರಿತು ಅಧಿಕೃತ ಅಂಕಿ ಅಂಶಗಳು ಲಭ್ಯವಿಲ್ಲ. ಆದರೆ, ಸರ್ಕಾರವು ಒಂದು ಬಿಲಿಯನ್ ಡೋಸ್ ಲಸಿಕೆಗೆ ಅಂದಾಜು ರೂ.19,000 ಖರ್ಚು ಮಾಡಿದೆ. ಸುಪ್ರೀಂ ಕೋರ್ಟ್’ಗೆ ಸರ್ಕಾರ ನೀಡಿರುವ ಅಫಿಡವಿಟ್ ಹಾಗೂ ಪಾರ್ಲಿಮೆಂಟ್’ನಲ್ಲಿ ಸಚಿವರು ನೀಡಿರುವ ಉತ್ತರದ ಆಧಾರದ ಮೇಲೆ ಈ ಅಂದಾಜು ಲೆಕ್ಕ ಹಾಕಲಾಗಿದೆ. ಒಂದು ಬಿಲಿಯನ್ ಡೋಸ್ ಲಸಿಕೆ ನೀಡುವ ಸರ್ಕಾರದ ಸಾಧನೆಗೆ ಇತ್ತೀಚಿಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿತ್ತು. ಸರ್ಕಾರವೂ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡು ಖುಶಿಪಟ್ಟಿತ್ತು. ಆದರೆ, ಲಸಿಕೆ ಪಡೆಯಲು ಭಾರತ ಅಂತರರಾಷ್ಟ್ರೀಯ ಬ್ಯಾಂಕುಗಳಲ್ಲಿ ಸಾಲ ಪಡೆಯುವ ಅಗತ್ಯವಿತ್ತೇ? ಎಲ್ಲಿ ಹೋಯಿತು PM CARES ನಿಧಿ? 2020ರ ಮಾರ್ಚ್ ತಿಂಗಳಲ್ಲಿ ಪ್ರಧಾನಿ ಮೋದಿ ಪಿಎಂ ಕೇರ್ಸ್ ನಿಧಿ ತೆರೆದಿರುವ ಘೋಷಣೆ ಮಾಡಿದರು. ಸಿಎಸ್ಆರ್ ನಿಧಿಯ ಹಣವನ್ನು ಪಿಎಂ ಕೇರ್ಸ್’ಗೆ ನೀಡಿದ್ದಲ್ಲಿ ಅಂತಹ ಕಂಪನಿಗಳಿಗೆ ತೆರಿಗೆ ವಿನಾಯಿತಿಯನ್ನೂ ಘೋಷಿಸಿದರು. ಆದರೆ, ಇದೊಂದು ಖಾಸಗಿ ಟ್ರಸ್ಟ್, ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳಿ ನಿಧಿಯ ಪಾರದರ್ಶಕತೆಗೆ ಪರದೆ ಮುಚ್ಚಿದ್ರು. ಹಲವು ಸಂಸ್ಥೆಗಳು ನೀಡಿರುವ ವರದಿಯ ಪ್ರಕಾರ ಕೇವಲ 52 ದಿನಗಳಲ್ಲಿ ಈ ನಿಧಿಗೆ ಬರೋಬ್ಬರಿ 1.27 ಬಿಲಿಯನ್ ಡಾಲರ್ ಹಣ ಹರಿದು ಬಂದಿತ್ತು. ಇದು ಕೇವಲ ಬೃಹತ್ ಕಾರ್ಪೊರೇಟ್ ಕಂಪನಿ ಹಾಗೂ ಕೇಂದ್ರ ಸರ್ಕಾರದ ನೌಕರರ ಒಂದು ದಿನದ ಸಂಬಳದ ದೇಣಿಗೆಯ ಅಂದಾಜು ಲೆಕ್ಕಾಚಾರವಷ್ಟೇ. ವೈಯಕ್ತಿಕವಾಗಿ ನೀಡಿರುವ ದೇಣಿಗೆ ಮತ್ತು ಸಣ್ಣ ಪುಟ್ಟ ಸಂಸ್ಥೆಗಳ ದೇಣಿಗೆ ಇದರಲ್ಲಿ ಸೇರಿಲ್ಲ. ಪ್ರಧಾನ ಮಂತ್ರಿ ಪರಿಹಾರ ನಿಧಿ ಎಂಬ ಖಾತೆ ನೇರವಾಗಿ ಪ್ರಧಾನಿ ಕಚೇರಿಯಡಿ ಕಾರ್ಯನಿರ್ವಹಿಸುತ್ತಿದ್ದರೂ, ಅದನ್ನು ಪರಿಗಣಿಸಲಾಗಿಲ್ಲ....
Read moreDetailsಇಂದು ಬೆಳಿಗ್ಗೆ ಜಮ್ಮು ಮತ್ತು ಕಾಶ್ಮೀರದ ಜಮ್ಮು ರಜೌರಿ ಜಿಲ್ಲೆ (ನೌಶೇರಾ) ಸೆಕ್ಟರ್ಗೆ ಆಗಮಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನೌಶೇರಾದಲ್ಲಿ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿದರು. ಪ್ರತಿ...
Read moreDetailsಅವಿವಾಹಿತ, ತಮ್ಮ ಪತಿ ಅಥವಾ ಕುಟುಂಬದಿಂದ ಬೇರ್ಪಟ್ಟಿರುವ ತಮಿಳುನಾಡಿನ ಒಂಟಿ ಮಹಿಳೆಯರನ್ನು 'ಕುಟುಂಬ' ಎಂದು ಗುರುತಿಸಲಾಗುವುದು ಎಂದು ಹೇಳಿರುವ ತಮಿಳು ನಾಡಿನ ಸರ್ಕಾರ ಈ ಮಹಿಳೆಯರು ಇನ್ನು...
Read moreDetailsಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮುಂದಿನ ಮೂರು ವರ್ಷಗಳಲ್ಲಿ 10,000 ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಸ್ಥಾಪಿಸಲಿದೆ ಮತ್ತು ಭಾರತವು 2070ರ ವೇಳೆಗೆ ಶೂನ್ಯ ಇಂಗಾಲ ಗುರಿ...
Read moreDetailsದೀಪಾವಳಿ ಹಬ್ಬದ ಪ್ರಯುಕ್ತ ಜನರಿಗೆ ಭರ್ಜರಿ ಸಿಹಿ ಸುದ್ದಿ ಬಂದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೀಪಾವಳಿಗೆ ಇನ್ನೊಂದು ದಿನ...
Read moreDetailsದೇಶದ 13 ರಾಜ್ಯಗಳಲ್ಲಿ ನಡೆದ ಉಪಚುನಾವಣೆಯ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದೆ. ಉಪಚುನಾವಣೆಗಳು ನಡೆದಾಗ ಆಡಳಿತರೂಢ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಸಾಮಾನ್ಯ. ಆದರೆ, ಆಡಳಿತ ವಿರೋಧಿ ಅಲೆಯ ಮುನ್ಸೂಚನೆ...
Read moreDetailsಭಾರತ್ ಬಯೋಟೆಕ್ (Bharath biotech) ಸಂಸ್ಥೆಯು ಉತ್ಪಾದಿಸಿರುವ ಕೊವ್ಯಾಕ್ಸಿನ್ (covaccine) ಲಸಿಕೆಯ ತುರ್ತು ಬಳಕೆಗೆ ವಿಶ್ವ ಆರೋಗ್ಯ ಸಂಸ್ಥೆಯು (WHO) ಬುಧವಾರ ಅನುಮೋದನೆ ನೀಡಿದೆ. ತಾಂತ್ರಿಕ ಸಲಹಾ...
Read moreDetailsವಿವಿಧ ರಾಜ್ಯಗಳಲ್ಲಿ ನಡೆದ 30 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಗಳೂ ಪ್ರಾಬಲ್ಯವನ್ನ ಮೆರೆದಿವೆ. ಇದರಲ್ಲಿ ಕಾಂಗ್ರೆಸ್ 8 ಸ್ಥಾನಗಳಲ್ಲಿ ಜಯಿಸಿದರೆ, ಬಿಜೆಪಿ 7ರಲ್ಲಿ ಜಯಿಸಿದೆ. ಮಿಕ್ಕಂತೆ...
Read moreDetailsಕೇಂದ್ರದ ಆಡಳಿತಾರೂಢ ಬಿಜೆಪಿ ತನ್ನ "ಜನವಿರೋಧಿ ನೀತಿಗಳಿಂದಾಗಿ ಹಿಂದಿಯ ಹೃದಯಭಾಗವಾದ ಮಧ್ಯಪ್ರದೇಶದಲ್ಲಿ ತನ್ನ ವೇಗವನ್ನು ಕಳೆದುಕೊಳ್ಳುತ್ತಿದೆ" ಎಂಬುದಕ್ಕೆ ವಿವಿಧ ರಾಜ್ಯಗಳ ವಿಧಾನಸಭೆ ಮತ್ತು ಲೋಕ ಸಭೆ ಉಪಚುನಾವಣೆಗಳ...
Read moreDetailsಭಾರತ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅವರ 9 ತಿಂಗಳ ಪುತ್ರಿ ಮೇಲೆ ಅತ್ಯಾಚಾರದ ಬೆದರಿಕೆ ಒಡ್ಡಿರುವುದರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಇಂತಹ ಧ್ವೇಷಪೂರಿತ ಕಮೆಂಟ್‌ಗಳ...
Read moreDetailsಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಒಂದು ಬೃಹತ್ ಯೋಜನೆಗೆ ಕೈಹಾಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ಕುರಿತು ಮಾಹಿತಿಯನ್ನು ಕಲೆ ಹಾಕಿ, ಅವರ ಕುರಿತ...
Read moreDetailsಬಿಟ್ ಕಾಯಿನ್ ಮತ್ತು ಡ್ರಗ್ಸ್ ಪ್ರಕರಣ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯ ಕುರಿತು ಸಿಸಿಬಿ ಸಲ್ಲಿಸಿರುವ ಚಾರ್ಜ್ ಶೀಟ್ ವಿವರಗಳು ದಿನದಿಂದ ದಿನಕ್ಕೆ ಆಘಾತಕಾರಿ ಸಂಗತಿಗಳನ್ನು...
Read moreDetailsಪಾಕಿಸ್ತಾನ ರಾಷ್ಟ್ರಪಿತ ಮಹಮ್ಮದ್ ಅಲಿ ಜಿನ್ನಾರನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರ ಎಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ತರಾಟೆಗೆ ಎಳೆದಿದ್ದಾರೆ. ಅಖಿಲೇಶ್ ಹೇಳಿಕೆಯನ್ನು ಬೇಜವಾಬ್ದಾರಿ...
Read moreDetailsಭಾರಿ ಕೂತೂಹಲ ಮೂಡಿಸಿದ್ದ ಕರ್ನಾಟಕದ ಉಪಚುನಾವಣೆಯ ಹಾನಗಲ್ ಕ್ಷೇತ್ರದ ಮತ ಎಣಿಕೆ ಮುಗಿದಿದ್ದು, ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿದೆ. ಇಲ್ಲೂ ಕೂಡ ಜೆಡಿಎಸ್ ತೀವ್ರ ಮುಖಭಂಗಕ್ಕೀಡಾಗಿದೆ. ಬಿಜೆಪಿ...
Read moreDetailsಕಳೆದ ಒಂದು ವರ್ಷದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರವು ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ...
Read moreDetailsಜನವರಿ 2018ರಲ್ಲಿ ನಡೆದ ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ತನಿಖೆ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದೆ. ವಿಚಾರಣೆ ನಡೆಸಲು ಸೂಕ್ತವಾದ ಸ್ಥಳಾವಕಾಶವನ್ನು ಮಹಾರಾಷ್ಟ್ರ ಸರ್ಕಾರ ನೀಡುವವರೆಗೆ ಪ್ರಕರಣದ ಕುರಿತ ಯಾವುದೇ ತನಿಖೆಯನ್ನು ಮುಂದುವರೆಸಲು ಸಾಧ್ಯವಿಲ್ಲ ಎಂದು ಆಯೋಗವು ಹೇಳಿದೆ. ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಜೆ ಎನ್ ಪಟೇಲ್ ನೇತೃತ್ವದ ದ್ವಿಸದಸ್ಯ ಆಯೋಗವು, ಪ್ರಕರಣದ ತನಿಖೆಯನ್ನು ನಡೆಸುತ್ತಿದೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಮುಚ್ಚಲ್ಪಟ್ಟಿದ್ದ ತನಿಖೆಯು ಹದಿನಾಲ್ಕು ತಿಂಗಳ ನಂತರ ಆಗಸ್ಟ್ 2021ರಲ್ಲಿ ಆರಂಭವಾಗಿತ್ತು. ಈ ವೇಳೆ ಮುಂಬೈನ ರಾಜ್ಯ ಮಾಹಿತಿ ಆಯೋಗದ ಕಚೇರಿಯಲ್ಲಿ ವಿಚಾರಣೆ ನಡೆಸಲು ಸ್ಥಳ ನೀಡಲಾಗಿತ್ತು. ಈ ಕಚೇರಿಯು ಅತ್ಯಂತ ಇಕ್ಕಟ್ಟಾಗಿದ್ದು, ಕೋವಿಡ್ ನಿಯಮಾವಳಿಗಳನ್ನು ಪಾಲಿಸಲು ಸಾಧ್ಯವಾಗುತ್ತಿಲ್ಲ ಎಂದು ತನಿಖಾ ಆಯೋಗ ದೂರಿದೆ. ಅಕ್ಟೋಬರ್ 31ರಂದು ರಾಜ್ಯ ಮುಖ್ಯ ಕಾರ್ಯದರ್ಶಿ ಹಾಗೂ ಇತರ ಸರ್ಕರಿ ಅಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ, ಆಯೋಗದ ಕಾರ್ಯದರ್ಶಿಯಾಗಿರುವ ವಿ ವಿ ಪಳ್ನೀತ್ಕರ್ ಅವರು, ತನಿಖೆ ಮುಂದುವರೆಸಲು ಉತ್ತಮ ಕಚೇರಿಯನ್ನು ಶೀಘ್ರದಲ್ಲಿ ನೀಡುವಂತೆ ಕೋರಿದ್ದಾರೆ. “ಅಕ್ಟೋಬರ್ 28ರಂದು ನಡೆದ ಸಭೆಯಲ್ಲಿ, ತನಿಖಾ ಆಯೋಗವು ಎದುರಿಸುತ್ತಿರುವ ಸ್ಥಳಾವಕಾಶದ ಕೊರತೆಯನ್ನು ನೇರವಾಗಿ ಮುಖ್ಯಮಂತ್ರಿ ಕಾರ್ಯಲಯದೊಂದಿಗೆ ಚರ್ಚಿಸಲು ಆಯೋಗದ ಅಧ್ಯಕ್ಷರಾಗಿರುವ ಜಸ್ಟೀಸ್ ಪಟೇಲ್ ಅವರು ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸಲಹೆ ನೀಡಿದ್ದರು. ತುರ್ತಾಗಿ ಬೇರೆ ಸ್ಥಳವನ್ನು ಆಯೋಗಕ್ಕೆ ನೀಡುವಂತೆ ಹೇಳಿದ್ದರು. ಅಕ್ಟೋಬರ್ 29,2021ರ ಒಳಗೆ ಆಯೋಗಕ್ಕೆ ಯಾವುದೇ ಉತ್ತಮ ಕಚೇರಿ ನೀಡದಿದ್ದಲ್ಲಿ ಮುಂಬರುವ ವಿಚಾರಣೆಗಳನ್ನು ಆಯೋಗವು ಅಮಾನತಿನಲ್ಲಿಡುವುದು,” ಎಂದು ಪತ್ರದಲ್ಲಿ ಬರೆಯಲಾಗಿದೆ. ಆದರೆ, ಅಕ್ಟೋಬರ್ 31ರವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಲಭಿಸಿಲ್ಲ ಎಂದು ಆಯೋಗವು ಹೇಳಿದೆ. ಹೀಗಾಗಿ, ಮುಂದಿನ ವಿಚಾರಣೆಯನ್ನು ತಾತ್ಕಾಲಿಕವಾಗಿ ಅಮಾನತಿನಲ್ಲಿ ಇರಿಸಲಾಗಿದೆ. ಸರ್ಕಾರ ಆಯೋಗದ ಕಚೇರಿಯನ್ನು ಬೇರೆಡೆ ಸ್ಥಳಾಂತರಿಸುವವರೆಗೂ ತನಿಖೆ ಮುಂದುವರೆಯುವುದಿಲ್ಲ ಎಂದು ಆಯೋಗ ಹೇಳಿದೆ. ಜನವರಿ 1, 2018ರಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸುವ ವೇಳೆ ಉಂಟಾದ ಹಿಂಸಾಚಾರದ ಕುರಿತು ಆಯೋಗವು ತನಿಖೆ ನಡೆಸುತ್ತಿದೆ. ವಿಜಯೋತ್ಸವ ನಡೆಯುವ ಒಂದು ದಿನ ಮುನ್ನ ಎಲ್ಗರ್ ಪರಿಷದ್ ಸಮಾವೇಷದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದೇ ಹಿಂಸಾಚಾರಕ್ಕೆ ಕಾರಣವಾಯಿತು. ಎಲ್ಗರ್ ಪರಿಷದ್ ಒಂದು ಮಾವೋವಾದಿ ಬೆಂಬಲಿತ ಸಂಘಟನೆ ಎಂದು ಪುಣೆ ಪೊಲೀಸರು ಆರೋಪಿಸಿದ್ದರು. ಅಲ್ಲಿಂದ ಇಲ್ಲಿಯವರೆಗೆ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಲವರನ್ನು ಬಂಧಿಸಲಾಗಿದೆ. ತನಿಖಾ ವರದಿಯನ್ನು ಸಲ್ಲಿಸಲು ಸರ್ಕಾರವು ಆಯೋಗಕ್ಕೆ ನೀಡಿದ್ದ ಗಡುವನ್ನು ಹಲವು ಬಾರಿ ಮುಂದೂಡಿದ್ದರೂ, ಇನ್ನೂ ವರದಿ ಸಲ್ಲಿಕೆಯಾಗಿಲ್ಲ.
Read moreDetailsಕೇರಳ ಎಂದರೆ ಹರತಾಳ್ ಅನ್ನುವಂತೆ ಕೇರಳದ ರಾಜಕೀಯ ಪಕ್ಷಗಳು ಮಾಡಿವೆ. ಕೇರಳದಲ್ಲಿ ಯಾವಾಗ ಪ್ರತಿಭಟನೆಗಳು ನಡೆಯುತ್ತೆ, ಯಾವಾಗ ಬಸ್ ಇಲ್ಲದೆ ಪರದಾಡಬೇಕು, ಯಾವಾಗ ಪ್ರತಿಭಟನಾ ನಿಮಿತ್ತ ಟ್ರಾಫಿಕ್...
Read moreDetailsಮುಂದಿನ ವರ್ಷ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ. ಯುಪಿಯ ಅಧಿಕೃತ ವಿರೋಧ ಪಕ್ಷವಾಗಿರುವ...
Read moreDetailsನವೆಂಬರ್ 1, 2021ರಂದು ದೇಶದಲ್ಲಿ ಸತತ ಆರನೇ ದಿನವು ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಾಗಿದ್ದು ಸಾರ್ವತ್ರಿಕ ಗರಿಷ್ಠ ಮಟ್ಟವನ್ನ ತಲುಪಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಮತ್ತು...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada