• Home
  • About Us
  • ಕರ್ನಾಟಕ
Friday, July 11, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ದೇಶ

ಪೋಷಣ್ ಹಣ ಆಪೋಷನ: ಕೇಂದ್ರದಿಂದ ಟ್ರ್ಯಾಕರ್‌ಗೆ 1,000 ಕೋಟಿ ಖರ್ಚು, ಆದರೆ ಡೇಟಾ ಎಲ್ಲಿ ಸ್ಬೃತಿ ಇರಾನಿ ಮೇಡಂ? ಅಪೌಷ್ಟಿಕ ಮಕ್ಕಳ ಹಣವೂ ಗುಳುಂ?

ಪಿಕೆ ಮಲ್ಲನಗೌಡರ್ by ಪಿಕೆ ಮಲ್ಲನಗೌಡರ್
December 4, 2021
in ದೇಶ
0
ಪೋಷಣ್ ಹಣ ಆಪೋಷನ: ಕೇಂದ್ರದಿಂದ ಟ್ರ್ಯಾಕರ್‌ಗೆ 1,000 ಕೋಟಿ ಖರ್ಚು,  ಆದರೆ ಡೇಟಾ ಎಲ್ಲಿ ಸ್ಬೃತಿ ಇರಾನಿ ಮೇಡಂ? ಅಪೌಷ್ಟಿಕ ಮಕ್ಕಳ ಹಣವೂ ಗುಳುಂ?
Share on WhatsAppShare on FacebookShare on Telegram

ಇದೊಂದು ಹಗಲು ದರೋಡೆ ಕತೆ. ಅಪೌಷ್ಟಿಕ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಆರೋಗ್ಯ ಸ್ಥಿತಿಯನ್ನು ಪ್ರತಿದಿನವೂ ದಾಖಲಿಸುವ ಹೆಸರಲ್ಲಿ 1 ಸಾವಿರ ಕೋಟಿ ವ್ಯರ್ಥ ಮಾಡಿದ ಹಗರಣ. ಕೇಂದ್ರ ಸಚಿವೆ ಸ್ಬೃತಿ ಇರಾನಿಯವರಿಗೆ ಅಂಕಿಅಂಶ ಕೊಡಿ ಎಂದರೆ, ಅವರು ಎನ್‌ಎಫ್‌ಎಚ್‌ಎಸ್‌-5 ಸಮೀಕ್ಷೆಯ ಅಂಕಿಅಂಶಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಮಹಾನ್‌ ದೇಶಭಕ್ತೆ ಸ್ನೃತಿ ಇರಾನಿಯವರು ಅಪೌಷ್ಟಿಕ ಮಕ್ಕಳ ತಟ್ಟೆಗೂ ಕೈ ಹಾಕಿಬಿಟ್ಟರೆ? ಅಯ್ಯೋ ರಾಮ!

ADVERTISEMENT

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತನ್ನ ಪೋಷಣ್‌ ಅಥವಾ ನ್ಯೂಟ್ರಿಷನ್ ಟ್ರ್ಯಾಕರ್‌ಗಾಗಿ  1,000 ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಿದೆ, ಇದು ಪ್ರತಿ ಅಂಗನವಾಡಿಯಲ್ಲಿನ ಅಪೌಷ್ಟಿಕ ಮತ್ತು ತೀವ್ರ ಅಪೌಷ್ಟಿಕ ಮಕ್ಕಳ ರಿಯಲ್‌ ಟೈಮ್‌ ಡೇಟಾವನ್ನು (ಸಾಫ್ಟವೇರ್‌ ನೆರವಿನಿಂದ ಟ್ರ್ಯಾಕರ್‌ ಪ್ರತಿದಿನದ ಅಂಕಿಅಂಶಗಳನ್ನು ಪಡೆಯುತ್ತದೆ) ದಾಖಲಿಸುತ್ತದೆ. ಆದರೆ ಪ್ರಾರಂಭವಾಗಿ ನಾಲ್ಕು ವರ್ಷಗಳಾದರೂ ಸರ್ಕಾರವು ಇನ್ನೂ ಅಂಕಿಅಂಶಗಳನ್ನು (ಡೇಟಾವನ್ನು) ಸಾರ್ವಜನಿಕಗೊಳಿಸಿಲ್ಲ.

ಮಾರ್ಚ್ 31, 2021 ರಂತೆ ಪೋಷಣ್‌ ಟ್ರ್ಯಾಕರ್ ಅಥವಾ ಮಾಹಿತಿ ಸಂವಹನ ತಂತ್ರಜ್ಞಾನ-ರಿಯಲ್ ಟೈಮ್ ಮಾನಿಟರಿಂಗ್‌ಗೆ ಸರ್ಕಾರವು 1,053 ಕೋಟಿ ರೂ. ಖರ್ಚು ಮಾಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಶಿಕ್ಷಣ, ಮಹಿಳೆಯರು, ಮಕ್ಕಳು, ಯುವಕರು ಮತ್ತು ಕ್ರೀಡೆಗಳ ಸಂಸದೀಯ ಸ್ಥಾಯಿ ಸಮಿತಿಗೆ ತಿಳಿಸಿದೆ. ನವೆಂಬರ್ 30 ರಂದು ಸಂಸತ್ತಿನಲ್ಲಿ ವರದಿಯನ್ನು ಮಂಡಿಸಲಾಯಿತು. ಒಟ್ಟು  600 ಕೋಟಿ ರೂ.ಗಳನ್ನು  ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಖರ್ಚು ಮಾಡಲಾಗಿದೆ; ಸ್ಮಾರ್ಟ್‌ಫೋನ್ ರೀಚಾರ್ಜ್ ಮತ್ತು ನಿರ್ವಹಣೆಗೆ 203.96 ಕೋಟಿ ರೂ, ತಂತ್ರಜ್ಞಾನದ ಬಳಕೆಗಾಗಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಪ್ರೋತ್ಸಾಹಧನಕ್ಕೆ180.68 ಕೋಟಿ ರೂ. ಮತ್ತು ತರಬೇತಿಗೆ 68 ಕೋಟಿ ರೂ ಖರ್ಚು ಮಾಡಲಾಗಿದೆ.

ಇನ್ನು, ಬುಧವಾರ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ರೇವತಿ ರಮಣ್ ಸಿಂಗ್ ದೇಶದಲ್ಲಿ ಅಪೌಷ್ಟಿಕ ಮಕ್ಕಳ ಸಂಖ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ಇತ್ತೀಚೆಗೆ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ನ್‌ಎಫಎಚ್‌ಎಸ್‌-5) ಅಂಕಿಅಂಶಗಳನ್ನು ಉದ್ಘರಿಸಿದ್ದಾರೆ! ಇದು ಬೆಳವಣೀಗೆ ಕುಂಠಿತ, ಕ್ಷೀಣತೆ ಮತ್ತು ಕಡಿಮೆ ತೂಕದ ಮಕ್ಕಳಲ್ಲಿ ಸುಧಾರಣೆಯನ್ನು ತೋರಿಸುತ್ತದೆ.

ಎನ್‌ಎಫಎಚ್‌ಎಸ್‌ ಎರಡು ಹಂತಗಳಲ್ಲಿ 6.3 ಲಕ್ಷ ಕುಟುಂಬಗಳಲ್ಲಿ ನಡೆಸಲಾದ ಮಾದರಿ ಸಮೀಕ್ಷೆಯಾಗಿದೆ. ಜೂನ್ 2019 ರಿಂದ ಜನವರಿ 2020 ರವರೆಗೆ ಮತ್ತು ಜನವರಿ 2020 ರಿಂದ ಏಪ್ರಿಲ್ 2021 ರವರೆಗೆ ಈ ಸಮೀಕ್ಷೆ ನಡೆಸಲಾಗಿದೆ.

ಪೋಶಣ್ ಟ್ರ್ಯಾಕರ್ ಸಚಿವಾಲಯಕ್ಕೆ 12.3 ಲಕ್ಷ ಅಂಗನವಾಡಿ ಕೇಂದ್ರಗಳಿಂದ ದೈನಂದಿನ ಡೇಟಾವನ್ನು ನೀಡುತ್ತದೆ, ಆರು ತಿಂಗಳಿಂದ ಆರು ವರ್ಷದೊಳಗಿನ ಮಕ್ಕಳು ಸೇರಿದಂತೆ 9.8 ಲಕ್ಷ ಫಲಾನುಭವಿಗಳಿದ್ದಾರೆ. ಇದರಲ್ಲಿ  ಗರ್ಭಿಣಿಯರು, ಮತ್ತು ಹಾಲುಣಿಸುವ ತಾಯಂದಿರು ಕೂಡ ಸೇರಿದ್ದಾರೆ.

ತಮ್ಮ ಮೊಬೈಲ್ ಫೋನ್‌ಗಳ ಸಹಾಯದಿಂದ, ಅಂಗನವಾಡಿ ಕಾರ್ಯಕರ್ತೆಯರು ಪೋಷಣ್ ಟ್ರ್ಯಾಕರ್ ಮೊಬೈಲ್ ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ, ಮಗುವಿನ ಎತ್ತರ ಅಥವಾ ತೂಕದಂತಹ ಇನ್‌ಪುಟ್ ಡೇಟಾ ಎಂಟ್ರಿ ಮಾಡುತ್ತಾರೆ. ಇದು ಕಾಲಾವಧಿಯಲ್ಲಿ ಟ್ರ್ಯಾಕ್ ಮಾಡಿದಾಗ ಮಗು ಅದರ   ವಯಸ್ಸಿಗೆ ಸೂಕ್ತವಾಗಿ ಬೆಳೆಯುತ್ತಿದೆಯೇ ಎಂದು ಸೂಚಿಸುತ್ತದೆ. ಅಥವಾ ಬೆಳವಣಿಗೆ ಕುಂಠಿತ ಅಥವಾ ಕಡಿಮೆ ತೂಕ, ದಾಖಲಾದ ಇತರ ಸೇವೆಗಳು,  ಮಗುವಿನ ಲಸಿಕೆಯ ಸ್ಥಿತಿಯನ್ನು ಒಳಗೊಂಡಿರುತ್ತದೆ; ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರ ಪೌಷ್ಟಿಕಾಂಶದ ಸ್ಥಿತಿ, ನಿರ್ದಿಷ್ಟ ದಿನದಂದು ಅಂಗನವಾಡಿ ತೆರೆಯಲಾಗಿದೆಯೇ, ಅಂಗನವಾಡಿಗೆ ಎಷ್ಟು ಮಕ್ಕಳು ಹಾಜರಾಗಿದ್ದರು, ಎಷ್ಟು ಮಂದಿ ಟೇಕ್-ಹೋಮ್ ಪಡಿತರ ಮತ್ತು ಬೇಯಿಸಿದ ಬಿಸಿ ಊಟವನ್ನು ಸ್ವೀಕರಿಸಿದ್ದಾರೆ ಎಂಬ ವಿವರಗಳಿರುತ್ತವೆ. ಇದು ಫಲಾನುಭವಿಗಳು ಮತ್ತು ಸೇವಾ ಪೂರೈಕೆದಾರರಿಗೆ ಅಗತ್ಯ ಸಲಹೆಗಳನ್ನು ಒದಗಿಸುತ್ತದೆ ಮತ್ತು ಪ್ರಗತಿಯನ್ನು ಪರಿಶೀಲಿಸಲು ಕೇಂದ್ರದಿಂದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಕ್ರಿಯಗೊಳಿಸಲು ಡ್ಯಾಶ್‌ಬೋರ್ಡ್ ಅನ್ನು ಒದಗಿಸುತ್ತದೆ.

ಅದರ ಹಿಂದಿನ ಅವತಾರದಲ್ಲಿ ಐಸಿಡಿಎಸ್-ಸಿಎಎಸ್ (ಇಂಟಿಗ್ರೇಟೆಡ್ ಚೈಲ್ಡ್ ಡೆವಲಪ್‌ಮೆಂಟ್ ಸರ್ವಿಸಸ್-ಕಾಮನ್ ಅಪ್ಲಿಕೇಷನ್ ಸಾಫ್ಟ್‌ವೇರ್) ಎಂದು ಕರೆಯಲ್ಪಡುವ ಪೋಷಣ್‌ ಟ್ರ್ಯಾಕರ್, ಅಂಗನವಾಡಿಗಳಲ್ಲಿ ವಿತರಿಸಲಾದ ವಿವಿಧ ಸೇವೆಗಳನ್ನು ಪತ್ತೆಹಚ್ಚುವ, ಸುಧಾರಿಸುವ ಮತ್ತು ಫಲಾನುಭವಿಗಳ ಪೌಷ್ಟಿಕಾಂಶದ ನಿರ್ವಹಣೆಯನ್ನು ಖಚಿತಪಡಿಸುವ ಉದ್ದೇಶದಿಂದ ತಯಾರಿಸಲ್ಪಟ್ಟಿದೆ.  ಈ ನೈಜ-ಸಮಯದ (ರಿಯಲ್‌ ಟೈಮ್‌) ಮೇಲ್ವಿಚಾರಣಾ ವ್ಯವಸ್ಥೆಯು ಪೋಷಣ್‌ಅಭಿಯಾನ ಅಥವಾ ನ್ಯೂಟ್ರಿಷನ್ ಮಿಷನ್‌ನ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ, ಈ ಯೋಜನೆಯನ್ನು ನವೆಂಬರ್ 2017 ರಲ್ಲಿ ಕೇಂದ್ರ ಸಚಿವ ಸಂಪುಟವು ಮೂರು ವರ್ಷಗಳವರೆಗೆ 9,000 ಕೋಟಿ ರೂ.ಗಳ ಆರ್ಥಿಕ ವೆಚ್ಚದೊಂದಿಗೆ ಅನುಮೋದಿಸಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಇತರ ಆರೋಗ್ಯ-ಸಂಬಂಧಿತ ಕಾರ್ಯಕ್ರಮಗಳ ಮೇಲ್ವಿಚಾರಣೆಯ ಸಾಫ್ಟ್‌ವೇರ್‌, ಎಂ-ನರೇಗಾ (ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಕಾಯಿದೆ) ಡೇಟಾ ಅಥವಾ ಆರೋಗ್ಯ ಸಚಿವಾಲಯದ ಆರೋಗ್ಯ ನಿರ್ವಹಣಾ ಮಾಹಿತಿ ವ್ಯವಸ್ಥೆಗಿಂತ ಪೋಷಣ್‌ ಟ್ರ್ಯಾಕರ್‌ ಭಿನ್ನವಾಗಿದೆ. ಈ ಪ್ರಮುಖ ಡೇಟಾ ಸಾರ್ವಜನಿಕ ಡೊಮೇನ್‌ನಲ್ಲಿ ಲಭ್ಯವಿಲ್ಲ. . ಸರ್ಕಾರಿ ಅಧಿಕಾರಿಗಳು ಗೌಪ್ಯತೆಯ ಕಾಳಜಿಗಳು ಎನ್ನುತ್ತ ಲಾಕ್ ಮತ್ತು ಕೀ ಅಡಿಯಲ್ಲಿ ಇರಿಸಿಕೊಳ್ಳಲು ಒಂದು ಕಾರಣವೆಂದು ಉಲ್ಲೇಖಿಸಿದ್ದಾರೆ ಆದರೆ ಹಲವಾರು ಇತರ ಸರ್ಕಾರಿ ಯೋಜನೆಗಳ ಡೇಟಾದಂತೆ ಅದನ್ನು ಸುಲಭವಾಗಿ ಅನಾಮಧೇಯಗೊಳಿಸಬಹುದು ಎಂದು ತಜ್ಞರು ಹೇಳುತ್ತಾರೆ.

ಪೋಷಣ್‌ ಟ್ರ್ಯಾಕರ್ ವೆಬ್‌ಸೈಟ್‌ನಲ್ಲಿ (https://poshantracker.in/), ಸರ್ಕಾರವು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಆಡಳಿತಾತ್ಮಕ ವಿವರಗಳನ್ನು ಮಾತ್ರ ಒದಗಿಸುವ ಡ್ಯಾಶ್‌ಬೋರ್ಡ್ ಅನ್ನು ಹೋಸ್ಟ್ ಮಾಡುತ್ತದೆ. ಇದು ಒಟ್ಟು ಹಾಜರಾತಿ, ವ್ಯಾಕ್ಸಿನೇಷನ್, ಟೇಕ್-ಹೋಮ್ ರೇಷನ್ ಮತ್ತು ಕಳೆದ ಒಂದು ತಿಂಗಳು, ಕಳೆದ ಏಳು ದಿನಗಳು ಮತ್ತು ಇಂದು ಬಡಿಸಿದ ಬೇಯಿಸಿದ ಬಿಸಿ ಊಟದ ವಿವರಗಳನ್ನು ಒಳಗೊಂಡಿದೆ. ಇದು ನಿರ್ದಿಷ್ಟ ಅವಧಿಯಲ್ಲಿ ಈ ಸೇವೆಗಳ ವಿಶ್ಲೇಷಣೆಯನ್ನು ಅನುಮತಿಸುವುದಿಲ್ಲ ಅಥವಾ ಸಂಶೋಧಕರು, ಅರ್ಥಶಾಸ್ತ್ರಜ್ಞರು ಮತ್ತು ಕಾರ್ಯಕರ್ತರು ಹೆಚ್ಚು ಆಸಕ್ತಿ ಹೊಂದಿರುವ ಫಲಾನುಭವಿಗಳ ಪೌಷ್ಟಿಕಾಂಶದ ಸ್ಥಿತಿಯಂತಹ ನಿರ್ಣಾಯಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ.

“ಡ್ಯಾಶ್‌ಬೋರ್ಡ್ ಯಾವುದೇ ಉಪಯುಕ್ತ ಮಾಹಿತಿಯನ್ನು ಹೊಂದಿಲ್ಲ ಮತ್ತು ನಾವು ಅದರಿಂದ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಪೋಷಣ್‌ ಟ್ರ್ಯಾಕರ್ ರಿಯಲ್‌ಟೈಮ್‌ ಡೇಟಾವನ್ನು ದಾಖಲು ಮಾಡಿದರೆ, NFHS ನಂತಹ ಸಮೀಕ್ಷೆಗಳು ಕೆಲವು ವರ್ಷಗಳಿಗೊಮ್ಮೆ ಹೊರಬರುತ್ತವೆ. ಡೇಟಾವನ್ನು ಸಂಗ್ರಹಿಸಿದ ಸಮಯ ಮತ್ತು ವರದಿಯನ್ನು ಬಿಡುಗಡೆ ಮಾಡುವ ಸಮುದ ನಡುವೆ ವಿಳಂಬವಿದೆ. ಪೋಷಣ್‌ ಟ್ರ್ಯಾಕರ್ ಡೇಟಾ ಸಾರ್ವಜನಿಕ ಡೊಮೇನ್‌ನಲ್ಲಿರಬೇಕು, ಏಕೆಂದರೆ ಅದು ಸಾರ್ವಜನಿಕ ಹಣದಿಂದ ನಿರ್ಮಿಸಲ್ಪಟ್ಟಿದೆ ಮತ್ತು ಸಾರ್ವಜನಿಕ ಡೇಟಾವನ್ನು ಒಳಗೊಂಡಿರುತ್ತದೆ. ಇದರ ಲಭ್ಯತೆಯು ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಸುಧಾರಿಸುತ್ತದೆ ಎಂದು ಅಂಬೇಡ್ಕರ್ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ (ಅರ್ಥಶಾಸ್ತ್ರ) ಮತ್ತು ಆಹಾರ ಹಕ್ಕು ಅಭಿಯಾನದ ಸದಸ್ಯರಾದ ದೀಪಾ ಸಿನ್ಹಾ ಹೇಳುತ್ತಾರೆ.

ಸ್ಮೃತಿ ಇರಾನಿಯವರೇ ಅಪೌಷ್ಟಿಕ ಮಕ್ಕಳ ಹೆಸರಲ್ಲೂ ಗೋಲ್‌ಮಾಲ್‌ ಬೇಕಿತ್ತಾ?

Tags: 1000-crore-spent-on-poshan-tracker-but-where-is-the-dataBJPSmriti Iraniನರೇಂದ್ರ ಮೋದಿಬಿಜೆಪಿ
Previous Post

ಕಾರ್ಮಿಕ ಸಂಘಟನೆಗಳ ಮುಂದಿರುವ ಸವಾಲುಗಳು

Next Post

ನಿರ್ಗಮಿಸಿದ ಮತ್ತೋರ್ವ ಕಲಾತಪಸ್ವಿ- ‘ಶಿವರಾಂ’

Related Posts

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
0

ಇನ್ಮುಂದೆ ಮತದಾರರ ಪಟ್ಟಿ (Voters list) ಪರಿಷ್ಕರಣೆಗಾಗಿ ಮತದಾರರ ಆಧಾರ್ ಕಾರ್ಡ್ (Adhar card), ಮತದಾರರ ಗುರುತಿನ (Voter I’d ) ಚೀಟಿ ಮತ್ತು ಪಡಿತರ ಚೀಟಿಗಳನ್ನು...

Read moreDetails
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

July 10, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

CM Siddaramaiah: ರಕ್ಷಣಾ ಸಚಿವ ರಾಜನಾಥಸಿಂಗ್‌ ಅವರನ್ನು ಬೇಟಿ ಮಾಡಿದ ಸಿಎಂ ಸಿದ್ದರಾಮಯ್ಯ..

July 9, 2025
Next Post
ನಿರ್ಗಮಿಸಿದ ಮತ್ತೋರ್ವ ಕಲಾತಪಸ್ವಿ-  ‘ಶಿವರಾಂ’

ನಿರ್ಗಮಿಸಿದ ಮತ್ತೋರ್ವ ಕಲಾತಪಸ್ವಿ- 'ಶಿವರಾಂ'

Please login to join discussion

Recent News

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 
Top Story

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

by Chetan
July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು
Top Story

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

by ಪ್ರತಿಧ್ವನಿ
July 11, 2025
CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!
Top Story

CM Siddaramaiah: ಕರ್ನಾಟಕದಲ್ಲಿ ಸಿಎಂ ಹುದ್ದೆ ಖಾಲಿ ಇಲ್ಲ,, ಕರ್ನಾಟಕದ ಮುಖ್ಯಮಂತ್ರಿ ನಾನೇ..!!

by ಪ್ರತಿಧ್ವನಿ
July 10, 2025
Top Story

ಹಾಸನದಲ್ಲಿ ಹಾರ್ಟ್‌ ಅಟ್ಯಾಕ್‌ ಹೆಚ್ಚಾಗಲು ಇದೇ ಕಾರಣನಾ ಡಾಕ್ಟರ್‌ ಏನಂದ್ರು..!

by ಪ್ರತಿಧ್ವನಿ
July 10, 2025
Top Story

5ವರ್ಷ ನಾನೇ ಸಿಎಂರಾಜಕೀಯದಲ್ಲಿ ಅಲ್ಲೋಲ ಕಲ್ಲೋಲ..!

by ಪ್ರತಿಧ್ವನಿ
July 10, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

ಆಧಾರ್ ಕಾರ್ಡ್..ಪಡಿತರ ಚೀಟಿಯನ್ನೂ ಪರಿಗಣಿಸಬಹುದು – ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ಸೂಚನೆ 

July 11, 2025
ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

ಮಕ್ಕಳಿಗೆ ಸ್ವಲ್ಪ ಆದರೂ ಸಂಸ್ಕಾರ ಕಲಿಸಬೇಕಾದವರು ಯಾರು

July 11, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada