• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಸೇನಾ ಹೆಲಿಕಾಪ್ಟರ್ ಪತನ: ಮೋದಿ ಜನರಿಗೆ ವಿವರ ನೀಡಲಿ ಎಂದ ಸುಬ್ರಮಣಿಯನ್ ಸ್ವಾಮಿ

Any Mind by Any Mind
December 8, 2021
in ದೇಶ
0
ಸೇನಾ ಹೆಲಿಕಾಪ್ಟರ್ ಪತನ: ಮೋದಿ ಜನರಿಗೆ ವಿವರ ನೀಡಲಿ ಎಂದ ಸುಬ್ರಮಣಿಯನ್ ಸ್ವಾಮಿ
Share on WhatsAppShare on FacebookShare on Telegram

ಸೇನಾಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರನ್ನು ಬಲಿತೆಗೆದುಕೊಂಡಿರುವ ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್ ಪತನದ ಕುರಿತು ಪ್ರಧಾನಿ ಮೋದಿಯವರು ದೇಶದ ಜನತೆಗೆ ವಿವರಣೆ ನೀಡಬೇಕು ಎಂದು ಬಿಜೆಪಿ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಹೇಳಿದ್ದಾರೆ.

ADVERTISEMENT

ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಉಡುಪಿಗೆ ಆಗಮಿಸಿದ್ದ ಅವರು, ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಯಲ್ಲಿ ಘಟನೆಯಿಂದ ಆಘಾತವಾಗಿದೆ. ದೇಶ ಮತ್ತು ನಮ್ಮ ಸೇನಾ ಪಡೆಗಳ ಕಾಪ್ಟರ್ ಮತ್ತು ವಿಮಾನಗಳ ಸುರಕ್ಷತೆಯ ವಿಷಯದಲ್ಲಿ ಇದೊಂದು ಎಚ್ಚರಿಕೆಯ ಘಂಟೆ. ದೇಶದ ಜನತೆ ಘಟನೆಯಿಂದ ಆತಂಕಗೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ದೇಶದ ಜನತೆಗೆ ಘಟನೆಯ ಬಗ್ಗೆ ವಿವರ ನೀಡಬೇಕು ಎಂದಿದ್ದಾರೆ.

ಅಲ್ಲದೆ, ದೇಶದ ಸುರಕ್ಷತೆಯ ವಿಷಯದಲ್ಲಿ ಇದೊಂದು ಆತಂಕಕಾರಿ ಘಟನೆ. ಹಾಗಾಗಿ ಘಟನೆಯ ಕುರಿತು ಸಾಮಾನ್ಯ ತನಿಖೆ ನಡೆದರೆ ಸಾಲದು. ಆ ಬಗ್ಗೆ ಸುಪ್ರೀಂಕೋರ್ಟಿನ ಹಿರಿಯ ನ್ಯಾಯಮೂರ್ತಿಗಳಿಂದಲೇ ಗಂಭೀರ ತನಿಖೆ ನಡೆಯಬೇಕಿದೆ. ಆ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರು ನಿರ್ಧಾರ ಕೈಗೊಳ್ಳಬೇಕು ಎಂದೂ ಆಗ್ರಹಿಸಿದ್ದಾರೆ.

ತಮಿಳುನಾಡಿನ ಕೂನೂರಿನಲ್ಲಿ ಬುಧವಾರ ಮಧ್ಯಾಹ್ನ ನಡೆದಿರುವ ದುರ್ಘಟನೆಯಲ್ಲಿ ದೇಶದ ಮೂರೂ ಸೇನಾಪಡೆಗಳ ಮೊಟ್ಟಮೊದಲ ಮುಖ್ಯಸ್ಥ(ಸಿಡಿಎಫ್) ಬಿಪಿನ್ ರಾವತ್ ಮತ್ತು ಜೊತೆಗಿದ್ದ ಅವರ ಪತ್ನಿ ಮಧುಲಿಕಾ ಸೇರಿದಂತೆ 13 ಮಂದಿ ಸಾವುಕಂಡಿದ್ದಾರೆ. ಸೇನಾ ಪಡೆಗಳ ಮುಖ್ಯಸ್ಥರು ಪ್ರಯಾಣಿಸುತ್ತಿದ್ದ ಭಾರತೀಯ ವಾಯುಪಡೆಗೆ ಸೇರಿದ ಅತ್ಯಾಧುನಿಕ ಎಂಐ 17 ವಿ5 ತಮಿಳುನಾಡಿನ ಕೂನೂರು ವಲಯದ ಕಾಡಿನ ನಡುವೆ ಪತನವಾಗಿತ್ತು.

ಸೇನಾಪಡೆಯ ಅತ್ಯಾಧುನಿಕ ಹೆಲಿಕಾಪ್ಟರ್ ಅತ್ಯಧಿಕ ಸುರಕ್ಷತೆಯ ಹೊರತಾಗಿಯೂ, ಸೇನಾ ಪಡೆ ಮುಖ್ಯಸ್ಥರನ್ನು ಹೊತ್ತೊಯ್ಯುವಾಗಲೇ ದಿಢೀರನೇ ಸ್ಫೋಟಿಸಿ ಪತನವಾಗಿರುವುದು ಕೇವಲ ಆಕಸ್ಮಿಕವೇ ಅಥವಾ ಇನ್ನಾವುದಾದರೂ ಕಾರಣಗಳಿರಬಹುದೆ ಎಂಬ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯಸಭಾ ಸದಸ್ಯ ಹಾಗೂ ನಿರ್ಭಿಡೆಯ ಮಾತುಗಳಿಗೆ ಹೆಸರಾಗಿರುವ ಮುತ್ಸದ್ಧಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರ ಈ ಹೇಳಿಕೆಗೆ ಇನ್ನಿಲ್ಲದ ಮಹತ್ವ ಬಂದಿದೆ.

Tags: ಕೂನೂರುತಮಿಳುನಾಡುಬಿಪಿನ್ ರಾವತ್ಸುಬ್ರಮಣಿಯನ್ ಸ್ವಾಮಿಸೇನಾ ಪಡೆ ಮುಖ್ಯಸ್ಥಸೇನಾ ಹೆಲಿಕಾಪ್ಟರ್ ಪತನ
Previous Post

ಮೋದಿ ರಾಜಕೀಯ ಭಾಷಣವನ್ನು ಟ್ವೀಟ್ ಮಾಡುವ ಮೂಲಕ ಬಿಜೆಪಿ ಗುಲಾಮಗಿರಿಗೆ ಬಿತ್ತೇ PMO?

Next Post

ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಾಲು ಸಾಲು ನ್ಯಾಯಾಧೀಶರು!

Related Posts

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..
Top Story

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

by ಪ್ರತಿಧ್ವನಿ
April 14, 2026
0

ಬೆಂಗಳೂರು : ಸುಮಾರು ಎರಡು ದಶಕಗಳ ಕಾಲ 10 ಬಾರಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಂತರ ಬಿಹಾರದ (Bihar CM) ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್...

Read moreDetails
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

April 13, 2026
Next Post
ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಾಲು ಸಾಲು ನ್ಯಾಯಾಧೀಶರು!

ಅತ್ಯಾಚಾರ ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಸಾಲು ಸಾಲು ನ್ಯಾಯಾಧೀಶರು!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!