ಅತ್ತ ರಷ್ಯಾ ಉಕ್ರೇನ್ ಮೇಲೆ ಯುದ್ಧ ಮಾಡುತ್ತಿದ್ದರೆ, ಇತ್ತ ವಿದೇಶಿ ಹೂಡಿಕೆದಾರರು ತಮ್ಮ ಬಂಡವಾಳ ಸಹಿತ ಭಾರತದಿಂದ ಕಾಲ್ಕಿಲುತ್ತಿದ್ದಾರೆ. ವಿದೇಶಿ ಹೂಡಿಕೆದಾರರು ಎಷ್ಟು ಬೃಹತ್ ಪ್ರಮಾಣದಲ್ಲಿ ಹೂಡಿಕೆ...
Read moreDetailsಶ್ರೀಲಂಕಾದಲ್ಲಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ, ಪೊಲೀಸರು ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಶ್ರೀಲಂಕಾ ರಾಷ್ಟ್ರದ ಇತಿಹಾಸದಲ್ಲಿಯೇ ಈ ರೀತಿಯ ಆರ್ಥಿಕ ಬಿಕ್ಕಟ್ಟು ಎದುರಾಗಿರಲಿಲ್ಲ. ಈಗಿನ ಆರ್ಥಿಕ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸಲು ಅಸರ್ಥವಾಗಿರುವ ಕಾರಣ, ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೋತಬಯ ರಾಜಪಕ್ಸೆಯ ಕೊಲಂಬೋದ ಖಾಸಗಿ ನಿವಾಸದ ಮುಂದೆ ಜಮಾಯಿಸಿದ ಲಂಕನ್ನರು, ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯು ತೀವ್ರವಾಗುತ್ತಿದ್ದಂತೆಯೇ, ಜನರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗವನ್ನೂ ನಡೆಸಲಾಯಿತು. ಈ ಕುರಿತಾಗಿ ಅಧಿಕೃತ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಲ್ ಎದಿರಿಮನ್ನೆ, ದೇಶದ ವಾಣಿಜ್ಯ ರಾಜಧಾನಿಯಾಗಿರುವ ಕೊಲಂಬೋವಿನ ನಾಲ್ಕು ವಲಯಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ, ಎಂದು ಹೇಳಿದ್ದಾರೆ. ಕೆಲವು ಹೆಲ್ಮೆಟ್’ಧಾರಿ ಪ್ರತಿಭಟನಾಕಾರರು ಆವರಣ ಗೋಡೆಯನ್ನು ಧ್ವಂಸಗೊಳಿಸಿ ಇಟ್ಟಿಗೆಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅಧ್ಯಕ್ಷ ಗೋತಬಯ ಅವರ ನಿವಾಸಕ್ಕೆ ತೆರಳುವ ರಸ್ತೆಯಲ್ಲಿ ಬಸ್ ಒಂದನ್ನು ಸುಟ್ಟುಹಾಕಲಾಗಿದೆ. ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ, ವಿದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿದೆ. ವಿದ್ಯುಚ್ಚಕ್ತಿ ಉಳಿತಾಯ ಮಾಡಲು ಬೀದಿ ದೀಪಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಪೆಟ್ರೋಲ್ ಡೀಸೆಲ್ ಖರೀದಿಸಲು ಜನರು ಕಿಲೋಮೀಟರ್’ಗಟ್ಟಲೆ ಸರತಿಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಈ ರೀತಿ ಸರತಿ ಸಾಲಿನಲ್ಲಿ ನಿಂತ ಇಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. ದೇಶದ ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರ ಪ್ರಮಾಣ 18.7%ಕ್ಕೆ ಏರಿಕೆ ಕಂಡಿದೆ. ಆಹಾರೋತ್ಪನ್ನಗಳ ಹಣದುಬ್ಬರ ಪ್ರಮಾಣ 30.2%ದಷ್ಟು ಏರಿಕೆಯಾಗಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಪೇಪರ್ ಕೊರತೆ ಕಾಡುತ್ತಿರುವುದರಿಂದ ದೇಶದೆಲ್ಲೆಡೆ ಪರೀಕ್ಷೆಗಳನ್ನು ಮುಮದೂಡಲಾಗಿದೆ. ದಿನಪತ್ರಿಕೆಗಳ ಮುದ್ರಣ ವೆಚ್ಚ ದುಬಾರಿಯಾದ್ದರಿಂದ ಹಲವು ಪತ್ರಿಕೆಗಳು ಮುದ್ರಣವನ್ನೇ ಸ್ಥಗಿತಗೊಳಿಸಿವೆ. ಮೇಲಾಗಿ, ವಿದ್ಯುತ್ ಸಮಸ್ಯೆಯಿಂದ ಸಂಪೂರ್ಣ ರಾಷ್ಟ್ರವೇ ಹೈರಾಣಾಗಿ ಹೋಗಿದೆ. ಹೊಸತಾಗಿ ವಿದ್ಯುತ್ ಉತ್ಪಾದನೆ ಮಾಡಲು ಡೀಸೆಲ್ ಕೊರತೆ ಇರುವುದರಿಂದ ಸತತ 13 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಶನಿವಾರದ ವೇಳೆಗೆ ಸುಮಾರು 500 ಮಿಲಿಯನ್ ಡಾಲರ್ ಮೊತ್ತದ ಡೀಸೆಲ್ ಕಂಟೇನರ್ ಹಡಗು ಭಾರತದಿಂದ ಶ್ರೀಲಂಕಾ ತಲುಪಲಿದೆ. “ಇದರಿಂದಾಗಿ ಸಂಪೂರ್ಣ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ, ಅಲ್ಪಮಟ್ಟಿನ ಲೋಡ್ ಶೆಡ್ಡಿಂಗ್ ಸಮಯವನ್ನು ಕಡಿತಗೊಳಿಸಬಹುದು. ಮೇ ತಿಂಗಳ ಅಂತ್ಯದಲ್ಲಿ ಮಳೆ ಬರುವವರೆಗೂ ವಿದ್ಯುತ್ ಪೂರೈಕೆಗೆ ಸಮಸ್ಯೆ ಎದುರಾಗಲಿದೆ. ನಾವು ಏನು ಮಾಡಲೂ ಸಾಧ್ಯವಿಲ್ಲ,” ಎಂದು ವನಿಯರಾಚ್ಚಿ ಎಂಬ ಅಧಿಕಾರಿ ಹೇಳಿದ್ದಾರೆ. ಕಠಿಣ ಬಿಸಿಲಿನ ಕಾರಣದಿಂದಾಗಿ ಜಲವಿದ್ಯುತ್ ಸ್ಥಾವರಗಳಿಗೆ ನೀರು ಪೂರೈಸುವ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿರುವುದು ಶ್ರೀಲಂಕಾಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಾಮಾನ್ಯವಾಗಿ ದಿನದ ನಾಲ್ಕೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಕೊಲಂಬೋ ಸ್ಟಾಕ್ ಎಕ್ಸ್‌ಚೇಂಜ್ ತನ್ನ ಕಾರ್ಯಾವಧಿಯನ್ನು ವಿದ್ಯುತ್ ಕೊರತೆಯ ಕಾರಣ ಎರಡು ಗಂಟೆ ಮೊಟಕುಗೊಳಿಸಿದೆ. ದೇಶದ ಕಂಪೆನಿಗಳ ಶೇರು ಮೌಲ್ಯ ಸತತ ಮೂರನೇ ದಿನವೂ ಶೇ. 5ರಷ್ಟು ಕುಸಿದಿದೆ. ಕೋವಿಡ್ ಸಂಕಷ್ಟದ ಜೊತೆಗೆ, ತಪ್ಪಾದ ಸಂದರ್ಭದಲ್ಲಿ ತೆರಿಗೆ ಕಡಿತಗೊಳಿಸಿದ್ದು ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಲು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ಶ್ರೀಲಂಕಾದ ವಿದೇಶಿ ವಿನಿಮಯವು ಶೇ,70ರಷ್ಟು ಕುಸಿದಿದ್ದು, ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. ಮುಂಬರುವ ದಿನಗಳಲ್ಲಿ International Monetary Fund (IMF) ವತಿಯಿಂದ ಸಾಲ ಪಡೆಯುವ ಕುರಿತು ಮಾತುಕತೆಗಳನ್ನು ನಡೆಸಲಾಗುವುದು ಎಂದು ಸರ್ಕಾರದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ.
Read moreDetailsಶ್ರೀಲಂಕಾ ಆರ್ಥಿಕ ಕುಸಿತ ಮತ್ತು ಆಹಾರ ಮತ್ತು ಇಂಧನ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯನ್ನು ಎದುರಿಸುತ್ತಿದೆ, ಹಲವಾರು ಕುಟುಂಬಗಳು ಆಶ್ರಯ ಪಡೆಯಲು ದ್ವೀಪ ದೇಶದಿಂದ ತಮಿಳುನಾಡಿನ ತೀರಕ್ಕೆ...
Read moreDetailsಫೆಬ್ರವರಿ ತಿಂಗಳಲ್ಲಿ ಕರ್ನಾಟಕದ ಕಾಲೇಜುಗಳಲ್ಲಿ ಹಿಜಾಬ್ ವಿವಾದ ಭುಗಿಲೆದ್ದ ಬೆನ್ನಲ್ಲೇ ಹಿಂದುತ್ವವಾದಿ ಸಂಘಟನೆಗಳು ಹಿಜಾಬ್ ಧರಿಸಿದ ಹೆಣ್ಣುಮಕ್ಕಳು ಕಾಲೇಜ್ ಪ್ರವೇಶಿಸಬಾರದು ಎಂದು ಕೇಸರಿ ಶಾಲು ಧರಿಸಿ ಪ್ರತಿಭಟನೆ...
Read moreDetailsಭಾರತದ ನೆರೆ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ವ್ಯವಸ್ಥೆ ಪಾತಾಳಕ್ಕೆ ಕುಸಿದಿದೆ. ಹಣದುಬ್ಬರ ತೀವ್ರವಾಗಿದ್ದು ಆಹಾರಕ್ಕೂ ಪರದಾಡುವಂತಾಗಿದೆ ಎಂದು ವರದಿಗಳಾಗುತ್ತಿವೆ. ಈ ನಡುವೆ ಕಾಗದಗಳ ಬೆಲೆ ಏರಿಕೆಯಾಗಿದ್ದು, ಮುದ್ರಣ...
Read moreDetailsರಷ್ಯಾ ಮತ್ತು ಉಕ್ರೇನ್ ನಡುವಿನ ನಾಲ್ಕು ವಾರಗಳ ಯುದ್ಧದಲ್ಲಿ 7,000 ರಿಂದ 15,000 ರಷ್ಯಾದ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ನ್ಯಾಟೋ ಬುಧವಾರ ಅಂದಾಜಿಸಿದೆ. ಉಕ್ರೇನ್ ನ ಯೋಧರು...
Read moreDetailsಮಾರಿಯುಪೋಲ್‌ಗೆ ಶರಣಾಗುವಂತೆ ಮಾಸ್ಕೋದ ಎಚ್ಚರಿಕೆಯ ನಡುವೆ ಉಕ್ರೇನ್ ರಷ್ಯಾಕ್ಕೆ ತಲೆಬಾಗಲು ನಿರಾಕರಿಸಿದೆ. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆಗೆ...
Read moreDetailsರಷ್ಯಾದ ಆಕ್ರಮಣದ ನಂತರ ಹತ್ತು ಮಿಲಿಯನ್ ಜನರು ಉಕ್ರೇನ್ನಲ್ಲಿ ತಮ್ಮ ಮನೆಗಳನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮುಖ್ಯಸ್ಥರು ಭಾನುವಾರ ಹೇಳಿದ್ದಾರೆ. ಉಕ್ರೇನ್ ನ ಜನಸಂಖ್ಯೆಯ ಪೈಕಿ...
Read moreDetailsಕೋವಿಡ್ 19 ಆತಂಕ ಇನ್ನೂ ಕಡಿಮೆಯಾಗಿಲ್ಲ. ಇನ್ನೇನು ಕೋವಿಡ್ ಕಳೆದು ನಿಟ್ಟುಸಿರು ಬಿಡಬಹುದು ಎಂದುಕೊಳ್ಳುತ್ತಿರುವಾಗಲೇ ಒಮೈಕ್ರಾನ್ BA.2 ರೂಪಾಂತರಿಯು ಚೀನಾ ಮತ್ತು ದಕ್ಷಿಣಾ ಕೊರಿಯಾ ಸೇರಿದಂತೆ ಏಷ್ಯಾ...
Read moreDetailsದಿಗ್ಬಂಧನಗಳ ಮೂಲಕ ಪಾಶ್ಚಾತ್ಯ ರಾಷ್ಟ್ರಗಳು ರಷ್ಯಾವನ್ನು ಇತರ ರಾಷ್ಟ್ರಗಳಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಿದ್ದರೂ ರಷ್ಯಾದ ಬಹುಕಾಲದ ಸ್ನೇಹಿತ ಭಾರತ ತನ್ನ ಪ್ರಮುಖ ವ್ಯಾಪಾರೀ ಪಾಲುದಾರನಾದ ರಷ್ಯಾವನ್ನು ಇನ್ನೂ ತನ್ನ...
Read moreDetailsಉಕ್ರೇನ್ನ ಮೇಲೆ ರಷ್ಯಾದ ಆಕ್ರಮಣದ ನಡುವೆಯೇ ರಷ್ಯಾ ಸರ್ಕಾರವು ತನ್ನ ದೇಶದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಾದ Instagram ಅನ್ನು ನಿರ್ಬಂಧಿಸಿದೆ. ಏಕೆಂದರೆ ಅದು ರಷ್ಯಾದ ಸೈನಿಕರ ವಿರುದ್ಧ...
Read moreDetailsರಷ್ಯಾ ಯುಕ್ರೇನ್ ಯುದ್ಧ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು ಹೊಸ ಬೆಳವಣಿಗೆಯಲ್ಲಿ, ಕೈವ್ನಲ್ಲಿನ ಸರ್ಕಾರವನ್ನು ಉರುಳಿಸಲು ನಗರ ಯುದ್ಧದಲ್ಲಿ ಅನುಭವಿಗಳಾಗಿರುವ ಸಿರಿಯನ್ ಸೈನಿಕರನ್ನುಪುಟಿನ್ ಬಳಸುತ್ತಿದ್ದಾರೆ ಎಂದು ವಾಲ್...
Read moreDetailsಉಕ್ರೇನ್ ಹಾಗೂ ರಷ್ಯಾ ನಡುವಣ ಸಂಘರ್ಷ (ukraine russia conflict) ದಿನದಿಂದ ದಿನಕ್ಕೆ ಭೀಕರತೆಗೆ ಮುಖ ಮಾಡುತ್ತಿದೆ. ಈಗಾಗಲೇ ಉಕ್ರೇನ್ ನಲ್ಲಿ ಜನ ಜೀವನ ಎಲ್ಲವೂ ತತ್ತರಿಸಿ...
Read moreDetailsಸಂಘರ್ಷಮಯ ಉಕ್ರೇನ್ ನೆಲದಲ್ಲಿ ಜೀವ ಕೈಯಲ್ಲಿಟ್ಟು ಬದುಕಿದ, ತಮ್ಮ ಸ್ವಂತ ರಿಸ್ಕ್ ಮೇಲೆ ರೊಮಾನಿಯಾ ಗಡಿ ತಲುಪಿದ ಭಾರತೀಯ ವಿದ್ಯಾರ್ಥಿಗಳು ಎದುರಿಸಿದ್ದು ಅಂತಿಂಥ ಕಷ್ಟವೇನಲ್ಲ. ವಿಧ್ಯಾಭ್ಯಾಸಕ್ಕಾಗಿ ತಾಯ್ನಾಡು...
Read moreDetailsಅಫ್ಘಾನಿಸ್ತಾನ ಮತ್ತೆ ತಾಲಿಬಾನಿನ ತೆಕ್ಕೆಗೆ ಬಿದ್ದು ಆರು ತಿಂಗಳುಗಳಾದವು. ಮೊದಮೊದಲು ಅಫ್ಘಾನಿಸ್ತಾದಿಂದ ಓಡಿಹೋಗಲು ಏರ್‌ಪೋರ್ಟ್‌ನಲ್ಲಿ ಕಿಕ್ಕಿರಿದ ಜನರ, ಮಹಿಳೆಯರ ಫೊಟೊಇಗಳನ್ನು ಸಾರ್ವಜನಿಕ ಸ್ಥಳಗಳಿಂದ ಅಳಿಸಿ ಹಾಕಿದ, ಮಹಿಳಾ...
Read moreDetailsಹವಾಮಾನ ವೈಪರೀತ್ಯವು ಭವಿಷ್ಯದಲ್ಲಿ ವಿಪತ್ತನ್ನು ಉಂಟುಮಾಡುತ್ತದೆ ಎಂದು ವಿಜ್ಞಾನಿಗಳು ಬಹಳ ಹಿಂದಿನಿಂದಲೂ ಎಚ್ಚರಿಸುತ್ತಾ ಬಂದಿದ್ದಾರೆ. ಆದರೆ ದಕ್ಷಿಣ ಅಮೆರಿಕಾ ಬ್ರೆಜಿಲ್‌ನಲ್ಲಿ ಕಳೆದ ತಿಂಗಳು ಸಂಭವಿಸಿದ ಮಾರಣಾಂತಿಕ ಭೂಕುಸಿತಗಳು,...
Read moreDetailsಯುದ್ದ ಪೀಡಿತ ಉಕ್ರೇನ್ ಹಾಗೂ ರಷ್ಯಾ ನಡುವೆ ಸಂಭವಿಸಿರುವ ಬಿಕ್ಕಟ್ಟಿನ ನಡುವೆ ಅಥವಾ ಕೋವಿಡ್-19 ಅಲೆಗಳ ಸಮಯದಲ್ಲಿ Internship ಅಪೂರ್ಣಗಿಳಿಸಿರುವ ವಿದೇಶಿ ವೈದ್ಯಕೀಯ ವಿದ್ಯಾರ್ಥಿಗಳು ಭಾರತದಲ್ಲಿ ಅದೇ...
Read moreDetailsಕಳೆದ ಏಳು ದಿನಗಳಿಂದ ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಯೊಬ್ಬ (Indian student ) ರಾಯಭಾರ ಕಚೇರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ. ಉಕ್ರೇನ್ನ ಭಾರತೀಯ ರಾಯಭಾರ ಕಚೇರಿ...
Read moreDetailsಯುದ್ಧಗ್ರಸ್ಥ ಉಕ್ರೇನಿನಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವ ಆಪರೇಷನ್ ಗಂಗಾ ಕಾರ್ಯಾಚರಣೆ ಚುರುಕಾಗಿದೆ. ರಷ್ಯಾ ದಾಳಿಗೆ ಈಡಾಗಿರುವ ಉಕ್ರೇನಿನ ಕೀವ್ ಮತ್ತು ಕಾರ್ಕೀವ್ ನಗರಗಳಲ್ಲಿ ಭಾರತೀಯ ವಿದ್ಯಾರ್ಥಿಗಳು...
Read moreDetailsಯುದ್ಧಗ್ರಸ್ಥ ಉಕ್ರೇನ್ ನೆರೆಹೊರೆಯ ದೇಶಗಳಿಗೆ ಕಾಲ್ನಡಿಗೆ ಹಾಗೂ ಇತರೆ ಸಾರಿಗೆ ಬಳಸಿ ತಲುಪಿರುವ ಭಾರತೀಯ ವಿದ್ಯಾರ್ಥಿಗಳನ್ನು ಕರೆ ತರುವ ಆಪರೇಶನ್ ಗಂಗಾ ಯೋಜನೆ ಮೇಲ್ವಿಚಾರಣೆಗೆ ನರೇಂದ್ರ ಮೋದಿ ಸಂಪುಟದ ನಾಲ್ವರು...
Read moreDetails© 2024 www.pratidhvani.com - Analytical News, Opinions, Investigative Stories and Videos in Kannada