• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ವಿದೇಶ

ಶ್ರೀಲಂಕಾದಲ್ಲಿ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಪ್ರತಿಭಟನೆ; ಕರ್ಫ್ಯೂ ಜಾರಿ

ಪ್ರತಿಧ್ವನಿ by ಪ್ರತಿಧ್ವನಿ
April 1, 2022
in ವಿದೇಶ
0
ಶ್ರೀಲಂಕಾದಲ್ಲಿ ಹಿಂಸಾತ್ಮಕ ಸ್ವರೂಪಕ್ಕೆ ತಿರುಗಿದ ಪ್ರತಿಭಟನೆ; ಕರ್ಫ್ಯೂ ಜಾರಿ
Share on WhatsAppShare on FacebookShare on Telegram

ADVERTISEMENT

ಶ್ರೀಲಂಕಾದಲ್ಲಿ ನಡೆಯುತ್ತಿರುವ ಸರ್ಕಾರ ವಿರೋಧಿ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆಯುತ್ತಿರುವ ಬೆನ್ನಲ್ಲೇ, ಪೊಲೀಸರು ಕರ್ಫ್ಯೂ ಘೋಷಣೆ ಮಾಡಿದ್ದಾರೆ. ಪ್ರಸ್ತುತ ಶ್ರೀಲಂಕಾ ರಾಷ್ಟ್ರದ ಇತಿಹಾಸದಲ್ಲಿಯೇ ಈ ರೀತಿಯ ಆರ್ಥಿಕ ಬಿಕ್ಕಟ್ಟು ಎದುರಾಗಿರಲಿಲ್ಲ. 

ಈಗಿನ ಆರ್ಥಿಕ ಬಿಕ್ಕಟ್ಟನ್ನು ಸರ್ಕಾರ ನಿಭಾಯಿಸಲು ಅಸರ್ಥವಾಗಿರುವ ಕಾರಣ, ಶ್ರೀಲಂಕಾ ರಾಷ್ಟ್ರಾಧ್ಯಕ್ಷ ಗೋತಬಯ ರಾಜಪಕ್ಸೆಯ ಕೊಲಂಬೋದ ಖಾಸಗಿ ನಿವಾಸದ ಮುಂದೆ ಜಮಾಯಿಸಿದ ಲಂಕನ್ನರು, ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಯು ತೀವ್ರವಾಗುತ್ತಿದ್ದಂತೆಯೇ, ಜನರ ಮೇಲೆ ಅಶ್ರುವಾಯು ಮತ್ತು ಜಲಫಿರಂಗಿ ಪ್ರಯೋಗವನ್ನೂ ನಡೆಸಲಾಯಿತು. 

ಈ ಕುರಿತಾಗಿ ಅಧಿಕೃತ ಮಾಹಿತಿ ನೀಡಿರುವ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಮಲ್ ಎದಿರಿಮನ್ನೆ, ದೇಶದ ವಾಣಿಜ್ಯ ರಾಜಧಾನಿಯಾಗಿರುವ ಕೊಲಂಬೋವಿನ ನಾಲ್ಕು ವಲಯಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ, ಎಂದು ಹೇಳಿದ್ದಾರೆ. 

ಕೆಲವು ಹೆಲ್ಮೆಟ್’ಧಾರಿ ಪ್ರತಿಭಟನಾಕಾರರು ಆವರಣ ಗೋಡೆಯನ್ನು ಧ್ವಂಸಗೊಳಿಸಿ ಇಟ್ಟಿಗೆಗಳಿಂದ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಅಧ್ಯಕ್ಷ ಗೋತಬಯ ಅವರ ನಿವಾಸಕ್ಕೆ ತೆರಳುವ ರಸ್ತೆಯಲ್ಲಿ ಬಸ್ ಒಂದನ್ನು ಸುಟ್ಟುಹಾಕಲಾಗಿದೆ. 

ದೇಶದ ಆರ್ಥಿಕ ಪರಿಸ್ಥಿತಿ ಯಾವ ಮಟ್ಟಕ್ಕೆ ಕುಸಿದಿದೆ ಎಂದರೆ, ವಿದೇಶಗಳಿಂದ ಇಂಧನ ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಿಸುತ್ತಿದೆ. ವಿದ್ಯುಚ್ಚಕ್ತಿ ಉಳಿತಾಯ ಮಾಡಲು ಬೀದಿ ದೀಪಗಳ ಸಂಪರ್ಕವನ್ನು ಕಡಿತಗೊಳಿಸಲಾಗಿದೆ. ಪೆಟ್ರೋಲ್ ಡೀಸೆಲ್ ಖರೀದಿಸಲು ಜನರು ಕಿಲೋಮೀಟರ್’ಗಟ್ಟಲೆ ಸರತಿಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಈ ರೀತಿ ಸರತಿ ಸಾಲಿನಲ್ಲಿ ನಿಂತ ಇಬ್ಬರು ಸಾವನ್ನಪ್ಪಿರುವುದಾಗಿ ಪೊಲೀಸರು ದೃಢಪಡಿಸಿದ್ದಾರೆ. 

ದೇಶದ ಚಿಲ್ಲರೆ ಮಾರುಕಟ್ಟೆಯ ಹಣದುಬ್ಬರ ಪ್ರಮಾಣ 18.7%ಕ್ಕೆ ಏರಿಕೆ ಕಂಡಿದೆ. ಆಹಾರೋತ್ಪನ್ನಗಳ ಹಣದುಬ್ಬರ ಪ್ರಮಾಣ 30.2%ದಷ್ಟು ಏರಿಕೆಯಾಗಿದೆ. ಅಗತ್ಯವಸ್ತುಗಳ ಬೆಲೆ ಏರಿಕೆಯಿಂದಾಗಿ ಜನರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. 

ಪೇಪರ್ ಕೊರತೆ ಕಾಡುತ್ತಿರುವುದರಿಂದ ದೇಶದೆಲ್ಲೆಡೆ ಪರೀಕ್ಷೆಗಳನ್ನು ಮುಮದೂಡಲಾಗಿದೆ. ದಿನಪತ್ರಿಕೆಗಳ ಮುದ್ರಣ ವೆಚ್ಚ ದುಬಾರಿಯಾದ್ದರಿಂದ ಹಲವು ಪತ್ರಿಕೆಗಳು ಮುದ್ರಣವನ್ನೇ ಸ್ಥಗಿತಗೊಳಿಸಿವೆ. ಮೇಲಾಗಿ, ವಿದ್ಯುತ್ ಸಮಸ್ಯೆಯಿಂದ ಸಂಪೂರ್ಣ ರಾಷ್ಟ್ರವೇ ಹೈರಾಣಾಗಿ ಹೋಗಿದೆ.

ಹೊಸತಾಗಿ ವಿದ್ಯುತ್ ಉತ್ಪಾದನೆ ಮಾಡಲು ಡೀಸೆಲ್ ಕೊರತೆ ಇರುವುದರಿಂದ ಸತತ 13 ಗಂಟೆಗಳ ಕಾಲ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದೆ. ಶನಿವಾರದ ವೇಳೆಗೆ ಸುಮಾರು 500 ಮಿಲಿಯನ್ ಡಾಲರ್ ಮೊತ್ತದ ಡೀಸೆಲ್ ಕಂಟೇನರ್ ಹಡಗು ಭಾರತದಿಂದ ಶ್ರೀಲಂಕಾ ತಲುಪಲಿದೆ. 

“ಇದರಿಂದಾಗಿ ಸಂಪೂರ್ಣ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ, ಅಲ್ಪಮಟ್ಟಿನ ಲೋಡ್ ಶೆಡ್ಡಿಂಗ್ ಸಮಯವನ್ನು ಕಡಿತಗೊಳಿಸಬಹುದು. ಮೇ ತಿಂಗಳ ಅಂತ್ಯದಲ್ಲಿ ಮಳೆ ಬರುವವರೆಗೂ ವಿದ್ಯುತ್ ಪೂರೈಕೆಗೆ ಸಮಸ್ಯೆ ಎದುರಾಗಲಿದೆ. ನಾವು ಏನು ಮಾಡಲೂ ಸಾಧ್ಯವಿಲ್ಲ,” ಎಂದು ವನಿಯರಾಚ್ಚಿ ಎಂಬ ಅಧಿಕಾರಿ ಹೇಳಿದ್ದಾರೆ. 

ಕಠಿಣ ಬಿಸಿಲಿನ ಕಾರಣದಿಂದಾಗಿ ಜಲವಿದ್ಯುತ್ ಸ್ಥಾವರಗಳಿಗೆ ನೀರು ಪೂರೈಸುವ ಜಲಾಶಯಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿರುವುದು ಶ್ರೀಲಂಕಾಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. 

ಸಾಮಾನ್ಯವಾಗಿ ದಿನದ ನಾಲ್ಕೂವರೆ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದ ಕೊಲಂಬೋ ಸ್ಟಾಕ್ ಎಕ್ಸ್‌ಚೇಂಜ್ ತನ್ನ ಕಾರ್ಯಾವಧಿಯನ್ನು ವಿದ್ಯುತ್ ಕೊರತೆಯ ಕಾರಣ ಎರಡು ಗಂಟೆ ಮೊಟಕುಗೊಳಿಸಿದೆ. ದೇಶದ ಕಂಪೆನಿಗಳ ಶೇರು ಮೌಲ್ಯ ಸತತ ಮೂರನೇ ದಿನವೂ ಶೇ. 5ರಷ್ಟು ಕುಸಿದಿದೆ. 

ಕೋವಿಡ್ ಸಂಕಷ್ಟದ ಜೊತೆಗೆ, ತಪ್ಪಾದ ಸಂದರ್ಭದಲ್ಲಿ ತೆರಿಗೆ ಕಡಿತಗೊಳಿಸಿದ್ದು ದೇಶದಲ್ಲಿ ಆರ್ಥಿಕ ಕುಸಿತ ಉಂಟಾಗಲು ಕಾರಣವೆಂದು ವಿಶ್ಲೇಷಿಸಲಾಗುತ್ತಿದೆ. ಕಳೆದೆರಡು ವರ್ಷಗಳಲ್ಲಿ ಶ್ರೀಲಂಕಾದ ವಿದೇಶಿ ವಿನಿಮಯವು ಶೇ,70ರಷ್ಟು ಕುಸಿದಿದ್ದು, ಇದರಿಂದಾಗಿ ಜನಸಾಮಾನ್ಯರ ಬದುಕು ದುಸ್ತರವಾಗಿದೆ. 

ಮುಂಬರುವ ದಿನಗಳಲ್ಲಿ International Monetary Fund (IMF) ವತಿಯಿಂದ ಸಾಲ ಪಡೆಯುವ ಕುರಿತು ಮಾತುಕತೆಗಳನ್ನು ನಡೆಸಲಾಗುವುದು ಎಂದು ಸರ್ಕಾರದ ಪ್ರತಿನಿಧಿಯೊಬ್ಬರು ಹೇಳಿದ್ದಾರೆ. 

Tags: BJPCongress PartyCovid 19ಕರೋನಾಕೋವಿಡ್-19ಪ್ರತಿಭಟನೆಬಿಜೆಪಿ
Previous Post

ಹಿಜಾಬ್ ವಿವಾದ | ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಸಚಿವ ಬಿ.ಸಿ.ನಾಗೇಶ್ಗೆ ಲೀಗಲ್ ನೋಟಿಸ್!

Next Post

ಮೂರೇ ತಿಂಗಳಲ್ಲಿ 1.14 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಕಾಲ್ಕಿತ್ತ ವಿದೇಶಿ ಹೂಡಿಕೆದಾರರು

Related Posts

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..
Top Story

ಚೀನಾದ ಕ್ಸಿ ಜಿನ್‌ಪಿಂಗ್‌ಗೆ ಹಗ್‌ ಮಾಡಲು ಎದುರು ನೋಡುತ್ತಿದ್ದೇನೆ : ಇರಾನ್‌ ಎದುರು ಸೋತ ಟ್ರಂಪ್‌ ಹೊಸ ವರಸೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು : ಮಧ್ಯಪ್ರಾಚ್ಯದಲ್ಲಿ ಮುಂದುವರೆದಿರುವ ಯುದ್ಧವು ದಿನದಿಂದ ದಿನಕ್ಕೆ ಮಗ್ಗಲು ಬದಲಿಸುತ್ತಿದೆ. ಈಗಾಗಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾರ್ಮುಜ್‌ ಜಲಸಂಧಿಯನ್ನು ಬಂದ್‌ ಮಾಡುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಈ...

Read moreDetails
ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

ಅಮೆರಿಕ–ಇರಾನ್ ಸಂಘರ್ಷಕ್ಕೆ ತಾತ್ಕಾಲಿಕ ವಿರಾಮ?

April 15, 2026
ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

ಟ್ರಂಪ್ ವಿರುದ್ಧ ಪೋಪ್ ಲಿಯೋ ಕಟು ಟೀಕೆ:ಯುದ್ಧೋನ್ಮಾದಕ್ಕೆ ‘ಹುಚ್ಚುತನ’ ಎಚ್ಚರಿಕೆ

April 13, 2026
ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

ಹೊರ್ಮುಜ್‌ನಲ್ಲಿ ಹಡಗುಗಳ ಸಂಚಾರ ನಿರ್ಬಂಧ : ಟೆಹ್ರಾನ್‌ ಮೇಲೆ ಇಸ್ರೇಲ್‌ – ಅಮೆರಿಕದ ದಾಳಿಯಲ್ಲಿ ನಷ್ಟವಾಗಿದ್ದೆಷ್ಟು..?

April 13, 2026
ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

ಭಾರತ ಸಮುದ್ರ ಮಾರ್ಗಗಳಿಗೆ ತೆರಿಗೆ ವಿಧಿಸಲು ಸಾಧ್ಯವೇ? UNCLOS ನಿಯಮಗಳು ಏನು ಹೇಳುತ್ತವೆ?

April 12, 2026
Next Post
ಮೂರೇ ತಿಂಗಳಲ್ಲಿ 1.14 ಲಕ್ಷ ಕೋಟಿ ರೂಪಾಯಿಗಳೊಂದಿಗೆ  ಕಾಲ್ಕಿತ್ತ ವಿದೇಶಿ ಹೂಡಿಕೆದಾರರು

ಮೂರೇ ತಿಂಗಳಲ್ಲಿ 1.14 ಲಕ್ಷ ಕೋಟಿ ರೂಪಾಯಿಗಳೊಂದಿಗೆ ಕಾಲ್ಕಿತ್ತ ವಿದೇಶಿ ಹೂಡಿಕೆದಾರರು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada