ಕೃಷಿ ಕಾಯ್ದೆ ವಾಪಸ್: ಮೋದಿ ದಾಳಕ್ಕೆ ಮಣಿಯದ ರೈತ ನಾಯಕರು!

ಮೂರು ವಿವಾದಿತ ಕೃಷಿ ಕಾಯ್ದೆಗಳನ್ನು ವರ್ಷ ಪೂರ್ತಿ ಸಮರ್ಥಿಸಿಕೊಂಡು, ಆ ಕಾಯ್ದೆಗಳನ್ನು ವಿರೋಧಿಸಿ ಹೋರಾಟ ಮಾಡಿದ ರೈತರನ್ನು ಭಯೋತ್ಪಾದಕರು ಎಂದು ಟೀಕಿಸಿದ್ದ ಪ್ರಧಾನಿ ಮೋದಿ ಮತ್ತು ಅವರ...

Read moreDetails

ಕೊವ್ಯಾಕ್ಸಿನ್ ದರೋಡೆ? ಕೇಂದ್ರ ಸರ್ಕಾರ ಮತ್ತು ಭಾರತ್ ಬಯೋಟೆಕ್ ನಡುವಿನ ರಹಸ್ಯ ಒಪ್ಪಂದ, ರಾಯಲ್ಟಿ ಹಣದಲ್ಲಿ ಭಾರಿ ಗೋಲ್‌ಮಾಲ್!

ದೇಸಿ ಲಸಿಕೆ ಕೊವ್ಯಾಕ್ಸಿನ್ ಹೆಸರಲ್ಲಿ ಸರ್ಕಾರ ಮತ್ತು ಭಾರತ್ ಬಯೋಟೆಕ್ ನಡುವಿನ ಒಪ್ಪಂದದಲ್ಲಿ ದೊಡ್ಡ ಕಿಕ್ಬ್ಯಾಕ್ ವ್ಯವಹಾರ ನಡೆದಿದ್ದು, ಈ ಕಿಕ್ವ್ಯಾಕ್ ಫಲಾನುಭವಿಗಳು ಯಾರೆಂದು ಊಹಿಸುವುದುಕಷ್ಟವೇನಲ್ಲ. ಆರ್ಟಿಕಲ್14...

Read moreDetails

ಗಂಭೀರ ಅನುಮಾನ ಹುಟ್ಟುಹಾಕಿದ ಬಿಟ್ ಕಾಯಿನ್ ಕಿಂಗ್ ಪಿನ್ ನಾಪತ್ತೆ!

ಬಿಟ್ ಕಾಯಿನ್ ಹಗರಣ ಕುರಿತ ರಾಜ್ಯ ಸರ್ಕಾರ ಮತ್ತು ಬಿಜೆಪಿ ನಾಯಕರು ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ. ಹಗರಣದ ತನಿಖೆ ಇಡಿ- ಸಿಬಿಐನಿಂದ ನಡೆಯಲಿದೆ, ತಪ್ಪಿತಸ್ಥರು ಯಾರೇ ಇದ್ದರೂ...

Read moreDetails

ಅತಿಥಿಯಾಗಲು ಸದಾ ಸಿದ್ಧ ಆತಿಥೇಯರಾಗುವಿರಾ ?

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆಯ ಆಧಾರ ಸ್ತಂಭಗಳಲ್ಲಿ ಪ್ರಮುಖವಾದವು ಎರಡು. ಮೊದಲನೆಯದು ಮನುಷ್ಯನ ಹುಟ್ಟು, ಎರಡನೆಯದು ಅವನ ಆಹಾರ ಪದ್ಧತಿ. ವ್ಯಕ್ತಿಗತ ನೆಲೆಯಲ್ಲಿ ಈ ಎರಡು ನಿರ್ಣಾಯಕ...

Read moreDetails

ವ್ಯವಸ್ಥೆಯನ್ನೇ ಪ್ರಶ್ನಿಸುತ್ತಿರುವ ಜೈ ಭೀಮ್

ಆದಿವಾಸಿಗಳ ಬದುಕು-ಚಳುವಳಿಗಳ ಸದಾಶಯದ ನಡುವೆಯೇ ವ್ಯವಸ್ಥೆಗೊಂದು ಸವಾಲು ಸ್ಥಾಪಿತ ವ್ಯವಸ್ಥೆಗೆ ಸವಾಲೆಸೆಯುವ ಯಾವುದೇ ಸೃಜನಶೀಲ ಕೃತಿ ಅಧಿಕಾರಸ್ಥರನ್ನು ಮತ್ತು ಈ ಅಧಿಕಾರ ಕೇಂದ್ರಗಳ ಹಿಂಬಾಲಕರನ್ನು ತೀವ್ರವಾಗಿ ಪ್ರಕ್ಷುಬ್ಧಗೊಳಿಸಿಬಿಡುತ್ತವೆ....

Read moreDetails

ಕೇಂದ್ರ ಸರ್ಕಾರ ಅಥವಾ ಒಕ್ಕೂಟ ಸರ್ಕಾರ?; ಸಂವಿಧಾನದ ಪ್ರಕಾರ ಯಾವುದು ಸರಿ?

ರಾಜ್ಯಗಳ ಮತದಾರರ ಮೂಲಕ ಆಯ್ಕೆಯಾಗಿ ಸಂಸದರು ನವದೆಹಲಿಯಲ್ಲಿ ರಚಿಸುವ ಸರ್ಕಾರವನ್ನು ಏನೆಂದು ಕರೆಯುವುದು? ಸೆಂಟ್ರಲ್‌ ಗವರ್ನ್‌ಮೆಂಟ್‌ (ಕೇಂದ್ರ ಸರ್ಕಾರ) ಎನ್ನಬೇಕೋ ಅಥವಾ ಯುನಿಯನ್‌ ಗವರ್ನ್‌ಮೆಂಟ್‌ (ಒಕ್ಕೂಟ ಸರ್ಕಾರ)...

Read moreDetails

ಕರ್ನಾಟಕ, ತಮಿಳುನಾಡಿನ ತದ್ವಿರುದ್ಧ ಮುಖ ದರ್ಶನ ಮಾಡಿಸಿದ ಎರಡು ಪ್ರಕರಣ

ಕಳೆದ ಎರಡು ದಿನಗಳಲ್ಲಿ ದಕ್ಷಿಣ ಭಾರತದ ಎರಡು ಪ್ರಮುಖ ರಾಜ್ಯಗಳಾದ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಎರಡು ಮಹತ್ವದ ವಿದ್ಯಮಾನಗಳು ನಡೆದಿವೆ. ಮನುವಾದಿ ಪುರೋಹಿತಶಾಹಿ ಸಂಸ್ಕೃತಿಗೆ ಪರ್ಯಾಯವಾಗಿ ದ್ರಾವಿಡ...

Read moreDetails

ಹ್ಯಾಪಿ ಬರ್ತಡೇ ತೇಜಸ್ವಿ ಸೂರ್ಯ: ದ್ವೇಷ ಭಾಷಣವೇ ಆಸ್ತಿ, ಮೈ-ಮನಸುಗಳಲ್ಲಿ ಕೋಮುವಿಷ

ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಹುಟ್ಟುಹಬ್ಬ ಇವತ್ತು.  ಹ್ಯಾಪಿ ಬರ್ತಡೇ ಸೂರ್ಯ ಎನ್ನುತ್ತಲೇ ಈ ಮಹಾಶಯರು ಸಂಸದರಾಗಿ ಮಾಡಿದ ವಿಶೇಷ ಅಭಿವೃದ್ಧಿ...

Read moreDetails

ಮುಂದುವರೆದ ದರ್ಶನ್ ಅತಿರೇಕಗಳೂ, ದರ್ಶನ್ ಬ್ಯಾನ್ ಮಾಡಿದ ಚಾನೆಲ್ಗಳ ಆತುರವೂ…..

ಜಾಸ್ತಿ ಕುಡಿದರೆ ಮೈಮೇಲೆ ಪರಿಜ್ಞಾನ ಕಳೆದುಕೊಳ್ಳುವಂತೆ ವರ್ತಿಸುವ ನಟ ದರ್ಶನ್‌ ಬಾಯಿಯಿಂದ ಮೀಡಿಯಾ ವಿರುದ್ಧ ಅವಾಚ್ಯ ಶಬ್ದಗಳು ಉದುರುತ್ತವೆ.  ಎದುರಿಗಿದ್ದವರ ಮೇಲೆ ಹಲ್ಲೆಗೂ ಮುಂದಾಗುತ್ತಾರೆ. ದರ್ಶನ್‌ ಡಿವೈಡರ್‌ಗೆ...

Read moreDetails

2014ರ ನಂತರ ಬಂದ ಮುಸ್ಲಿಂ ವಿರೋಧಿ ಕಾನೂನುಗಳು, ಗೋಮಾಂಸ, ಲವ್ ಜಿಹಾದ್ ಎಂಬ ಅಸ್ತ್ರಗಳು!

ನರೇಂದ್ರ ಮೋದಿ  ಅವಧಿಯಲ್ಲಿ ಈ 8 ವರ್ಷಗಳ ಅವಧಿಯಲ್ಲಿ ಹಲವಾರು ಪ್ರತಿಗಾಮಿ ಶಾಸನಗಳನ್ನು ಜಾರಿಗೆ ತರಲಾಗಿದೆ. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಇಂತಹ ಅಪಾಯಕಾರಿ ಶಾಸನಗಳನ್ನು ಅತ್ಯಂತ ವ್ಯವಸ್ಥಿತವಾಗಿ...

Read moreDetails

ಕಾಂಗ್ರೆಸಿಗೇ ಬೇಡವಾಗಿರುವ ಜವಾಹರಲಾಲ್ ನೆಹರು!

ಸ್ವತಂತ್ರ್ಯೋತ್ತರ ಭಾರತ ಪ್ರಜಾತಾಂತ್ರಿಕವಾಗಿ, ಜಾತ್ಯಾತೀತವಾಗಿ ಮತ್ತು ವೈಜ್ಞಾನಿಕವಾಗಿ ರೂಪುಗೊಳ್ಳಲು ಅಪಾರವಾಗಿ‌ ಶ್ರಮಿಸಿದವರು ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು. ಬಡತನ, ಅನಕ್ಷರತೆ, ಅಸುರಕ್ಷತೆ, ಅಪೌಷ್ಟಿಕತೆ, ಮೌಢ್ಯ,...

Read moreDetails

ಹಿಂದೂ vs ಹಿಂದುತ್ವ: ಜೇನುಗೂಡಿಗೆ ಕಲ್ಲೆಸೆದರೇ ರಾಹುಲ್ ಗಾಂಧಿ?

ಮಹಾರಾಷ್ಟ್ರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಹಿಂದೂ ಮತ್ತು ಹಿಂದುತ್ವದ ಕುರಿತು ರಾಹುಲ್ ಗಾಂಧಿ ನೀಡಿರುವ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಮೃದು ಹಿಂದುತ್ವದ ಕಾರಣಕ್ಕೆ ಟೀಕೆಗೊಳಗಾಗಿದ್ದ ಕಾಂಗ್ರೆಸ್ ನಾಯಕರೊಬ್ಬರು ಹಿಂದುತ್ವದ ಕುರಿತು ಇಷ್ಟು ಸ್ಪಷ್ಟವಾದ ಮತ್ತು ಕಠಿಣವಾದ ವ್ಯಾಖ್ಯಾನವನ್ನು ನೀಡಿರುವುದು ನಿಜಕ್ಕೂ ಆಶ್ಚರ್ಯ. “ಹಿಂದೂಗಳಿಗೆ ಹಿಂದುತ್ವದ ಅಗತ್ಯವೇನಿದೆ? ಸಿಖ್ಖರು ಮತ್ತು ಮುಸ್ಲೀಮರನ್ನು ಥಳಿಸುವುದು ಹಿಂದುತ್ವವೇ? ಅಖ್ಲಾಕ್’ನಂತಹವರನ್ನು ಕೊಲ್ಲುವುದು ಹಿಂದುತ್ವವೇ?” ಎಂದು ರಾಹುಲ್ ಪ್ರಶ್ನಿಸಿದ್ದರು. ಇದನ್ನು ಬಿಜೆಪಿಯ ವಿರುದ್ದದ ವಾಗ್ದಾಳಿ ಎಂದು ಮಾತ್ರ ಪರಿಗಣಿಸುವ ಬದಲು, ವಿಶಾಲವಾದ ರಾಜಕೀಯ ದೃಷ್ಟಿಕೋನದಿಂದ ವಿಶ್ಲೇಷಿಸಬೇಕಾದ ಅಗತ್ಯವಿದೆ.  ಕಳೆದ ಸುಮಾರು ಒಂದು ದಶಕದಿಂದ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಭಾರತದಲ್ಲಿ ‘ತಮ್ಮ ವ್ಯವಸ್ಥಿತವಾದ ಅಜೆಂಡಾಗಳ ಮೂಲಕ ಹಿಂದೂ ಧರ್ಮ ಮತ್ತು ಹಿಂದುತ್ವದ ನಡುವೆ ಇರುವಂತಹ ವ್ಯತ್ಯಾಸವನ್ನು ಇಲ್ಲವಾಗಿಸುವಲ್ಲಿ ಸಫಲರಾಗಿದ್ದಾರೆ. ಹಿಂದುತ್ವ ಎಂದರೆ ಹಿಂದು, ಹಿಂದೂ ಎಂದರೆ ಹಿಂದುತ್ವ ಎಂಬ ಭಾವನೆ ದೇಶದ ಬಹುತೇಕರ ಮನಸ್ಸಿನಲ್ಲಿ ಬೇರೂರಿದೆ. ಹಿಂದುತ್ವದ ಹಿಂದೆ ಇರುವಂತಹ ರಾಜಕೀಯ ಅಜೆಂಡಾಗಳನ್ನು ಹಿಂದೂ ಧರ್ಮದೊಂದಿಗೆ ಬೆರೆಸಿ ಜನರಿಗೆ ಧರ್ಮದ ಅಮಲಿನ Cocktail ಅನ್ನು ಬಿಜೆಪಿ ಮತ್ತು ಆರ್‌ಎಸ್ಎಸ್ ಉಣಬಡಿಸುತ್ತಿದೆ. ಹಿಂದುತ್ವವನ್ನು ಟೀಕಿಸುವವರು ಹಿಂದೂಗಳನ್ನು ಟೀಕಿಸಿದಂತೆ ಎಂಬ ಭ್ರಮೆ ಎಲ್ಲರಲ್ಲಿಯೂ ಆವರಿಸಿದೆ.  ಈ ಎರಡರ ನಡುವಿನ ವ್ಯತ್ಯಾಸವನ್ನು ರಾಹುಲ್ ಗಾಂಧಿ ತಮ್ಮ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಿಂದೂ ಧರ್ಮ ಹಾಗೂ ಹಿಂದುತ್ವದ ನಡುವೆ ಸ್ಪಷ್ಟವಾದ ರೇಖೆಯನ್ನು ಎಳೆಯುವ ಪ್ರಯತ್ನ ಇದಾಗಿದೆ.  “ನಾನು ಉಪನಿಷದ್’ಗಳನ್ನು ಓದಿದ್ದೇನೆ. ಎಲ್ಲಿಯೂ ಒಬ್ಬ ವ್ಯಕ್ತಿಯನ್ನು ಕೊಲ್ಲು ಎಂದು ಬರೆದದ್ದು ಕಾಣಿಸಿಲ್ಲ. ಆದರೆ, ಇದು ಹಿಂದುತ್ವದಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ನಮಗೆ ಶಿವ, ಸಂತ ಕಬೀರ, ಗುರು ನಾನಕ್, ಮಹಾತ್ಮ ಗಾಂಧಿಯಿಂದ ಮಾರ್ಗದರ್ಶನ ಸಿಗುತ್ತದೆ. ನೀವು ಹಿಂದೂ ಆಗಿದ್ದರೆ ನಿಮಗೆ ಹಿಂದುತ್ವ ಏಕೆ ಬೇಕು? ಈ ಹೊಸ ಹೆಸರಿನ ಅಗತ್ಯವಾದರೂ ಏನು?” ಎಂದು ರಾಹುಲ್ ಪ್ರಶ್ನಿಸಿದ್ದಾರೆ.  ಇಲ್ಲಿಯೂ ತನ್ನ ವರಸೆ ಬಿಡದ ಬಿಜೆಪಿ, ಹಿಂದೂ ಹಾಗೂ ಹಿಂದುತ್ವದ ನಡುವಿನ ವ್ಯತ್ಯಾಸವನ್ನು ಮತ್ತೆ ಮರೆಮಾಚುವ ಕೆಲಸ ಮಾಡಿದೆ. ರಾಹುಲ್ ಹೇಳಿಕೆ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ರಾಹುಲ್ ಗಾಂಧಿಗೆ ಹಿಂದೂಗಳ ಮೇಲೆ ವೈಷಮ್ಯವಿದೆ,” ಎಂದು ಹೇಳಿದ್ದಾರೆ. ಇದು ನಿರೀಕ್ಷಿಸಿದ ಬೆಳವಣಿಗೆ. ಆದರೆ, ಅನಿರೀಕ್ಷಿತ ಏನೆಂದರೆ, ರಾಹುಲ್ ಗಾಂಧಿಯ ಬಾಯಿಯಿಂದ ಹಿಂದುತ್ವದ ಕುರಿತು ಬಂದಿರುವ ಪದಗಳು.  ನರೇಂದ್ರ ಮೋದಿಯನ್ನು ದೇಶದ ಪ್ರಧಾನಿಯೆಂದು ಬಿಂಬಿಸಲು ಆರಂಭಿಸಿದ ದಿನಗಳಿಂದಲೇ ಹಿಂದುತ್ವ ಎಂಬುದು ರಾಜಕೀಯ ಸಿದ್ದಾಂತಗಳಲ್ಲಿ ಒಂದಾಗಿಬಿಟ್ಟಿತು. ಇದು ದೇಶದಲ್ಲಿ ಈಗಾಗಲೇ ಆಳವಾಗಿ ಬೇರೂರಿದ್ದ, ಜಾತ್ಯಾತೀತವಾದ ಹಾಗೂ ಎಡಪಂಥೀಯ ವಿಚಾರಧಾರೆಯನ್ನು ಬುಡಮೇಲು ಮಾಡುವ ಮಟ್ಟಕ್ಕೆ ಬೆಳೆದು ನಿಂತಿತು. ಒಂದು ಕಾಲದಲ್ಲಿ ಸಾಮಾಜಿಕವಾಗಿ ನಿರಾಕರಿಸಲ್ಪಟ್ಟಿದ್ದ ಹಾಗೂ ಹಿಮ್ಮುಖ ಚಲನೆಯ ಸಿದ್ದಾಂತವೆಂದು ಬಿಂಬಿತವಾಗಿದ್ದ ಹಿಂದುತ್ವ, ಈಗ ಪ್ರಮುಖ ರಾಜಕೀಯ ಅಸ್ತ್ರವಾಗಿ ಬೆಳದು ನಿಂತಿದೆ. ಮುಖ್ಯವಾಹಿನಿ ಮಾಧ್ಯಮಗಳ ಬೆಂಬಲದಿಂದ ಭಿನ್ನಮತೀಯರ ಧ್ವನಿಯನ್ನು ಮುಚ್ಚಿಹಾಕುವ ಪ್ರಯತ್ನ ಹಿಂದುತ್ವದ ಬೆಳವಣಿಗೆಗೆ ಪೂರಕವಾಗಿದೆ. ಇಂತಹ ಸಂದರ್ಭದಲ್ಲಿ ಹಿಂದುತ್ವದ ವಿರುದ್ದ ಮಾತನಾಡುವುದು ರಾಜಕೀಯವಾಗಿ ಆತ್ಮಹತ್ಯೆಗೆ ಸರಿಸಮಾನ ಎಂಬ ಭಾವನೆಯೂ ಬೆಳೆದು ನಿಂತಿದೆ. ಹಿಂದುತ್ವದ ವಿರುದ್ದ ಮಾತನಾಡುವುದೆಂದರೆ, ನೇರವಾಗಿ ಆರ್‌ಎಸ್ಎಸ್ ಅನ್ನು ಎದುರು ಹಾಕಿಕೊಂಡಂತೆ ಎಂಬ ಗುಮ್ಮ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರ ತಲೆಯಲ್ಲಿ ಆಳವಾಗಿ ಬೇರೂರಿದೆ.  ಈ ಕಾರಣದಿಂದಾಗಿ ಬಿಜೆಪಿಯ ಹಿಂದುತ್ವ ಅಜೆಂಡಾವನ್ನು ಸೋಲಿಸಲು ಎಲ್ಲಾ ರಾಜಕೀಯ ಪಕ್ಷಗಳು ಅಭಿವೃದ್ದಿಯ ಹೆಸರಿನಲ್ಲಿ ಬಿಜೆಪಿ ವಿರುದ್ದ ಟೀಕೆಗೆ ಮುಂದಾಗಿದ್ದವು. ಹಿಂದುತ್ವದ ವಿಚಾರದಲ್ಲಿ ಮಾತನಾಡಿದರೆ, ಎಲ್ಲಿ ಬಹುಸಂಖ್ಯಾತರ ಮತಗಳು ಕೈತಪ್ಪುವುದು ಎಂಬ ಭಯ ಸಾಮಾನ್ಯವಾಗಿ ಆವರಿಸಿತ್ತು. ಹಿಂದೆ ಮುಸ್ಲಿಂ ನಾಯಕರನ್ನು ಅಪ್ಪಿ ಮುದ್ದಾಡುತ್ತಿದ್ದವರು ಏಕಾಏಕಿ ಅವರಿಂದ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು.  ಇದಕ್ಕಿಂತ ದೊಡ್ಡ ದುರಂತ ಏನೆಂದರೆ, ಬಿಜೆಪಿ ನಾಯಕರಿಗಿಂತ ತಾನು ಶ್ರೇಷ್ಠ ಹಿಂದೂ ಎಂದು ತೋರಿಸಿಕೊಳ್ಳಲು ಇತರೆ ರಾಜಕೀಯ ನಾಯಕರು ಹೆಣಗಾಡತೊಡಗಿದರು. ಬಿಜೆಪಿಯ ಅಂಗಳದಲ್ಲಿಯೇ ಬಿಜೆಪಿಯನ್ನು ಮಣಿಸುತ್ತೇವೆ ಎಂಬ ಹಠ ಇವರದ್ದಾಗಿತ್ತು. ರಾಹುಲ್ ಗಾಂಧಿಯ ಟೆಂಪಲ್ ರನ್, ಅರವಿಂದ ಕೇಜ್ರೀವಾಲರ ಹನುಮಾನ್ ಚಾಲೀಸ ಪಠಣ ಹಾಗೂ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ಪ್ರವಾಸದ ಭರವಸೆ, ಮಮತಾ ಬ್ಯಾನರ್ಜಿಯ ‘ಬ್ರಾಹ್ಮಣ ಮಹಿಳೆ’ ಹೇಳಿಕೆ ಹೀಗೆ ಬಹುತೇಕ ಮೊದಲ ಸಾಲಿನ ನಾಯಕರು ಬಿಜೆಪಿ ಬೀಸಿದ ಬಲೆಗೆ ಸಿಕ್ಕ ಮಿಕಗಳೆಂತೆ ಒದ್ದಾಡಿದ್ದರು. ಇದನ್ನು ರಾಜಕೀಯ ಅವಕಾಶವಾದಿತನ ಅಥವಾ ಮೃದು ಹಿಂದುತ್ವ ಎಂಬ ಹೆಸರಿನಲ್ಲಿ ಕರೆಯಲಾಗಿತ್ತು. ವಿಪಕ್ಷ ನಾಯಕರನ್ನು ಮುಸ್ಲಿಂ ಪ್ರೇಮಿಗಳು ಎಂದು ಅಣಕಿಸುತ್ತಿದ್ದ ಬಿಜೆಪಿಯ ಬಾಯಿ ಮುಚ್ಚಿಸುವುದು ಬಿಟ್ಟರೆ, ಬೇರಾವ ಲಾಭವೂ ಇದರಿಂದ ಸಿಗಲಿಲ್ಲ. ಈ ಕಾರಣದಿಂದಾಗಿ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದಾಗ, ಶಹೀನ್ ಬಾಘ್ ಹೋರಾಟದ ಸಂದರ್ಭದಲ್ಲಿ ಅಥವಾ ದೆಹಲಿ ಗಲಭೆಯ ಸಂದರ್ಭದಲ್ಲಿ ಕಾಂಗ್ರೆಸ್ ಸೇರಿದಂತೆ ಇತರ ರಾಜಕೀಯ ಪಕ್ಷಗಳಿಗೆ ದೃಢವಾದ ನಿಲುವನ್ನು ತಾಳಲು ಸಾಧ್ಯವೇ ಆಗಲಿಲ್ಲ. ಏಕಾಏಕಿ ಸಂಪೂರ್ಣ ಮುಸ್ಲಿಂ ಸಮುದಾಯವನ್ನು ಅನಾಥರನ್ನಾಗಿಸಿದ ವಿಪಕ್ಷಗಳು, ಅವರನ್ನು ನಡುನೀರಿನಲ್ಲಿ ಕೈಬಿಟ್ಟವು.  ಇಂತಹ ಸಂದರ್ಭದಲ್ಲಿ ರಾಹುಲ್ ಗಾಂಧಿಯ ಹಿಂದೂ vs ಹಿಂದುತ್ವ ಹೇಳಿಕೆ ನಿಜಕ್ಕೂ ಮಹತ್ವ ಪಡೆಯುತ್ತದೆ. ಅವಕಾಶವಾದಿ ರಾಜಕಾರಣದ ನೆರಳಿನಿಂದ ಹೊರಬಂದು ಸೈದ್ದಾಂತಿಕ ನೆಲೆಗಟ್ಟಿನಲ್ಲಿ ಪಕ್ಷದ ಬೇರುಗಳನ್ನು ಸದೃಢಗೊಳಿಸದಿದ್ದರೆ ಮುಂದಾಗುವ ಅಪಾಯದ ಅರಿವು ಮನದಟ್ಟಾಗಿರುವಂತೆ ಕಾಣುತ್ತದೆ. ಬಿಜೆಪಿಯ ಮನೆಯೊಳಗೆ ತನ್ನ ಮನೆ ನಿರ್ಮಿಸಲು ಹೊರಟಿದ್ದ ವಿಪಕ್ಷಗಳಿಗೆ ಅದು ಅಸಾಧ್ಯ ಹಾಗೂ ಮೂರ್ಖತನ ಎಂಬ ಅರಿವು ಮೂಡದಿದ್ದಲ್ಲಿ ಇಂತಹ ಹೇಳಿಕೆ ಬರುವುದು ಬಹುಶಃ ಸಾಧ್ಯವಿಲ್ಲವೇನೋ.  ಎಂತಹ ಮಹತ್ವದ ಸತ್ಯವನ್ನು ಬೇಕಾದರೂ ಸುಳ್ಳಾಗಿಸುವ ವ್ಯವಸ್ಥಿತವಾದ ಗುಂಪು ಬಿಜೆಪಿಯ ಬೆನ್ನಿಗೆ ನಿಂತಿದೆ. ಎಂತಹ ಸುಳ್ಳಿಗೆ ಬೇಕಾದರೂ ಸತ್ಯದ ಲೇಪನ ಹಚ್ಚಲು ಮುಖ್ಯವಾಹಿನಿ ಮಾಧ್ಯಮಗಳು ತಯಾರಾಗಿವೆ. ಇಂತಹ ಸಂದರ್ಭದಲ್ಲಿ ಹಿಂದುತ್ವವೆಂಬ ಸಿದ್ದಾಂತದ ವಿರುದ್ದ ಸೆಣಸಾಡುವುದು ಸುಲಭವಲ್ಲ. ಆದರೆ, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ನಿರ್ಮಾಣವಾಗಿರುವ ಭಾರತದಲ್ಲಿ, ಸೈದ್ಧಾಂತಿಕವಾಗಿಯೇ ರಾಜಕೀಯ ಎದುರಾಳಿಗಳನ್ನು ಎದುರಿಸುವ ಅಗತ್ಯವಿದೆ. ಅದಕ್ಕಾಗಿ ಕಾಂಗ್ರೆಸ್ ತನ್ನ ಸಿದ್ಧಾಂತ ಏನು ಎಂಬುದನ್ನು ಮೊದಲು ಜನರಿಗೆ ಸ್ಪಷ್ಟಪಡಿಸಬೇಕಾಗಿದೆ. ಹಿಂದುತ್ವವೆಂಬ ‘ಭ್ರಮೆ’ಯಲ್ಲಿ ತೇಲಾಡುತ್ತಿರುವ ಕೋಟ್ಯಾಂತರ ಜನರಿಗೆ ಅದರ ಹಿಂದಿನ ರಾಜಕೀಯ ಷಡ್ಯಂತ್ರ, ಸುಳ್ಳುಗಳ ಸರಮಾಲೆಯನ್ನು ಕಣ್ಣಿಗೆ ಕಾಣುವ ರೀತಿಯಲ್ಲಿ ತೋರಿಸಬೇಕಾಗಿದೆ. ಇಲ್ಲವಾದರೆ, ಐತಿಹಾಸಿಕವಾದ ತಪ್ಪು ನಿರ್ಧಾರಗಳಿಂದ ದೇಶದಲ್ಲಿ ಆರ್ಥಿಕ, ಸಾಮಾಜಿಕ ದಿವಾಳಿತನ ದೃಷ್ಟಿಸಿದ ಬಿಜೆಪಿಗೆ ಮತ್ತೆ ಮತಗಳ ಆಶೀರ್ವಾದ ಲಭಿಸುತ್ತದೆ.  ಸದ್ಯಕ್ಕೆ ಭಾರತವು ಕಾಂಗ್ರೆಸ್ ಮುಕ್ತವಾಗಿಲ್ಲವಾದರೂ, ತನ್ನ ಹಿಂದಿನ ವೈಭವವನ್ನು ಕಳೆದುಕೊಂಡಿದೆ. ಕಾಂಗ್ರೆಸ್ ಬಳಿ ಹೆಚ್ಚಿನ ವಿಕಲ್ಪಗಳು ಉಳಿದಿಲ್ಲ. ಪಕ್ಷದ ಸಿದ್ದಾಂತಗಳನ್ನು ಬಲಪಡಿಸಿಕೊಂಡು ಸಂಘಟನೆ ಮಾಡದಿದ್ದರೆ ಸದ್ಯಕ್ಕಿರುವ ಸ್ಥಾನವನ್ನೂ ಕಾಂಗ್ರೆಸ್ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಇವತ್ತಿನ ದಿನದಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ, ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್ ಬಳಿ ವ್ಯಥೆಪಡುವಷ್ಟು ಕಳೆದುಕೊಳ್ಳಲು ಏನೂ ಉಳಿದಿಲ್ಲ. ಉಳಿದಿರುವಷ್ಟನ್ನು ಉಳಿಸಿಕೊಂಡು ಇನ್ನಷ್ಟು ಪಡೆಯಲು, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪಕ್ಷ ಸಂಘಟನೆ ಮಾಡುವುದು ಒಂದೇ ದಾರಿ. 

Read moreDetails

ಆದಿವಾಸಿಗಳ ಮೇಲೆ ದೌರ್ಜನ್ಯ ಇಂದಿಗೂ ನಡೆಯುತ್ತಿದೆ – ನ್ಯಾ. ಚಂದ್ರು

ಜೈ ಭೀಮ್ ಚಿತ್ರ ವಕೀಲರ ಘನತೆಯನ್ನು ಹೆಚ್ಚಿಸಿದೆ ಮೂಲ : ಆನ್ ಮನೋರಮಾ ವೆಬ್ ಪತ್ರಿಕೆ ಅನುವಾದ : ನಾ ದಿವಾಕರ ತಮಿಳು ಸಿನಿಮಾಗಳಲ್ಲಿ ನಾಯಕನಾದವನು ಕಾನೂನನ್ನು...

Read moreDetails

ನವೆಂಬರ್ 19: 580 ವರ್ಷಗಳಲ್ಲೇ ಅತ್ಯಂತ ಸುದೀರ್ಘ ಚಂದ್ರಗ್ರಹಣವು ಭಾರತದಲ್ಲಿ ಸಂಭವಿಸಲಿದೆ

ನವೆಂಬರ್ 19 ರಂದು ಪಾರ್ಶ್ವ ಚಂದ್ರಗ್ರಹಣವು ಗೋಚರಿಸಲಿದ್ದು 580 ವರ್ಷಗಳಲ್ಲಿ ಇದು ಅತ್ಯಂತ ಸುದೀರ್ಘ ಚಂದ್ರಗ್ರಹಣವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.  ಫೆಬ್ರವರಿ 18, 1440 ರಂದು ಕೊನೆಯ...

Read moreDetails

ನೆಹರೂ ಕುರಿತು ಬಿಜೆಪಿ ಹೇಳಿದ ಐದು ಸುಳ್ಳುಗಳು

ಸ್ವತಂತ್ರ ಭಾರತದ ಮೊತ್ತಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಅವರ 132ನೇ ಜಯಂತಿಯನ್ನು ನಾವು ಆಚರಿಸುತ್ತಾ ಇದ್ದೇವೆ. ಪ್ರಥಮ ಪ್ರಧಾನಿಯಾಗಿ ಭಾರತದ ಹಲವು ‘ಪ್ರಥಮ’ಗಳಿಗೆ ಕಾರಣರಾದ ನೆಹರು ಕುರಿತು ಸುಳ್ಳು ಸುದ್ದಿ ಸೃಷ್ಟಿಸಿ ಅದಕ್ಕೆ ಪ್ರಚಾರ ನೀಡುವ ವ್ಯವಸ್ಥಿತ ಪಿತೂರಿ ದೇಶದಲ್ಲಿ ಹಿಂದಿನಿಂದಲೂ ನಡೆಯುತ್ತಾ ಇದೆ. ಪ್ರಸ್ತುತ ಸಂದರ್ಭದಲ್ಲಿ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಯಾವ ಸಂಕಷ್ಟಕ್ಕೆ ಸಿಲುಕಿದರೂ, ನೆಹರು ಆಡಳಿತದ ಕಡೆಗೆ ಬೊಟ್ಟು ಮಾಡುವುದು ಸಾಮಾನ್ಯವೆಂಬಂತಾಗಿದೆ.  ಇದಕ್ಕೆ ಹೊರತಾಗಿ, ನೆಹರು ಅವರ ಜೀವನ, ರಾಜಕೀಯ ನೀತಿ ಹಾಗೂ ಜೀವನ ಶೈಲಿಯ ಕುರಿತು ಸಂಘಪರಿವಾರ ಹಿಂದಿನಿಂದಲೂ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಾ ಬಂದಿದೆ. ಅದರಲ್ಲೂ, ಯಾವುದೇ ವಿಚಾರವನ್ನು ತಿರುಚಿ ಸಂಘಪರಿವಾರಕ್ಕೆ ಬೇಕಾದ ರೀತಿಯಲ್ಲಿ ಜನರಿಗೆ ತಲುಪಿಸುವ ಜವಾಬ್ದಾರಿಯನ್ನು ಬಿಜೆಪಿ ‘ಐಟಿ ಸೆಲ್’ ಹೊತ್ತುಕೊಂಡಿದೆ. ಎಷ್ಟರ ಮಟ್ಟಿಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತದೆ ಎಂದರೆ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬೀತ್ ಪಾತ್ರ ಅವರು ಐಟಿ ಸೆಲ್ ನೀಡಿರುವ ಸುಳ್ಳು ಸುದ್ದಿಯನ್ನು ನಂಬಿ ಚಾನೆಲ್ ಒಂದರಲ್ಲಿ ‘Exclusive Breaking News’ ನಂತೆ ಪ್ರಸ್ತುತ  ಪಡಿಸುತ್ತಾರೆ. ಪ್ರಧಾನಿ ಮೋದಿಯ ಆಪ್ತರಿಂದ ಹಿಡಿದುಕಟ್ಟ ಕಡೇಯ ಕಾರ್ಯಕರ್ತರವರೆಗೂ, ನೆಹರೂ ಕುರಿತ ಸುಳ್ಳು ಸುದ್ದಿಗಳನ್ನು ಹಬ್ಬಿಸುವ ಷಡ್ಯಂತ್ರ ಇನ್ನೂ ನಡೆಯುತ್ತಲೇ ಇದೆ.  ನೆಹರು ಮರಣವನ್ನಪ್ಪಿ ಐದು ದಶಕಗಳು ಕಳೆಯುತ್ತಾ ಬಂದರೂ, ಇನ್ನೂ ಅವರ ಜಪ ದೇಶದಲ್ಲಿ ನಡೆಯುತ್ತಲೇ ಇದೆ. ಅವರ ಕುರಿತು ದೇಶದಲ್ಲಿ ಹಬ್ಬಿಸಲಾದ ಪ್ರಮುಖ ಸುಳ್ಳುಗಳ ಪಟ್ಟಿ ಇಲ್ಲಿದೆ.  ನೆಹರೂ RSS ಶಾಖೆಗೆ ಭೇಟಿ ನೀಡಿದ್ದರೇ?  ಆರ್ಎಸ್ಎಸ್ ಸಿದ್ದಾಂತಗಳನ್ನು ಕಟುವಾಗಿ ಟೀಕಿಸುತ್ತಿದ್ದ ನೆಹರು, ಆರ್ಎಸ್ಎಸ್ ಶಾಖೆಗೆ ಭೇಟಿ ನೀಡಿದ ಚಿತ್ರವೈರಲ್ ಆಗಿತ್ತು. ‘I Support Doval’ ಎಂಬ  ಫೇಸ್ಬುಕ್ ಪೇಜ್ ನಲ್ಲಿ ಈ ಚಿತ್ರವನ್ನು ಅಪ್ಲೋಡ್ ಮಾಡಲಾಗಿತ್ತು.  “ತುಂಬಾ ಕಷ್ಟದಿಂದ ಈ ಚಿತ್ರ ಲಭಿಸಿದೆ. ನೆಹರು ಆರ್ಎಸ್ಎಸ್ ಶಾಖೆಯಲ್ಲಿ ನಿಂತಿದ್ದಾರೆ. ಈಗ ನೀವು ಹೇಳಿ, ನೆಹರು ಕೂಡಾ ಕೇಸರಿ ಭಯೋತ್ಪಾದಕರಾಗಿದ್ದರೇ?” ಎಂಬ ಒಕ್ಕಣೆಯೊಂದಿಗೆ ಈ ಚಿತ್ರವನ್ನು ಹರಿಯಬಿಡಲಾಗಿತ್ತು.  ಈ ಚಿತ್ರ ನಿಜವಾಗಿಯೂ ನೆಹರು ಅವರದ್ದೇ. ಆದರೆ, ಅವರು ಧರಿಸಿರುವ ಸಮವಸ್ತ್ರ ಆರ್ಎಸ್ಎಸ್ ಸಮವಸ್ತ್ರವಲ್ಲ. ಈ ಚಿತ್ರವನ್ನು 1939ರಲ್ಲಿ ಉತ್ತರಪ್ರದೇಶದ ನೈನಿ ಎಂಬಲ್ಲಿ ತೆಗೆಯಲಾಗಿತ್ತು. 1925ರಲ್ಲಿ ಆರ್ಎಸ್ಎಸ್ ಸಮವಸ್ತ್ರವನ್ನು ಪರಿಚಯಿಸಿದ್ದರೂ, ಅವರು ಕಪ್ಪು ಬಣ್ಣದ ಟೋಪಿ ಬಳಸುತ್ತಿದ್ದರು. ಈ ಚಿತ್ರದಲ್ಲಿ ಬಿಳಿ ಬಣ್ಣದ ಟೋಪಿಯನ್ನು ನೆಹರುಧರಿಸಿದ್ದಾರೆ. ಇದು ಭಾರತೀಯ ಸೇವಾದಳದ ಸಮವಸ್ತ್ರವಾಗಿದ್ದು ಆರ್ಎಸ್ಎಸ್ ಸಮವಸ್ತ್ರವಲ್ಲ.  2. ನೆಹರೂ ಸ್ತ್ರೀಲೋಲರಾಗಿದ್ದರೇ?  ಬಿಜಪಿ ಐಟಿ ಸೆಲ್ ಕಾಂಗ್ರೆಸ್ಸಿಗೆ ಮುಜುಗರ ಉಂಟುಮಾಡುವ ಸಲುವಾಗಿ, ನೆಹರು ಕುರಿತು ಅತ್ಯಂತ ಕೀಳು ಮಟ್ಟದ ಅಪಪ್ರಚಾರವನ್ನು ಆರಂಭಿಸಿದ್ದವು. ನೆಹರು ತಮ್ಮ ಸಹೋದರಿ ಹಾಗೂ ಸೋದರ ಸಂಬಂಧಿಯೊಂದಿಗೆ ತೆಗೆಸಿದ ಚಿತ್ರಗಳನ್ನು ಪರಸ್ತ್ರೀಯರೊಂದಿಗಿನ ಚಿತ್ರಗಳೆಂದು ಬಿಂಬಿಸಿ ಅವರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿತ್ತು.  ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರು ಖುದ್ದು ತಮ್ಮ ಟ್ವಿಟರ್ ಖಾತೆಯಲ್ಲಿ ಈ ಚಿತ್ರಗಳನ್ನು ಹಂಚಿಕೊಂಡು ತಪ್ಪು ಮಾಹಿತಿಯನ್ನು ನೀಡಿದ್ದರು.  ಮೊದಲ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆ ಪಂಡಿತ್ ಜವಹರ್ ಲಾಲ್ ನೆಹರು ಅವರ ಸಹೋದರಿ ವಿಜಯಲಕ್ಷ್ಮೀ ಪಂಡಿತ್. ಎರಡನೇ ಚಿತ್ರದಲ್ಲಿ ಕಾಣುತ್ತಿರುವ ಮಹಿಳೆಯ ಹೆಸರು ನಯನತಾರ ಸೆಹಗಲ್. ಇವರು ನೆಹರು ಅವರ ಸೋದರ ಸೊಸೆ. ಈ ಚಿತ್ರಗಳನ್ನು ಬಳಸಿ ಕೀಳು ಅಭಿರುಚಿಯ ಮಾಹಿತಿಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸುವ ಕೆಲಸವನ್ನು ಬಿಜೆಪಿ ಐಟಿ ಸೆಲ್ ಮಾಡುತ್ತಲೇ ಇದೆ. ...

Read moreDetails

ವಕೀಲರಿಗೆ ಸಿಕ್ಸ್ ಪ್ಯಾಕ್ ದೇಹ ಬೇಕಿಲ್ಲ ಮೆದುಳು ಚುರುಕಾಗಿದ್ದರೆ ಸಾಕು – ನ್ಯಾ. ಚಂದ್ರು

ಜೈ ಭೀಮ್ ಚಿತ್ರದಲ್ಲಿನ ವಕೀಲನ ಪಾತ್ರಕ್ಕೆ ನಟ ಸೂರ್ಯನಿಗೆ ಪ್ರೇರಣೆ ನೀಡಿದ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ ಕೆ ಚಂದ್ರು ಅವರೊಡನೆ ಟಿಎನ್ಎನ್ ವೆಬ್ ಪತ್ರಿಕೆಯ ಸಂದರ್ಶನ. ಟಿಎನ್ಎನ್...

Read moreDetails

ಸಾವಿರಾರು ಕೋಟಿ ಮೊತ್ತದ ಬಿಟ್ ಕಾಯಿನ್ ಹ್ಯಾಕ್ ಬಗ್ಗೆ ಸಿಸಿಬಿ ಮೌನ ವಹಿಸಿದ್ದು ಯಾಕೆ?

ಬಿಟ್ ಕಾಯಿನ್ ಪ್ರಕರಣದ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿರುವ ಕಾಂಗ್ರೆಸ್, ಹಗರಣದ ಕುರಿತು ಸುಪ್ರೀಂಕೋರ್ಟ್ ಮೇಲುಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡ(ಎಸ್ ಐಟಿ) ರಚಿಸಿ, ತನಿಖೆ ನಡೆಸಬೇಕು ಎಂದು...

Read moreDetails

ನಿಸರ್ಗ ಪರಿಸರ ಹಸಿರು ಮತ್ತು ಪ್ರವಾಸೋದ್ಯಮ

ಹಸಿರು ಜೀವಂತಿಕೆಯ ಸಂಕೇತ. ಅದು ವೃಕ್ಷಗಳಲ್ಲಿರಲಿ, ವಸ್ತ್ರ ಉಡುಪುಗಳಲ್ಲಿರಲಿ, ತುಂಡು ಬಟ್ಟೆಯ ಮೇಲಿರಲಿ ಅಥವಾ ಕಾನನ ಬೆಟ್ಟ ಗುಡ್ಡಗಳಲ್ಲಿರಲಿ ಹಸಿರು ಭೂಮಿಯನ್ನು ಅಲಂಕರಿಸುವ ಒಂದು ಬಣ್ಣ ಹಾಗೆಯೇ...

Read moreDetails

ಎಡ ಪಕ್ಷಗಳು ಹೆಚ್ಚು ಬದ್ಧತೆ ಹೊಂದಿವೆ – ನ್ಯಾ. ಚಂದ್ರು ಜೈಭೀಮ್ ಭವಿಷ್ಯದ ಆಡಳಿತ ನೀತಿಗಳನ್ನು ಪ್ರಭಾವಿಸುತ್ತದೆ

ತಮಿಳಿನಲ್ಲಿ ಟಿ ಜೆ ಜ್ಞಾನವೇಲ್ ನಿರ್ಮಿಸಿ ನಿರ್ದೇಶಿಸಿದ ಜೈ ಭೀಮ್ ಚಿತ್ರ ಕಾನೂನು ಹೋರಾಟವನ್ನು ಕುರಿತ ಒಂದು ಚಿತ್ರವಾಗಿದ್ದು ನಟ ಸೂರ್ಯ ಪ್ರಧಾನ ಪಾತ್ರಧಾರಿಯಾಗಿದ್ದಾರೆ. ಇರುಳರ್ ಬುಡಕಟ್ಟು...

Read moreDetails

ಕಂಗನಾ ರಣಾವತ್ ಹೇಳಿಕೆ ಬೌದ್ಧಿಕ ದಾರಿದ್ರ್ಯದ ಪರಾಕಾಷ್ಠೆ

" 2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. 1947 ರಲ್ಲಿ ಸಿಕ್ಕಿದ್ದು ಭಿಕ್ಷೆ " ಎಂದು ವಿವಾದಿತ ಹೇಳಿಕೆ ನೀಡುವ ಮೂಲಕ ಬಾಲಿವುಡ್ ನಟಿ ಕಂಗನಾ...

Read moreDetails
Page 37 of 56 1 36 37 38 56

Recent News

Welcome Back!

Login to your account below

Retrieve your password

Please enter your username or email address to reset your password.

error: Content is protected !!