ಮಂಗಳೂರು: ಮಂಗಳೂರಿನಲ್ಲಿ ಜಾತಿ ಗಣತಿ ಗೊಂದಲದ ಬಗ್ಗೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಜಾತಿ ಜನಗಣತಿ ಕಳೆದ ಬಾರಿಯ ಕ್ಯಾಬಿನೆಟ್ನಲ್ಲಿ ಮಂಡಿಸಲಿಲ್ಲ. ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಜಾತಿ ಗಣತಿಗೆ ಸ್ವ ಪಕ್ಷಿಯರಿಂದಲೇ ವಿರೋಧ ಇದೆಯಾ ಅನ್ನೋ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಜಾತಿ ಜನಗಣತಿಯಲ್ಲಿ ಏನಿದೆ ಅಂತಾನೆ ಗೊತ್ತೆ ಇಲ್ವಲ್ಲ ರೀ.. ನನಗೆ ಜಾತಿ ಜನ ಗಣತಿಯಲ್ಲಿ ಏನಿದೆ ಎಂದು ಗೊತ್ತಿಲ್ಲ. ಸುಮ್ಮ ಸುಮ್ಮನೆ ವಿರೋಧ ಮಾಡೋದಾ.. ? ವಿರೋಧ ಹೇಗೆ ಮಾಡ್ತಾರೆ..? ಎಂದು ಪ್ರಶ್ನಿಸಿದ್ದಾರೆ.

ನಮ್ಮ ಪಕ್ಷದಲ್ಲಿ ಜಾತಿ ಜನಗಣತಿ ಮಾಡ್ತೀವಿ ಎಂದು ಭರವಸೆ ಕೊಟ್ಟಿದ್ದೀನಿ ಜನರಿಗೆ ಅದನ್ನ ಮಾಡ್ತೀವಿ ಎಂದು ಸ್ಪಷ್ಟನೆ ನೀಡಿದ್ದಾರೆ. ಕಳೆದ ಬಾರಿ ದೆಹಲಿಯಲ್ಲಿ ಈ ಬಗ್ಗೆ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ ಮುಂದಿನ ಕ್ಯಾಬಿನೆಟ್ಗೆ ತರುತ್ತೇವೆ ಎಂದಿದ್ದರು. ಆ ಬಳಿಕ ಒಕ್ಕಲಿಗರು ವಿರೋಧ ಮಾಡಿದ್ದರು. ಲಿಂಗಾಯರೂ ಕೂಡ ಪರೋಕ್ಷವಾಗಿ ಸರ್ಕಾರದ ವಿರುದ್ಧ ಮುಗಿಬೀಳುವ ಸೂಚನೆ ಕೊಟ್ಟಿದ್ದರು.
