ದೆಹಲಿ ವಿಧಾನಸಭಾ ಚುನಾವಣಾ ಅಖಾಡದಲ್ಲಿ ಗ್ಯಾರಂಟಿ ಅಬ್ಬರ ಜೋರಾಗಿದೆ.. ಜಿದ್ದಾಜಿದ್ದಿಗೆ ಬಿದ್ದಿರುವ AAP, ಕಾಂಗ್ರೆಸ್, ಬಿಜೆಪಿ ಉಚಿತ ಕೊಡುಗೆಗಳ ಮೊರೆ ಹೋಗಿದ್ದಾರೆ.. ನಾನಾ.. ನೀನಾ ಎಂಬಂತೆ ಮೂರೂ ಪಕ್ಷಗಳು ಬಂಪರ್ ಗ್ಯಾರಂಟಿಗಳ ಮೂಲಕ ಮತದಾರರಿಗೆ ಗಾಳ ಹಾಕಲು ಮುಂದಾಗಿದ್ದಾರೆ.

‘ವಿಕಸಿತ ದೆಹಲಿ’ ಹೆಸರಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.. ಬಡ ಮಹಿಳೆಯರು, ಗರ್ಭಿಣಿಯರು ಸೇರಿದಂತೆ ಎಲ್ಲರಿಗೂ ಸಿಗುವಂತೆ ಆಫರ್ ಆಫರ್ ಕೊಟ್ಟಿದ್ದಾರೆ. ಕಾಂಗ್ರೆಸ್-ಆಪ್ ಗ್ಯಾರಂಟಿಗಳಿಗೆ ಕೌಂಟರ್ ಕೂಡ ಕೊಟ್ಟಿದ್ದಾರೆ..
ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಾರ್ಟಿ ಮಹಿಳೆಯರಿಗೆ ಈಗಾಗಲೇ ಮಹಿಳಾ ಸಮ್ಮಾನ್ ಯೋಜನೆ ಜಾರಿ ಮಾಡಿದ್ದು, ಈಗ ನೀಡುತ್ತಿರುವ 1000 ರೂಪಾಯಿ ಹಣವನ್ನ 2,100 ರೂಪಾಯಿಗೆ ಹೆಚ್ಚಿಸುವ ಭರವಸೆ ನೀಡಿದೆ.. ಪ್ಯಾರಿ ದೀದಿ ಯೋಜನೆ ಮೂಲಕ ಪ್ರತಿತಿಂಗಳು ಮಹಿಳೆಯರಿಗೆ 2,500 ರೂಪಾಯಿ ಕೊಡ್ತಿವಿ ಅಂತ ಕಾಂಗ್ರೆಸ್ ಪಕ್ಷ ಹೇಳಿದ್ರೆ, ಬಿಜೆಪಿ ಮಹಿಳಾ ಸಮೃದ್ಧಿ ಯೋಜನೆ ಮೂಲಕ ತಿಂಗಳಿಗೆ 2,500 ರೂಪಾಯಿ ಕೊಡುವ ಬಗ್ಗೆ ಘೋಷಿಸಿದೆ.

ಆಮ್ ಆದ್ಮಿ ಸರ್ಕಾರದಲ್ಲಿ ಈಗಾಗಲೇ 20 ಸಾವಿರ ಲೀಟರ್ ಉಚಿತ ನೀರು ಕೊಡಲಾಗ್ತಿದೆ. 300 ಯುನಿಟ್ವರೆಗೆ ಫ್ರೀ ಕರೆಂಟ್, 500 ರೂಪಾಯಿಗೆ ಎಲ್ಪಿಜಿ ಸಿಲಿಂಡರ್ ಕೊಡ್ತಿವಿ ಎಂದು ಕಾಂಗ್ರೆಸ್ ಘೋಷಿಸಿದೆ.. LPG ಸಿಲಿಂಡರ್ಗೆ 500 ರೂಪಾಯಿ ಸಬ್ಸಿಡಿ ಕೊಡ್ತೀವಿ ಅಂತ ಬಿಜೆಪಿ ಪಕ್ಷವೂ ಘೋಷಿಸಿದೆ. ಕೇಜ್ರಿವಾಲ್ ಸರ್ಕಾರ ಅರ್ಚಕರಿಗೆ ಮಾಸಿಕ 18 ಸಾವಿರ ಗೌರವಧನ ಕೊಡುವ ಭರವಸೆ ನೀಡಿದೆ.. ನಿರುದ್ಯೋಗಿ ಯುವಕರಿಗೆ 8,500 ರುಪಾಯಿ ಕೊಡ್ತೀವಿ ಅಂತ ಕಾಂಗ್ರೆಸ್ ಘೋಷಿಸಿದೆ.. ಗರ್ಭಿಣಿಯರಿಗೆ 21,000 ರೂಪಾಯಿ ಸಹಾಯಧನ ಘೋಷಿಸಿದೆ ಬಿಜೆಪಿ.

ಆಮ್ ಆದ್ಮಿ ಪಕ್ಷ 60 ವರ್ಷ ಮೇಲ್ಟಟ್ಟ ಹಿರಿಯರಿಗೆ ಯಾವುದೇ ಮಿತಿ ಇಲ್ಲದೇ ಉಚಿತ ಚಿಕಿತ್ಸೆ ನೀಡುವ ಸಂಜೀವಿನಿ ಯೋಜನೆ ಘೋಷಿಸಿದ್ರೆ, ಕಾಂಗ್ರೆಸ್ ಪಕ್ಷ ಜೀವನ್ ರಕ್ಷಾ ಯೋಜನೆ ಘೋಷಿಸಿದ್ದು, 25 ಲಕ್ಷದವರೆಗೆ ಉಚಿತ ಆರೋಗ್ಯ ವಿಮೆ ಕೊಡ್ತೀವಿ ಅಂತ ಪ್ರಣಾಳಿಕೆಯಲ್ಲಿ ತಿಳಿಸಿದೆ. ಬಿಜೆಪಿ ‘ಆಯುಷ್ಮಾನ್ ಭಾರತ್’ ಯೋಜನೆಯಡಿ ಆರೋಗ್ಯ ರಕ್ಷಣೆಗೆ 50 ಸಾವಿರ ರೂಪಾಯಿ ಕೊಡ್ತೀವಿ ಅಂತ ಸಂಕಲ್ಪ ಮಾಡಿದೆ. ಜೊತೆಗೆ ಆಟೋ ಚಾಲಕರ ಕುಟುಂಬಕ್ಕೆ ವಾರ್ಷಿಕ ₹10 ಲಕ್ಷದ ಜೀವ ವಿಮೆ, 5 ಲಕ್ಷದ ಅಪಘಾತ ವಿಮೆ ಘೋಷಿಸಿದೆ AAP. ಅಂಗವಿಕಲರ ಸಹಾಯಧನ ಹೆಚ್ಚಳದ ಭರವಸೆಯನ್ನೂ ಕಾಂಗ್ರೆಸ್ ಘೋಷಿಸಿದೆ.. ಹಿರಿಯ ನಾಗರಿಕರಿಗೆ ಬಿಜೆಪಿ 3 ಸಾವಿರ ಪಿಂಚಣಿ ಘೋಷಿಸಿದೆ.