• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, May 17, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

93 ಲಕ್ಷ ಹಣದ ಬಾಕ್ಸ್‌.. ಹಾಡ ಹಗಲೇ ದರೋಡೆ.. ಜಂಗಲ್‌ ರಾಜ್‌ ನೆನಪು..

ಕೃಷ್ಣ ಮಣಿ by ಕೃಷ್ಣ ಮಣಿ
January 16, 2025
in Top Story, ಇದೀಗ, ಕರ್ನಾಟಕ, ದೇಶ, ವಾಣಿಜ್ಯ, ವಿಶೇಷ, ಶೋಧ
0
Share on WhatsAppShare on FacebookShare on Telegram

ಬೀದರ್‌: ಹಾಡಹಗಲೇ ನಡೆದ ಭಯಾನಕ ದರೋಡೆಗೆ ಬೀದರ್ ಜನರು ಬೆಚ್ಚಿ ಬಿದ್ದಿದ್ದಾರೆ. ಎಟಿಎಂಗೆ ಹಣ ತುಂಬಲು ತೆಗೆದುಕೊಂಡು ಹೋಗ್ತಿದ್ದ ಸಿಬ್ಬಂದಿ ಮೇಲೆ ಗುಂಡಿನ ದಾಳಿ ಹಣದ ಬಾಕ್ಸ್‌ ಹೊತ್ತೊಯ್ದಿದ್ದಾರೆ. ಘಟನೆಯಲ್ಲಿ ಓರ್ವ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ ವಾಹನದಲ್ಲಿದ್ದ ಲಕ್ಷಾಂತರ ರೂಪಾಯಿಯನ್ನ ಖದೀಮರು ಹೊತ್ತೊಯ್ದಿದ್ದಾರೆ. ಹಾಡಹಗಲೇ ಘಟನೆ ನಡೆದಿರೋ ಘಟನೆಯಿಂದ ಸ್ಥಳೀಯರು ಆತಂಕಕ್ಕೆ ಈಡಾಗಿದ್ದಾರೆ.

ADVERTISEMENT

ಮೊದಲಿಗೆ 5 ಸುತ್ತಿನ ಗುಂಡಿನ ದಾಳಿ ನಡೆಸಿರುವ ಖದೀಮರು, ವ್ಯಾನ್​ನಲ್ಲಿದ್ದ ಹಣ ತೆಗೆದುಕೊಂಡು ಬೈಕ್​ನಲ್ಲಿ ಎಸ್ಕೇಪ್ ಆಗಿದ್ದಾರೆ. ಸ್ಥಳಕ್ಕೆ ಬೀದರ್ ಎಸ್‌ಪಿ ಪ್ರದೀಪ್ ಗುಂಟಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಒಟ್ಟು 5 ಸುತ್ತಿನ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಗಿರಿ ಎಂಬ ಸಿಬ್ಬಾಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮತ್ತೋರ್ವ ಸಿಬ್ಬಂದಿ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್‌ಗೆ ರವಾನಿಸಲಾಗಿದೆ.

ಮೃತ ಸಿಬ್ಬಂದಿ ಗಿರಿ ವೆಂಕಟೇಶ್​ ಸಹೋದರ ನಾಗರಾಜ್ ಮಾತನಾಡಿ, ಬಹಳ ವರ್ಷದಿಂದ ನನ್ನ ತಮ್ಮ ATMನಲ್ಲಿ ಹಣ ತುಂಬುವ ಕೆಲಸ ಮಾಡ್ತಿದ್ದ. ಇನ್ನು ಮದುವೆ ಆಗಿರಲಿಲ್ಲ, ಮದುವೆ ಮಾಡ್ಬೇಕು ಅಂತಾ‌ ಅಂದುಕೊಂಡಿದ್ದೆವು. ನಾನು ಬೆಳಗ್ಗೆ ಡ್ಯೂಟಿಗೆ ಹೋಗುವಾಗ ಮನೆಯಲ್ಲಿ ಡ್ಯೂಟಿಗೆ ಈಗ ಹೋಗ್ತಿದ್ದೀಯಾ ಅಣ್ಣಾ ಅಂತ ಕೊನೇ ಬಾರಿ ನನ್ನ ಬಳಿ ಮಾತನಾಡಿದ್ದ. ಯಾವಾಗಲೂ ತನ್ನ ಕುಟುಂಬದ ಬಗ್ಗೆ ತುಂಬಾ ಕೇರ್ ಮಾಡ್ತಿದ್ದ. ನನ್ನ ಮಕ್ಕಳಿಗೆ ಏನ್​ ಹೇಳೋದು ಅನ್ನೋದೇ ಗೊತ್ತಾಗ್ತಿಲ್ಲ ಅಂತ ಕಣ್ಣೀರು ಹಾಕಿದ್ದಾರೆ.

ಬೀದರ್‌ನಲ್ಲಿ ATM ದರೋಡೆ ಪ್ರಕರಣದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಮಾತನಾಡಿ, ATMಗಳಿಗೆ ಅನೇಕ ಗೈಡ್​ಲೈನ್ಸ್ ಕೊಡಲಾಗಿರುತ್ತದೆ. ಅದನ್ನು ಫಾಲೋ ಮಾಡಿದ್ದಾರೋ ಇಲ್ವೋ ಅಂತ ಮಾಹಿತಿ ಪಡೆಯಬೇಕಿದೆ. ತನಿಖೆ ಮಾಡಲು ಎಸ್​​ಪಿಗೆ ಸೂಚಿಸಿದ್ದೇನೆ ಅಂತ ಹೇಳಿದ್ದಾರೆ. ಬೀದರ್‌ನಲ್ಲಿ ಮಾತನಾಡಿರುವ ಸಚಿವ ಈಶ್ವರ್ ಖಂಡ್ರೆ, ಘಟನೆ ಬಗ್ಗೆ ಗೃಹ ಸಚಿವರಿಗೆ ಮಾಹಿತಿ ನೀಡಿದ್ದೇವೆ. ಇಬ್ಬರು ದುಷ್ಕರ್ಮಿಗಳು ಬಂದು ದರೋಡೆ ಮಾಡಿರುವ ಬಗ್ಗೆ ಮಾಹಿತಿ ಇದೆ. ಆರೋಪಿಗಳನ್ನು ಶೀಘ್ರವಾಗಿ ಬಂಧನ ಮಾಡಲಾಗುತ್ತದೆ. 93 ಲಕ್ಷ ರೂಪಾಯಿ ದರೋಡೆ ಆಗಿದೆ ಅಂತಾ ಹೇಳಲಾಗ್ತಿದೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದ್ದು, ATMಗಳಿಗೂ ಸೂಕ್ತ ಭದ್ರತೆ ಕೊಡಲು ಚರ್ಚೆ ನಡೆಸಲಾಗುವುದು ಎಂದಿದ್ದಾರೆ.

Tags: ATM MachineATM Money LoaderBidarBidar MLABidar PoliceBIDAR SPDr G ParamParamParameshwarrobbery
Previous Post

FACT CHECK In Kumbamela: ಅಗ್ನಿಸ್ನಾನ ಕುಂಭಮೇಳದಲ್ಲಿ ಅಲ್ಲ ತಮಿಳುನಾಡಿನ ತಂಜಾವೂರಿನಲ್ಲಿ..!

Next Post

ಬಿಗ್‌ ಬಾಸ್‌ ಗೆಲ್ಲಲು ಮಂಜುಗೆ ಸಾಥ್‌ ಕೊಟ್ಟ ಮಾಲೂರಿನ MLA..

Related Posts

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!
Top Story

ಜನದಟ್ಟಣೆಯೇ ಇವರ ಟಾರ್ಗೆ‌ಟ್ : ಬಂಗಾರದ ‌ ಆಭರಣಕ್ಕೆ ಕನ್ನ ಹಾಕಿದ್ದ ಅಂತಾರಾಜ್ಯ ಕಳ್ಳಿಯರ ಬಂಧನ..!

by ಪ್ರತಿಧ್ವನಿ
May 17, 2026
0

ಬೆಳಗಾವಿ :  ಜಿಲ್ಲೆಯ ಅಥಣಿ ಪೊಲೀಸ ಠಾಣೆ ಪೊಲೀಸರಿಂದ ಅಂತರರಾಜ್ಯ ಕಳ್ಳರ ಬಂಧನವಾಗಿದೆ. ಜನದಟ್ಟಣೆಯನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದ ಮಹಿಳೆಯರು ಇದೀಗ ಪೊಲೀಸರ ಅತಿಥಿಗಳಾಗಿದ್ದಾರೆ. https://youtu.be/BtLGSWTPzoI?si=3rJNabYZihcV_coL...

Read moreDetails
“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

“ಹೆಚ್ಚು ಮಕ್ಕಳು ಹುಟ್ಟಿಸಿ, ಹಣ ಪಡೆಯಿರಿ : ಚಂದ್ರಬಾಬು ಹೊಸ ಘೋಷಣೆ”

May 16, 2026
ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

ಊಬರ್‌, ಓಲಾ, ರಾಪಿಡೋಗೆ ಮಹಾರಾಷ್ಟ್ರ ಸರ್ಕಾರದ ಶಾಕ್!

May 16, 2026
ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

ಅಸ್ಮಿತೆಯ ಸಂಕೋಲೆಯಲಿ ಶಿಕ್ಷಣ-ಶಿಕ್ಷಣಾರ್ಥಿಗಳು

May 16, 2026
ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

ಶ್ರಮಿಕ ವಸತಿ ಶಾಲೆ, ಕೌಶಲ್ಯ ತರಬೇತಿ ಅಕಾಡೆಮಿ ಸ್ಥಾಪನೆ: ಸಚಿವ ಸಂತೋಷ್‌ ಲಾಡ್‌ ಸಭೆ

May 16, 2026
Next Post

ಬಿಗ್‌ ಬಾಸ್‌ ಗೆಲ್ಲಲು ಮಂಜುಗೆ ಸಾಥ್‌ ಕೊಟ್ಟ ಮಾಲೂರಿನ MLA..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada