ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಯಾಗಕ್ಕೆ ಕೋಟ್ಯಾಂತರ ಜನ ಭಾಗಿಯಾಗಿದ್ದರೆ, ಇದರಲ್ಲಿ ವಿಶೇಷವೆಂದರೆ ನಾಗಸಾಧುಗಳು, ಬಾಬಗಳು, ಅಘೋರಿಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ. ಒಬ್ಬಬ್ಬರದ್ದು ಒಂದೊಂದು ರೀತಿಯ ಸಾಧನೆಯ ಸಿದ್ಧಿ ಲೋಕಕಲ್ಯಾಣಕ್ಕೆ ಧರ್ಮದ ಉಳಿವಿಗೆ ನಾಡಿನ ಒಳಿತಿಗಾಗಿ ವರ್ಷಾನುಗಳ ಕಾಲ ಅನ್ನ ನೀರು ತ್ಯಜಿಸಿ ಲೋಕದ ಪರಿಜ್ಣಾನವೇ ಇಲ್ಲದೇ ತಪಸ್ಸು ಮಾಡುತ್ತಾರೆ. ಒಬ್ಬಬ್ಬ ಸಾಧು ಸಂತರದ್ದು ಒಂದೊಂದು ರೀತಿಯ ಸಿದ್ಧಿ ಮಾರ್ಗ. ಸದ್ಯ ಪ್ರಯಾಗ್ ರಾಜ್ ನಲ್ಲಿ ಸಾಧುವೊಬ್ಬ ಅಗ್ನಿ ಸ್ನಾನ ಮಾಡಿದ್ದಾರೆಂದು ವಿಡಿಯೋ ಒಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತಿದೆ. ಆದರೆ ಇದು ಸತ್ಯಕ್ಕೆ ದೂರವಾದದ್ದು ಎನ್ನುತ್ತಿವೆ ಮೂಲಗಳು.

ಕುಂಭಮೇಳದಲ್ಲಿ ಸಾಧುವೊಬ್ಬರು ಅಗ್ನಿಸ್ನಾನ ಮಾಡಿದ್ದಾರೆ ಎನ್ನಲಾಗುತ್ತಿರುವ ವಿಡಿಯೋ ಇಂದಿನದಲ್ಲ. ಅಷ್ಟೇ ಏಕೆ ಅದು ಕುಂಭಮೇಳದ್ದು ಕೂಡ ಅಲ್ಲ ಎನ್ನಲಾಗುತ್ತಿದೆ. ತಮಿಳುನಾಡು ಮೂಲದ ಸಾದುವೊಬ್ಬರು ಬೆಂಕಿಯ ಮೇಲೆ ಮಲಗಿರುವ ವಿಡಿಯೋ ಎನ್ನಲಾಗುತ್ತಿದೆ.
ತಮಿಳುನಾಡಿನ ತಾಂಜಾವೂರಿನಲ್ಲಿ ಸುಮಾರು 16 ವರ್ಷಗಳ ಕೆಳಗೆ ಸ್ವಾಮಿಜೀ ಒಬ್ಬರು ಹೋಮಕುಂಡದಲ್ಲಿ ಮಲಗಿರುವಂತ ವಿಡಿಯೋ ಇದಾಗಿದೆ. ಈ ವಿಡಿಯೋವನ್ನು 2009 ರಲ್ಲಿ ಅಜ್ ತಕ್ ಅವರು ಅಧಿಕೃತವಾಗಿ ತಮ್ಮ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿರುವುದು ಕೂಡ ಕಾಣಬಹುದಾಗಿದೆ. ಅಲ್ಲದೆ ಬಿಸಿಸಿ ಚಾನೆಲ್ ಅವರು ಕುಂಭಮೇಳದಲ್ಲಿ ಅಗ್ನಿಸ್ನಾನ ಮಾಡಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಕೂಡ ಹಬ್ಬಿಸಲಾಗಿದೆ.

ಇನ್ನು ಸಾಧುವೊಬ್ಬರು ಅಗ್ನಿಸ್ನಾನ ಮಾಡಿರುವ ಬಗ್ಗೆ ಡಾಕ್ಯೂಮೆಂಟರಿ ಒಂದನ್ನ ಮಾಡಲಾಗಿದೆ. ಅದರಲ್ಲಿ ತಂಜಾವೂರಿನ ಶ್ರೀ ರಾಮಭಾವು ಸ್ವಾಮಿ ಎಂಬುವರು ಕೇಸರಿ ಉಡುಪುಗಳನ್ನ ಧರಿಸಿ ಬೆಂಕಿಯಲ್ಲಿ ಗಂಟೆ ಗಂಟೆಗಳ ಕಾಲ ಮಲಗಿ ಧ್ಯಾನ ಮಾಡಿದ್ದಾಗಿದೆ. ಈ ವೇಳೆ ಶ್ರೀ ರಾಮಭಾವು ಸ್ವಾಮಿಗೆ ಯಾವುದೇ ರೀತಿಯ ಸುಟ್ಟ ಗಾಯಳು ಆಗಿರುವುದಿಲ್ಲ ಎಂದು ಸಾಕ್ಷ್ಯಚಿತ್ರದಲ್ಲಿ ತಿಳಸಿಲಾಗಿದೆ. ಸದ್ಯ ಆ ಸಾಕ್ಷ್ಯಚಿತ್ರದ ಒಂದು ವಿಡಿಯೋ ತುಣುಕನ್ನು ಎಡಿಟ್ ಮಾಡುವ ಮೂಲಕ ಎಲ್ಲಡೆ ಕುಂಭಮೇಳದಲ್ಲಿ ಸಾಧುವೊಬ್ಬರ ಅಗ್ನಿಸ್ನಾನ ಎಂದು ಸುಳ್ಳುಸುದ್ದಿಯನ್ನ ಹರಡಲಾಗಿರುವುದು ಪತ್ತೆಯಾಗಿದೆ. ( ಇದಕ್ಕೆ ಪೂರಕವಾದ ಸಾಕ್ಷ್ಯಗಳನ್ನ ಅಲ್ಲಲ್ಲಿ ಉಲ್ಲಖಿಸಲಾಗಿದೆ.)