ನಿಮ್ಮ ತಂದೆ ಕೆಂಪೇಗೌಡರ ಬಗ್ಗೆ ನಾನು ಮಾತಾಡಿದರೆ ಏನಾಗಬಹುದು? ನಾವು ಕೂಡ ಒಕ್ಕಲಿಗರೇ, ರೈತರ ಮಕ್ಕಳೇ.. ನಮ್ಮ ಒಕ್ಕಲುತನ ಪ್ರಶ್ನೆ ಮಾಡಬೇಡಿ ಅಧಿಕಾರ ಶಾಶ್ವತ ವಲ್ಲ,ಮಾತಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಮಾತಾಡಿ ಎಂದ ನಿಖಿಲ್.

ಮಂಡ್ಯ: ತಮ್ಮ ತಂದೆ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಏಕವಚನದಲ್ಲಿ ನಿಂದಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ಕೊಟ್ಟಿದ್ದಾರೆ.
ಮೈಸೂರು ಚಲೋ ಪಾದಯಾತ್ರೆಯ ಆರನೇ ದಿನವಾದ ಗುರುವಾರ ಶ್ರೀರಂಗಪಟ್ಟಣದ ಬಹಿರಂಗ ಸಭೆಯಲ್ಲಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ, ಡಿಸಿಎಂ ಡಿ.ಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಮ್ಮ ಮಾತಿನುದ್ದಕ್ಕೂ ಡಿ.ಕೆ.ಶಿವಕುಮಾರ್ ಗೆ ತರಾಟೆಗೆ ತೆಗೆದುಕೊಂಡ ನಿಖಿಲ್, ನಾವು ಕೂಡ ಒಕ್ಕಲಿಗರೇ, ರೈತರ ಮಕ್ಕಳೇ.. ನಮ್ಮ ಒಕ್ಕಲಿತನ ಪ್ರಶ್ನೆ ಮಾಡಬೇಡಿ ಎಂದು ತಾಕೀತು ಮಾಡಿದರು.